Breaking News
Home / featured / ಪಟ್ಟಣಕ್ಕೆ ಪಂಚರಾತ್ರಿ, ಹಳ್ಳಿಗೆ ಏಕರಾತ್ರಿ.

ಪಟ್ಟಣಕ್ಕೆ ಪಂಚರಾತ್ರಿ, ಹಳ್ಳಿಗೆ ಏಕರಾತ್ರಿ.

ಲಿಂಗಾನಂದ ಸ್ವಾಮೀಜಿ: ಪ್ರಥಮ ಶರಣಮೇಳ

ಆಗಿನ್ನೂ ಪ್ರೈಮರಿ ಮುಗಿಸಿ ಹೈಸ್ಕೂಲ ಮೆಟ್ಟಿಲು ಏರೋ ಭರದಲ್ಲಿದ್ದ ನನಗೆ ಸದ್ಗುರು ಲಿಂಗಾನಂದ ಸ್ವಾಮಿಗಳ ಮೂಲಕ ನಮ್ಮ ತಂದೆ 7 ಜನ ಅಕ್ಕಂದಿರೊಂದಿಗೆ ನನಗೂ ಲಿಂಗಧಿಕ್ಷೆ ಸಂಸ್ಕಾರ ಕೊಡಿಸಿದ್ದರು.
ಆಗ ಸದ್ಗುರು ಲಿಂಗಾನಂದರು ಮತ್ತು ಮಾತೆಮಹಾದೇವಿ ಅವರು ವಚನ ಸಾಹಿತ್ಯದಲ್ಲಿದ್ದ ಅರಿವನ್ನು ಹಾಗೂ ಲಿಂಗಾಯತ ಧರ್ಮದ ಪ್ರಚಾರ, ಪ್ರವಚನ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ತಳಮಟ್ಟದಿಂದ ಪ್ರಾರಂಭಗೊಂಡು ಬಹಳ ವರ್ಷಗಳೇ ಆಗಿದ್ದವು.
ನಾನು ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಇನ್ನು ಕಾಲೇಜು ಮೆಟ್ಟಿಲೇರುವ ದಿನಗಳು ಅವು ಆಗ ಇದ್ದಕ್ಕಿದ್ದಂತೆ ಸದ್ಗುರು ಲಿಂಗಾನಂದ ಸ್ವಾಮಿಗಳು ನಮ್ಮ ಮನೆಗೆ ಬಂದರು. ಅಂದು ನಾ ಮನೆಲೆ ಇದ್ದೆ ಏನಪಾ ಬುತ್ತಿ ಸಂಗಯ್ಯ (ಸದ್ಗುರುವಿನಿಂದ ಸಿಕ್ಕ ಬಳುವಳಿ ಹೆಸರು) ಹೇಗಿದ್ದಿಯಾ , ಚೆನ್ನಾಗಿ ಓದು ಅನ್ನುತ್ತ ನನ್ನ ತಂದೆಯೊಂದಿಗೆ ಚರ್ಚೆ ಮುಂದುವರೆಸುತ್ತಾ ಒಂದು ಆಹ್ವಾನ ಪತ್ರಿಕೆ(ಪ್ರವಚನ ಕಾರ್ಯಕ್ರಮ) ಕೊಟ್ಟು ಚೆನ್ನಬಸಣ್ಣ ನಿಮ್ಮ ವೃತ್ತಿ ಸೇವೆ ಬೆಲೆಕಟ್ಟಲಾಗದಂತ್ತದ್ದು ಹಾಗೂ ನಿಮ್ಮ ದಾಸೋಹ ಭಾವನೆ ಕೂಡ ಅಂತ ಹೇಳಿ ಹೋದರು.
ನನ್ನ ಪ್ರಥಮ ವರ್ಷದ ಕಾಲೇಜು ದಿನಗಳಲ್ಲಿ ಇದ್ದಾಗ ಈ ಶರಣ ಮೇಳ ಅನ್ನೋ ಮೊದಲ ಕಾರ್ಯಕ್ರಮ ಕೂಡಲ ಸಂಗಮದಲ್ಲಿ ಐತಿಹಾಸಿಕವಾಗಿ ನೆಡೆದು ಯಶಸ್ವಿಯಾಗಿ ಜರುಗಿತ್ತು.
ನನಗಿನ್ನೂ ನೆನಪಿದೆ ಕೂಡಲಸಂಗಮದ ಈಗಿನ ಹೊಸ ಬಸ್ಸು ನಿಲ್ದಾಣ ಹಿಂಬಾಗದ ಹೊಲದಲ್ಲಿ ಬಹು ವಿಸ್ತಾರವಾದ ಪೆಂಡಾಲು ಹಾಕಿ ಬಹಳ ವೈಭವದ ಶರಣರಿಂದ ಶರಣರಾಗುವವರಿಗೋಸ್ಕರ
ನೆಡೆದ ಬಹುದೊಡ್ಡ ಮೊಟ್ಟಮೊದಲ ಲಿಂಗಾಯತರ ಕಾರ್ಯಕ್ರಮ ಅದಾಗಿತ್ತು ಅಂದ್ರೆ ಅತಿಶಯೋಕ್ತಿಯಲ್ಲ.

ಪ್ರಥಮ ಐತಿಹಾಸಿಕ “ಶರಣ ಮೇಳ “ ಆಹ್ವಾನ ಪತ್ರಿಕೆಯಲ್ಲಿ ಹೀಗೆ ಮುದ್ರಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವೆನಿಸಿ ಹಂಚಿಕೊಂಡಿರುವೆ.
ಶರಣು ಶರಣಾರ್ಥಿ.

ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಲಿಂಗಾಯತ ಯಾರು?

೧.ಸಮತವಾದಿ, ಮನುಕುಲೋಧಾರಿ, ವಿಶ್ವಗುರು ಬಸವಣ್ಣನವರನ್ನು ಲಿಂಗಾಯತ ಧರ್ಮದ ಆದಿ ಗುರುವೆಂದು, ಮಂತ್ರಪುರುಷನೆಂದು ತಿಳಿದು ಧರ್ಮಪಿತ ಬಸವಣ್ಣನವರೇ ತನ್ನ ರಕ್ಷಕ, ಮೋಕ್ಷದಾಯಕ ಗುರು ಎಂದು ನಂಬಿ ಅವರ ಶ್ರೀ ಚರಣಕ್ಕೆ ಶರಣಾಗತನಾಗುವವನೇ ಲಿಂಗಾಯತ.

೨.ಜಗದ್ಗುರು ಬಸವಣ್ಣನವರೇ ಆದಿ ಪ್ರಮಥರಾಗಿ ಬಸವ ಯುಗದ ಮತ್ತು ಬಸವ ಪಥದ ಶರಣರು ಕೊಟ್ಟ ವಾಸಿಗಣ ಸಾಹುತ್ಯವನ್ನೇ ತನ್ನ Pಧರ್ಮ ಸಂಹಿತೆ(ಧಾರ್ಮಿಕ ಸಂವಿಧಾನ) ಎಂದು ನಂಬಿ ವಚನ ಸಾಹುತ್ಯದ ಅಧ್ಯಯನ , ಪಾರಾಯಣ, ಅನುಷ್ಠಾನ ಮಾಡುವವನೇ ಲಿಂಗಾಯತನು.

೩.ಚೇತನಾಚೇತನಾತ್ಮಕವಾದ ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ಕರ್ತವಾಗಿರುವ ಪರಮಾತ್ಮನ ಅಸ್ತಿತ್ವದಲ್ಲಿ ನಂಬುಗೆ ಇರಿಸಿ. ಆ ದೇವನನ್ನು ಗೋಲಾಕಾರದಲ್ಲಿ ಚುಳುಕಾಗಿಸಿ ಕೊಟ್ಟ ಬಸವಣ್ಣನವರ ಕೊಡುಗೆಯಾದ ಇಷ್ಟಲಿಂಗದಲ್ಲಿ ಶ್ರದ್ಧೆ ಇರಿಸಿ ದೇಹದ ಮೇಲೆ ಧರಿಸಿಕೊಂಡು ಪೂಜಿಸಿವನು ಲಿಂಗಾಯತನು.

೪.ಬಸವಾದಿ ಪ್ರಮಥರು ಮತ್ತು ಆ ಪರಂಪರೆಯಲ್ಲಿ ಸಾಗಿಬಂದಿರುವ ಶಿವಯೋಗಿಗಳು-ಶರಣರು ಮುಂತಾದವರ ತಪೋಭೂಮಿ ಮತ್ತು ಐಕ್ಯಸ್ಥಾನಗಳನ್ನು ತನ್ನ ಪವಿತ್ರ ಕ್ಷೇತ್ರಗಳೆಂದು ಪರಿಗಣಿಸಿ, ಧರ್ಮಪಿತ ಬಸವಣ್ಣನವರು ಐಕ್ಯವಾಗಿರುವ ಕೂಡಲಸಂಗಮವನ್ನು ಧರ್ಮಕ್ಷೇತ್ರವೆಂದು ನಂಬಿ, ಅದರ ಸರ್ವಾಂಗೀಣ ಪ್ರಗತಿಗೆ ದುಡಿಯುವುದೇ ಅಲ್ಲದೆ ಎಲ್ಲಿಯೇ ನೆಲೆಸಿದ್ದರೂ ಈ ಧರ್ಮಭೂಮಿಯನ್ನು ಸಂದರ್ಶನ ತನ್ನ ಜೀವನದ ಪವಿತ್ರ ಕರ್ತವ್ಯ ಎಂದು ಭಾವಿಸುವವನೇ ಲಿಂಗಾಯತನು.

೫. “ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ” ಎಂಬ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ವಾಣಿಯಂತೆ ಮನೆಯಲ್ಲಿ, ಸಭೆ-ಸಮಾರಂಭಗಳಲ್ಲಿ, ಮಠ ಮಾನ್ಯಗಳಲ್ಲಿ ಬಸವ ಗುರುವಿನ ಭಾವಚಿತ್ರವನ್ನು, ಬಸವಾ ಗುರು ಮೂರ್ತಿಯನ್ನು ಇರಿಸಿ, ಅವರ ತತ್ವಗಳನ್ನು ಪಾಲಿಸುವ ಏಕ ಗುರು ನಿಷ್ಠೆಯುಳ್ಳವನಾಗಿ, ಬಸವ ಜಯಂತಿ, ಬಸವಲಿಂಗೈಕ್ಯ ದಿನಾಚರಣೆ ( ಶ್ರಾವಣ ಶುದ್ಧ ಪಂಚಮಿಯಂದು ) ಮತ್ತು ಬಸವಕ್ರಾಂತಿ ದಿನಾಚರಣೆ ( ಸಂಕ್ರಾಂತಿ ಯಂದು ) ಗಳನ್ನು ತಪ್ಪದೆ ಮಾಡುವವನು ಲಿಂಗಾಯತ. ದೇವಮಂತ್ರ ವೆಂದು “ಓಂ ನಮಃಶಿವಾಯ” ಎಂಬ ಷಡಕ್ಷರಿ ಮಂತ್ರವನ್ನು, ಗುರು ಮಂತ್ರವೆಂದು “ಓಂ ಶ್ರೀಗುರುಬಸವಲಿಂಗಾಯನಮಃ” ಎಂಬ ದ್ವಾದಕ್ಷರ ಮಂತ್ರವನ್ನು ಶ್ರದ್ಧೆಯಿಂದ ಮನ್ನಿಸಿ ಪಠಿಸುವವನು ಲಿಂಗಾಯತನು.

೬. ವಿಶೇಷ ಧಾರ್ಮಿಕ ಉತ್ಸವಗಳಂದು, ಶರಣರ ಜಯಂತಿಗಳಂದು ಷಟಸ್ಥಲ ಧ್ವಜವನ್ನು ಹಾರಿಸುವುದೇ ಅಲ್ಲದೆ, ತಮ್ಮ ಮನೆ-ಮಠಗಳ ಮೇಲೆ ಷಟ್ಕೋನ ಲಾಂಛನ ಹಾಕಿ, ಮನೆಗಳಿಗೆ ಬಸವಾದಿ ಶರಣರ ಹೆಸರುಗಳನ್ನಿಡುವವನೇ ಲಿಂಗಾಯತನು.

೭.ಹುಟ್ಟಿದಾಗ ಲಿಂಗಧಾರಣೆ, ತಾರುಣ್ಯದ(೧೪-೨೦) ವಯಸ್ಸಿನಲ್ಲಿ ಹೆಣ್ಣು-ಗಂಡೆoಬ ಭೇಧವೇಣಿಸದೆ ಲಿಂಗದೀಕ್ಷಾ ಸಂಸ್ಕಾರವನ್ನು ಸದ್ಗುರುವಿನಿಂದ ಮಕ್ಕಳಿಗೆ ಕೊಡಿಸುವವನೇ ( ತಾನು ಮಾಡಿಸಿ ಕೊಂಡಿರುವವನೇ) ಲಿಂಗಾಯತನು. ಚಿಕ್ಕ ಮಕ್ಕಳ ದೇಹದ ಮೇಲೆ ಇಷ್ಟಲಿಂಗವನ್ನಾಗಲಿ ಬಸವ ಗುರುವಿನ ಪದಕವನ್ನಾಗಲಿ ತಪ್ಪದೇ ಧರಿಸುವವನೇ ಲಿಂಗಾಯತನು.

೮.ಲಿಂಗಾಂಗಿಗಳು ಧರ್ಮಬಂಧುಗಳೆಂದು ಭಾವಿಸಿ, ಅವರಲ್ಲಿ ಜಾತಿಭೇಧಎಣಿಸದೆ, ಊಟ ಮತ್ತು ವಿವಾಹ ಸಂಬಂಧಗಳನ್ನು ನಿ:ಸಂಶಯ ಪೂರ್ವಕವಾಗಿ ಮಾಡುವವನೇ ಲಿಂಗಾಯತನು. ಭಕ್ತತ್ವ, ಗುರುತ್ವ, ಜಂಗಮತತ್ವಗಳು ಜನ್ಮದಿಂದ ಮತ್ತು ಸ್ವಾನುಭಾವಗಳಿಂದ ಗಳಿಸಿಕೊಂಡ ಅರ್ಹತೆಗಳೆಂದು ನಂಬುವವನೇ ಲಿಂಗಾಯತನು.

೯.ಅಷ್ಟಾವರಣಗಳಾದ ಗುರು-ಲಿಂಗ-ಜಂಗಮ ( ಪೂಜ್ಯ ವಸ್ತುಗಳು ), ವಿಭೂತಿ-ರುದ್ರಾಕ್ಷಿ-ಮಂತ್ರ (ಪೂಜಾ ಸಾಧನಗಳು ) ಪಾದೋದಕ-ಪ್ರಸಾದ ( ಪೂಜಾಫಲಗಳು ) ಎಂಬುವು ಲಿಂಗಾಯತ ಧರ್ಮ ಪುರುಷನ ಅಂಗವೆಂದು, ಪಂಚ ಅಚಾರಗಳಾದ ಲಿಂಗಾಚಾರ-ಸದಾಚಾರ-ಶಿವಾಚಾರ-ಗಣಾಚಾರ-ಭೃತ್ಯಾಚಾರಗಳು ಧರ್ಮ ಪುರುಷನ ಪಂಚ ಪ್ರಾಣಗಳೆಂದು; ಷಟಸ್ಥಲದ ವಿವುದ ಹಂತಗಳಾದ ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ ಎಂಬುವು ಧರ್ಮ ಪುರುಷನ ಆತ್ಮವೆಂದು ಅರಿತು ಆಚರಿಸುವವನೇ ಲಿಂಗಾಯತನು.

೧೦. ಕಾರಣವಾಗುವ ಗುಡಿ-ಗುಂಡಾರಗಳನ್ನು ನಿರ್ಮಿಸದೆ ದೇಹವನ್ನೇ ದೇವಾಲಯ ಮಾಡಿಕೊಳ್ಳುವ ಸದಾಚಾರವನ್ನು ಅಳವಡಿಸಿಕೊಂಡು ಧರ್ಮದ ಅದ್ಯನಾದ ಬಸವಗುರುವನ್ನು ಚೈತನ್ಯಸ್ವರೂಪಿಗಳಾದ ಗುರು-ಜಂಗಮರನ್ನು ( ಅರ್ಥಾತ್ ಜ್ಞಾನಿಗಳನ್ನು ) ಗೌರವಿಸಿ ಬಸವಣ್ಣನವರ ಸೂತ್ರರೂಪವಾಗಿ ನಿರ್ಮಿಸಿ ತೋರಿಸಿದ ಅನುಭವಮಂಟಪದ ಮಾದರಿಯಲ್ಲಿ ಆಧ್ಯಾತ್ಮಿಕ ಕೇಂದ್ರಗಳನ್ನು ನಗರ, ಉರು, ಹಳ್ಳಿಗಳಲ್ಲಿ ನಿರ್ಮಿಸಿ, ಅವುಗಳಿಗೆ ಬಸವ ಮಂಟಪಗಳೆಂದು ಹೆಸರಿಟ್ಟು ಅವುಗಳ ಮೂಲಕ ಸಾಮೂಹಿಕ ಪ್ರಾರ್ಥನೆ, ಧರ್ಮಬೋಧನೆ, ವಚನಸಾಹಿತ್ಯ ಅಧ್ಯಯನ ಪ್ರವಚನ ನೆಡೆಸುವವನು, ಭಾಗಿಯಾಗುವವನು ಲಿಂಗಾಯತನು.

೧೧. ಯಜ್ಞ-ಯಾಗ, ಹೊಮ-ಹವನಾಡಿಗಳನ್ನು ಮಾಡದೆ. ಪಂಚಸುತಕಗಳಾದ ಜನನ-ಮರಣ-ಜಾತಿ-ಉಚ್ಚಿಷ್ಟ-ರಜ ಸುತಕಗಳನ್ನು ಆಚರಿಸದೆ ಚತುರ್ವಣಾತ್ಮಕ ವ್ಯವಸ್ಥೆಯು ದೇವ ನಿರ್ಮಿತವಲ್ಲ. ಮಾನವ ಕಲ್ಪಿತ ಎಂದು ತಿಳಿದು ಜಾತಿಭೇದ ಪದ್ದತಿ, ಅಸ್ಪೃಶ್ಯತೆಗಳನ್ನು ನಿರಾಕರಿಸಿ, ಸಮಾಜದ ಪ್ರತಿಯೊಬ್ಬನ ಬೆಳವಣಿಗೆಗೆ ಸಮಾನ ಅವಕಾಶ ನೀಡುವ ಸಮಾತಾವಾದಿಯೂ , ವಿಚಾಶೀಲನು ಆಗಿ, ಮಾಂಸಹಾರಿಯಾಗದೆ ಶುದ್ಧ ಸಸ್ಯಾಹಾರಿಯಾಗಿ ಜೀವನ ನೆಡೆಸುವ ಅಹಿಂಸಾವಾದಿಯೇ ಲಿಂಗಾಯತನು.

೧೨. “ನಿರಾಕಾರ ದೇವನ ಮುಖ ಸಮಾಜ” ದಯವೇ ಧರ್ಮದ ಮೂಲವಯ್ಯಾ” ಎಂದು ತಿಳಿದು ಅಪಾರವಾದ ಮಾನವೀಯತೆ, ಪ್ರೀತಿಯಿಂದ ದೀನ-ದುಃಖಿತರನ್ನು, ಪಾಪಿ-ಪತಿತರನ್ನು ಕಂಡು ಅವರ ಏಳಿಗೆಗೆ ಶ್ರಮಿಸಿ, ಬಸವಾದಿ ಶರಣರು ಜಾತಿವರ್ಣವರ್ಗರಹಿತ ಕಲ್ಯಾಣ ರಾಜ್ಯವನ್ನು ಮೂರ್ತ್ಯಲೋಕದಲ್ಲಿ ನಿರ್ಮಾಣ ಮಾಡಲು ಯಾವ ಉದಾತ್ತ ಧ್ಯೇಯದಿಂದ ದುಡಿದರೋ, ಆ ಧ್ಯೇಯಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡು, ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಮಾನವತಾವಾದಿ ವಿಶ್ವಧರ್ಮಿಯೇ ಲಿಂಗಾಯತನು.

ಲೇಖನ: ನರವಿಂದ್ಯದೋಳ್ ಭಕ್ತಿ ಚಕ್ರವರ್ತಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!