Breaking News
Home / featured / ಶಿಕ್ಷಣದಲ್ಲಿ ಸೇವೆ ಮತ್ತು ಪ್ರಾಮಾಣಿಕತೆಗೆ ಪಾರ್ವತಿ ವಸ್ತ್ರದ ಮಾದರಿ: ಬಾಬಾಸಾಹೇಬ ಪಾಟೀಲ

ಶಿಕ್ಷಣದಲ್ಲಿ ಸೇವೆ ಮತ್ತು ಪ್ರಾಮಾಣಿಕತೆಗೆ ಪಾರ್ವತಿ ವಸ್ತ್ರದ ಮಾದರಿ: ಬಾಬಾಸಾಹೇಬ ಪಾಟೀಲ

ನೇಗಿನಹಾಳ : ಬೈಲಹೊಂಗಲ ತಾಲೂಕಿಗೆ ಮೊದಲ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿದ ಅಧಿಕಾರಿ ಪಾರ್ವತಿ ವಸ್ತ್ರದ ಅವರು. ಶುದ್ಧ ಹಸ್ತದ ವ್ಯಕ್ತಿತ್ವ. ಹೊಂದಿದವರು ಅಂತವರು ಇಂದು ನಮ್ಮ ತಾಲೂಕಿನಿಂದ ವರ್ಗವಾಗುತ್ತಿರುವುದು ಬಹಳಷ್ಟು ಬೇಸರದ ಸಂಗತಿಯಾಗಿದೆ ಎಂದು ಮಾಜಿ ಜಿ.ಪಂ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು.
ಗ್ರಾಮದ ಬಾಬಾಸಾಹೇಬ ಪಾಟೀಲ ಅಭಿಮಾನಿಗಳು ಮತ್ತು ಮುಖ್ಯೋಪಾಧ್ಯಯರು, ಶಿಕ್ಷಕರು, ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದರು. ಒಬ್ಬ ಮಹಿಳೆ ಬೈಲಹೊಂಗಲದಂತಹ ದೊಡ್ಡ ತಾಲೂಕಿಗೆ ಅಧಿಕಾರಿಯಾಗಿ ಸಾವಿರಾರು ಶಿಕ್ಷಕರನ್ನು ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಪಡೆದಿದ್ದಾರೆ.
ಜಿ.ಪಂ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿ ಇವರು ಶಿಕ್ಷಣ ಕ್ಷೇತ್ರದ ಪ್ರತಿಯೊಂದು ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದರು. ನಮ್ಮ ಕಿತ್ತೂರು ಹಾಗೂ ಬೈಲಹೊಂಗಲ ಕ್ಷೇತ್ರದ ಮನೆಮಗಳು ಇದ್ದಂತೆ ಇತಂಹ ಅಧಿಕಾರಿಗೆ ಇಂದು ನಾವು ಊಡಿ ತುಂಬಿ ಮನೆಯ ಮಗಳಂತೆ ಬಿಳ್ಕೊಡುತ್ತೇವೆ ಎಂದರು. ಸಮಾಜ ಸೇವಕ ಕೃಷ್ಣಾಜಿ ಕುಲಕರ್ಣಿ, ಬೆಳಗಾವಿ ಜಿಲ್ಲಾ ವಿಷಯ ಪರೀವಿಕ್ಷಕರು ಅಧಿಕಾರಿ ಶ್ರೀದೇವಿ ನಾಗನೂರ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್ ಕಸಾಳೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಜ್ಜಪ್ಪ ಅಂಗಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಸ್ತೂರೆಮ್ಮ ಪಾಟೀಲ, ಅಶ್ವಿನಿ ಪಾಟೀಲ, ಮಹಾದೇವಿ ಕೋಟಗಿ, ಮಂಜುಳಾ ಮರಿತಮ್ಮನವರ, ಕವಿತಾ ಬೆಳಗಾವಿ ಶಿಕ್ಷಕರಾದ ಅನ್ವರ ದೇವರದವರ, ವಿನಾಯಕ ಮಿರಜಕರ, ಎಸ್.ಬಿ ಮಡಿವಾಳರ, ಮಂಜುನಾಥ ಮಡಿವಾಳರ, ಹಾಗೂ ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳು, ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು. ಡಿ.ಪಿ.ಇ.ಪಿ ಶಾಲೆಯ ಪ್ರಧಾನ ಗುರುಗಳಾದ ಎಸ್ .ವ್ಹಿ ಘಂಟಿ ಸ್ವಾಗತಿಸಿ ನಿರೂಪಿಸಿದರು. ಸರಕಾರಿ ಮಾದರಿ ಶಾಲೆಯ ದೈಹಿಕ ಶಿಕ್ಷಕರಾದ ರಾಮಣ್ಣಾ ತೋರಣಗಟ್ಟಿ, ಪ್ರಾಸ್ಥಾವಿಕ ಮಾತನಾಡಿ ವಂದಿಸಿದರು.


ನೇಗಿನಹಾಳ ಗ್ರಾಮದ ರೋಹಿಣಿ ಬಾಬಾಸಾಹೇಬ ಪಾಟೀಲ ಅವರು ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಅವರನ್ನು ಸತ್ಕರಿಸಿ ಬಿಳ್ಕೊಟ್ಟರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!