Breaking News
Home / featured / ಶೂದ್ರತ್ವವು ಈ ಮಣ್ಣಿನ ಹೆಮ್ಮೆ

ಶೂದ್ರತ್ವವು ಈ ಮಣ್ಣಿನ ಹೆಮ್ಮೆ

~ ಡಾ. ಜೆ ಎಸ್ ಪಾಟೀಲ.

ಶೂದ್ರರನ್ನು ಪುರೋಹಿತಶಾಹಿಗಳು ದ್ವೇಷಿಸುವುದರ ಹಿಂದೆ ಒಂದು ರೋಚಕ ಸಂಗತಿ ಅಡಗಿದೆ. ಶತಶತಮಾನಗಳ ಇತಿಹಾಸˌ ಪುರಾಣˌ ಕಥೆˌ ಕಾವ್ಯ ˌ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದಾಗ ಕಾಣಸಿಗುವುದೇನೆಂದರೆ ಭರತಖಂಡದ ನೆಲದಲ್ಲಿ ಪ್ರತಿಭೆಯ ಸಂಕೇತವೇ ಶೂದ್ರ ವರ್ಗ. ಮನುಸ್ಮ್ರತಿ ಸಂವಿಧಾನ ಬರೆದ ಸನಾತನಿಗಳು ಶಿಕ್ಷೆಯ ಪ್ರಮಾಣ ಶೂದ್ರನಿಗೆ ಉಳಿದ ವರ್ಣದವರಿಗಿಂತ ದ್ವಿಗುಣ ನಿಗದಿಗೊಳಿಸಿದ್ದರು. ಒಟ್ಟಾರೆ ಮನುಸ್ಮ್ರತಿ ಎಂಬ ಕರಾಳ ಪುಸ್ತಕದಲ್ಲಿ ಸಮಾಜದ ಎಲ್ಲ ಒಳಿತುಗಳು ಉಳಿದ ಮೂರು ವರ್ಣಗಳಿಗು ಮತ್ತು ಎಲ್ಲ ಕೆಡಕುಗಳು ಶೂದ್ರ ವರ್ಗಕ್ಕೂ ನಿಗದಿ ಪಡಿಸಿದ್ದರ ಹಿಂದೆ ಶೂದ್ರನ ಪ್ರತಿಭೆ ಮತ್ತು ಶಕ್ತಿ ಸನಾತನಿಗಳಿಗೆ ಹೇಗೆಲ್ಲ ಕಾಡಿರಬಹುದೆಂದು ಊಹಿಸಬಹುದು.

ಸನಾತನಿಗಳು ತಾವು ಗುರುತಿಸಿಕೊಳ್ಳುವ ಗೋತ್ರಗಳ ಮೂಲ ಪುರುಷರು ಏಳೂ ಜನ ಶೂದ್ರರು. ಸನಾತನ ಕಾಲದಲ್ಲಿ ಬೆಟ್ಟ ಗುಡ್ಡ ˌ ಕಾಡುˌ ಮೇಡುಗಳಲ್ಲಿ ಅಲೆದುˌ ತಪಸ್ಸನ್ನು ಆಚರಿಸಿ ಸಿದ್ಧಿ ಪಡೆದವರುˌ ಅಧ್ಯಾತ್ಮವನ್ನು ಸಾಧಿಸಿದವರು ಸಂಪೂರ್ಣ ಶೂದ್ರ ವರ್ಗದವರೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ. ಸನಾತನಿಗಳು ತಾವು ತಲೆಯಿಂದ ಹುಟ್ಟಿದವರುˌ ದೇವರ ಮಕ್ಕಳು ಎಂದೆಲ್ಲ ತಮ್ಮನ್ನು ಬಿಂಬಿಸಿಕೊಂಡಿರಬಹುದು. ಪುರೋಹಿತ ಶಾಹಿಯ ವ್ಯಾಖ್ಯಾನ ಏನೇ ಇರಲಿˌ ಶರಣರ ಪ್ರಕಾರ ಶೂದ್ರರೆಂದರೆ ಕಾಲಲ್ಲಿ ಹುಟ್ಟಿಯೂ ದೇವರ ಅನುಗ್ರಹವಿಲ್ಲದೆ ತಮ್ಮ ಮನುಷ್ಯತ್ವದಿಂದ ದೈವತ್ವಕ್ಕೇರುವ ಸಾಮರ್ಥ್ಯವಿರುವವರು. ಸನಾತನಿಗಳು ಶಾಸ್ತ್ರಗಳ ಸಂಕೋಲೆ ಹಾಕಿದಷ್ಟೂ ಸ್ವಚ್ಛಂದವಾಗಿ ಪ್ರಕ್ರತಿಯೊಡನೆ ಸಂವಾದಿಸುವವರು. ವರ್ಣ ವ್ಯವಸ್ಥೆಯ ಕರಾಳ ಪಾದಗಳಿಂದ ತುಳಿದಷ್ಟು ಪುಟಿದೇಳುವ ಸಾಮರ್ಥ್ಯ ಹೊಂದಿದವರು. ಸನಾತನಿಗಳ ದಮನಕಾರಿ ಕ್ರತ್ಯವನ್ನು ಎದುರಿಸಿ ಈ ಭೂಖಂಡವನ್ನು ರಕ್ಷಿಸಿದ ಮಹಾ ಗುಣವೆ ಶೂದ್ರತ್ತ್ವ.

ಬ್ರಾಹ್ಮಣರ ಸಪ್ತ ಗೋತ್ರಗಳ ಮೂಲ ಪುರುಷರುˌ ಭಾರತದ ಪುರಾತನ ಕಾವ್ಯಬ್ರಹ್ಮರನೇಕರುˌ ಈ ಮಣ್ಣನ್ನು ಪರಕೀಯರಿಂದ ಸಂರಕ್ಷಿಸಿದ ಕ್ಷತ್ರೀಯರುˌ ಸೈನಿಕರುˌ ಈ ನೆಲದಲ್ಲಿ ಸೇವೆಗೆಂದೆ ಜೀವ ಸವೆಸಿದ ಕೆಳವರ್ಗದವರುˌ ಮತ್ತು ಈ ಮಣ್ಣಿನಲ್ಲಿ ಉತ್ತಿ ಬಿತ್ತಿ ಅನ್ನವನ್ನು ಬೆಳೆದು ಈ ಮಣ್ಣಿನ ಜನರನ್ನು ಬದುಕಿಸಿದವರು ಎಲ್ಲರೂ ಶೂದ್ರರೆ. ಯಾರಿಂದಲೂ ನೇರವಾಗಿ ವಿದ್ಯ ಕಲಿಯದೆ ತನ್ನ ಅಗಾಧ ಸ್ಮರಣ ಶಕ್ತಿ ಮತ್ತು ಅದಮ್ಯ ಉತ್ಸಾಹದಿಂದ ಬಿಲ್ಲು ವಿದ್ಯೆ ಕಲಿತ ಏಕಲವ್ಯ ˌ ವೇದˌ ಆಗಮˌ ಶಾಸ್ತ್ರಗಳನ್ನು ಸರಾಗವಾಗಿ ಬಲ್ಲ ಮಹಾನ್ ವಿದ್ವಾಂಸ ಶಂಭೂಕ ಮುನಿˌ ದಾನಶೂರ ಬಲಿ ಚಕ್ರವರ್ತಿ ಮುಂತಾದವರೆಲ್ಲರೂ ಶೂದ್ರರೆ. ಕಾಲ್ಪನಿಕ ರಾಮಾಯಣದಲ್ಲಿ ಲಂಕೆಗೆ ಹೋಗಲು ಅನುಕೂಲ ಕಲ್ಪಿಸಿದ ಕಪಿವರ್ಗವೆಂದು ಬಿಂಬಿಸಲ್ಪಟ್ಟ ಹನುಮˌ ವಾಲಿˌ ಸುಗ್ರೀವ ಮುಂತಾದವರೆಲ್ಲರು ಕೂಡ ಶೂದ್ರರೆ.

ಅಧುನಿಕ ಕಾಲಘಟ್ಟದ ಭಕ್ತಿಪಂಥದ ಅಗ್ರಗಣ್ಯರಾದ ಸಂತ ತುಕಾರಾಮˌ ಗೋರಾ ಕುಂಬಾರˌ ಕಬೀರˌ ಕನಕದಾಸˌ ಷರೀಫˌ ಫುಲೆ ದಂಪತಿಗಳುˌ ಕಲ್ಯಾಣದ ಸಮಸ್ತ ಶರಣ ಸಂಕುಲˌ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಸರ್ವಜ್ಞˌ ಕುವೆಂಪುˌ ಮುಂತಾದವರೆಲ್ಲರೂ ಶೂದ್ರ ವರ್ಗಕ್ಕೆ ಸೇರಿದವರೆ. ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಹೋರಾಟದ ಬದುಕು ಮತ್ತು ಸಾಧನೆಯ ಮೂಲಕ ವಿಶ್ವದ ಬ್ರಹತ್ ಪ್ರಜಾಪ್ರಭುತ್ವ ದೊಶಕ್ಕೆ ಸಂವಿಧಾನವನ್ನು ನೀಡಿದರು. ಆ ಮೂಲಕ ಈ ನೆಲದ ಕೋಟ್ಯಾಂತರ ಜನರ ಸ್ವಾಭಿಮಾನˌ ಸ್ವಾತಂತ್ರ್ಯ , ಆತ್ಮ ರಕ್ಷಣೆಗೆ ಅನುವು ಮಾಡಿಕೊಟ್ಟರು.

ಭರತ ಖಂಡದ ಪ್ರಾಚೀನ ಜ್ಞಾನ ಸಂಪತ್ತು ಶೂದ್ರ ವರ್ಗದ ಸ್ವತ್ತಾಗಿತ್ತು ಎನ್ನುವುದು ನಾವು ಮರೆಯಲಾಗದು. ಆದರೆ ಕಾಲಕ್ರಮೇಣ ಶೂದ್ರನಲ್ಲಿರುವ ಈ ಅಗಾಧ ಪ್ರತಿಭೆˌ ಶಕ್ತಿಯಿಂದ ಹೆದರಿದ ಖುಲ್ಲ ಸನಾತನಿಗಳು ಕುಠಿಲ ಹುನ್ನಾರಗಳ ಮೂಲಕ ಶೂದ್ರ ವರ್ಗವನ್ನು ಶೋಷಿಸಿದ್ದನ್ನು ಕಾಣಬಹುದು. ಶೂದ್ರರ ಶಕ್ತಿಯ ಅರಿವು ಸನಾತನ ನರಿಗಳಿಗಿದೆ ಆದರೆ ಸ್ವತಃ ಶೂದ್ರರಿಗೆ ಇದರ ಬಗ್ಗೆ ಅರಿವಿಲ್ಲ. ಇದೆ ಶೂದ್ರರಲ್ಲಿರುವ ಅರಿವಿನ ಅಭಾವ ಅವರನ್ನು ಗುಲಾಮರನ್ನಾಗಿ ಮಾಡಿದೆ.

ಲೇಖನ: ಡಾ. ಜೆ ಎಸ್ ಪಾಟೀಲ. ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!