Breaking News
Home / featured / ಬ್ರಾಹ್ಮಣ ಶ್ರೇಷ್ಠತೆ ಎಂಬುದು ಟೊಳ್ಳು ವಾದ

ಬ್ರಾಹ್ಮಣ ಶ್ರೇಷ್ಠತೆ ಎಂಬುದು ಟೊಳ್ಳು ವಾದ

ವಿಜಯಪುರ: ತಲೆತಲಾಂತರದಿಂದ ಬ್ರಾಹ್ಮಣನು ಸಮಾಜದಲ್ಲಿ ತಾನು ಶ್ರೇಷ್ಠ ಕುಲದವನೆಂದು ಬಿಂಬಿಸಿಕೊಂಡು ಅನ್ಯರನ್ನು ಶೋಷಿಸಿಕೊಂಡು ಬಂದಿದ್ದಾನೆ. ಅಂತ ಬ್ರಾಹ್ಮಣನ ಶ್ರೇಷ್ಠತೆಯ ಮರ್ಮಗಳನ್ನು ಬಸವಣ್ಣನವರು ತಮ್ಮ ಒಂದೊಂದು ವಚನಗಳಲ್ಲಿ ಬಹಳ ಮಾರ್ಮಿಕವಾಗಿ ಹೋರಗೆಡವಿದ್ದಾರೆ :

” ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನುˌ
ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು.
ಸರಿಯೆ ದೇವಭಕ್ತಂಗಿವನು
ಸರಿಯೆ ಲಿಂಗಭಕ್ತಂಗಿವನು ?
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನ ಕಪಿಲೆಯ ರವಣಶಾಖದ ಉಚ್ಛಿಷ್ಟದ ಹಾಲಿನಿಂದ
ಕೂಳನಟ್ಟುಂಬವರನೇನೆಂಬೆ
ಕೂಡಲಸಂಗಮದೇವಾ.”

ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನುˌ ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು.

ಬ್ರಾಹ್ಮಣನು ಮಾತು ಮಾತಿಗೆ ತನ್ನದು ಶ್ರೇಷ್ಠ ಕುಲವೆಂದು ನುಡಿವನು. ಬ್ರಹ್ಮೇತಿಯ ಕುರಿತು ಮಾತನಾಡುವನು. ಬ್ರಹ್ಮೇತಿ ಅಂದರೆ ಬ್ರಾಹ್ಮಣ ಹತ್ಯೆ. ಬ್ರಾಹ್ಮಣ ಹತ್ಯೆಯು ಮಹಾ ಪಾಪವೆಂದು ವಾದಿಸುವನು. ಆದರೆ ಅನ್ಯನು ಮಾಡಿದ ಅನೇಕ ಪಾಪದ ಕಾರ್ಯಗಳಿಗೆ ತಾನೇ ಕೈಯೊಡ್ಡಿ ಬೇಡುವನು. ಅಂದರೆ ಅನ್ಯರ ಪಾಪದ ಕೆಲಸಗಳನ್ನು ತನ್ನ ಪೂಜೆˌ ಪರಿಹಾರಗಳ ಮೂಲಕ ಕಳೆಯುತ್ತೇನೆಂದು ಹೇಳಿ ದಕ್ಷಿಣೆಗೆ ಕೈ ಚಾಚುವನು.

ಸರಿಯೆ ದೇವಭಕ್ತಂಗಿವನು ˌ ಸರಿಯೆ ಲಿಂಗಭಕ್ತಂಗಿವನು ?

ದೈವಭಕ್ತನಾದ ಲಿಂಗಾಯತ ಧರ್ಮಿರಿಗೆ ಇದು ಸರಿಯಾದ ಕ್ರಮವಲ್ಲ. ಹಾಗೆಯೆ ಲಿಂಗಾಯತನಾದವನು ತನ್ನ ಪಾಪ ಕರ್ಮಗಳನ್ನು ಕಳೆದುಕೊಳ್ಳಲೆಂದು ಬ್ರಾಹ್ಮಣರಿಂದ ಪರಿಹಾರೋಪಾಯಗಳನ್ನು ಮಾಡಿಸಲೇಬಾರದು.

ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದುˌ

ಕಾಯಕದಲ್ಲಿ ಬಡಿಗೆ ಕೆಲಸ ಮಾಡುತ್ತಿದ್ದ ಮಾಚಲಾದೇವಿ ಎಂಬ ಸ್ತ್ರೀಯನ್ನು ಬ್ರಾಹ್ಮಣ ಕುಲಜೆಯಾಗಿ ಮಾಡಿದೆವೆಂದು ಬಡಾಯಿ ಕೊಳ್ಳುತ್ತಾನೆ ಬ್ರಾಹ್ಮಣನಾದವನು.

ಹೊನ್ನ ಕಪಿಲೆಯ ರವಣಶಾಖದ ಉಚ್ಛಿಷ್ಟದ ಹಾಲಿನಿಂದ ಕೂಳನಟ್ಟುಂಬವರನೇನೆಂಬೆ ಕೂಡಲಸಂಗಮದೇವಾ.

ಎಲ್ಲರಲ್ಲೂ ತಾನೇ ಶ್ರೇಷ್ಠನೆಂದು ಕೊಚ್ಚಿಕೊಳ್ಳುವ ಹಾರುವನು ಚಿನ್ನದ ಹಸುವಿನಲ್ಲಿ ಆ ಕರು ಮುಟ್ಟಿ ಕುಡಿದು ಉಳಿಸಿದ ಎಂಜಲು ಹಾಲನು ಸೊಪ್ಪು/ರವದಿಯ ಶಾಖದಲ್ಲಿ ಕಾಯಿಸಿ ಅಡಿಗೆ ಮಾಡಿ ಉಣ್ಣುವ ಹಾರವ ಹೇಗೆ ಶ್ರೇಷ್ಠನಾಗುತ್ತಾನೆ ಎಂದು ಬಸವಣ್ಣನವರು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ.

ಡಾ : ಜೆ ಎಸ್ ಪಾಟೀಲ
ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!