Breaking News
Home / featured / ಬುದ್ದ ಬಸವರ ಸಿದ್ದಾಂತ ಆರಾಧನೆಯಲ್ಲ, ಶೋಧನೆ.

ಬುದ್ದ ಬಸವರ ಸಿದ್ದಾಂತ ಆರಾಧನೆಯಲ್ಲ, ಶೋಧನೆ.

ಕೊಪ್ಪಳ : ಜಗತ್ತಿನ ಧಾರ್ಮಿಕ ಲೋಕದಲ್ಲಿ ವಿಭಿನ್ನವಾಗಿ ಕಾಣುವ ಎರಡು ವ್ಯೆಕ್ತಿತ್ವಗಳೆಂದರೆ ಅದು ಬುದ್ದ ಮತ್ತು ಬಸವ ಯಾಕಂದರೆ ಬಹುತೇಕ ಧರ್ಮಗಳ ಗ್ರಂಥ ಹೇಳಿದೊಡನೆ ಅದನ್ನು ನಂಬಿ ಬಿಡುವರು.ಹೇಳಿದದ್ದು ಸಕಾರಣವಾಗಿದೇಯಾ? ಇಲ್ಲವಾ ? ಎಂದು ಯೋಚಿಸುವುದಿಲ್ಲ. ಅದನ್ನು ನಾವು ಶ್ರದ್ದೆ ಭಕ್ತಿ ಎಂದು ಕರೆಯುವುದು. ಯಾವುದನ್ನು ಅವಲೋಕಿಸಿದೆ ನಂಬಿ ಬಿಡುವುದಕ್ಕೆ ಶ್ರುತಿ ಎನ್ನುವರು.

ಈ ಜಗತ್ತಿನ ವೇದ, ಬೈಬಲ್, ಕುರಾನ್, ಮೊದಲಾದ ಧರ್ಮಗ್ರಂಥಗಳು ಶ್ರುತಿವರ್ಗಕ್ಕೆ ಸೇರುತ್ತವೆ. ಅವುಗಳನ್ನು ನಂಬುವವರಿಗೆ ಅವುಗಳಿಗಿಂತಲೂ ಹೆಚ್ಚಿನ ಪ್ರಮಾಣ್ಯವೇನು ಇಲ್ಲ. ಆಯಾ ಧರ್ಮದವರು ಅವರವರ ಧರ್ಮಗ್ರಂಥಗಳನ್ನು ದೇವರೆ ಹೇಳಿದ್ದಾನೆಂದು , ಹೇಳಿಸಿದ ನೆಂದು ನಂಬುತ್ತಾರೆ. ಆ ನಂಬಿಕೆಗೆ ನಂಬಿಕೆಯೊಂದನ್ನೆ ಪ್ರಮಾಣವಾಗಿ ಹೇಳುತ್ತಾ ಇನ್ನಾವ ಹೆಚ್ಚಿನ ಕಾರಣವನ್ನು ಕೊಡಲಾರರು. ಸ್ವತಃ ಸಿದ್ದವಾದುದಕ್ಕೆ ಕಾರಣಗಳೇಕೆ ಹುಡುಕಬೇಕು? ಸತ್ಯನಿಧಿಯಾದ ದೇವರಿಂದ ಬಂತ ಗ್ರಂಥಗಳನ್ನು ಅನುಮಾನಿಸಲು ಸಾಧ್ಯವೇ? ದೇವ ಗ್ರಂಥಗಳಲ್ಲಿ ಅಸತ್ಯವಿರಲು ಸಾಧ್ಯವೇ? . ಹಾಗೆ ಒಂದು ವೇಳೆ ಆ ಧರ್ಮ ಗ್ರಂಥಗಳ ಶ್ರುತಿ ನಮ್ಮ ಅನುಭಾವಕ್ಕೆ ವಿರುದ್ದವಾಗಿದ್ದರೆ ಅದು ಧರ್ಮ ಗ್ರಂಥಗಳ ತಪ್ಪಲ್ಲ ಅದು ಅನುಭಾವದ ತಪ್ಪು ಅದನ್ನು ನಾವು ಸುಧಾರಿಸಕೊಳ್ಳಬೇಕೆಂದು ಹೇಳುತ್ತಾರೆ. ಹಾಗೆ ಮಾಡದಿದ್ದರೆ ಧರ್ಮಗ್ರಂಥಗಳನ್ನು ನಂಬದವರಿಗೆ ನರಕ ಸ್ರಷ್ಠಿಯಾಗುತ್ತೆ ಎಂದು ಹೇಳುವವರು ಇಲ್ಲವೇ ನರಕದರ್ಶನ ತಾವೇ ಮಾಡಿಸಿ ಇದು ದೇವರ ಆದೇಶವೆಂದು ಹೇಳಿ ಬಿಡುತ್ತಾರೆ.

ವಿಶ್ವ ಗುರು ಬಸವಣ್ಣ

ಆದರೆ ವಿಚಾರಮತಿಗಳಿಗೆ ಇದು ಸಾಕಾಗುವುದಿಲ್ಲ. ವಿಚಾರ, ಬುದ್ದಿ, ಯುಕ್ತಿ, ಇರುವ ಯಾರು ಸಹ ಇಂತಹ ಶ್ರುತಿ ಆಧಾರಿತ ಮತ ಧರ್ಮಗ್ರಂಥಗಳನ್ನು ಒಪ್ಪುವುದಿಲ್ಲ. ಅವರು ಪ್ರತಿಯೊಂದರಲ್ಲಿಯೂ ಸಹ ಕಾರಣಗಳನ್ನು ಹುಡುಕಿ ತಿಳಿದುಕೊಳ್ಳವುದು ಮತಿಯ ಲಕ್ಷಣ. ಇಂತಹ ವಿಚಾರಮತಿಗಳಾಗಿ ನಮಗೆ ಕಾಣುವವರು ಬುದ್ದ ಬಸವ. ಎಲ್ಲಾ ಮತಧರ್ಮಗಳಂತೆ ಬೌದ್ದ ಸಾಹಿತ್ಯವಾಗಲಿ ವಚನ ಸಾಹಿತ್ಯವಾಗಲಿ ನಮ್ಮದೇ ಪರಮ ಸತ್ಯ ಎನ್ನುವ ಮೊಂಡಾಟಕ್ಕೆ ಹೋಗುವುದಿಲ್ಲ ವಾದಿಸುವುದು ಇಲ್ಲ. ” ಯಾವುದೇ ಧರ್ಮಗ್ರಂಥ ಹೇಳಿದೆ ಎಂದಾಗಲಿ ಯಾವುದೇ ಧರ್ಮಗುರು ಹೇಳಿದನೆಂದಾಗಲಿ, ಅತಿ ಪುರಾತನವಾದ ಸಂಪ್ರದಾಯವೆಂದಾಗಲಿ ,ಯಾರೇ ಹಿರಿಯರು ಹೇಳಿದರೆಂದಾಗಲಿ, ನಂಬಬೇಡ . ಆ ವಿಷಯವನ್ನು ನಿನ್ನ ವಿಚಾರದ ಹೊರೆಗಲ್ಲಿಗೆ ಹಚ್ಚಿ ಯಾವುದು ಬಹುಜನ ಹಿತಾಯ ಬಹುಜನ ಸುಖಃಾಯ ಇದ್ದರೆ ಮಾತ್ರ ಒಪ್ಪು” ಎನ್ನುವ ಬುದ್ದನ ಮಾತು ಮತಿಯ ಅನುಭವದ ಆಧಾರದ ಮೇಲಿದೆ.

ಅದರಂತೆ ಬಸವ ” ಅರಿದೊಡೆ ಶರಣ ಮರೆದೊಡೆ ಮಾನವ” ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡು ನೋಡಯ್ಯಾ” ಎಂದು ಹೇಳುತ್ತಾ ಅನುಭಾವ ಸಿದ್ದಾಂತವನ್ನು ಹೇಳಿ ನಮ್ಮ ಅರಿವನ್ನು ನಮಗೆ ಗುರವಾಗಿಸಿದ್ದು ಬುದ್ದ ಮತ್ತು ಬಸವ.

ಹೀಗೆ ಬುದ್ದ ಬಸವರ ಸಿದ್ದಾಂತಗಳ ಸ್ವಭಾವ ಆರಾಧನೆಯಲ್ಲ ಶೋಧನೆ. ಅವರು ಎಂದೂ ತಾವು ಹೇಳಿದ್ದು ಅಂತಿಮಸತ್ಯವೆಂದಾಗಲಿ , ಅದೇ ಪರಮ ಸತ್ಯವೆಂದಾಗಲಿ, ಎಲ್ಲಿಯೋ ಹೇಳಿಲ್ಲ. ಅದುವೇ ಶ್ರೇಷ್ಠವೆಂದಾಗಲಿ ಹೇಳಲೇ ಇಲ್ಲ. ಆದರೆ ದುರಂತವೆನ್ನುವಂತೆ ಇಂದು ಆ ಬುದ್ದ ಬಸವರನ್ನು ಆದರ್ಶವಾಗಿ ಕಂಡುಕೊಂಡ ಬಹುತೇಕರು ಈ ಇಬ್ಬರ ಮಹಾನ್ ಪುರುಷರ ವಿಚಾರಗಳನ್ನು ವಿಮರ್ಶೆಗೆ ಹಚ್ಚದೇ ಅವರು ಹೇಳಿದ್ದೆ ಅಂತಿಮ ಸತ್ಯವೆನ್ನುವಂತೆ ವಿಮರ್ಶಿಸುವರನ್ನು ಮನ ಬಂದಂತೆ ಹೀಯಾಳಿಸುವುದು ನೋಡಿದರೆ “ಸ್ವತಂತ್ರಮತಿ” ಯಾದ ಅವರ ವಿಚಾರಗಳನ್ನು ಜಾತಿ ಮತ ಧರ್ಮಗಳ ಮೇಲಿನ ಮಮಕಾರಕ್ಕಾಗಿ ಎಷ್ಟು ಸಂಕುಚಿತ ಮಾಡುವ ಕೆಲಸ ನಡೆದಿದೆ ಎಂದು ಅರ್ಥವಾಗುತ್ತದೆ. ಬುದ್ದ ಬಸವರನ್ನು ಸಾಂಸ್ಥಿಕ ಮತಧರ್ಮಕ್ಕೆ ಕಟ್ಚಿಹಾಕಬೇಡಿ. ಇವನಾರವ ಎನ್ನದೇ ಇವ ನಮ್ಮವ ಎಂದ ವಿಶಾಲ ತತ್ವ ಅವರದು.

ಬುದ್ದ ಬಸವರ ವಿಚಾರಗಳಿಗೆ ಕೊನೆಯಿಲ್ಲ ಅವು ನಿರಂತರ. ಅವರ ಸಿದ್ದಾಂತಗಳ ಸ್ವಭಾವ ಆರಾಧನೆಯಲ್ಲ, ಶೋಧನೆ. ಅವರು ಎಂದೆಂದಿಗೂ ಸ್ವತಂತ್ರಮತಿಗಳು.

ಡಾ. ರಾಜಶೇಖರ ನರನಾಳ
ಕೊಪ್ಪಳ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

Leave a Reply

Your email address will not be published. Required fields are marked *

error: Content is protected !!