Breaking News
Home / featured / ನಾವು ಲಿಂಗಾಯತ ಧರ್ಮಿಯರು

ನಾವು ಲಿಂಗಾಯತ ಧರ್ಮಿಯರು

~ ಡಾ. ಜೆ ಎಸ್ ಪಾಟೀಲ.

ನಾವು ಸುಪ್ರಬಾತದಲ್ಲಿ ಎದ್ದು ಶುಚಿರ್ಭೂತರಾಗಿ ಯಾವ ದೇವಾಲಯಕ್ಕೂ ಹೋಗದೆ ನಮ್ಮ ಅಂಗದ ಮೇಲೆ ಗುರು ಬಸವಣ್ಣನಿತ್ತ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತೇವೆ. ಇಲ್ಲಿ ಭಕ್ತ ಮತ್ತು ದೇವರ ನಡುವೆ ಪುರೋಹಿತನೆಂಬ ದಲ್ಲಾಳಿಗೆ ಅವಕಾಶವಿಲ್ಲ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಯಾವ ಮಡಿˌ ಮೈಲಿಗೆˌ ಮುಡಚಟ್ಟುಗಳನ್ನು ಆಚರಿಸದೆ ಮಗುವಿಗೆ ಐದನೇ ದಿನಕ್ಕೆ ಲಿಂಗಸಂಸ್ಕಾರವನ್ನು ನೀಡುತ್ತೇವೆ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಮ್ಮ ಮಗು ಹತ್ತು ಹನ್ನಂದನೇ ವಯಸ್ಸಿಗೆ ಬಂದಾಗ ಸ್ತ್ರೀ ಪುರುಷ ಬೇಧವಿಲ್ಲದೆ ಗುರು ಮುಖೇನ ಇಷ್ಟಲಿಂಗ ದೀಕ್ಷೆಯನ್ನು ಮಾಡಿಸುತ್ತೇವೆ. ಆ ಮೂಲಕ ಹೆಣ್ಣು ಗಂಡು ಬೇಧವಿಲ್ಲದೆ ನಮ್ಮಲ್ಲಿ ಧಾರ್ಮಿಕ ಸಂಸ್ಕಾರ ನೀಡಲಾಗುತ್ತದೆ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಮ್ಮ ಮನೆಯಲ್ಲಿ ಸ್ತ್ರೀಯರ ಮಾಸಿಕ ಋತುಚಕ್ರದ ಅವಧಿಯಲ್ಲಿ ಅವರನ್ನು ಐದು ದಿನಗಳ ಕಾಲ ಮನೆಯ ಹೊರಗೆ ಕೂಡಿಸಲಾಗುವುದಿಲ್ಲ. ಅವರು ಸಹಜವಾಗಿ ನಮ್ಮೆಲ್ಲರೊಡನೆ ಮನೆಯಲ್ಲೇ ಇರುತ್ತಾರೆ ಮತ್ತು ಅವರಿಗೆ ಇಷ್ಟಲಿಂಗ ಪೂಜೆ ನಿವಾಕರಿಸಲಾಗುವುದಿಲ್ಲ. ಸ್ನಾನದ ನಂತರ ಸ್ತ್ರೀಯರು ಇಷ್ಟಲಿಂಗ ಪೂಜೆ ಮಾಡಿಕೊಳ್ಳಬಹುದು. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಮ್ಮ ಮನೆಯಲ್ಲಿ ಕಲ್ಯಾಣೋತ್ಸವದಲ್ಲಿ ನಾವು ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿˌ ಷಟಸ್ಥಲ ಧರ್ಮಧ್ವಜವನ್ನು ಆರೋಹಿಸಿ ವಚನ ಶಾಸ್ತ್ರದನುಸಾರ ಕಾರ್ಯಕ್ರಮಗಳನ್ನು ಸೂಕ್ತ ಕ್ರೀಯಾಮೂರ್ತಿಗಳಿಂದ ನಡೆಸುತ್ತೇವೆ. ಸಪ್ತಪದಿ ತುಳಿತˌ ಅಗ್ನಿಸಾಕ್ಷಿ ಮುಂತಾದ ವೈದಿಕ ಆಚರಣೆಗಳ ಬದಲಿಗೆ ವಚನ ಕಟ್ಟು ˌ ವಚನ ಪಠಣˌ ರುದ್ರಾಕ್ಷಿ ಕಂಕಣಗಳ ಮೂಲಕ ಕಾರ್ಯಕ್ರಮ ನಡೆಸುತ್ತೇವೆ. ಉಣ್ಣುವ ಅನ್ನ ಅಕ್ಕಿ ಅಥವ ಜೋಳದ ಕಾಳುಗಳನ್ನು ಅಕ್ಷತೆಗೆ ಬಳಸದೆ ಹೂವಿನ ಪಕಳೆಗಳನ್ನು ಪ್ರೋಕ್ಷಿಸುತ್ತೇವೆ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಮನೆಗಳಲ್ಲಿˌ ನಾಮಕರಣˌ ಸೀಮಂತˌ ಶಾಲು ಹೊದಿಕೆˌ ಉಟದಟ್ಟಿ ಮುಂತಾದ ಕಾರ್ಯಕ್ರಮಗಳು ವಚನ ಶಾಸ್ತ್ರದನ್ವಯ ಸೂಕ್ತ ಕ್ರೀಯಾಮೂರ್ತಿಗಳ ಮುಖೇನ ನೆರವೇರಿಸುತ್ತೇವೆ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಜೀವಮಾನದಲ್ಲಿ ತೀರ್ಥಯಾತ್ರೆಗಳನ್ನು ಮಾಡುವುದಿಲ್ಲ. ದೇವರಿಗೆ ಮುಡಿ ಕೊಡುವುದಿಲ್ಲ. ಹರಕೆ ಹೊರುವುದಿಲ್ಲ. ಯಾವುದಾದರೂ ದೇವಸ್ಥಾನಗಳಿಗೆ ಹೋದರೂ ಅದು ಪ್ರಾಚೀನ ವಾಸ್ತುಶಿಲ್ಪವನ್ನು ನೋಡಲು ಮತ್ತು ದೂರದ ಪ್ರೇಕ್ಷಣೀಯ ಸ್ಥಳಗಳನ್ನು ವಿಕ್ಷಿಸಲು ಹೋಗುತ್ತೇವೆ. ಅಲ್ಲಿಗೆ ಹೋಗುವುದರಿಂದ ಪುಣ್ಯ ಲಭಿಸುತ್ತದೆಂಬ ಮೌಢ್ಯದಲ್ಲಿ ನಮಗೆ ನಂಬಿಕೆ ಇಲ್ಲ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ಆಕಳನ್ನು ಮಾತ್ರ ಗೋಮಾತೆ ಎಂದು ಪೂಜಿಸುವುದಿಲ್ಲ. ಬದಲಿಗೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತೇವೆ. ನಮಗೆ ಎಲ್ಲ ಜೀವಿಗಳೂ ಸಮ. ಜೀವಿಗಳಲ್ಲಿ ಹಾಗೂ ಮನುಷ್ಯರಲ್ಲಿ ಬೇಧ ಭಾವ ಮಾಡುವುದಿಲ್ಲ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಮನೆಯ ಮಕ್ಕಳಿಗೆ ನಂದಿˌ ಶಿವˌ ವಿಷ್ಣು ˌ ಮುಂತಾದ ಲಾಂಛನಗಳಾಗಿˌ ಶಿವದಾರˌ ಕೆಂಪುˌ ಕೇಸರಿ ಮುಂತಾದ ಬಣ್ಣದ ದಾರಗಳನ್ನು ಧರಿಸುವುದು ಮಾಡುವುದಿಲ್ಲ. ಅಗ್ನಿ ತುಳಿಯುವುದುˌ ಗುಗ್ಗಳ ಪೂಜೆˌ ವೀರಭದ್ರ ಕುಣಿತ ಮುಂತಾದವು ಆಚರಿಸುವುದಿಲ್ಲ. ಇಷ್ಟಲಿಂಗವೇ ನಮಗೆ ಸರ್ವವೂ ಆಗಿರುತ್ತದೆ. ನಾವು ಸನಾತನ ವೈದಿಕ ಹಿಂದೂಳಲ್ಲ. ಹಾಗೆಯೇ ಆಗಮಿಕ ವೀರಶೈವರೂ ಅಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಮನೆಗಳಲ್ಲಿ ಗೌರಿಗಣೇಶ ಉತ್ಸವˌ ಮಂಗಳಗೌರಿ ಪೂಜೆˌ ವರಮಹಾಲಕ್ಷಿ ಪೂಜೆ ಇಂಥ ಮೌಢ್ಯಾಚರಣೆಗಳನ್ನು ಮಾಡುವುದಿಲ್ಲ. ಬದಲಿಗೆ ನಾವು ಪ್ರತಿ ತಿಂಗಳಲ್ಲಿ ಬರುವ ಶರಣರ ಜಯಂತಿಗಳನ್ನು ಸರಳವಾಗಿ ಆಚರಿಸುತ್ತೇವೆ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಹೋಮˌ ಹವನಗಳನ್ನು ಮಾಡುವುದಿಲ್ಲ. ವಾಸ್ತು ˌ ಪಂಚಾಂಗˌ ಶುಭಘಳಿಗೆ ನೋಡುವುದಿಲ್ಲ. ರಾಹು ಗುಳಿಕಾಲಗಳನ್ನು ಅನುಸರಿಸುವುದಿಲ್ಲ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

ನಾವು ನಮ್ಮ ಮನೆಗಳಲ್ಲಿ ಯಾರಾದರೂ ಲಿಂಗೈಕ್ಯರಾದರೆ ಸೂತಕವನ್ನಾಚರಿಸುವುದಿಲ್ಲ. ಸಂಸ್ಕಾರದಲ್ಲಿ ಲಿಂಗ ಶರೀರಕ್ಕೆ ಅಗ್ನಿಸ್ಪರ್ಷ ಮಾಡುವುದಿಲ್ಲ. ಶುದ್ಧ ವಿಭೂತಿˌ ಬಿಲ್ವಪತ್ರೆ ˌ ಲವಣ ಸಮೇತ ಲಿಂಗ ಶರೀರವನ್ನು ವಚನ ಶಾಸ್ತ್ರಗಳನ್ವಯ ಭೂಮಿಯಲ್ಲಿ ಕುಳಿತ ಭಂಗಿಯಲ್ಲಿ ಕೈಯಲ್ಲಿ ಇಷ್ಟಲಿಂಗ ಸಮೇತ ಸಂಸ್ಕಾರ ಮಾಡುತ್ತೇವೆ. ನಾವು ಸನಾತನ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!