Breaking News
Home / featured / ಅಹಂಕಾರಕ್ಕೆ ಅಜ್ಞಾನವೇ ಬೀಜ

ಅಹಂಕಾರಕ್ಕೆ ಅಜ್ಞಾನವೇ ಬೀಜ

ಬೀದರ್: ತನ್ನ ರೂಪ ಸಂಪತ್ತು ಅಧಿಕಾರ ವಿದ್ಯೆ ಬಲಗಳ ಬಗೆಗಿನ ಅಜ್ಞಾನ ಅತಿರೇಕದ ತಿಳುವಳಿಕೆ ಅಹಂಕಾರವನ್ನು ಬಿಟ್ಟು ಬೆಳೆಯುತ್ತದೆ! ಎನ್ನುವುದಕ್ಕೆ ನಮ್ಮ ಬಸವಣ್ಣನವರ ವಚನವೇ ಸಾಕ್ಷಿ , ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ

ಅಷ್ಟೇ ಏಕೆ ತನ್ನ ವೈರಾಗ್ಯದ ಬಗೆಗಿನ ಸೂಕ್ಷ್ಮ ಹೆಮ್ಮೆಯೂ ಅಹಂಕಾರದ ಇನ್ನೊಂದು ಮುಖವೇ ಸರಿ , ಮಹಾಜ್ಞಾನಿ ಸಾಕ್ರೆಟೀಸ್ನ ಹೆಸರು ಯಾರು ಕೇಳಿಲ್ಲ ,ಆತ ತತ್ವಜ್ಞಾನದ ಉತ್ತುಂಗ ಶಿಖರ ಅದೇನೆಂದು, ಆತ ಪ್ರಸಿದ್ಧ ವ್ಯೆಕ್ತಿ ಆದರೂ ಎಂದಿಗೂ ಜ್ಞಾನ ಮದದಿಂದ ಬಿಗಿದ ಅವನಲ್ಲ , ಒಂದು ಸಲ ಅಥೆನ್ಸಿನ ಜನ ವಿಶ್ವದಲ್ಲಿ ನಿಜವಾದ ಜ್ಞಾನಿ ಯಾರು ಎಂದು ಚರ್ಚಿಸತೊಡಗಿದರು, ಇದನ್ನು ಅರಿಯಬೇಕೆಂದು ದೇವರಲ್ಲಿ ಪ್ರಾರ್ಥಿಸಿದಾಗ ಸಾಕ್ರೆಟೀಸ್ನ ಬಳಿಗೆ ಹೋಗಿ ನಿಮಗೆ ಉತ್ತರ ದೊರೆಯುತ್ತದೆ ಎಂಬ ಅಶರೀರವಾಣಿ ಆಯಿತು, ಅದಕ್ಕೆ ಎಲ್ಲಾ ಸೇರಿ ನಿಮ್ಮಲ್ಲಿಗೆ ಬಂದೆವು, ಸಾಕ್ರೆಟೀಸ್ನ ಬಳಿಗೆ ಹೋಗಿ ಜ್ಞಾನಿ ಯಾರು ಎಂದು ಕೇಳಿದಾಗ ಸಾಕ್ರೆಟಿಸ್ “ಇಲ್ಲ ನನಗೇನು ಗೊತ್ತಿಲ್ಲ ಆದರೆ ನನಗೆ ಗೊತ್ತಿಲ್ಲ ಎಂಬುದು ಮಾತ್ರ ಗೊತ್ತಿದೆ” ಎಂದು ಉತ್ತರಿಸಿದನಂತೆ……

ಇದು ನಿಜವಾದ ಜ್ಞಾನಿಯ ಲಕ್ಷಣ ತುಂಬಿದ ಕೊಡ ತುಳುಕುವುದಿಲ್ಲ ಯಾವನಿಗೆ ನಿಸ್ಸೀಮ ವಾದ ಜ್ಞಾನದ ಬಗ್ಗೆ ಗೊತ್ತಿರುತ್ತದೆ ಅವನು ತಾನು ಪಡೆದ ಸೀಮಿತ ಜ್ಞಾನಕ್ಕಾಗಿ ಅಹಂಕಾರ ಪಡುವುದು ಹೇಗೆ ಸಾಧ್ಯ ??
ಈ ಅಹಂಕಾರವನ್ನು ಗಳಿಸಬೇಕಾದರೆ ಅಹಂಭಾವ ತೊಲಗಬೇಕು ಮಾಡುವಂತಿರಬೇಕು ಮಾಡದಂತಿರಬೇಕು ಎಂದು ಸಿದ್ಧರಾಮೇಶ್ವರರ ನುಡಿಯಲ್ಲಿ ನಾನು ತುಂಬಾ ಸಲ ಕೇಳಿದ್ದೇನೆ ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು….. ಎನ್ನುತ್ತಾರೆ !
ಸದುವಿನಯದಿಂದ ತುಂಬಿದ ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಎಂಬ ಮಾತಿನಿಂದ ಅವರು ಇವತ್ತು ಎಲ್ಲಕ್ಕಿಂತ ದೊಡ್ಡ ವ್ಯಕ್ತಿಯಾಗಿದ್ದಾರೆ,
ತಾನು ದೊಡ್ಡವನೆಂದು ತಿಳಿದುಕೊಂಡಷ್ಟು ಮನುಷ್ಯನ ಸಣ್ಣತನ ಹೆಚ್ಚುತ್ತ ಹೋಗುತ್ತಿದೆ ಅಹಂಕಾರವನ್ನು ನಾಶಮಾಡಲು ಬೇರೆ ಯಾರೂ ಬೇಕಿಲ್ಲ ಅಹಂಕಾರ ಇದ್ದವ ತಾನೇ ನಾಶವಾಗುತ್ತಾನೆ, ಯಾವ ನಲ್ಲಿ ಅಹಂಕಾರ ಇರುವುದಿಲ್ಲವೋ ಅವರು ಸರ್ವಜನಪ್ರಿಯ ನಾಗುತ್ತಾನೆ….. ಹಾಗೂ ಆತನ ಅಂತಃಸತ್ವ ವಿವರಿಸುತ್ತಾ ಹೋಗುತ್ತದೆ ಅದಕ್ಕಾಗಿ ವಿವೇಕಾನಂದ ಒಂದು ಕಡೆ ಹೇಳುತ್ತಾರೆ ನಿಮ್ಮಲ್ಲಿ ಅಹಂಕಾರವಿಲ್ಲದೆ ನೀವು ಯಾವ ಧರ್ಮಗ್ರಂಥವನ್ನು ಓದದೆ ಯಾವ ಮಂದಿರವನ್ನು ಪ್ರವೇಶಿಸಿದ ಮೋಕ್ಷ ಪದವನ್ನು ಪಡೆಯಬಹುದು
ಇನ್ನೊಂದು ಕಡೆ ಕನಕದಾಸರು ಹೇಳುತ್ತಾರೆ ನಾನು ಹೋದರೆ ಹೋದೇನು ಎಂಬ ಮಾತು ಇದನ್ನು ಸೂಚಿಸುತ್ತದೆ👌

ಅಹಂಕಾರಿ ಯಾದವನ ಬಗ್ಗೆ ನಮ್ಮ ಅಲ್ಲಮಪ್ರಭುಗಳು ಎಷ್ಟು ಸೊಗಸಾಗಿ ಹೇಳಿದ್ದಾರೆಂದರೆ
ನಾನೆಂಬ ಅಹಂಕಾರ ತೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು, ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು, ಜ್ಞಾನಜ್ಯೋತಿ ಕಡಲೊಡಲ ನಾ ಬಲ್ಲೆ ಬಲ್ಲಿದರೆಂಬ ಹಿರಿಯರೆಲ್ಲರೂ ತಾಮಸ ಗೊಳಗಾಗಿ ಸೀಮೆವಕೆಟ್ಟರು ಕಾಣಾ ಗುಹೇಶ್ವರ

ಬದುಕು ಮುಕ್ತಾಯಗೊಂಡ ಹಾಗೆ ಅಹಂಕಾರ ನಮ್ಮ ಬಳಿ ಸುಳಿಯದಿರಲು ಮನಸ್ಸಿಗೆ ಪಾಠ ಹೇಳುತ್ತೇಲೇ ಇರಬೇಕು ನಮ್ಮ್ ಮನಸ್ಸಿನ ಜೊತೆ ನಾವೇ ಮಾತಾಡಬೇಕು !
ಎಲ್ಲಿಂದ ಆಯಿತು ಎಲ್ಲಿಂದ ಹೋಯಿತು ಎನ್ನದಿರು ಮನವೇ ನಾನು ಮಾಡಿದೆನೆನ್ನದಿರು ಎಂದು ಬಸವಣ್ಣನವರ ವಚನ ಸಾಹಿತ್ಯ ಏನೆಲ್ಲ ಸೂಚಿಸುತ್ತದೆ

ಮೇನಕಾ ಪಾಟೀಲ್, ಬೀದರ್

ಲಿಂಗಾಯತ ಧರ್ಮದ ಪ್ರತಿ ಕ್ಷಣದ ಮಾಹಿತಿ ಹಾಗೂ ವರದಿಗಳಿಗಾಗಿ ಲೈಕ್ ಮಾಡಿ ಶೇರ್ ಮಾಡಿ…👇👇

https://www.facebook.com/groups/910346642710139/permalink/910489009362569/?sfnsn=wiwspwa&extid=56R1R7tF0xcJWKwY

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!