Breaking News
Home / featured / ಯೋಧನ ಮೃತದೇಹ ತರಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಶಾಸಕ

ಯೋಧನ ಮೃತದೇಹ ತರಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಶಾಸಕ

ಚಿಕ್ಕೋಡಿ: ಜಮ್ಮು ಕಾಶ್ಮೀರದಲ್ಲಿ ಮೃತನಾದ ಯೋಧನ ಮೃತ ದೇಹವನ್ನು ಅವರ ಹುಟ್ಟೂರಿಗೆ ತರಿಸಿದ ಶಾಸಕ ಗಣೇಶ ಹುಕ್ಕೇರಿ, ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಸುತ್ತಿದ್ದ ಚಂದೂರಟೇಕ ಗ್ರಾಮದ ನಿವಾಸಿ  ಶಿವಾನಂದ ಮಲ್ಲಿಕಾರ್ಜುನ ಮಗದುಮ್ಮ ಜಮ್ಮು ಕಾಶ್ಮೀರ ರಾಜ್ಯದ ರಾಯಪುರ ಸತ್ವಾರಿಯಲ್ಲಿ ಸೇವಾ  ಸಂದರ್ಭದಲ್ಲಿ ನಿಧನರಾಗಿದ್ದಾರೆ.

ಇವರ ಮೃತ ದೇಹವು ಮಹಾರಾಷ್ಟ್ರದ ಪುಣಾದವರೆಗೆ ಬಂದಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅಲ್ಲಿಂದ ಮೃತ ದೇಹವನ್ನು ಯೋಧನ ಹುಟ್ಟೂರಿಗೆ ತರುವುದು ಕಷ್ಟವಾಗಿತ್ತು.ಮಧ್ಯಪ್ರವೇಶಿಸಿದ ಶಾಸಕ ಗಣೇಶ ಹುಕ್ಕೇರಿ, ಅಲ್ಲಿನ ಹಾಗೂ ಕರ್ನಾಟಕದ ಅಧಿಕಾರಿಗಳನ್ನು ಪಂಪರ್ಕ ಮಾಡಿ, ಮೃತ ದೇಹವನ್ನು ಚಂದೂರ ಗ್ರಾಮಕ್ಕೆ ತರಿಸಿದರು.

ಜೊತೆಗೆ,  ಸ್ವತಃ  ಬಂದು ಕುಟುಂಬದವರಿಗೆ ಸಾಂತ್ವನ ಹೇಳಿ  ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!