Breaking News
Home / featured / ಅರಿವೇ ಗುರು

ಅರಿವೇ ಗುರು

ಶರಣರು ಭೌತಿಕ ಗುರು ಪರಂಪರೆಯನ್ನು ಒಪ್ಪಿರಲಿಲ್ಲ. ಅನೇಕ ಶರಣರ ವಚನಗಳಲ್ಲಿ ಅರಿವೆ ಗುರು ಎನ್ನುವ ಉಕ್ತಿ ಪುನರಪಿ ಪ್ರಸ್ತಾಪವಾಗಿದೆ. ಅರಿವು ಎಂದರೆ ಜ್ಞಾನ ಎಂದು ಮೇಲ್ನೋಟಕ್ಕೆ ಹೇಳುತ್ತೇವೆ. ಅಂದರೆ ವ್ಯಕ್ತಿಯೊಬ್ಬನಲ್ಲಿ ಇರಬಹುದಾದ ಅಜ್ಞಾನವು ಅಳಿದು ಇನ್ನೂ ಅರಿಯಬೇಕೆನ್ನುವ ಅದಮ್ಯ ಬಲವು ಆತನನ್ನು ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಅದೇ ಅರಿವು. ಶರಣ ಜಗಳಗಂಟ ಕಾಮಣ್ಣನ ಒಂದು ವಚನ :

“ಅಯ್ಯಾ, ತನ್ನ ತಾನರಿದಡೆ ತನ್ನರುಹೆ ಗುರು;
ಆ ಅರಿದ ನಿಶ್ಚಯವೆ ಲಿಂಗ;
ಆ ಅರುಹಿನ ನಿಶ್ಚಯ ನಿಷ್ಟತ್ತಿಯೆ ಜಂಗಮ;
ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರಲಿಂಗವು ತಾನೆ.
ಇಂತು ಪ್ರಮಥರ ಸಚ್ಚಿದಾನಂದಲೀಲೆಯ
ಅರಿದಾನಂದಿಸಾ ಸಂಗನ ಬಸವೇಶ್ವರ.”

~ ಶರಣ ಜಗಳಗಂಟ ಕಾಮಣ್ಣ.

ಅಯ್ಯಾ, ತನ್ನ ತಾನರಿದಡೆ ತನ್ನರುಹೆ ಗುರು;

ವ್ಯಕ್ತಿ ಮೊದಲು ತನ್ನನ್ನು ತಾನು ಅರಿತುಕೊಳ್ಳಬೇಕು. ಅಂದರೆ ಆತ್ಮಾವಲೋಕನದ ಮೂಲಕ ತನ್ನೊಳಗಿರುವ ಗುಣಾವಗುಣಗಳನ್ನು ಗುರುತಿಸಿಕೊಳ್ಳಬೇಕು. ಆಗ ಆತನ ತನ್ನ ಬಗ್ಗೆ ತಾನು ತಿಳಿದುಕೊಂಡಂತಾಗುತ್ತದೆ. ಆ ಅರಿವೇ ಆತನ ಗುರು.

ಆ ಅರಿದ ನಿಶ್ಚಯವೆ ಲಿಂಗ;

ತನ್ನನ್ನು ತಾನು ಅರಿತುಕೊಂಡ ಮೇಲೆ ತಾನು ಯಾರುˌ ಎಲ್ಲಿರುವೆˌ ತಾನೇನು ಮಾಡಬೇಕು ಎನ್ನುವ ಅರಿವು ನೆಲೆಕೊಳ್ಳುತ್ತದೆ. ಆ ಅರಿವು ಆತನ ಮನಸ್ಸಿನಲ್ಲಿ ನಿಶ್ಚಯಗೊಂಡು ಮುಂದಿನ ಯೋಜನೆಗಳಿಗೆ ಮಾರ್ಗದರ್ಶನ ಮಾಡುತ್ತದೆ. ಆ ದ್ರಢ ನಿಶ್ಚಯವೆ ಲಿಂಗ ಎನ್ನುತ್ತಾನೆ ಶರಣ ಕಾಮಣ್ಣ.

ಆ ಅರುಹಿನ ನಿಶ್ಚಯ ನಿಷ್ಟತ್ತಿಯೆ ಜಂಗಮ;

ವ್ಯಕ್ತಿವು ತನ್ನನ್ನು ತಾನು ಅರಿತುಕೊಂಡು ತನಗೆ ತಾನೇ ಗುರುವಾಗಿ ಮುನ್ನಡೆಯುತ್ತಾನೆ. ಆ ಅರಿವಿನಿಂದ ದೊರೆತ ಮಾಹಿತಿಯನುಸಾರ ಆತನೊಂದು ನಿಶ್ಚಯವನ್ನು ಮಾಡಿಕೊಂಡಿರುತ್ತಾನೆ. ಆ ನಿಶ್ಚಯದನುಸಾರ ಆತ ಜೀವನದಲ್ಲಿ ನಡೆದದ್ದಾದರೆ ಆತನಿಗೆ ನಿಷ್ಪತ್ತಿ ಎಂಬ ಫಲ (ಫಲಿತಾಂಶ) ದೊರಕುತ್ತದೆ. ಆ ಫಲವೇ ಜಂಗಮ. ಜಂಗಮ ಎಂದರೆ ಜಡತ್ವ ತೊಲಗಿ ವ್ಯಕ್ತಿವು ಚೈತನ್ಯಶೀಲನಾಗುವುದು.

ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರಲಿಂಗವು ತಾನೆ.

ಹೀಗೆ ಅರಿವುˌ ಮತ್ತು ಅದರಿಂದಾದ ನಿಶ್ಚಯ ಹಾಗೂ ಅದರ ಮೂಲಕ ದೊರೆತ ನಿಷ್ಪತ್ತಿಗಳು ಏಕೊಭಾವಗೊಂಡರೆ ವ್ಯಕ್ತಿವು ತಾನೇ ದೈವತ್ವದ ಸ್ವರೂಪ ಎನ್ನುವುದು ಶರಣ ಕಾಮಣ್ಣನ ಮಾತಿನ ಅರ್ಥ.

ಇಂತು ಪ್ರಮಥರ ಸಚ್ಚಿದಾನಂದಲೀಲೆಯ ಅರಿದಾನಂದಿಸ ಸಂಗನ ಬಸವೇಶ್ವರ.

ಈ ರೀತಿಯಾಗಿ ನಮ್ಮ ಹಿರಿಯ ಸಾಧಕರು ತೋರಿದ ಸತ್ˌ ಚಿತ್ ಆನಂದದ ಲೀಲೆಯನ್ನು ತಿಳಿದುಕೊಂದು ಅನುಭಾವದ ಆನಂದವನ್ನು ಅನುಭವಿಸಬೇಕು ಎನ್ನುವುದು ಶರಣ ಕಾಮಣ್ಣನ ವಚನದ ಭಾವಾರ್ಥ.

~ ಡಾ. ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

Leave a Reply

Your email address will not be published. Required fields are marked *

error: Content is protected !!