Breaking News
Home / featured / ಚನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ನಿಧನ

ಚನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ನಿಧನ

ಬೆಳಗಾವಿ: ಖ್ಯಾತ ಕಥೆಗಾರ್ತಿ, ಲೇಖಕಿ ಶಾಂತಾದೇವಿ ಕಣವಿ ಅವರು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 88 ವರ್ಷ ವಯಸ್ಸಾಗಿತ್ತು. ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

ಪ್ರಖ್ಯಾತ ಕವಿ ಚನ್ನವೀರ ಕಣವಿ ಅವರ ಪತ್ನಿಯಾದ ಶಾಂತಾದೇವಿ ಕಣವಿ ಅವರು ಸಾಹಿತ್ಯ ಕ್ಷೇತ್ರದಲ್ಲೀ ತಮ್ಮದೇ ಆದ ಛಾಪು ಮೂಡಿಸಿದ್ದರು. ಅನೇಕ ಕಥೆ, ಕಾದಂಬರಿ, ಲೇಖನಗಳ ಮೂಲಕ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಗಿಡ್ಡನರವರ್ ಮನೆತನದವರಾಗಿದ್ದ ಚನ್ನವೀರ ಕಣವಿ ಅವರನ್ನು ವರಿಸಿ ಅವರ ಸಾಹಿತ್ಯ ಸೃಷ್ಟಿಗೆ ಸ್ಫೂರ್ತಿಯಾಗಿದ್ದರು

ಅವರ ಮಗಳು ಡಾ.ರಂಜನಾ ಗೋದಿ ಅವರೂ ಕವಿಯಿತ್ರಿಯಾಗಿದ್ದು ಬೆಳಗಾವಿಯ ಪ್ರಸಿದ್ಧ ವೈದ್ಯರಾಗಿದ್ದ ಡಾ.ಗೋದಿಯವರ ಪತ್ನಿ. ಮೃತರ ಅಂತ್ಯಕ್ರಿಯೆ ಶನಿವಾರ ಧಾರವಾಡದಲ್ಲಿ ನಡೆಯಲಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!