ವಚನ ಸಾಹಿತ್ಯದ ವೈಚಾರಿಕ ನೆಲೆಯಲ್ಲಿ ಸ್ತ್ರೀ ಗೆ ತನ್ನದೆ ಆದ ವ್ಯಕ್ತಿತ್ವ ಎಂದು ತೋರಿಸಿ ಕೊಟ್ಟವಳು ಶರಣೆ ಅಕ್ಕಮಹಾದೇವಿ. ಶರಣ ಸಾಹಿತ್ಯದ ಮಹಿಳೆಯರೆಂದರೆ ಶೀಘ್ರವೆ ಅಕ್ಕಮಹಾದೇವಿ ನೆನಪಾಗುತ್ತಾಳೆ.ಅಕ್ಕ ಬದುಕಿದ ಬದುಕು ಮತ್ತು ಅವಳ ದಿಟ್ತ ಅಭಿವ್ಯಕ್ತಿಗಳು ಎಂತಹ ನಿರ್ಲಕ್ಷ್ಯವನ್ನು ದಾಟಿ ಮುಚ್ಚಿಟ್ಟ ಬೆಳಕಿನಂತೆ ಹೊರಬರಲಾರಂಬಿಸಿದವು.ಬಿಚ್ಚಿದ ಕೂದಲ ಶಿವಶರಣೆಯಾಗಿ.ಲೋಕದ ನೀತಿಯನ್ನು ಧಿಕ್ಕರಿಸುವ ಹೆಣ್ತನದ ಜೀವಂತ ಚಿಲುಮೆಯಾಗಿ ಕಾಣಿಸುವಲ್ಲಿ ಅಕ್ಕನೆಂಬ ಅದಮ್ಯ. ಶಕ್ತಿಯ ನಿಜದ ನೆಲೆಯ ಹುಡುಕಾಟವಾಗಿದೆ.
ಅಕ್ಕಮಹಾದೇವಿಗೆ ಬಾಲ್ಯದಲ್ಲಿ
ಗುರುಕಾರುಣ್ಯದೊಂದಿಗೆ ಇಸ್ಥಲಿಂಗ ಧಾರಣೆಯೂ ಆಗಿತ್ತು.ಬಾಲ್ಯದಿಂದಲೇ ಚೆನ್ನಮಲ್ಲಿಕಾರ್ಜುನನ್ನುತನಗೆ ತೋರಿಸಿ ಕೊಟ್ತ ಉಪದೇಶಿಸಿದ ಗುರುವಿನಿಂದಾಗಿ ಎನ್ನುತ್ತಾಳೆ.ತನ್ನ ಆದ್ಯಾತ್ಮಿಕ ಆಸಕ್ತಿಗೆ ಗುರು ಕಾರಣವೆಂದು ತನ್ನ ವಚನಗಳಲ್ಲಿಹೆಳಿದ್ದಾಳೆ.ನರ ಜನ್ಮವ ಬಿಡಿಸಿ ಹರಜನ್ಮವ ಮಾಡಿದಾತ.ಭವ ಭಂದನವ ಬಿಡಿಸಿ ಪರಮಸುಖವ ತೋರಿದ ಭವಿಯೆಂದು ತೊಡೆದು ಭಕ್ತಿಯೆಂದೆನಿಸಿದ ಅಂಥಹ ಗುರುವಿಗೆ ಮನದುಂಬಿ ನಮಿಸಿದ್ದಾಳೆ.ತನ್ನ ಆರಾದ್ಯ ದೈವವಾದಂಹ ಚೆನ್ನಮಲ್ಲಿಕರ್ಜುನನ್ನು ಪತಿಎಂದು ನಂಬಿದಾಕೆ .ಏಕೆನ್ನ ಮೊರೆಯಕೇಳಯಯ್ಯ ತಂದೆ ಎಂದು ಅರಿವಿನ ಗುರುವಾದ ಚಿನ್ನಮಲ್ಲಿಕಾರ್ಜುನನ್ನು ಕೇಳುತ್ತಾಳೆ.
ಭಕ್ತಿ ಪರಂಪರೆಯಲ್ಲಿ ಅಕ್ಕನೊಂದಿಗೆ ಮುಖಾಮುಖಿಯಾಗುವ ಕರಿಕಾಲಮ್ಮ್ರೆ .ಅಂಡಾಳು .ಮೀರಾಬಾಯಿ. ಹೆಳವನಕಟ್ಟೆ ಗಿರಿಯಮ್ಮ. ಇವರೆಲ್ಲರೂ ತಮ್ಮ ಆರಾದ್ಯ ದೇವರನ್ನು ಗುರುವೆಂದು ಸ್ವೀಕರಿಸಿದ್ದರು.ಆದರೆ ಅಕ್ಕನ ಗುರು ತನಗೆ ಚಾರಿತ್ರಿಕ ಜವಾಬ್ದಾರಿ ನೀಡುವ ಕಲ್ಪನೆಯ ಪ್ರತೀಕ ವೆಂದು ಮಾನಸಿಕವಾಗಿ ಗುರುವೆ ಆದಿ ಗುರುವೆ ಅಂತ್ಯವ್ರ್ಂದು ನಂಬಿದ್ದಾಳೆ.ಸಾಧನೆಯ ಮಾರ್ಗದ ಅರಿವಿಗೆ ಗುರು ಅಗತ್ಯವಾಗಿರುತ್ತಾನೆ.ಗುರು ಜಂಗಮ ರೂಪಿಯಾಗಿ ಸಾಧನಾತ್ರಯನಾಗಿ ಕಾಣಿಸಿಕೊಳ್ಲುತ್ತಾನೆ.ಅಕ್ಕ ಮನದಲ್ಲೆ ಗುರುವಿಗೆ ಆರೂ ಇಲ್ಲದವಳೆಂದು ಅಳಿಗೊಳ್ಲಲು ಬೇಡ ಕಂಡೆಯ ಅನ್ನುತ್ತಾಳೆ.
ಇಲ್ಲಿ ಗುರುವಿನ ಭೌತಿಕ ಮತ್ತುಆರಾಧಕ ಅಸ್ತಿತ್ವಕ್ಕಿಂತ ಅತ್ಮ ಸಂಗಾತದೆ ಅರಿವಿನ ನೆಲೆ ಮುಖ್ಯವಾಗುತ್ತದೆ. ಗುರು ಶಿಷ್ಯ ಲಿಂಗ ಜಂಗಮ ಪ್ರಸಾದಗಳಿಗೆ ಒಂದು ಅಂತರಂಗವೂ ಇದೆ.ಚಿಂತನಕ್ರಮಗಳಿವೆ.ಇವುಗಳನ್ನು ಮರುಶೊಧಿಸುವ ಶ್ರಮದಾಯಕ ದಾರಿಯಲ್ಲಿ ಅಕ್ಕನವಚನಗಳು ಸಾಗುತ್ತವೆ. ನೀನೊಲ್ಲದ ನಾನೊಲಿಸುವ ಪರಿಯಂತಯ್ಯ ಎಂಬ ಬೇಡಿಕೆ ಇಡುತ್ತಾಳೆ.ಗುರುವಿನ ಅಂತರಂಗದೊಳಗೆ ಶಿಷ್ಯ ಶಿಷ್ಯನ ಅಂತರಂಗದೊಳಗೆ ಗುರು. ಈ ಗುರು ಶಿಷ್ಯ ಸಂಬಂದ ಶರೀರ ಪ್ರಾಣದಂತೆ ಭಿನ್ನವಿಲ್ಲದ್ದು.
“ಗುರುವೆ ತೆತ್ತಿಗನಾದ ಲಿಂಗವೆ ಮದುವಣಿಗನಾದ ನಾನೆ ಮದುವಳಿಗೆಯಾದೆನು. ಈ ಭುವನವೆಲ್ಲರಿಯಲು ಅ ಸಂಖ್ಯಾತರೆನೆಗೆ. ತಂದೆ ತಾಯಿಗಳು. ಕೊಟ್ತರು ಸಾದೃಶವಪ್ಪ ವರನ ನೊಡಿ ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡ ನೆನಗೆ ಮಿಕ್ಕಿದಲೋಕದವರೆನಗೆ ಸಂಬಂಧವಿಲ್ಲವಯ್ಯ ಪ್ರಭುವೆ”
ಗುರುವೆಂಬ ಸೇವಕನ ಜೊತೆ ಗುರುವೆಂಬ ಲಿಂಗದ ಮದುವೆ ಮಾಡಿದರು.ಗುರುಮದುವಣಿಗನಾದ ನಾನು ಮದುವಳಿಗೆಯಾದೆ.ಆದ್ಯಾತ್ಮದ ಮನೊಭೂಮಿಕೆಯಲ್ಲಿ ನನಗೆ ಗುರುವಿನ ಜೊತೆ ಮದುವೆ ಮಾಡಿದರು.ಜನರ ಲೋಕನಿಂದನೆ ಆಪಾದನೆಗಳು ಲೆಕ್ಕಕ್ಕಿಲ್ಲವೆಂದು ಹೇಳುತ್ತಾಳೆ. ಇದು ಗುರುಶಿಷ್ಯರ ಸಂಬಂದ ಜ್ಯೊತಿಯಲ್ಲಿ ಸೇರಿದ ಜ್ಯೊತಿಯಂತಿರ ಬೇಕು.
ಆದ್ದರಿಂದ ಗುರುಎಂದರೆ ದಿವ್ಯ ದೃಷ್ಟಿ ಗುರಿಯಾಗಿದ್ದು ಅರಿವಿನ ಹಸಿವಿನ ಜೊತೆಗೆ ಪರಿಪೂರ್ಣತೆ ಹೊಂದುವುದು. ಇಂತಹ ಶರಣಾಗತಿಯ ನುಡಿಗಳಿಂದ .ಇಂತಹ ಅನೇಕ ಅಕ್ಕನ ವಚನದಲ್ಲಿ ಕಾಣುತ್ತವೆ.
ನೀನೊಲ್ಲದ ನಾನೊಲಿಸುವ ಪರಿಯಂತಯ್ಯ ಎಂಬ ಬೇಡಿಕೆಗೆ ವಿರಾಮವಿಲ್ಲ. ಅಯ್ಯಾನೀ ಕೇಳಿದಡೆ ಕೇಳು.ಕೇಳದಿರ್ದಡೆ ಮಾಣು ನಾ ನಿನ್ನ ಪೂಜಿಸದಲ್ಲದೆ ಸೈರಿಸಲಾರೆನಯ್ಯ. ಚೆನ್ನಮಲ್ಲಿಕಾರ್ಜುನ ಅಕ್ಕನಿಗೆ ಗುರು ದೇವ ಮಿತ್ರ.ಸಖ ಇನಿಯ. ಗಂಡ ನಲ್ಲ ತಂದೆ ಮಗುವು ಎಲ್ಲವೂ ಮನುಷ್ಯ ಲೊಕದಲ್ಲಿ ಗಂಡು ಹೆಣ್ಣಿನ ಸಂಬದದ ಸವಿಯಾದ ಯಾವೆಲ್ಲ ರೂಪಗಳಿವೆಯೊ ಆ ಎಲ್ಲಕ್ಕೂ ಅಕ್ಕನಿಗೆ ಚೆನ್ನಮಲ್ಲಿಕಾರ್ಜುನನೆಂಬ ಆತ್ಮ ಸಂಗಾತಿ ಇದ್ದಾನೆ.
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೊ . ಭವಬಂದನವ ಬಿಡಿಸಿ ಪರಮ ಸುಖವ ತೊರಿದ ಗುರುವೆ ನಮೊ .ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೊ ಚೆನ್ನಮಲ್ಲಿಕಾರ್ಜುನನ ತಂದೆನ್ನಕೈವಶಕ್ಕೆ ಕೊಟ್ತ ಗುರುವೆ ನಮೊ ನಮೊ
ಅಕ್ಕನ ಉದ್ದೆ್ಶ ಗುರುವಿನ ಮೂಲಕ ಐಕ್ಯ ಪಡೆಯಬೇಕೆಂಬುದಾಗಿದೆ.
ಗುರುವನ್ನು ಪೂಜ್ಯನೀಯವಾಗಿ ಕಾಣುವ ಆಕೆ ಗುರುವಿನ ಬಗ್ಗೆ ಅಷ್ಟೆ ಗೌರವ ಕೊಡುತ್ತಾಳೆ.ನರಜನ್ಮದ ಬಗ್ಗೆ ವೈರಾಗ್ಯ ಜಿಗುಪ್ಸೆ ಹೊಂದಿ ಪರಿಪೂರ್ಣತೆಗಾಗಿ ಹಂಬಲಿಸುತ್ತಾಳೆ. ಸಂಸಾರದ ಬಂಧನವನ್ನು ಕಳಚಿ ಗುರುವಿನ ಶರಣಾಗತಿಗೆ ಬಾಗುತ್ತಾಳೆ.ಆಕೆಗೆ ಗುರುವಿನ ಸಾಮಿಪ್ಯ ಗೊತ್ತು .ತತ್ವಮಯವಾದ ಈ ಶರೀರದಲ್ಲಿ ಗುರುವು ಪ್ರಣವ ಸ್ವರೂಪಿಯಾಗಿರುವನೆಂದು .ಆದ್ದರಿಂದ ಭಕ್ತಿ ಪರಂಪರೆಯ ಸಾಧಕರು ದೇವರ ನೆಲೆಗಿಂತ ಆತ್ಮಲಿಂಗ ನೆಲೆಯಲ್ಲಿ ಗುರುವನ್ನು ಕಾಣುತ್ತಾರೆ.ಅರಿವಿನ ಆತ್ಮಕ್ಕೆ ನಮೊ ಎನ್ನುತ್ತಾರೆ.
ಗುರು ತಂದೆಯಾಗಿ ದೈವ ವಾಗುತ್ತಾನೆ.ಕುರುಹು ಇದ್ದು ಇಲ್ಲದ ಉರಿಹಿಡಿದಕರ್ಪೂರದ ಗಿರಿಯಂತೆ ಕಾಣುತ್ತಾನೆ.ಈ ದೈವಿ ಸಂಬಂದಗಳು ಗುರು ಸಂಬಂಧಗಳಾಗುತ್ತವೆ.
ಅಕ್ಕನ ವಚನಗಳ ಭಕ್ತಿಯಜವಾನಿಕೆಯನ್ನು ಕೊಂಚ ಸರಿಸಿದರೆ ಅಲ್ಲಿ ಇಂದಿನ ಸವಾಲುಗಳಿಗೆ ಉತ್ತರಿಸುವ ಹೆಣ್ನಿನ ಪ್ರತಿಭೆಯಿದೆ ಇಂದಿನ ನಮ್ಮ ಅನಿಸಿಕೆಗಳು ಗ್ರಹಿಕೆಗಳು ಅಕ್ಕನ ವಚನಗಳಲ್ಲಿ ಬೀಜಗಳಂತೆ ಬೆಚ್ಚಗಿವೆ.