Breaking News
Home / featured / ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಕರೋನ ಜಾಗೃತಿ ಸೈಕಲ್ ಜಾಥಾ

ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಕರೋನ ಜಾಗೃತಿ ಸೈಕಲ್ ಜಾಥಾ

ವಿಜಯಪುರ : ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ವಿಜಯಪುರ ಸೈಕ್ಲಿಂಗ್ ಗ್ರುಪ್‍ದಿಂದ ಕೊರೊನಾ ವಿರುದ್ಧ ಜಾಗೃತಿ ಸೈಕಲ್ ಜಾಥಾ ಹಾಗೂ ಸೈಕಲ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಳಗಿನ ಜಾವ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಸ್ವತಃ ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ತುಳಿದರು. ನಂತರ ಮಾತನಾಡಿದ ಅವರು ಸೈಕಲ್ ದೇಹದ ಆರೋಗ್ಯಕ್ಕೆ ಅತ್ಯತ್ತಮ ಸಾಧನ. ಕೊರೊನಾ ಕಾಯಿಲೆ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಲು ಇದು ಉತ್ತಮ ವಿಧಾನವಾಗಿದೆ. ಮುಂದಿನ ತಿಂಗಳಿನಿಂದ ನಾನು ಪ್ರತಿ ವಾರ ಕನಿಷ್ಠ 3-4ದಿನ ಸೈಕ್ಲಿಂಗ್ ಗ್ರುಪ್ ಸದಸ್ಯರೊಂದಿಗೆ ಸೈಕಲ್ ಚಾಲನೆಗೆ ಬರುವುದಾಗಿ ತಿಳಿಸಿದರು.

ನಗರದ ಹವ್ಯಾಸಿ ಸೈಕ್ಲಿಸ್ಟಗಳು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಗರದ ಸಿದ್ದೇಶ್ವರ ದೇವಸ್ಥಾನ, ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಆಝಾದ್ ರಸ್ತೆ, ರಾಮಮಂದಿರ ರಸ್ತೆ, ಅಮೀರ್ ಟಾಕೀಸ್ ಮಾರ್ಗವಾಗಿ ಅಕ್ಕಮಹಾದೇವಿ ರಸ್ತೆಯವರೆಗೆ “ಸೈಕಲ್ ತುಳಿಯಿರಿ, ಕೊರೊನಾ ಓಡಿಸಿ”, “ಸೈಕಲ್ ಬಳಸಿ, ಪರಿಸರ ಉಳಿಸಿ”, “ಭಾರತ ಮಾತಾ ಕೀ ಜೈ” ಎಂಬ ಘೋಷಣೆಗಳನ್ನು ಕೂಗುತ್ತಾ, ಸೈಕಲ್ ಜಾಥಾ ನಡೆಸಿದರು.

ನಂತರ ನಡೆದ ವಿಶ್ವ ಸೈಕಲ್ ದಿನಾಚರಣೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೈಕಲ್ ಬಳಸುವದರಿಂದ ಹಲವಾರು ಲಾಭಗಳಿದ್ದು, ನಾನು ಕೂಡ ಕಳೆದ ಅನೇಕ ದಿನಗಳಿಂದ ಸೈಕಲ್ ತುಳಿಯುತ್ತಿದ್ದು, ಮಾನಸಿಕವಾಗಿ, ದೈಹಿಕವಾಗಿ ಚೇತೋಹಾರಿಯಾಗಿದೆ ಎಂದರು.

ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹರ್ಷಗೌಡ ಎಸ್.ಪಾಟೀಲ, ಸಿದ್ಧಸಿರಿ ನಿರ್ದೇಶಕ, ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ, ಡಾ.ಮಹಾಂತೇಶ ಬಿರಾದಾರ, ಪ್ರೇಮಾನಂದ ಬಿರಾದಾರ, ಶಾಂತೇಶ ಕಳಸಗೊಂಡ, ಸೋಮು ಮಠ, ಗುರುಶಾಂತ ಕಾಪಸೆ, ಡಿ.ಕೆ.ತಾವಸೆ, ಮಹಾಂತೇಶ ಬಿಜ್ಜರಗಿ ಸೇರಿದಂತೆ ಹಲವಾರು ಸೈಕಲ್ ಆಸಕ್ತರು ಭಾಗವಹಿಸಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!