Breaking News
Home / featured / ಧರ್ಮ ಸಾಂಸ್ಥಿಕರಣ ಮಠ ಪರಂಪರೆ ಬಸವ ತತ್ವಕ್ಕೆ ಮಾರಕ

ಧರ್ಮ ಸಾಂಸ್ಥಿಕರಣ ಮಠ ಪರಂಪರೆ ಬಸವ ತತ್ವಕ್ಕೆ ಮಾರಕ

ಜಗವು ಕಂಡ ಸರ್ವ ಶ್ರೇಷ್ಠ ವಿಚಾರವಾದಿ ಬಂಡುಕೋರ ಚಿಂತಕ ಸಮಾಜವಾದಿ ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆಯ ಶಾಂತಿ ಪ್ರೀತಿಯನ್ನು ಅನುಸರಿಸುವ ವರ್ಗರಹಿತ ವರ್ಣರಹಿತ ಲಿಂಗ ಭೇದ ರಹಿತ ಆಶ್ರಮ ಭೇದವಿರದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಧರ್ಮವಾಗಿದೆ .ಅನುಭವ ಮಂಟಪವು ಶರಣರು ಜಾಗತಿಕ ಪ್ರಜಾಪ್ರಭುತ್ವಕ್ಕೆ ಕೊಟ್ಟ ಅದ್ವಿತೀಯ ಕೊಡುಗೆಯಾಗಿದೆ . ಮ್ಯಾಗ್ನ ಕಾರ್ಟಕ್ಕಿಂತ ಶತಮಾನಕ್ಕೂ ಮುಂಚೆ ಬಸವಾದಿ ಪ್ರಮಥರು ಪ್ರಜಾಪ್ರಭುತ್ವವನ್ನು ಲೋಕಶಾಹಿ ಹೊಸ ರಾಜಕೀಯ ಸಾಮಾಜಿಕ ಸಾಹಿತಿಕ ಆರ್ಥಿಕ ನೈತಿಕ ಧಾರ್ಮಿಕ ಪರ್ಯಾಯ ವ್ಯವಸ್ಥೆಯನ್ನು ಹುಟ್ಟು ಹಾಕಿದರು .ಬಸವಣ್ಣ ಎಂದರೆ ಶತಮಾನಗಳಿಂದ ಸಾಗಿ ಬಂದಿದ್ದ ಮೌಢ್ಯ ಸಂಪ್ರದಾಯಗಳನ್ನುಮೆಟ್ಟಿ ನಿಂತು ನಿತ್ಯ ನೂತನ ತತ್ವ ಸಿದ್ಧಾಂತದ ಆಚರಣೆ ರಹಿತ ಸಂಪ್ರದಾಯಗಳಿಲ್ಲದ ಶ್ರೇಣೀಕೃತವಲ್ಲದ ಸಮಾಜವನ್ನು ಕಟ್ಟಿದನು .

ಇಂದು ಬಸವ ಪರಂಪರೆ ಅನೇಕ ಮಠಗಳು ಸ್ವಾಮಿ ಅಕ್ಕನವರು ಕರ್ಮಠರಾಗಿ ಬಸವ ತತ್ವವನ್ನು ವಿರೂಪಗೊಳಿಸಿದ್ದಾರೆ. ಲಾಂಛನಧಾರಿಗಳು ಲಿಂಗ ತತ್ವವನ್ನು ಅರಿತೋ ಅರಿಯದೋ ಹೀಗೆ ಹೊಸ ಹೊಸ ಆಚರಣೆಗಳನ್ನು ಹುಟ್ಟು ಹಾಕಿ ಸಮಾಜವಾದಿ ಬಸವಣ್ಣನವರ ಆಶಯಗಳಿಗ್ರ್ ಧಕ್ಕೆ ತಂದಿದ್ದಾರೆ ತರುತ್ತಿದ್ದಾರೆ .ಬಸವ ಭಕ್ತರ ಪ್ರಜ್ಞೆ ಇತ್ತಿಚೆಗೆ ಹೆಚ್ಚುತ್ತಿದ್ದು ಇಂತಹ ಕರ್ಮಠ ಮೌಡ್ಯಗಳನು ಧಿಕ್ಕರಿಸುವ ಪ್ರತಿಭಟಿಸುವ ತಿರಸ್ಕರಿಸುವ ಕಾಲ ದೂರ ಉಳಿದಿಲ್ಲ . ಬಸವ ತತ್ವವನ್ನು ಮೂಲಸ್ವರೂಪದಲ್ಲಿ ಆಚರಣೆಗೆ ತರದೇ ಹೋದರೆ ಅನೇಕ ಇತ್ತಂಡ ವಾದಕ್ಕೆ ಗುರಿಯಾಗಿ ಅಪಹಾಸ್ಯಕ್ಕೆ ಒಳಗಾಗುವುದು .ಲಾಂಛನಧಾರಿಗಳು ಬಸವ ಉದ್ಯಮಿಗಳು ಬಸವಣ್ಣನ ಭಾವ ಚಿತ್ರವನ್ನು ಇಟ್ಟು ಹಣ ಸುಲಿಗೆ ಮಾಡುವ ಸರಳ ಶ್ರಮವಿಲ್ಲದ ಪದ್ದತಿಯನ್ನು ಅಳವಡಿಸಿಕೊಡಿದ್ದಾರೆ .ಇವರನ್ನು ಹೊಗಳುತ್ತಾ ತಮ್ಮ ಗ್ರಂಥಗಳನ್ನು ಪ್ರಕಟಗೊಳಿಸಿಕೊಂಡು ವಾರ್ತೆ ಕೀರ್ತಿ ಪೀಡೆಗೆ ಒಳಗಾಗಿ ಸತ್ಯ ಗೊತ್ತಿದ್ದರೂ ಎದ್ದು ಹೊರಗೆ ಬರದೇ ಇಂತಹ ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡ ಮಾರಾಟಕ್ಕಿಟ್ಟ ಸಾಹಿತಿಗಳು ಅಧ್ಯಾಪಕರು ಸಂಶೋಧಕರು ಭಾಷಣಕಾರರು ಪ್ಯಾಕೇಟು ಪ್ರಿಯರು .

ಬಸವ ತತ್ವಗಳ ಮೇಲೆ ಪಂಚಪೀಠದ ಸೈದ್ಧಾಂತಿಕ ದಾಳಿ ,ಬಸವ ಪರಂಪರೆ ಎಂದು ಹೇಳಿಕೊಂಡು ವ್ಯವಹಾರ ಮಾಡುವ ನೂರಾರು ಕೋಟಿ ಆಸ್ತಿ ಹೊಂದಿರುವ ವಿರಕ್ತ ಪರಂಪರೆಯ ಅಣ್ಣ ಅಕ್ಕ ಸ್ವಾಮಿಗಳು ಬಸವ ತತ್ವವನ್ನು ಸಮಾಧಿ ಮಾಡುವ ಹುನ್ನಾರ ನಡೆಸಿದ್ದಾರೆ.ಇವರ ಮಧ್ಯೆ ಮೌನವಾದ ಬಸವ ಭಕ್ತರು .ಲಿಂಗಾಯತ ಧರ್ಮದ ಅಳಿವು ಉಳಿವಿನ ಪ್ರಶ್ನೆ ಈಗ ನಮ್ಮ ಮುಂದಿದೆ .ಇತ್ತೀಚಿಗೆ ಬಸವ ಪರಂಪರೆಯ ಉನ್ನತ ಮಠದ ಸ್ವಾಮಿಗಳು ಜಗದ್ಗುರುಗಳು ಬಸವಣ್ಣವರಿಗಿಂತ ಮೊದಲು ಜೇಡರ ದಾಸಿಮಯ್ಯನವರ ಕ್ರಾಂತಿ ಅಮೋಘವಾಗಿತ್ತು ಅದು ಮುಂದೆ ಬಸವಣ್ಣವರ ಅನುಭವ ಮಂಟಪಕ್ಕೆ ಮಾದರಿಯಾಯಿತು ಎಂದು ಹುಸಿ ಸುಳ್ಳು ಹೇಳಿ ನಾಡಿನ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಗೊಳಿಸಿದ್ದಾರೆ ಯಾವೊಬ್ಬ ಮಠಾಧೀಶರು ಇದನ್ನು ಪ್ರಶ್ನಿಸಿಲ್ಲ .ಮುಂಬೈ ಬಸವ ಜಯಂತಿ ಕಾರ್ಯಕ್ರಮವೊಂದರಲ್ಲಿ ಸ್ವಾಮಿಗಳೊಬ್ಬರು ಭಾಗವಹಿಸಿ ಮಾತನಾಡಿ ಬಸವಣ್ಣ ಸಮಾನತೆಯ ಹರಿಕಾರ ಎಂದೆಲ್ಲಾ ಗುಣಗಾನ ಮಾಡಿ ಭಕ್ತರ ಮನೆಯಲ್ಲಿ ತಮಗೆ ವಿಶೇಷ ಬೆಳ್ಳಿಯ ತಾಟು ಲೋಟ ಚರಿಗೆ ಪೂಜಾ ಸಾಮಗ್ರಿಗಳು ವಿಶೇಷ ಪ್ರಸಾದದ ವ್ಯವಸ್ಥೆ . ಅಬ್ಬಬ್ಬಾ ಪಂಚ ಪೀಠದವರಿಗೆ ಇವರೇನೂ ಕಡಿಮೆ ಇಲ್ಲ ಎಂದೆನಿಸಿತು .ಜಂಗಮ ಶ್ರೇಷ್ಠತೆ ಜೇಷ್ಠತೆ ಹೋಗದ ಹೊರತು ಬಸವ ತತ್ವ ಬದುಕಲಾರದು .

ಬಸವ ಧರ್ಮದಲ್ಲಿ ದೇವರು ಸೃಷ್ಟಿಕರ್ತ ಪರಮಾತ್ಮ ಎಂಬ ಪದಗಳಿಗೆ ಅವಕಾಶವಿಲ್ಲ .ಪಂಚ ಮಹಾಭೂತಗಳಿಂದ ನಿರ್ಮಿತಗೊಂಡ ಈ ಕಾಯ ಶರೀರವು ಲಿಂಗಮಯವಾಗಿ ಜಂಗಮ ಚೈತನ್ಯವನ್ನು ಪಡೆದುಕೊಂಡು ವ್ಯಕ್ತಿಯೇ ದೇವರಾಗುವ ಸುಲಭ ಮಾರ್ಗವಾಗಿದೆ .ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಪ್ರಸನ್ನತೆಯೇ ಪ್ರಸಾದ . ಎದೆಯ ಮೇಲೆ ಅರುಹಿನ ಕುರುಹಾದ ಲಿಂಗವಿರಲು .ಅರಿವಿನ ಅನುಸಂಧಾನವೇ ಯೋಗವಾಗಿರುವಾಗ ಪೂಜೆ ಪುನಸ್ಕಾರ ಎಲ್ಲಿಂದ ಹುಟ್ಟಿಕೊಂಡವು .ಬಸವ ಕಲ್ಯಾಣದಲ್ಲಿರುವ ಶರಣರ ಅರುಹಿನ ಮನೆಗಳಲ್ಲಿ ಈಗಲೂ ಕತ್ತಲಿದೆ ಸಮೆ ದೀಪ ಧೂಪ ಪತ್ರೆಗಳಿಂದ ಪೂಜೆ ಮಾಡುವ ಬಾಹ್ಯ ವ್ಯವಹಾರವು ಬಸವ ತತ್ವಕ್ಕೆ ಮಾಡುವ ದ್ರೋಹವಾಗಿದೆ .ಕಾರಣ ಬಸವ ಧರ್ಮವು ತನ್ನ ಮೂಲ ಸ್ವರೂಪದ ಆಶಯದಲ್ಲಿ ಪಸರಿಸಿ ವಿಶ್ವಕ್ಕೆ ಹರಡಲಿ. ಆಂತರಿಕ ಸ್ವಾತಂತ್ರ್ಯ ಮಾತು ಸೌಂದರ್ಯತೆಯನ್ನು ಹೆಚ್ಚಿಸಿ ಭಕ್ತನ ನಡೆ ನುಡಿಯಲಿ ಏಕತೆಯ ಶುಚಿತ್ವವನ್ನು ಕಾಣುವುದೇ ಶರಣ ಧರ್ಮ ಲಿಂಗಾಯತ ಧರ್ಮವಾಗಿದೆ . ಇಲ್ಲಿ ಸ್ವಾಮಿಗಳು ಲಾಂಛನಧಾರಿಗಳು ಭಕ್ತರಿಂದ ಕಾಲು ತೊಳೆಸಿಕೊಂಡು ಅದುವೇ ಪವಿತ್ರ ಪಾದೋದಕ ಎನ್ನುವುದು ದುರಂತದ ಸಂಗತಿಯಾಗಿದೆ .ಏಕೆ ಭಕ್ತರು ಸ್ವಾಮಿಗಳ ಅಕ್ಕನವರ ಕಾಲು ಮುಗಿಯಬೇಕು ? ಮಠಗಳ ಆಸ್ತಿ ವ್ಯವಹಾರಗಳ ಲೆಕ್ಕವನ್ನು ಯಾರು ಕೇಳುವರು?. ಮಠಗಳು ಆಶ್ರಮಗಳು ವಾಣಿಜ್ಯ ಮಳಿಗೆಗಳಾಗಿವೆ. ಇಂತಹ ಸಾಂಸ್ಥಿಕರಣಗೊಂಡ ವ್ಯವಸ್ಥೆಯೇ ಬಸವ ತತ್ವದ ಪ್ರಸಾರಕ್ಕೆ ಮಾರಕ

ಡಾ.ಶಶಿಕಾಂತ ರು ಪಟ್ಟಣ

-ರಾಮದುರ್ಗ

About Shivanand

Admin : Lingayat Kranti Monthly news paper 8884000008 [email protected]

Check Also

ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ

  ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!