Breaking News
Home / featured / ಲಿಂಗಾಯತರೇ ಗಮನಿಸಿ….

ಲಿಂಗಾಯತರೇ ಗಮನಿಸಿ….

~ ಡಾ. ಜೆ ಎಸ್ ಪಾಟೀಲ.

 • ಹನ್ನೆರಡನೇ ಶತಮಾನದಲ್ಲಿ ಘಟಿಸಿದ ಶರಣರ ವೈಚಾರಿಕ ಚಳುವಳಿಯನ್ನು ಹತ್ತಿಕ್ಕಿದವರು ಮುಸಲ್ಮಾನರಲ್ಲ.
 • ನಮ್ಮ ಧರ್ಮಗುರು ಬಸವಣ್ಣನವರನ್ನು ಕಲ್ಯಾಣದಿಂದ ಗಡಿಪಾರು ಮಾಡಲು ಷಡ್ಯಂತ್ರ ರೂಪಿಸಿದವರು ಮುಸಲ್ಮಾನರಲ್ಲ.
 • ಶರಣರ ವಚನಗಳನ್ನು ಸುಟ್ಟು ನಾಶಪಡಿಸಲೆತ್ನಿಸಿದವರು ಮುಸಲ್ಮಾನರಲ್ಲ.
 • ಲಿಂಗಾಯತಕ್ಕೆ ಸ್ವಾತಂತ್ರ ಧರ್ಮ ಮಾನ್ಯತೆ ಸಿಗದಂತೆ ನೋಡಿಕೊಳ್ಳುತ್ತಿರುವವರು ಮುಸಲ್ಮಾನರಲ್ಲ.
 • ಕನ್ನಡದ ಖ್ಯಾತನಟ ಡಾ. ರಾಜಕುಮಾರ ಅವರು ಕೇವಲ ರಾಮˌ ಕ್ರಷ್ಣ ˌ ರಾಘವೇಂದ್ರರ ಪಾತ್ರ ಮಾಡುತ್ತಾ ಬಸವೇಶ್ವರರ ಪಾತ್ರ ಮಾಡದಂತೆ ಹುನ್ನಾರಗೈದವರು ಮುಸಲ್ಮಾನರಲ್ಲ.
 • ಖ್ಯಾತ ಸಂಶೋಧಕ ಡಾ. ಎಂ. ಎಂ. ಕಲಬುರಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆಗೈದವರು ಮುಸಲ್ಮಾನರಲ್ಲ.
 • ಖ್ಯಾತ ಸಂಶೋಧಕ ಚಿದಾನಂದ ಮೂರ್ತಿಯನ್ನು ಹಾದಿ ತಪ್ಪಿಸಿ ಆತನ ಪ್ರತಿಭೆಯನ್ನು ಬಲಪಂಥೀಯಗೊಳಿಸಿದವರು ಮುಸಲ್ಮಾನರಲ್ಲ.
 • ಪಕ್ಷವನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪನನ್ನು ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗಟ್ಟಿದವರು ಮುಸಲ್ಮಾನರಲ್ಲ.
 •  ಯಡಿಯೂರಪ್ಪನ ಆಡಳಿತವನ್ನು ಪ್ರಕ್ಷುಬ್ಧಗೊಳಿಸಲು ಕರಾವಳಿಯಲ್ಲಿ ಅನೈತಿಕ ಪೋಲೀಸಗಿರಿಯ ಮೂಲಕ ಪಬ್ˌ ಮತ್ತು ಚರ್ಚುಗಳ ಮೇಲೆ ದಾಳಿ ಮಾಡಿದವರು ಮುಸಲ್ಮಾನರಲ್ಲ.
 •  ಯಡಿಯೂರಪ್ಪನ ಜೈಲುˌ ಬದನುವಾಳು ಘಟನೆಯನ್ನು ಅತಿರಂಜಿಸಿ ರಾಷ್ಟ್ರೀಯ ಮಾದ್ಯಮಗಳಲ್ಲಿ ಚಿತ್ರಿಸಿ ಲಿಂಗಾಯತರನ್ನು ಖಳರಂತೆ ಬಿಂಬಿಸಲೆತ್ನಿಸಿದವರು ಮುಸಲ್ಮಾನರಲ್ಲ.
 • ಯಡಿಯೂಪ್ಪನ ವಿರುದ್ಧ ಈಶ್ವರಪ್ಪ ಮುಂತಾದವರನ್ನು ಎತ್ತಿಕಟ್ಟಿದವರು ಮುಸಲ್ಮಾನರಲ್ಲ.
 • ಖ್ಯಾತ ಸಾಹಿತಿˌ ಪತ್ರಕರ್ತ ದಿ. ಪಿ. ಲಂಕೇಶರ ವಿರುದ್ಧ ಸದಾ ಪಿತೂರಿ ಮಾಡಿದವರು ಮುಸಲ್ಮಾನರಲ್ಲ.
 • ಖ್ಯಾತ ಹಿಂದೂಸ್ಥಾನಿ ಗಾಯಕ ಭೀಮಶೇನ್ ಜೋಷಿ ಮತ್ತು ಗಂಗೂಬಾಯಿ ಹಾನಗಲ್ ವಚನ ಗಾಯನ ಮಾಡದಂತೆ ನೋಡಿಕೊಂಡಿದ್ದು ಮುಸಲ್ಮಾನರಲ್ಲ.
 •  ಈ ಎರಡನೇ ಅವಧಿಯಲ್ಲಿ ಯಡಿಯೂರಪ್ಪ ಆಡಳಿತ ಅಸ್ತಿರಗೊಳಿಸಲು ಲಿಂಗಾಯತ ಶಾಸಕರಿಗೆ ಕುಮ್ಮಕ್ಕು ನೀಡುತ್ತಿರುವವರು ಮುಸಲ್ಮಾನರಲ್ಲ.
 • ಹಿಂದೆ ಕಿತ್ತೂರು ಸಂಸ್ಥಾನವನ್ನು ಅಸ್ಥಿರಗೊಳಿಸಲು ಬ್ರಿಟೀಷರೊಂದಿಗೆ ಕೈಜೋಡಿಸಿದವರು ಮುಸಲ್ಮಾನರಲ್ಲ.
 • ಮೈಸೂರು ಸಂಸ್ಥಾನ ಸರಕಾರದಲ್ಲಿ ಸ್ವತಂತ್ರ ಧರ್ಮವಾಗಿದ್ದ ಲಿಂಗಾಯತವನ್ನು ತೆಗೆದು ಹಾಕಿ ಹಿಂದೂ ಧರ್ಮದಲ್ಲಿ ಸೇರಿಸಿದ ದಿವಾನರು ಮುಸಲ್ಮಾನರಲ್ಲ.

ಇಷ್ಟೆಲ್ಲ ಇರುವಾಗˌ ಇದಕ್ಕೆಲ್ಲ ಕಾರಣರಾದವರು ಹೆಣೆವ ಹುನ್ನಾರಗಳಿಗೆ ಬಲಿಯಾಗುತ್ತˌ ಅವರ ಹೆಗಲಿಗೆ ಹೆಗಲುಕೊಟ್ಟುˌ ಅವರ ಹಿತಾಸಕ್ತಿ ಕಾಯಲು ಹುಟ್ಟುಹಾಕಿರುವ ಸಂಘಟನೆಗಳುˌ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿರುವˌ ಅನಾವಶ್ಯಕವಾಗಿ ಮುಸಲ್ಮಾರನ್ನು ದ್ವೇಷಿಸುವ ನಿಮಗೆ ಸ್ವಾಭಿಮಾನವಿಲ್ಲವೆ !? ಚನ್ನಾಗಿ ಯೋಚಿಸಿ ನೋಡಿˌ ನಮ್ಮ ನಿಜವಾದ ವೈರಿಗಳು ಯಾರು ಎಂದು. ಅವರ ಹುನ್ನಾರಗಳನ್ನು ತಿಳಿದುಕೊಳ್ಳಿˌ ಆದಷ್ಟು ಅವುಗಳನ್ನು ದೂರವಿಟ್ಟು ಜ್ಯಾತ್ಯಾತೀತ ಮನೋಭಾವ ಮತ್ತು ಬಸವಣ್ಣನವರ ಆಶಯದಂತೆ ವಿಶ್ವಮಾನಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ . ಕರ್ನಾಟಕ ಮತ್ತು ಬಸವ ಧರ್ಮದ ಕೀರ್ತಿ ಭಾರತದ ದೇಗುದ ಮೇಲೆ ಹಾರಿಸಿರಿ.

~ ಡಾ. ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

Leave a Reply

Your email address will not be published. Required fields are marked *

error: Content is protected !!