Breaking News
Home / featured / ತಟ್ಟೆ ಬಾರಿಸಲು ಹೇಳುವುದಲ್ಲ, ರೋಗದ ವಿರುದ್ಧ ಹೋರಾಡಲು ವ್ಯವಸ್ಥೆ ರೂಪಿಸಬೇಕು: ನಿಜಗುಣಾನಂದ ಸ್ವಾಮೀಜಿ

ತಟ್ಟೆ ಬಾರಿಸಲು ಹೇಳುವುದಲ್ಲ, ರೋಗದ ವಿರುದ್ಧ ಹೋರಾಡಲು ವ್ಯವಸ್ಥೆ ರೂಪಿಸಬೇಕು: ನಿಜಗುಣಾನಂದ ಸ್ವಾಮೀಜಿ

ಬೆಳಗಾವಿ: ರೋಗದ ವಿರುದ್ಧ ಹೋರಾಡಲು ವ್ಯವಸ್ಥೆ ರೂಪಿಸಬೇಕೇ ಹೊರತು, ಕೈಗೆ ತಟ್ಟೆ ಕೊಟ್ಟು ಬಾರಿಸಿ ಎಂದು ಹೇಳುವುದಲ್ಲ ಎಂದು ಬೈಲೂರು ನಿಷ್ಕಲ್ಮಶ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಸೋಮವಾರ(ಜುಲೈ-13) ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೂತನ ಕಾರು ಚಾಲನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೋಗದ ವಿರುದ್ಧ ಹೋರಾಟಕ್ಕೆ ವ್ಯವಸ್ಥೆ ರೂಪಿಸಬೇಕಿತ್ತು. ಆದರೆ, ಕೈಗೆ ತಟ್ಟೆ ನೀಡಿ ಬಾರಿಸಿ ಎಂದರು. ಇಡೀ ದೇಶವೆ ತಟ್ಟೆಯನ್ನು ಬಾರಿಸಿತು. ಇದಕ್ಕೆ ಕೆಲ ಸ್ವಾಮೀಜಿಗಳು ಕೈಜೋಡಿಸಿದರು. ಅಲ್ಲದೆ, ಜನರಿಗೆ ವಿಜ್ಞಾನ-ತಂತ್ರಜ್ಞಾನ ಅರಿವನ್ನು ಕೊಡಬೇಕಿದ್ದ ಇಂದಿನ ಸಮಾಜದಲ್ಲಿ ತಟ್ಟೆ ಬಾರಿಸಿ ಎಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.

ದೇಶದ ಯುವಕರ ಕೈಯಲ್ಲಿ ಧರ್ಮದ ಧ್ವಜವನ್ನು ನೀಡಿ ದ್ವೇಷವನ್ನು ಬೆಳೆಸುವ ಬದಲಿಗೆ ಕಾಯಕದ ಧ್ವಜವನ್ನು ನೀಡಬೇಕು ಎಂದ ಅವರು, ಇಂದು ದೇಶದಲ್ಲಿ ಶಬ್ದ ಆಳುತ್ತಿದೆ. ಅದನ್ನು ಆಳುತ್ತಿರೋರು ಪೂಜಾರಿಗಳು, ಪಂಚಾಂಗದವರು. ಇವರೆಲ್ಲರೂ ಶಬ್ದದ ಮೇಲೆ ಜಗತ್ತನ್ನು ಕಟ್ಟುತ್ತಾರೆ ಎಂದರು.

ಜಗತ್ತಿನ ಕಷ್ಟಕ್ಕೆ ದೇವರು ಪರಿಹಾರವಲ್ಲ. ಪರಿಹಾರ ಆಗಿದ್ದರೆ, ಭೂಮಿಯಲ್ಲಿ ಯಾರಿಗೂ ಕಷ್ಟವೇ ಇರುತ್ತಿಲ್ಲ. ಆದರೆ, ನಮ್ಮ ಕಷ್ಟಕ್ಕೆ ಬುದ್ಧಿಮತ್ತೆ, ಅರಿವೇ ಪರಿಹಾರ ಎಂಬುದನ್ನು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಸಮಾಜದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಭಯ, ಭಕ್ತಿ ಹಾಗೂ ಬದುಕಬೇಕೆಂಬ ನಿಮ್ಮೆಲ್ಲರ ಆಸೆಗಳನ್ನೇ ನಮ್ಮಂಥ ಸ್ವಾಮೀಜಿಗಳು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು.

ದೇಶದ ಜನರಲ್ಲಿ ಇಂದಿನ ಆಧುನಿಕತೆಯ ಯುಗದಲ್ಲಿಯೂ ಕೆಳಮಟ್ಟದ ವಿಚಾರಧಾರೆಗಳಿವೆ. ಹೀಗಾಗಿ, ಸಮಾಜದಲ್ಲಿ ಇಂದು ಕೂಡ ಅಂಧಶ್ರದ್ಧೆ, ಕಂದಾಚಾರ ಹಾಗೂ ಮೂಢನಂಬಿಕೆಗಳು ಜನರಲ್ಲಿ ನೆಲೆಯೂರಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!