Breaking News
Home / featured / ಸವದತ್ತಿಮಠ ಲೇಖನ ಖಂಡನೀಯ : ಶ್ರೀಕಾಂತ ಸ್ವಾಮಿ

ಸವದತ್ತಿಮಠ ಲೇಖನ ಖಂಡನೀಯ : ಶ್ರೀಕಾಂತ ಸ್ವಾಮಿ

 

ಬೀದರ್ : ಇಂತಹ ನೀತಿಗೆಟ್ಟ ಮತಿಭೃಷ್ಠ ವಿಧ್ಯಾವಂತರಿಂದ ಈ ಸಮಾಜ ಹಾಳಾಗುತ್ತದೆ ಎಂದು ಈ ಮಿದುಳಿಲ್ಲದ ವ್ಯಕ್ತಿಗಳಿಂದ ಸಾಬೀತಾಗುತ್ತದೆ. ಇವರು ಸಾಹಿತಿ ಮತ್ತು ಭಾಷಾ ವಿಜ್ಞಾನಿ ಎಂದು ಹೇಳಿಕೊಳ್ಳಲ್ಲು ನಾಚಿಕೆ ಆಗಬೇಕು. ಇಡೀ ವಿಶ್ವವೇ ಬೆರಗು ಗೊಳ್ಳುವಂತಹ ವಚನ ಸಾಹಿತ್ಯದ ಒಂದು ಶಬ್ದವನ್ನು ಅಪಾರ್ಥ ಮಾಡಿಕೊಂಡು ಸಮಾಜವನ್ನು ದಾರಿ ತಪ್ಪಿಸುವ ಕೂಲಿ ಸಾಹಿತ್ಯಕಾರ, ಯಾರದೋ ಎಂಜಲಿಗೆ ಆಸೆ ಪಟ್ಟು, ಮಹಾಮಾನವತಾವಾದಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹೇಸಿಗೆ ಕೆಲಸ ಮಾಡಲು ನಾಚಿಕೆ ಆಗಬೇಕು. ಇವರ ಅಧ್ಯಯನ ಎಂತದು ಅನ್ನಲಿಕ್ಕೆ ಅವರು ಉಲ್ಲೇಖಿಸಿದ ಬಸವಣ್ಣನವರ ವಚನ ನೋಡಿ.

ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ, ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ, ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ಆಕಾರವಾಗಿರ್ದಲ್ಲಿ, ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದೆಹನೆಂದು ಜಂಗಮಲಾಂಚನವಾಗಿ ಬಂದಡೆ, ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಲಸಂಗಮದೇವಾ.

ಈ ವಚನ ಅರ್ಥ ಮಾಡಿಕೊಳ್ಳಲು ಕೇವಲ ಕನ್ನಡ ಜ್ಞಾನ ಇದ್ದರೆ ಸಾಕು, ಆದರೆ ಇವರು ಭಾಷಾ ವಿಜ್ಞಾನಿ ಬೇರೆ ಅಂತೆ. ದೇವರನ್ನು ಸ್ತುತಿಸುವ ಮೆಚ್ಚಿಸುವ ವಚನ ಇದು. ಇದನ್ನು ಅವರು ಶಿವಪಾರ್ವತಿ ಶಿವನಿಗೆ ಹೋಲಿಸಿ ಅವರ ವಾಹನ ಬಸವಣ್ಣ ಎಂದು ಸಿದ್ದ ಮಾಡಲು ಹೊಂಟ ಭಂಟ ಮಹಾ ಜ್ಞಾನಿ. ಇವರಿಗೆ ಉತ್ತರಿಸಲು ಸೋಲಾಪುರ ಸಿದ್ದರಾಮೇಶ್ವರ ವಚನವೆ ಸಾಕು,
ಜಲದಲ್ಲಿ ಉದಯಿಸಿ…..
…. ಶಿವಗುರು ಬಸವಣ್ಣ, ಬಸವಗುರು ಶಿವನಾಗಿ, ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿ ಯಾದನು, ಬಸವಣ್ಣನ ನೆನಹು ಸುಖಾಸಮುದ್ರವಯ್ಯ! ಕಪಿಲಸಿದ್ಧಮಲ್ಲಿಕಾರ್ಜುನಯ್ಯ. ಇಲ್ಲಿ ಬಸವಣ್ಣನೆ ಶಿವನು, ಎಲ್ಲಾ ದೇವರ ದೇವ ಪಶುಪತಿ ಎಂದು ಹೇಳಿದ್ದಾರೆ. ಮತ್ತೊಬ್ಬ ಶರಣರು ಹೇಳುತ್ತಾರೆ ” ಲೆಕ್ಕ ತಪ್ಪದೆ ಅವತಾರದಲ್ಲಿ ಬಂದು, ಮರ್ಥ್ಯಕ್ಕೆ ಬಸವೇಶ್ವರನೆಂಬ ಗಣನಾಥಮಮಮ ಪಡೆದು” ಬಸವಣ್ಣ ಗಣನಾಥ ಎಂದು ಬಣ್ಣಿಸಿದ್ದಾರೆ. ಮಡಿವಾಳ ಮಾಚಿದೇವರ ಒಂದು ವಚನದಲ್ಲಿ ಹೇಳುತ್ತಾರೆ ” ನಿರ್ಗುಣ ನಿರಂಜನ ನಿಸ್ಸೀಮ ಶಿವನು ಬಸವಣ್ಣನೊಡನೆ ಆಡುತ್ತಿಪ್ಪನ್ನು ಹಾಡುತ್ತಿಪ್ಪನ್ನು” ನಿರಾಕರಿ ಶಿವ ಮತ್ತು ಬಸವಣ್ಣ ಒಂದೇ ಎಂದು ಬಣ್ಣಿಸುತ್ತಾರೆ ಮತ್ತೆ ಹೇಳುತ್ತಾರೆ ” ಏನಾದರೂ ಆಗಬಹುದು ನಿಮ್ಮ ಶರಣ ಬಸವಣ್ಣ ನಂತಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ” ಎಂತಹ ವ್ಯಕ್ತಿತ್ವ ನೋಡಿ. ಸಿದ್ಧರಾಮೇಶ್ವರ ಅವರು ತಮ್ಮ ವಚನದಲ್ಲಿ ದೇವರಿಗೆ ಹೇಳುತ್ತಾರೆ ” ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ”. ಹಲವಾರು ವಚನಕಾರರು ಬಸವಣ್ಣ ನವರ ನಿಲುವು, ಅವರ ವ್ಯಕ್ತಿತ್ವ ಕೊಂಡಾಡಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದೂ ಇಂತಹ ಸಮಾಜ ದ್ರೋಹಿಗಳು ಸಮಾಜದಲ್ಲಿ ಗೊಂದಲ ಮುಡಿಸುತ್ತಾರೆ.

ಎತ್ತಿನ ಪೂಜೆ ಸಿದ್ದ ಮಾಡಲು ಹೊಂಟ, ಇದು ಒಂದು ಸಾಹಿತಿ ಎಂಬ ಕೆಟ್ಟ ಪ್ರಾಣಿ. ನಾವು ಗ್ರಾಮೀಣ ಭಾಗದ ರೈತ ಕುಟುಂಬದವರು, ನಾವು ಎತ್ತುಗಳು ಆಕಳು ಪೂಜೆ ಮಾಡುತ್ತೇವೆ ಇದು ನಮ್ಮ ವೃತ್ತಿಗೆ ಸಂಬಂಧಿಸಿದ್ದು ಹಾಗೂ ದೇಶದ ಸಂಸ್ಕೃತಿ. ಅದಕ್ಕೆ ಎಂದು ಹಬ್ಬಗಳಿವೆ, ನಮ್ಮ ಭಾಗದಲ್ಲಿ ಹೊಳಾ, ಕಾರುಣ್ಣಿ, ಯುಗಾದಿ ಮತ್ತು ಮಣ್ಣೆತ್ತಿನ ಅಮಾವಾಸ್ಯೆ ದಿವಸ ಎತ್ತುಗಳ ಪೂಜೆ ಮಾಡುತ್ತೇವೆ. ಇದು ನಮ್ಮ ಪೂರ್ವಜರು ಕಾಲ ಕಾಲಂತರದಿಂದ ಮಾಡಿಕೊಂಡು ಬಂದ ಪ್ರಥ. ಆದರೆ ಬಸವ ಜಯಂತಿ ದಿವಸ ಎತ್ತಿನ ಪೂಜೆ ಮಾಡುವದು ಕುತಂತ್ರ, ಮೂರ್ಖತನ, ಕಿಡಿಗೇಡಿತನ, ಇಂತವರನ್ನು ನಡು ರಸ್ತೆಯಲ್ಲಿ ತಂದು ಕತ್ತೆ ಮೇಲೆ ಕೂಡಿಸಿ ಊರಲ್ಲಿ ಮೇರುವಣಿಗೆ ಮಾಡಬೇಕು. ಆವಾಗ ಮಾತ್ರ ಬುದ್ಧಿ ಕಲಿಸಿದ ಹಾಗೆ ಆಗುತ್ತದೆ.

ಇಡೀ ವಿಶ್ವವೇ ತಲ್ಲಣಗೊಳಿಸಿದ ಕೋರೋನಾ ವೈರಾಣು ರೋಗದಿಂದ ಬಳಲುತ್ತಿದ್ದರೆ, ಈ ಮತಿಭೃಷ್ಟರು ಬಸವಣ್ಣನವರನ್ನು ಅವಮಾನ ಮಾಡುವ ನೀತಿಗೆಟ್ಟ ಕೆಲಸ ಮಾಡುತ್ತಿದ್ದಾರೆ.

ವೇದ, ಉಪನಿಷತ್ತು, ಆಗಮಗಳು, ಮನುಶಾಸ್ತ್ರ, ಗೀತಾ, ಪುರಾಣ ಶಾಸ್ತ್ರಗಳನ್ನು ಬಸವಣ್ಣ ತೀವ್ರವಾಗಿ ಖಂಡಿಸಿದ್ದಾರೆ, ಅದನ್ನು ಪಾಲಿಸುವ ಈ ಪಂಚಾಚಾರ್ಯರ ಶಿಷ್ಯ ಬಸವಣ್ಣ ಹೇಗೆ ಆಗುತ್ತಾರೆ? ನಿಮಗೆ ಏನಾದರೂ ಸಾಹಿತ್ಯ ಇತಿಹಾಸ ಜ್ಞಾನ ಅನ್ನೋದು ಇದೆಯಾ? ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕ ಅನ್ನೋದು ಎಲ್ಲ ಶರಣರು ತಮ್ಮ ವಚನಗಳಲ್ಲಿ 12 ನೆ ಶತಮಾನದಲ್ಲಿ ಉಲ್ಲೇಖ ಮಾಡಿದ್ದಾರೆ. ನಿನ್ನೆ ಮೊನ್ನೆ ಹುಟ್ಟಿದ್ದ ಈ ಪೂಜ್ಯ ರಂಭಾಪುರಿ ಜಗದ್ಗುರು ಬಸವಣ್ಣ ವೀರಶೈವ ಧರ್ಮ ಸ್ವೀಕಾರ ಮಾಡಿದರು ಎಂದು ಹೇಳಲು ನಾಚಿಕೆ ಆಗಬೇಕು. ಸ್ವತಃ ತನ್ನ ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಎಂದು ಬರೆದಿದ್ದು, ಸುಳ್ಳು ಹೇಳಲು ಪೂಜ್ಯರಾಗಿ ಶೋಭೆ ತರುವಂತಹ ವಿಷಯ ಅಲ್ಲ. ಶರಣರು ತಮ್ಮ ವಚನಗಳಲ್ಲಿ ಶೈವ ವೀರಶೈವ ತಿರಸ್ಕಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ” ಶುದ್ಧಶೈವವ ಹೋದ್ದದೆ, ಪೂರ್ವಶೈವವನಾಚರಿಸದೆ, ವೀರಶೈವವನಾರಾಧಿಸದೆ, ಆದಿಶೈವವನನುಕರಿಸದೆ, ಭೇದಿಸಬಾರದ ಲಿಂಗವ ಕರಕಿತ್ತ ಬಸವಣ್ಣ ” . ಆದರಿಂದ ಲಿಂಗ ,ಪಾದೋದಕ, ಪ್ರಸಾದ ಎಲ್ಲವೂ ಬಸವಣ್ಣನಿಂದ ಹುಟ್ಟಿತ್ತು.

ವೀರಶೈವರು, ಜಂಗಮರು ಇನ್ನುಳಿದ 99 ಉಪಪಂಗಡಗಳು ಲಿಂಗಾಯತ ಧರ್ಮದಲ್ಲಿ ಬರುತ್ತವೆ. ಸಂಶೋಧಕ ಸ್ವ ಚಿದಾನಂದ ಮೂರ್ತಿಯವರು ರೇಣುಕಾಚಾರ್ಯರು ಹುಟ್ಟಿದ್ದೇ ಸುಳ್ಳು ಕಥೆ ಎಂದು, ಹಾಗೂ ಸಿದ್ಧಾಂತ ಶಿಖಾಮಣಿ ಖೋಟಿ ಗ್ರಂಥ ಎಂದು ಹೇಳಿದ್ದಾರೆ. ಜಂಗಮರು ಅಸ್ತಿತ್ವಕ್ಕೆ ಬಂದಿದ್ದು ಬಸವಣ್ಣನವರಿಂದ, ಒಟ್ಟು 1,96,000 ಜಂಗಮರನ್ನು ಧರ್ಮ ಪ್ರಚಾರಕ್ಕೆ ಬಸವಣ್ಣ ತಯಾರು ಮಾಡಿದ್ದರು, ಅದೇ ಕಾಲಾಂತರದಲ್ಲಿ ಜಾತಿ ಆಗಿದೆ. ಪಂಚಾಚಾರ್ಯರು ಜಂಗಮರನ್ನು ದಾರಿ ತಪ್ಪಿಸುತ್ತ ಇದ್ದಾರೆ, ನಿಜವಾಗಿ 90% ಜಂಗಮರು ಬಸವಣ್ಣ ಗುರು ಎಂದು ಗೌರವಿಸುತ್ತಾರೆ. ಕರ್ನಾಟಕದಲ್ಲಿ ವೀರಶೈವರು ಇಲ್ಲವೇ ಇಲ್ಲ, ಎಲ್ಲಾ ವೀರಶೈವರು 12ನೆ ಶತಮಾನದಲ್ಲಿ ಲಿಂಗಾಯತ ಧರ್ಮದಲ್ಲಿ ವಿಲೀನ ಆಗಿದ್ದಾರೆ.
ಪಂಚಾಚಾರ್ಯರು ಹಾಗೂ ವೀರಶೈವ ಮಹಸಭಾದವರು ಸುಖಾ ಸುಮ್ಮನೆ ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಬಾರದು. ಒಂದು ವೇಳೆ ಹೀಗೆ ಮುಂದುವರೆದಿದೆ ಆಗಿದ್ದರೆ, ಪಂಚಾಚಾರ್ಯರ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಮೂರ್ತಿ ಮಾಡಿ ನಡು ರಸ್ತೆಯಲ್ಲಿ ಸುಡಲಾಗುವದು, ಸವದತ್ತಿಮಠ ಕೂಡಲೇ ಲೇಖನ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುತ್ತೇವೆ.

ಶ್ರೀಕಾಂತ ಸ್ವಾಮಿ ಬೀದರ,

ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!