Breaking News
Home / featured / ಸವದತ್ತಿಮಠ ಬರಹ ಖೇದಕರ : ಡಾ.ಸಿದ್ಧರಾಮ ಸ್ವಾಮೀಜಿ

ಸವದತ್ತಿಮಠ ಬರಹ ಖೇದಕರ : ಡಾ.ಸಿದ್ಧರಾಮ ಸ್ವಾಮೀಜಿ

ಗದಗ: ‘ನಾನು ವೃಷಭನೆಂಬ ವಾಹನನಾಗಿರ್ದೆ’ ಎಂಬ ಬಸವಣ್ಣನವರ ವಚನದ ಸಾಲೊಂದನ್ನು ತಪ್ಪಾಗಿ ಗ್ರಹಿಸಿ ಮತ್ತು ಬಸವ ಜಯಂತಿಯಂದು ಕೆಲವು ಅಜ್ಞಾನಿಗಳು ಎತ್ತನ್ನು ಪೂಜಿಸಿರುವುದನ್ನು ಸಮರ್ಥಿಸಿ ಪತ್ರಿಕೆಗೆ ಲೇಖನ ಬರೆದ ಡಾ.ಸಂಗಮೇಶ ಸವದತ್ತಿಮಠರ ಸಂಶೋಧನೆಗೆ ಏನೆನ್ನಬೇಕು ತಿಳಿಯದಾಗಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ಯಾವುದೇ ಒಬ್ಬ ವ್ಯಕ್ತಿಯ ಚಿಂತನೆಯಲ್ಲಿ ವೈಚಾರಿಕತೆ ಇರಬೇಕು. ಹೇಳುವ ಮಾತುಗಳು ವಿಜ್ಞಾನಕ್ಕೆ ಸಮ್ಮತವಾಗಿರಬೇಕು. 21ನೇ ಶತಮಾನದಲ್ಲಿ ಪೌರಾಣಿಕ ಕಲ್ಪನೆಗಳನ್ನು ಪ್ರತಿಪಾದಿಸಿದರೆ ಜನ ನಂಬುತ್ತಾರೆಯೆ? ವೃಷಭ, ವೃಷಭೇಂದ್ರ ಎಂದು ಹೆಸರಿರುವ ವ್ಯಕ್ತಿಗಳು ನಾಲ್ಕು ಕಾಲಿನ ಎತ್ತುಗಳು ಎನ್ನುವುದು ಸರಿಯೆ? ಕೊರೊನಾ ವೈರಸ್ ಸಂಕಟದಿಂದ ದೇಶವೇ ಕಂಗಾಲಾಗಿದೆ ಎಂದು ಹೇಳುತ್ತಾ, ಎತ್ತನ್ನು ಪೂಜಿಸಿರುವುದನ್ನು ಸಮರ್ಥಿಸುವ ಲೇಖನ ಬರೆದು ಮತ್ತಷ್ಟು ಗೊಂದಲವೆಬ್ಬಿಸುವುದು ಸರಿಯೆ?’ ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

‘ಮಹಾಮಾನವತಾವಾದಿ, ಧರ್ಮಗುರು ಬಸವಣ್ಣನವರ ಜಯಂತಿ ದಿನ ಎತ್ತನ್ನು ಪೂಜಿಸುವ ಅಜ್ಞಾನಕ್ಕೆ ನೂರೆಂಟು ವರ್ಷಗಳ ಹಿಂದೆಯೇ ಹರ್ಡೇಕರ ಮಂಜಪ್ಪನವರು ತಡೆಯೊಡ್ಡಿ, ಮುರುಘಾಮಠದ ಮೃತ್ಯುಂಜಯಪ್ಪಗಳ ನೇತೃತ್ವದಲ್ಲಿ ಜಯಂತಿಯನ್ನು ಆಚರಿಸಿರುವುದು ಎಲ್ಲರೂ ತಿಳಿದ ಸಂಗತಿ. ಬಸವಣ್ಣನವರು ಐತಿಹಾಸಿಕ ವ್ಯಕ್ತಿಗಳು. ಜಾಗತಿಕ ಇತಿಹಾಸದಲ್ಲಿಯೇ ಅನುಪಮವಾದ ಸಮಾಜೋಧಾರ್ಮಿಕ ಚಳವಳಿಯ ನೇತಾರರು. ವೈದಿಕ ಕರ್ಮಕಾಂಡಕ್ಕೆ ಪ್ರತಿದ್ವಂದ್ವಿಯಾಗಿ ಲಿಂಗಾಯತ ಧರ್ಮವೆಂಬ ನಿತ್ಯನೂತನ ಧರ್ಮವನ್ನು ಸ್ಥಾಪಿಸಿದವರು. ಜನ್ಮತಃ ಬ್ರಾಹ್ಮಣರಾಗಿದ್ದ ಅವರು ಶ್ರೇಷ್ಠತೆಯ ವ್ಯಸನದಿಂದ ಹೊರಬಂದವರು’ ಎಂದು ಸ್ವಾಮೀಜಿ ಹೇಳಿದ್ದಾರೆ.

‘ಬಸವಣ್ಣನವರು ಮತ್ತೆ ವೈದಿಕ ಧರ್ಮದ ಪ್ರತಿರೂಪದಂತಿರುವ ವೀರಶೈವ ಧರ್ಮವನ್ನು
ಸ್ವೀಕರಿಸಿದರು ಎಂಬ ಮಾತನ್ನು ಡಾ. ಸವದತ್ತಿಮಠ ಅವರು ಸಮರ್ಥಿಸುವುದು ಪೂರ್ವಗ್ರಹದಿಂದ ಕೂಡಿರುವುದಲ್ಲದೆ ಯಾರನ್ನೋ ಮೆಚ್ಚಿಸಲಿಕ್ಕೆ ಹೇಳಿದಂತಿದೆ. ‘ಹುಸಿ ಮಾತನಾಡಿ ಕೆಡಬೇಡ ಲಿಂಗಾಯತಕ್ಕೆ ಬಸವಣ್ಣನೇ ಕರ್ತೃ ಸರ್ವಜ್ಞ’ ಎಂಬ ಸರ್ವಜ್ಞನ ವಚನದ ಸಾಲನ್ನು ಅವರು ನೆನಪಿಸಿಕೊಳ್ಳಬೇಕಾಗಿತ್ತು. ಡಾ.ಸವದತ್ತಿಮಠ ಅವರ ಇಂತಹ ಅವಿಚಾರದ ಹೇಳಿಕೆ ಮತ್ತು ಅವೈಜ್ಞಾನಿಕ ಬರಹಗಳಿಂದಾಗಿ ಸಾಮರಸ್ಯದಿಂದ ಬದುಕುತ್ತಿರುವ ಲಿಂಗಾಯತ ಸಮಾಜ ಬಾಂಧವರಲ್ಲಿ ಭಕ್ತ-ಜಂಗಮ ಎಂಬ ಭೇದವನ್ನು ಹುಟ್ಟು ಹಾಕಿದಂತಾಗಿದೆ’ ಎಂದು ಶ್ರೀಗಳು ಖೇದ ವ್ಯಕ್ತಪಡಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!