Breaking News
Home / featured / ಸಿಂದಗಿಯ ಚನ್ನಮ್ಮ ವೃತ್ತ ಮರುಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಮನವಿ

ಸಿಂದಗಿಯ ಚನ್ನಮ್ಮ ವೃತ್ತ ಮರುಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಮನವಿ

ಬೆಳಗಾವಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚನ್ನಮ್ಮಾಜಿ ವೃತ್ತವನ್ನು ತೆರೆವುಗೊಳಿಸಿರುವುದನ್ನು ಶೀಘ್ರವಾಗಿ ಸರಿಪಡಿಸಿ ಮರುನಿರ್ಮಾಣ ಮಾಡಬೇಕೆಂದು ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.

ಮೇ, 30 ರಂದು ರಾತ್ರಿ ಸಮಯದಲ್ಲಿ ಸಿಂದಗಿ ತಾಲೂಕಾಡಳಿತವು ಯಾವುದೇ ಮುನ್ಸೂಚನೆ ನೀಡದೆ, ಭಾರತದ ಇತಿಹಾಸದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಪ್ರಥಮ ಬಾರಿಗೆ 1824 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಬ್ರಿಟಿಷ್ ಜಿಲ್ಲಾ ಕಲೆಕ್ಟರ್ ಅಧಿಕಾರಿಯನ್ನು ಕೊಂದು ಹಾಕಿ ತಮ್ಮ ಶೌರ್ಯ ಸಾಹಸಗಳನ್ನು ತೋರಿ ಜಗತ್ತಿಗೆ ಮಾದರಿ ಮಹಿಳೆಯಾಗಿ ಹೋಗಿದ್ದಾರೆ. ಅಂತಹ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ವೃತ್ತವನ್ನು ಏಕಾಏಕಿ ದ್ವಂಸ ಮಾಡಿ ತೆರೆವುಗೊಳಿಸಿರುವುದು ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಗೆ ಮಾಡಿದ ಅವಮಾನವಾಗಿದೆ.
2007 ರಲ್ಲಿ ಈ ವೃತ್ತವನ್ನು ಸಿಂದಗಿ ಪುರಸಭೆಯವರು ಠರಾವು ಮಾಡಿ ಆದೇಶ ನೀಡಿದ್ದರು. ಆದೇಶದ ಅನುಸಾರ 2019ರಲ್ಲಿ ವೃತ್ತವನ್ನು ನಿರ್ಮಿಸಿ ಸ್ಥಳೀಯ ಶಾಸಕರ ಅನುದಾನ ಹಾಗೂ ಸಮಾಜದವರಿಗೆ ಹಣ ಸಂಗ್ರಹಿಸಿ ಸುಮಾರು 1 ಕೋಟಿ ರೂಪಾಯಿಗಳ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಸದರಿ ವೃತ್ತದ ಕಾಮಗಾರಿಯನ್ನು ಆರಂಭಿಸಿದ್ದು ಈಗ 8 ತಿಂಗಳು ಆಗಿದೆ. ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಧ್ವಂಸ ಮಾಡಿರುವುದು ಸಮಾಜಕ್ಕೆ ತುಂಬಾ ನೋವುಂಟಾಗಿದೆ. ಈ ಘಟನೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಕಾಣದ ಕೈಗಳನ್ನು ಪತ್ತೆ ಹಚ್ಚಿ ಅವರಿಗೆ ಕಾನೂನಿನ ಮೂಲಕ ಉಗ್ರವಾದ ಶಿಕ್ಷೆ ನೀಡಬೇಕೆಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶರಣ: ಬಿ ಎಸ್ ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಲಿಂಗಾಯತ ಸೇವಾ ಸಮಿತಿ ಪದಾಧಿಕಾರಿಗಳಾದ ವಕೀಲರಾದ ಬಸವರಾಜ ರೊಟ್ಟಿ, ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯೆ ರೋಹಿಣಿ ಪಾಟೀಲ, ತಾಲೂಕ ಪಂಚಾಯತ ಸದಸ್ಯ ಮುದಕಪ್ಪ ಮರಡಿ, ಆರ್ ಎಸ್ ದರ್ಗೆ, ರಾಜು ಮಗದುಮ್ಮ, ಎಫ್ ಎಸ್ ಸಿದ್ಧನಗೌಡರ, ವಿ.ಕೆ ಪಾಟೀಲ, ಶಿವಾನಂದ ಮೆಟ್ಯಾಲ, ರಾಜು ಕುಂದಗೋಳ, ಪ್ರಭು ಬೆಣ್ಣಿ, ರಾಜೇಶ್ವರಿ ದೇಯನ್ನವರ, ಎಮ್.ಸಿ ಪಾಟೀಲ, ಮಹಾಂತೇಶ ದೀವಟಗಿ, ಅಂಜುಮ್ ಶೇಖ್, ಅನುಪ್ರೀಯಾ ನಾಯಕ ಮತ್ತಿತ್ತರರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!