Breaking News
Home / featured / ಸಂಪಗಾವಿಯಲ್ಲಿ ಕೊರೊನಾ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಜಾಗೃತಿ ಜಾಥಾ

ಸಂಪಗಾವಿಯಲ್ಲಿ ಕೊರೊನಾ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಜಾಗೃತಿ ಜಾಥಾ

ನೇಗಿನಹಾಳ : ಪಕ್ಕದ ಸಂಪಗಾವಿ ಗ್ರಾಮದಲ್ಲಿ ಈಗಾಗಲೇ ಕೊರೊನಾ ಸೊಂಕು ಹರಡಿಕೊಂಡಿದ್ದು ಇದರಿಂದ ನೇಗಿನಹಾಳ ಹಾಗೂ ಸೂತ್ತಮೂತ್ತಲಿನ ಗ್ರಾಮಸ್ಥರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಜೊತೆಗೆ ನೇಗಿನಹಾಳ ಗ್ರಾಮದ ಮೇಲೆ ಅತೀ ಹೆಚ್ಚು ಅವಲಂಬನೆ ಹೊಂದಿರುವ  ಸಂಪಗಾವಿ ಗ್ರಾಮದ ವ್ಯಾಪಾರಸ್ಥರೊಂದಿಗೆ ತಮ್ಮ ವ್ಯವಹಾರಗಳಿಂದ ದೂರವಿರಬೇಕು ಒಂದು ವೇಳೆ ಯಾರಾದರೂ ಬಂದರೆ ಅಂತವರ ಕುರಿತು ಶೀಘ್ರವಾಗಿ ಗ್ರಾ.ಪಂ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕೆಂದು ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ಶನಿವಾರ ಮುಂಜಾನೆ ಗ್ರಾ.ಪಂ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ತಿಳುವಳಿಕೆ ಮೂಡಿಸುವ  ಕೊರೊನಾ ಜಾಗೃತಿ ಜಾಥಾ ಕುರಿತು ಮಾತನಾಡಿದರು. ಸಂಪಗಾವಿ ಗ್ರಾಮದಿಂದ ಪೇಪರ್, ಪ್ಲಾಸ್ಟಿಕ್, ಹಳೆವಸ್ತುಗಳ ಖರೀದಿಸುವುದರಿಂದ ಹಿಡಿದು ಕಾಯಿಪಲ್ಯ, ಆಹಾರ ದಾನ್ಯಗಳ ವ್ಯಾಪಾರಸ್ಥರು ನೇಗಿನಹಾಳ ಗ್ರಾಮದ ಮೇಲೆ ಅತೀ ಹೆಚ್ಚು ಅವಲಂಬನೆ ಹೊಂದಿದ್ದು ದಯವಿಟ್ಟು ಕೊರೊನಾ ವೈರಸ್ ಕಡಿಮೆಯಾಗುವವರಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಎಚ್  ಮಾತನಾಡಿ ಸಂಪಗಾವಿ ಗ್ರಾಮದ ಜನರೊಂದಿಗೆ ಸಂಪೂರ್ಣ ದೂರ ಉಳಿಯಬೇಕು, ಹಾಗೂ ಸಂಪಗಾವಿ ಹೊಲಗಳಿಗೆ ಕೂಲಿ ಹೋಗುವುದು ನಿಲ್ಲಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊರೊನಾ ನೂಡಲ್ ಅಧಿಕಾರಿ ಮೂಗಸಜ್ಜಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು,  ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿಗಳು‌ ಜಾಥಾದಲ್ಲಿ ಭಾಗವಹಿಸಿದ್ದರು.
ನೇಗಿನಹಾಳ ಗ್ರಾಮದ ಜನರಲ್ಲಿ ಕೊರೊನಾ ವೈರಸ್ ಕುರಿತು ಹಾಗೂ ಸಂಪಗಾವಿ ಗ್ರಾಮದೊಂದಿಗೆ ವ್ಯವಹಾರ ಕಡಿತಗೊಳಿಸಲು ಜಾಗೃತಿ ಜಾಥಾ ನಡೆಸಿದರು. ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!