Breaking News
Home / featured / “ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ”

“ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ”

ಪುಸ್ತಕ ಪರಿಚಯ:-
ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಇಂಡಿಯಾದಲ್ಲಿ ಸಾಮಾಜಿಕ ನ್ಯಾಯದ ಅನ್ವಯ ಮೊಟ್ಟ ಮೊದಲು ಮೀಸಲಾತಿ ತಂದವರು ಛತ್ರಪತಿ ಶಾಹೂ. ಅಸ್ಪೃಶ್ಯತೆ ನಿವಾರಣೆಗೆ ಅವರು ಆದೇಶ ಮಾತ್ರ ಮಾಡಲಿಲ್ಲ. ತಮ್ಮ ಅರಮನೆಯ ಹತ್ತಿರವೇ ದಲಿತ ಸಮುದಾಯದ ವ್ಯಕ್ತಿಯೊಬ್ಬನಿಗೆ ಚಹಾದಂಗಡಿ ಆರಂಭಿಸಲು ಹಚ್ಚಿ ತಾವೇ ತಮ್ಮ ಮಂತ್ರಿ ಪರಿವಾರದೊಂದಿಗೆ ಹೋಗಿ ಆ ಚಹಾದಂಗಡಿಯಲ್ಲಿ ಕೂತು ಚಹಾ ಸೇವಿಸುತ್ತಿದ್ದರು. ಸುಧಾರಣೆ ಎಂದರೆ ಇದು ಅವರು ತಿಳಿದುಕೊಂಡಿದ್ದರು.

ತಿಳುವಳಿಕೆ ಮತ್ತು ಆಡಳಿತದನುಭವದಲ್ಲಿ ತುಂಬ ಎತ್ತರದಲ್ಲಿದ್ದ ಶಾಹೂ ಮಹಾರಾಜ ಅವರಿಗೆ ಸ್ಟುವರ್ಟ್ ಪ್ರೇಸರ ಎಂಬ ಬ್ರಿಟಿಷ್ ಆಡಳಿತಾಧಿಕಾರಿಯೊಬ್ಬರು ಸಲಹೆಗಾರರಾಗಿದ್ದರು. ಶಾಹೂ ಅವರು ಪ್ರೇಸರ್ ಅವರನ್ನು ಗುರುವೆಂದೇ ಭಾವಿಸಿದ್ದರು. ಪ್ರೇಸರ್ ಅವರು ಶಾಹೂ ಮಾತ್ರವಲ್ಲದೆ ಅವರ ಸಮಕಾಲೀನರಾಗಿದ್ದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರಿಗೆ, ಬರೋಡಾದ ಸಯ್ಯಾಜಿರಾವ್ ಗಾಯಕವಾಡ ಅವರಿಗೂ ಸಲಹೆಗಾರರಾಗಿದ್ದರು. ಮೂರು ರಾಜರ ಜನಪರ ಕಾಳಜಿ ಮತ್ತು ನೀತಿನಿರೂಪಣೆಯಲ್ಲಿ ಮತ್ತು ಅವುಗಳ ಘೋಷಣೆಗಳ ಹಿಂದೆ ಪ್ರೇಸರ್ ಅವರ ಹಿನ್ನೆಲೆ ಪಾತ್ರ ತುಂಬ ದೊಡ್ಡದು..

ಈ ಸಂಗತಿಗಳಲ್ಲದೆ ಶಾಹೂ ಮಹಾರಾಜ ಜೀವನ ಚರಿತ್ರೆಯ ಅನೇಕ ಸಂಗತಿಗಳನ್ನು ಒಳಗೊಂಡ ಪುಸ್ತಕ ನಾವು ಪ್ರಕಟಿಸಿದ “ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ” .

ಡಾ. ಎಚ್ ಎಸ್ ಅನುಪಮಾ ಬರೆದ ಈ ಪುಸ್ತಕದ ಬೆಲೆ 110/- ರೂ.

ಐದಕ್ಕಿಂತ ಹೆಚ್ಚು ಪ್ರತಿ ತರಿಸಿಕೊಂಡರೆ 33% ರಿಯಾಯಿತಿ ಇದೆ.

ಅಂಚೆವೆಚ್ಚ ಉಚಿತವಾಗಿದೆ

ಆಸ್ತಕರು ಪುಸ್ತಕಕ್ಕಾಗಿ: 9480286844

ಲಡಾಯಿ ಪ್ರಕಾಶನ ಗದಗ
ಮೊ: 9480286844

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!