Breaking News
Home / featured / ಇರಾ ಸಿಂಘಾಲ್: ಕಡುಬಡತನದಲ್ಲಿ ಬೆಳೆದ ಐಎಎಸ್ ಅಧಿಕಾರಿ

ಇರಾ ಸಿಂಘಾಲ್: ಕಡುಬಡತನದಲ್ಲಿ ಬೆಳೆದ ಐಎಎಸ್ ಅಧಿಕಾರಿ

ಸಾಧಕರ ಸುತ್ತ-ಮುತ್ತ ಒಂದು ಕಣ್ಣು ಹಾಯಿಸಿದಾಗ ಅವರ ಜೀವನ ನಮಗೆಲ್ಲ ಒಂದು ಸ್ಪೂರ್ತಿದಾಯಕ ಹಾಗೂ ಸಕರಾತ್ಮಕ ಭಾವನೆಗಳನ್ನು ಯೋಚಿಸುವಲ್ಲಿ ಸಹಾಯವಾಗುತ್ತದೆ, ಎನ್ನುವುದಕ್ಕೆ ಮತ್ತೋರ್ವ ಸಾಧಕಿಯ ಜೀವನದ ಮೇಲೆ ಕಣ್ಣೋಟ

ಸಾಧನೆಗೆ ಅಡ್ಡದಾರಿಗಳಿಲ್ಲ. ಅಂಗವೈಕಲ್ಯ ಇದೆ, ಬಡತನ ಇದೆ, ಗ್ರಾಮೀಣ ಪ್ರದೇಶದಿಂದ ಬಂದವರು ಎಂಬಂತಹ ಯಾವುದೇ ನೆಪಕ್ಕೂ ಅಲ್ಲಿ ಅವಕಾಶವಿಲ್ಲ . ಸತತ ಪ್ರಯತ್ನ ಪಟ್ಟರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇವರೇ ಉದಾಹರಣೆ ನೋಡಿ …..

2010ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 813ನೇ ರ್‍ಯಾಂಕ್‌ ಪಡೆದಿದ್ದ ಇರಾ ಭಾರತೀಯ ಕಂದಾಯ ಸೇವೆಗೆ ಅರ್ಹತೆ ಗಳಿಸಿದ್ದರು. ಆದರೆ ಅಂಗವೈಕಲ್ಯ ಮತ್ತು ಕುಬ್ಜ ದೇಹದಿಂದಾಗಿ ಇಲಾಖೆ ಅವರಿಗೆ ಉದ್ಯೋಗ ನೀಡಲು ನಿರಾಕರಿಸಿತು.

ಸ್ಕೋಲಿಯೋಸಿಸ್(ಬೆನ್ನುಹುರಿಗೆ ಸಂಬಂಧಿಸಿದ ತೊಂದರೆ)ಯಿಂದ ಬಳಲುತ್ತಿದ್ದ ಇರಾ ಸಿಂಘಾಲ್ 2010ರಲ್ಲೇ ಐಆಎರ್‍ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಈಕೆಯ ಅಂಗವೈಕಲ್ಯವನ್ನು ನೋಡಿ ಆರಂಭದಲ್ಲಿ ಐಆರ್‍ಎಸ್ ಉದ್ಯೋಗ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ತದ ನಂತರ ಉದ್ಯೋಗ ನೀಡಲು ಒಪ್ಪಿದರೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಉದ್ಯೋಗ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಕೊನೆಗೆ ಇರಾ ಸಿಂಘಲ್ ಕೇಂದ್ರ ಆಡಳಿತತ್ಮಾಕ ನ್ಯಾಯ ಮಂಡಳಿಯ(ಸಿಎಟಿ) ಮೊರೆ ಹೋಗಿದ್ದರು.

ಕೊನೆಗೆ 2014ರಲ್ಲಿ ಸಿಎಟಿ ಆಕೆ ಪರ ತೀರ್ಪು ನೀಡಿತ್ತು. ಹೀಗಾಗಿ ಆಕೆಗೆ ಕೇಂದ್ರ ಅಬಕಾರಿ ಸೇವೆಯ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದರು

ದೆಹಲಿ ನೇತಾಜಿ ಸುಭಾಶ್ ಇನ್ಸುಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಓದಿರುವ ಇರಾ ಸಿಂಘಾಲ್, ದೆಹಲಿಯಲ್ಲಿರುವ ಫ್ಯಾಕಲ್ಟಿ ಆಫ್ ಮ್ಯಾನೆಜ್‍ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಸಾಧನೆಯ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಹತ್ತಿದ ಇರಾ ದಾರಿಯ ಮಧ್ಯೆ ಬಂದ ಎಲ್ಲ ಅಡೆತಡೆಗಳನ್ನೂ ಬದಿಗೆ ಸರಿಸಿ ಸೆಟೆದು ನಿಂತು ಗೆದ್ದಿದ್ದಾರೆ

ಇವೆಲ್ಲಕ್ಕಿಂತ ಮಿಗಿಲಾದ ಬದುಕು ಬೇರೆಯದೇ ಇದೆ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಇರಾ ಅಂಗವೈಕಲ್ಯಕ್ಕೆ ಅಂಜಿದವರಲ್ಲ. ಅಂಜಿಸಲು ಬಂದ ಸಮಾಜವನ್ನೇ ಅಂಜಿಸಿದವರು. ಇದು ಎಲ್ಲಾ ಹೆಣ್ಣುಮಕ್ಕಳನ್ನು ಬರಬೇಕಾ ದಂತಹ ಧೈರ್ಯ…

ಆಕೆಗೆ ಬೆನ್ನುಹುರಿಗೆ ಸಂಬಂಧಿಸಿದ ಸ್ಕೋಲಿಯೋಸಿಸ್ ಎಂಬ ರೋಗವಿದೆ. ಎಷ್ಟೆಂದರೆ ಆಕೆಗೆ ತನ್ನ ತೋಳುಗಳನ್ನು ಚಲಿಸಲೂ ಸಾಧ್ಯವಾಗುತ್ತಿಲ್ಲ, ಅಷ್ಟು. ಸದಾ ಆ ನೋವನ್ನು ಹೊತ್ತುಕೊಂಡೇ ತಿರುಗಬೇಕು. ನಡೆಯುವಾಗಲೂ ಅಷ್ಟೆ, ಮಲಗಿರುವಾಗಲೂ ಅಷ್ಟೆ. ಆಕೆಗೆ ಈ ತೊಂದರೆ ಖಾಯಂ. ಆದರೆ ಐಎಸ್ ಅಧಿಕಾರಿಯಾಗಬೇಕೆಂಬ ಇರಾ ಆಸೆಗೆ ತನ್ನ ದೈಹಿಕ ಸಮಸ್ಯೆಗಳ್ಯಾವುದೂ ಅಡ್ಡ ಬರಲಿಲ್ಲ. ಐಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂಬ ಆಕೆಯ ಹಂಬಲದ ಮುಂದೆ ಸ್ಕೋಲಿಯೋಸಿಸ್ ಎಂಬುದು ತೃಣವಾಗಿ ಬಿಟ್ಟಿತ್ತು.

ಯುವಪೀಳಿಗೆ ಗಮನಿಸಬೇಕಾದ ವಿಷಯ;

ಪರೀಕ್ಷೆಯಲ್ಲಿ ಸರಿಯಾದ ಅಂಕ ಬರಲಿಲ್ಲ, ಅಪ್ಪ ಬೈದ, ಓದಲು ಸರಿಯಾದ ವಾತಾವರಣವಿಲ್ಲ, ಆ ಹುಡುಗ ಸಿಗಲಿಲ್ಲ, ಈ ಹುಡುಗಿ ಕೈಕೊಟ್ಟಳು, ಹಣವಿಲ್ಲ, ಕಾರಿಲ್ಲ, ಮನೆಯಿಲ್ಲ, ಕೈಯಿಲ್ಲ, ಕಾಲಿಲ್ಲ ಎಂಬೆಲ್ಲಾ ನೆಪಗಳಿಂದ ಆತ್ಮಸ್ಥೈರ್ಯಗಳನ್ನು ಕುಗ್ಗಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಮ್ಮ ಯುವ ಜನಾಂಗದವರಿಗೆ ಇರಾ ಸಿಂಘಾಲ್‌ ಜೀವನ ನಿಜಕ್ಕೂ ಸ್ಪೂರ್ತಿದಾಯಾಕ.

ಇಂತಹ ಸಕಾರಾತ್ಮಕ ಧೋರಣೆಗಳಿಂದ, ಸಾಧಕರ ಜೀವನ ಗಳಿಂದ ನಾವು ಕಲಿಯಬೇಕಾದ್ದು ಜೀವನದಲ್ಲಿ ತುಂಬಾ ಇದೆ. ಪರಮಾತ್ಮ ಕೊಟ್ಟ ಈ ಒಂದು ಅತ್ಯಮೂಲ್ಯವಾದ ಜೀವನವನ್ನು ವ್ಯರ್ಥವಾಗಿ ಕಳೆಯದೆ ನಮ್ಮ ಬದುಕನು ಹಸನಾಗಿಸಿ ಕೊಳ್ಳೋಣ

-ಮೇನಕಾ ಪಾಟೀಲ್

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!