Breaking News
Home / featured / ಸಾಹಸಿ ಉದ್ಯಮಿ: ಭೂಮರಡ್ಡಿ‌ ಬಸವಪ್ಪನವರು

ಸಾಹಸಿ ಉದ್ಯಮಿ: ಭೂಮರಡ್ಡಿ‌ ಬಸವಪ್ಪನವರು

ಚನ್ನಮ್ಮನ ಕಿತ್ತೂರು: ಕಾಯಕವೇ ಕೈಲಾಸ ಎಂದು ನಂಬಿ ಅದೇರೀತಿ ನಡೆದುಕೊಂಡು ದೇಶದ ಜನರಿಂದ “OIL KING” ಎಂದು ಕರೆಸಿಕೊಂಡವರು ಬಸವಪ್ಪ ಭೂಮರೆಡ್ಡಿಯವರು. ಶೂನ್ಯದಿಂದ ಸಾಹುಕಾರಿಕೆಯ ಉತ್ತಂಗಕ್ಕೆ ಎರಿದವರು..

ಜನ್ಮ ಕೂಪ್ಪಳ ಜಿಲ್ಲೆಯ ಯಲ್ಬುರ್ಗದ ಬನ್ನಿಕೂಪ್ಪ ಗ್ರಾಮದಲ್ಲಿ 1885,ರಲ್ಲಿ,.ಬನ್ನಿ ಕೊಪ್ಪ ದಲ್ಲಿ ಬಸಲಾಪುರದ ವೀರನಗೌಡ್ರು ನಡೆಸುತ್ತಿದ್ದ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ.ಗಣಿತ ಬಸವಪ್ಪನವರ ಮೇಚ್ಚಿನ ವಿಷಯ. ಮನೆಯ ಬಡತನ ಕಾಣದಿಂದ ಕೇವಲ ಆರನೇಯ ತರಗತಿವರೆಗೆ ಮಾತ್ರ ಶಿಕ್ಷಣ ಸಾಧ್ಯವಾಯಿತು.

ನಂತರ ಕೂಪ್ಪಳದಲ್ಲಿ ಅಡುಗೆ ಎಣ್ಣೆ ಮಾರುವ ಅಂಗಡಿಗಳಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು.ನಂತರ ಬನ್ನಿಕೂಪ್ಪದಲ್ಲಿಸ್ವಂತ ಚಿಕ್ಕ ಕಿರಾಣಿ ಅಂಗಡಿ ತೆರೆದರು.ಹತ್ತಿ ಬೆಳೆಯ ಸುಗ್ಗಿಯಲ್ಲಿಬಮನೆ ಮನೆ ತೆರಳಿ ಹತ್ತಿ ಖರಿದಿಸಿದರು..ನಂತರ ಊರುರು ಅಲೆದು ಬಳ್ಳೊಳ್ಳಿ ,ಜೀರಿಗೆ ಮಾರಾಟ ಮಾಡಿದರು..ಅಲ್ಲಿಂದ ಗದಗಿನ ದಲಾಲಿ ಅಂಗಡಿಯಲ್ಲಿ ಖಜಾಂಚಿ ಎಂದುಕೆಲಸ ಪ್ರಾರಂಬಿಸಿದರು.ಕೆಲಸ ದಲ್ಲಿ ನಿಷ್ಠೆ ತೂರಿದ್ದಕ್ಕೆ ವ್ಯಾಪಾರ ದಲ್ಲಿ ಎರಡು ಆಣೆ ಪಾಲುಕೂಟ್ಟರು.

ಹುಮ್ಮಸಿನಿಂದ ದುಡಿದು ವ್ಯಾಪಾರ ದ ಆಳ ಅಗಲ ಅರಿತರು.. ಹಿಗೆ ಕೆಲಸ ಮಾಡುತ್ತಾ ಮತ್ತೂಂದಿಷ್ಟು ಜನರೂಂದಿಗೆ ವ್ಯಾಪಾರ ದ ಪಾಲುದಾರರಾದರು..ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಬಸ ಸಂಚಾರ ಸೇವೆ ಒದಗಿಸಿದ್ದೆ ಭೂಮರಡ್ಡಿ ಬಸವಪ್ಪನವರು.ಇದಕ್ಕೆ ಒಬ್ಬರಿಗೆ ಬಂಡವಾಳ ಹಾಕಲು ಸಾದ್ಯವಾಗದೆ ಇದ್ದಾಗ ಮೂವರು ಜನರನ್ನು ಸಾರಿಗೆ ವ್ಯಾಪಾರ ದ ಪಾಲುದಾರನ್ನಾಗಿಸಿಕೂಂಡು ಬಸ ಸಂಚಾರ ಆರಂಬಿಸಿದರು.ಬಸ ಸಂಚಾರದ ಮಾರ್ಗ ಬಾಗಲಕೋಟೆ ಮತ್ತು ಇಳಕಲ್ ಮದ್ಯ 1917 ರಲ್ಲಿ ಪರವಾಣಿಗೆ ಪಡೆದರು.ಆದರೆ ಬಸನ ವೀಪರಿತ ಸಪ್ಪಳಕ್ಕೆ ಜನ ಹೆದರಿ ಓಡಲು ಪ್ರಾರಂಭಿಸಿದರು. ಕಾರಣ ಆಗ ಬಸ ಗಾಲಿ ಗಾಳಿಯಿಂದ ತುಂಬಿರದೇ solid ಇದ್ದವು. ಜನರಿಂದ ಸ್ಪಂದನೆ ದೂರೆಯದ ಕಾರಣ ಉದ್ಯಮದಲ್ಲಿ ನಷ್ಟ ಕಂಡರು..ಸರಕಾರ ಬಸ್ಸಿನ ಲಾಯಸ್ಸನ್ಸ ರದ್ದು ಮಾಡಿದರಿಂದ 1919ರಲ್ಲಿ ಸಂಚಾರ ನಿಲ್ಲಿಸಿದರು..ಆಗ ಇವರಲ್ಲಿ ಎರಡು ಬಸ್ಸುಗಳಿದ್ದವು.

ನಂತರ ಬಸವಪ್ಪ ನವರು ಹೈದರಾಬಾದ್ ನಿಜಾಮನ ರಾಜ್ಯ ದಲ್ಲಿ ಹಣ ಭರಣ ಮಾಡಿ 5ವರ್ಷ ಬಸ ಸಂಚಾರಕ್ಕೆ monopoly ಒಪ್ಪಂದಬಮಾಡಿಕೂಂಡರು ನಿಜಾಮನೂಂದಿಗೆ..1920ರಲ್ಲಿ ಬಿ.ವಿ.ಭೂಮರೆಡ್ಡಿ ಗ್ಯಾರೆಂಟೆಡ ಮೋಟರ ಸರ್ವಿಸ್ ಹೆಸರಿನಲ್ಲಿ ಸ್ವಂತ ಕಂಪನಿ ಆರಂಬಿಸಿದರು.. ಸಿಬ್ಬಂದಿ ಗಳನ್ನು ಮನೆಯ ಮಕ್ಕಳಂತೆ ನೋಡಿಕೂಂಡರು.. ಆಗಲೇ ಅವರಿಗೆ ದಿನಕ್ಕೆ 50/60ರೂಪಾಯಿ ಸಂಬಳವನ್ನು ನೀಡುತ್ತಿದ್ದರು.ಸಾರಿಗೇ ಉದ್ಯಮ ಚನ್ನಾಗಿ ನಡೆಯುವಾಗ ಸಹಿಸದ ಕೇಲವರು ನಿಜಾಮನಿಗೆ ತಕಾರಾರು ಕೂಟ್ಟರು.ನಿಜಾಮ ಸಾರಿಗೆ ಅನುಮತಿ ರದ್ದುಪಡಿಸಿದ..ಬಸವಪ್ಪ ನವರು ಮತ್ತೆ ನಜರಾಣಾ ಕೂಟ್ಟು 15 ವರ್ಷದ monopoly ಗೆ ಬರೆಯಿಸಿಕೂಂಡರು.ಬಸುಗಳ ಸಂಖ್ಯೆ 2ರಿಂದ40ಕ್ಕೆ ಏರಿತು.

1936ರಲ್ಲಿ ನಿಜಾಮ ಮತ್ತು ಬಸವಪ್ಪ ನವರ ಒಪ್ಪಂದ ಮುಗಿಯಿತು..ನಿಜಾಮನೂಂದಿಗೆ ಒಪ್ಪಂದ ಮುಗಿದಾಗ ಬಂದ ಹಣವನ್ನು ಅಡುಗೆ ಎಣ್ಣೆ ತಯಾರಿಕೆಯಲ್ಲಿ ತೂಡಗಿಸಿದರು1928 ಕಲ್ಬುರ್ಗಿ ಯಲ್ಲಿ oil mill ಸ್ಥಾಪಿಸಿದರು,1930ರಲ್ಲಿ ಬಳ್ಳಾರಿ ಯಲ್ಲಿ oil mill ಸ್ಥಾಪನೆ,1931ರಲ್ಲಿ ಯಾದಗಿರಿಯಲ್ಲಿ oil mill,1935ರಲ್ಲಿ ಜಯರಾಬಾದ ಮತ್ತು ನಾಂದೇಡದಲ್ಲಿoil millಸ್ಥಾಪಿಸಿದರು..ಎಲ್ಲ oil millಗಳಿಂದ ಉತ್ಪಾದನೆ ಯಾಗುವ ಎಣ್ಣೆಯನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು..ನಿತ್ಯ ಬ್ರಾಡ್ಗೇಜ್ ಮೂಲಕ ರೈಲ್ವೆ ಟ್ಯಾಂಕನಲ್ಲಿ ಸಾಗಿಸುತ್ತದ್ದರು.1936ರಲ್ಲಿ ಪುಣಾ ದಲ್ಲಿ ಕಿರುಕಳ ಎಣ್ಣೆ ಅಂಗಡಿ ತೆಗೆದರು..1938 ಗಜೇಂದ್ರಗಡದಲ್ಲಿ oil mill ಪ್ರಾರಂಭಿಸಿದರು.1940ರಲ್ಲಿ ಸೌರಾಷ್ಟ್ರ ಅಮಮರೇಲಿಯಲ್ಲಿ 1943-44 ರಲ್ಲಿoil mill ಪ್ರಾರಂಬಿಸಿದರು.1939ರಲ್ಲಿ ಮುಂಬೈಯಲ್ಲಿ ಬಿ.ವಿ.ಭೂಮರಡ್ಡಿ &ಕಂಪನಿ ಹೆಸರಿನ ದಲಾಲಿ ಅಂಗಡಿ ತೆರೆದರು.ಮುಂಬೈನ ವಜೀರ oil mill ಖರಿದಿಸಿ karnataka oil mill ಅಂತ ಹೆಸರು ಬದಲಾಯಿಸಿದರು..

1943ರಲ್ಲಿ ಮುಂಬೈ ಪಾಕಲಾಂಡ ನಲ್ಕಿ oil mill ಪ್ರಾರಂಬಿಸಿದರು1945ರಲ್ಲಿ ಕೃಷ್ಣ oil mill ಪ್ರಾರಂಬಿಸಿದರು.ಹೀಗೆ ಕರ್ನಾಟಕ, ಆಂದ್ರಪ್ರದೇಶದ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಗಳಲ್ಲಿ ಎಣ್ಣೆ ಕಾರ್ಖಾನೆ ಪ್ರಾರಂಬಿಸಿ ದೇಶವ್ಯಾಪಿ ಕೀರ್ತಿ ಗಳಿಸಿ oil king ಎಂದೆ ಪರಿಚಿತರಾದರು..ಹತ್ತಾರು ಕಾರಖಾನೆ ಗೆ ಬೇಕಾಗುವ ಯಂತ್ರ ಖರೀದಿಸುವ ಬದಲು ಗದುಗಿನ ಇಮಾಮಸಾಬ ಡಂಬಳ ಅವರ ಜೂತೆ ಚರ್ಚಿಸಿ ಮುಂಬೈನ ಡಂಕನ ರೋಡಿನಲ್ಲಿ ಪ್ರೀಮಿಯರ್ ಇಂಜಿನೀಯರಿಂಗ್ ಕಂಪನಿ ಎಂದು ಹೆಸರು ಇಟ್ಟರು.ಭೂಮರಡ್ಡಿ ಬಸವಪ್ಪನವರು ಜರ್ಮನಿಯ ತಂತ್ರಜ್ಞಾನ ಅರಿಯಲುಬಜರ್ಮನ ಪ್ರವಾಸವನ್ನು 1936 ಕೈಗೂಂಡರು,ಕನ್ನಡ, ಹಿಂದಿ. ಮರಾಠಿ, ಗುಜರಾತಿ ಬಾಷೇ ಬಲ್ಲ ಬಸವಪ್ಪನವರಿಗೆ ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷ್ ಬರುತಿತ್ತು..

ಬಸವಪ್ಪ ನವರು ಮುಂಬೈನಲ್ಲಿ ಬಾಬು ರಾವ್ ಎಂಬುವರ ಖಾನಾವಳಿಯಲ್ಲಿ ಊಟಮಾಡುವಾಗ ಕೆಮ್ಮು ಬಂದಿತು.ಆಗ ಬಾಬುರಾವ್ ಇನ್ನೂಮ್ನೆ ನಮ್ಮ ಕ್ಯಾಂಟಿನಗೆ ಊಟಕ್ಕೆ ಬರಬೇಡಿ ಎಂದ ಗರ್ವಿಷ್ಠ. ಹಠಕ್ಕೆ ಬಿದ್ದು ಬಸವಪ್ಪ ನವರು ಗೌರಿ ಶಂಕರ ಎಂಬ ಖಾನಾವಳಿ 1930ರಲ್ಲಿ ಪ್ರಾರಮಂಬಿಸಿ ಕನ್ನಡಿಗರಿಗೆ ಮುಂಬೈ ನಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು.. 1930ರಲ್ಲಿಬಸವಪ್ಪನವರು ಕರ್ನಾಟಕ ಕೇಮಿಕಲ್ ವರ್ಕ ಎನ್ನುವ ಔಷಧೀಯ ಕಂಪನಿ ಆರಂಭಿಸಿದರು..ನಂತರ ಅದನ್ನು ಡಾ!!ತುಮ್ಮನಕಟ್ಟಿ ಅವರಿಗೆ ಬಿಟ್ಟು ಕೂಟ್ಟರು.ನಂತರ 1942-43ರಲ್ಲಿ ಮುಂಬೈ ಯಲ್ಲಿ ನ್ಯೂ ಕರ್ನಾಟಕ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಪ್ರಸ್ ಹೆಸರಿನ ಮದ್ರಣಾಲಯ ಪ್ರಾರಂಬಿಸಿದರು..1952ರಲ್ಲಿ ಗದಗಿನಲ್ಲಿ ಕಾಟನ್ ಪ್ರೇಸಿಂಗ್ ಮತ್ತು ಜಿನ್ನಿಂಗ್ ಮಿಲ್ ಪ್ರಾರಂಭಿಸಿದರು.1956ರಲ್ಲಿ ಗದಗಿನಲ್ಲಿ ರವಾ ಮಿಲ್ ಪ್ರಾರಂಬಿಸಿದರು1959ರಲ್ಲಿ ಪೂಣಾ ಮತ್ತು ಮುಂಬಯಿ ಮದ್ಯ ಠಾಣಾದಲ್ಲಿ ಬಿ.ವಿ.ಭೂಮರಡ್ಡಿ ಕ್ವಾರಿ ಆರಂಬಿಸಿದರು. ಇಷ್ಟೆಲ್ಲಾ ದೈತ್ಯ ಉದ್ಯಮ ಕಟ್ಟಿದ ಇವರಿಗೆ ಪ್ರಾಮಾಣಿಕ ನೌಕರರ ಸಮಸ್ಯೆ ಕಾಡಿತು..ಸರಕಾರ ಆದಾಯ ತೆರಿಗೆ ನೆಪದಲ್ಲಿ 20ಲಕ್ಷ ಮುಂಗಡ ತೆರಿಗೆ ಕಟ್ಟಲು ಹೇಳಿದರು..ಹಾಗಾಗಿ ಲೋಕದ ಸಹವಾಸವೇ ಸಾಕು ಎಂದು ಅಲ್ಲಲ್ಲಿ ದುಡಿಯುತ್ತಿರುವ ತಮ್ಮ ಸಂಬಂದಿಕರಿಗೆ ಬರೆದು ಕೂಟ್ಟರು ಇನ್ನುಳಿದ್ದದನ್ನು ಮಾರಿ ಧಾನ ಮಾಡಿದರು‌.

ಅವರು ಮಾಡಿದ ದಾನ ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಶಾಶ್ವತವಾಗಿರಿಸಿತು.ಇವರು ಆಗಿನ ಕಾಲದಲ್ಲಿ 20ಲಕ್ಷಕ್ಕೂ ಅದಿಕ ನಗದು ಧಾನ ಮಾಡಿದ ಮಹಾಧಾನಿ..ಇದರ ಪ್ರತಿರೂಪವಾಗಿ ಕೆ.ಎಲ್.ಇ ಸಂಸ್ಥೆಯ ಹುಬ್ಬಳ್ಳಿಯB.V.B engineering ಮಹಾವಿದ್ಯಾಲಯ (ಇದು ಆರಂಭದಲ್ಲಿ ಗದಗದಿಂದ ಪ್ರಾರಂಬವಾಗಿ ನಂತರ ಹುಬ್ಬಳ್ಳಿಗೆ ಸ್ಥಳಾಂತರವಾಗುವುದು..ಸ್ಥಾಪನೆಗೆ 1ಲಕ್ಷ ರೂಪಾಯಿ ಮತ್ತು ಅದಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಒದಗಿಸಿಕೂಟ್ಟರು..ಇದು ದೇಶದ ಅತ್ಯುನ್ನತ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಒಂದಾಗಿದೆ..ಅದಕ್ಕೆ ಅವರದೇ ಹೆಸರುಟ್ಟು k l e ಯವರು ಗೌರವಿಸಿದ್ದರೆ..ಮುಂಬಯಿ ಕರ್ನಾಟಕ ಸಂಘ ಕಟ್ಟಲು ಆರ್.ಡಿ.ಕಾಮತರಿಗೆ 1940ರಲ್ಲಿ 25ಸಾವಿರ ನಗದು ನೀಡುವರು..ಹೀಗೆ ಅವರು ನೀಡಿದ ದೇಣಿಗೆಯ ಪಟ್ಟಿ ಆಕಾಶದೆತ್ತರಕ್ಕೆ ಬೆಳೆಯುವುದು..ಇವರಿಗೆ ಮಕ್ಕಳು ಆಗದೇ ಇದ್ದಾಗ ಇನ್ನೂಂದು ಮದುವೆಯಾಗಲು ತಿಳಿಹೇಳಿದ ಹಿರಿಯರಿಗೆ ಶಾಲೆಯ ಮುಂದೆ ಆಡುವ ಮಕ್ಕಳನ್ನೆಲ್ಕಾ ತೋರಿಸಿ ಅವೆಲ್ಲ ನನ್ನ ಮಕ್ಕಳೆ ಎಂದು ಅಭಿಮಾನದಿಂದ ನುಡಿದ ತತ್ವಜ್ಞಾನಿ ಭೂಮರಡ್ಡಿ ಬಸವಪ್ಪನವರು..

ಲೇಖನ :ಮಹೇಶ ಎನ್ ಚನ್ನಂಗಿ
KES ಚನ್ನಮ್ಮ ಕಿತ್ತೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

Leave a Reply

Your email address will not be published. Required fields are marked *

error: Content is protected !!