Breaking News
Home / featured / ಕಿತ್ತೂರು ಸಂಸ್ಥಾನದ ಪುಟಗಳು

ಕಿತ್ತೂರು ಸಂಸ್ಥಾನದ ಪುಟಗಳು

✍️(ಸಂಗ್ರಹ) ಭೀಮನಗೌಡ ಜಿ ಪರಗೊಂಡ. ವಕೀಲರು.

ಚನ್ನಮ್ಮನ ಕಿತ್ತೂರು : ಬೆಳಗಾವಿ-ಧಾರವಾಡ ಗಳ ಮಧ್ಯದಲ್ಲಿ ಎರಡು ಸಣ್ಣ ಗುಡ್ಡಗಳ ಹಿಂದೆ ಹಸಿರು ಗಿಡಗಳ ಜಮೀನಿನಲ್ಲಿರುವ ಬಂದು ಸಣ್ಣದಾದ ಪಟ್ಟಣ ಕಿತ್ತೂರು. ಎರಡು ನೂರು ವರ್ಷಗಳಿಗೂ ಮಿಗಿಲಾದ ಇತಿಹಾಸದ ಉಳ್ಳ ಕನ್ನಡ ಅರಸುಮನೆತನ.164 ವರ್ಷಗಳ ಕಾಲ ವೈಭವಪೂರ್ಣವಾಗಿ ಮೆರೆದ ಸಣ್ಣ ಸಂಸ್ಥಾನದ ರಾಜಧಾನಿ ಈ ಕಿತ್ತೂರು. ಬಿಟಿಷ ಚಕ್ರಾಧಿಪತ್ಯದ ವಿರುದ್ಧ ಭರತಖಂಡದಲ್ಲಿ ಮೊದಲ ಹೋರಾಡಿದ ರಾಜ್ಯ ಸಂಸ್ಥಾನಗಳಲ್ಲಿ ಕಿತ್ತೂರು ಮೊದಲ ರಾಜ್ಯ. ಬ್ರಿಟಿಷರ ವಿರುದ್ಧ ಹಲವು ವಿಧಗಳಲ್ಲಿ ಜೈಶ್ರೀ ತನ್ನ ರಾಜ್ಯವನ್ನು ತಮ್ಮ ರಕ್ಷಿಸಿಕೊಂಡ ರಾಣಿ ಚೆನ್ನಮ್ಮ ಸಣ್ಣ ಸಂಸ್ಥಾನದ ರಾಣಿ ಯಾದರು ದೇಶಭಿಮಾನಿ ಅದಮ್ಯ ಮತ್ತು ಧೈರ್ಯಶಾಲಿ ಮಹಿಳೆ. ಇಂತಹ ರಾಣಿ ಚೆನ್ನಮ್ಮ ನವರ ಶೌರ್ಯ ಸಾಹಸ ಕಥನಗಳು ಬಗ್ಗೆ ಲಾವಣಿಗಳಲ್ಲಿ ಜನಪದ ಹಾಡುಗಳಲ್ಲಿ ಇಂದಿಗೂ ಕೂಡ ಜೀವಂತವಾಗಿದ್ದಾಳೆ.

ಮೂಲ:
ಕಿತ್ತೂರು ಅರಸುಮನೆತನ ಆರಂಭವಾಗುವುದೇ 1585 ರಿಂದ.ಇದರ ಸಂಸ್ಥಾಪಕರಾದ ಆಗಿರಿ ಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲೇಶ್ ಎಟ್ಟಿ ಎನ್ನುವ ಸೇನಾನಿಗಳು ಮೈಸೂರು ಸಂಸ್ಥಾನದ ಸಾಗರಕ್ಕೆ ಸೇರಿದವರು. ನಂತರ ಅವರು ವಿಜಯಪುರದ ಆದಿಲ ಶಾಹಿ ಅವರಿಂದ ಕಿತ್ತೂರು ಈ ನಾಡನ್ನ ಬಳವಳಿಯಾಗಿ ಪಡೆದರು.
ವಿಜಯಪುರದ ಆಗಿರಿ ಶಾಹಿಯಿಂದ ಶಂಶೇರ್ ಜಂಗ ಬಹುದೂರ್ ಎಂಬ ಪ್ರಶಸ್ತಿಯನ್ನು ಪಡೆದಿದ್ದ ಹಿರೇ ಮಲ್ಲಶೆಟ್ಟಿ ಯ ಶೌರ್ಯ ಸಾಹಸ ಮತ್ತು ಸೇವೆಗೆ ಪ್ರತಿಫಲವಾಗಿ ಆದಿಲ್ಶಾಹಿ ಹುಬ್ಬಳ್ಳಿ ಪರ ಗಣವನ್ನು ಹುಬ್ಬಳ್ಳಿ ಪ್ರಾಂತ್ಯದ ಸಂದೇಶ ಮುಖಿ ದಾನವಾಗಿ ನೀಡಿದ.ಆಗ ಹಿರೇ ಮಲ್ಲಗಟ್ಟಿ ವಿಜಯಪುರದಿಂದ ಬಂದು ಬೆಳಗಾವಿ ಜಿಲ್ಲೆಯ ಈಗಿನ ಸಂಪಗಾವ್ ಊರಲ್ಲಿ ನೆಲೆನಿಂತು ಕಿತ್ತೂರು ರಾಜೀವ್ ಎಂದು ಕರೆಯಲ್ಪಟ್ಟು ನಾಡಿನ ಅಧಿಪತಿಯಾಗಿ ರಾಜವಾಳ ತೊಡಗಿದ. ಅಂದಿನಿಂದ 18 124 ರವರೆಗೆ ಎರಡುನೂರು 39 ವರ್ಷಗಳ ಕಾಲ ಕಿತ್ತೂರು ರಾಜ್ಯ ಸಂತಾನ ಅಸ್ತಿತ್ವದಲ್ಲಿತ್ತು.

ಅಲ್ಲಪ್ಪಗೌಡ ಸರದೇಸಾಯಿ:
ಕಿತ್ತೂರು ಸಂಸ್ಥಾನದ ದೀರ್ಘಕಾಲದ ಇತಿಹಾಸದಲ್ಲಿ 12 ಜನರ ಅರಸರು ಹೋದರು. ಅವರಲ್ಲಿ ಅತ್ಯಂತ ಪ್ರಖ್ಯಾತ ಅಂದರೆ ಅಲ್ಲಪ್ಪ ಗೌಡ ಸರದೇಸಾಯಿ. ಈತ ಕಿತ್ತೂರು ಮನೆತನದ ಐದನೇ ಅಧಿಪತಿ ಈತನ ಕಾಲದಲ್ಲಿಯೇ ಕಿತ್ತೂರು ರಾಜ್ಯದ ರಾಜಧಾನಿಯಾಯಿತು.1682 ರಲ್ಲಿ ಕಿತ್ತೂರಿಗೆ ಬಂದು ನೆಲೆಸಿದ. ಅದಕ್ಕೂ ಮೊದಲು ಈ ಊರನ್ನ ಬೀಜಗನಹಳ್ಳಿ ಅಂತ ಕರೀತಾ ಇದ್ರು. ಅವನ ರಾಜ ಕಾಲದಲ್ಲಿ ರಾಜ ಬಿತ್ತನೆಯಾಗಿ ಸಂಪಗಾವ್ ಬೀಡಿ ಪರಗಣಗಳು ಕಿತ್ತೂರು ಸೇರಿದವು.ಮಲ್ಲಪ್ಪಗೌಡನ ಕಾಲದಲ್ಲಿ ವಿಜಯಪುರದ ರಾಜ್ಯದೊಂದಿಗೆ ಯುದ್ಧ ಮಾಡುವ ಪ್ರಸಂಗಗಳು ಬಂದಾಗ ತನ್ನ ದೇಶಗತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಅವರೊಡನೆ ಹೋರಾಡಿ ಯಶಸ್ವಿಯಾಗಿದ್ದ. ಈಗಿನ ಅಳಿದುಳಿದ ಕಿತ್ತೂರಿನ ಕೋಟೆಯನ್ನು ಇವನ ಕಾಲದಲ್ಲಿಯೇ ಕಟ್ಟಲಾಯಿತು. ಹಾಳಾಗದ ಮುನ್ನ ಈ ಅರಮನೆಯ ಮುಂದಿನ ಚಾವಣಿ 30 ಅಡಿ ಅಗಲ ಹಾಗೂ 100ಅಡಿ ಉದ್ದವಾಗಿತ್ತು. ಅದರ ಮಾಳಿಗೆಯನ್ನು ಎತ್ತಿಹಿಡಿಯಲು ಬಹುದೊಡ್ಡ ಸಾಗವಾನಿ ಕಂಬಗಳ ಸಾಲು ಅತ್ಯಂತ ಗಾಂಭೀರ್ಯ ಒದಗಿಸಿತ್ತು.ಮಾಳಿಗೆ ಅತ್ಯಂತ ಭವ್ಯವಾಗಿದ್ದು ಸಾಗವಾನಿ ಕಟ್ಟಿಗೆಯಿಂದ ನಿರ್ಮಾಣವಾಗಿತ್ತು ಅರಮನೆಗೆ 3 ಅಂತಸ್ತುಗಳಿದ್ದವು. ಅದರಲ್ಲಿ ಅನೇಕ ಊಟದ ಮನೆಗಳು ಅಡಿಗೆಯ ಮನೆಗಳು ,ಸ್ನಾನ ಗೃಹಗಳಿದ್ದವು.ಊಟದ ಮನೆ ಒಮ್ಮೆಲೆ ಸಾವಿರ ಜನ ಊಟ ಮಾಡಲು ಅನುಕೂಲವಾಗುವಷ್ಟು ವಿಶಾಲವಾಗಿತ್ತು. ಮನೆಯ ಅಂಗಳದಲ್ಲಿ ಆನೆ ಒಂಟೆ ಕುದುರೆಗಳ ವಾಸಸ್ಥಾನಗಳು ಇದ್ದವು. ಅರಮನೆಯ ಮುಂಭಾಗದಲ್ಲಿ ಸಗರಕಟ್ಟೆ ಎಂಬ ವಿಶಾಲವಾದ ಕಟ್ಟೆ ಇದ್ದಿತ್ತು. ಈ ಸದರ ಕಟ್ಟೆಯ ವಿಶೇಷ ಎಂದರೆ ಇದು ಅನ್ಯಾಯ ಇಲ್ಲವೇ ತೊಂದರೆ ಕಾದ ಪ್ರಜೆ ರಾಜನ ಪೆಟ್ಟಿಗೆ ಬಂದಾಗ ಕಾಯುತ್ತ ಕುಳಿತುಕೊಳ್ಳುವ ತಾಣವಾಗಿತ್ತು.

ಮುದಿ ಮಲ್ಲಪ್ಪಾಗೌಡ:
ಮಲ್ಲಪ್ಪಗೌಡನ ತರವಾಯ ಆರನೇ ಅಧಿಪತಿಯಾದ ಮುದಿ ಮಲ್ಲಪ್ಪಗೌಡ ಸರದಾರನು ಅಧಿಕಾರಕ್ಕೆ ಬಂದನು. ಅವನು 1691 ರಿಂದ 1699 ರವರೆಗೆ ಕಿತ್ತೂರು ರಾಜ್ಯವನ್ನಾಳಿದನು.ಅತ್ಯಂತ ಶಿವರಾಂ ಆಗಿದ್ದ ಈತನ ಯುದ್ಧದಲ್ಲಿ ತೋರಿದ ಶೌರ್ಯಕ್ಕೆ ಮೆಚ್ಚಿ ಆದಿಲ್ಶಾಹಿ ಈತನಿಗೆ ಶಮ ಶೇರ ಜಂಗ ಬಹುದ್ದೂರ್ ಮತ್ತು ದಿಲ್ವಾರ ಖಾನ್ ಬಹುದ್ದೂರ್ ದಿಲಾವರ್ ಜಂಗಮ ಬಿರುದುಗಳನ್ನು ಕೊಟ್ಟಿದ್ದರು.ಇದೇ ಅವಧಿಯಲ್ಲಿ ಮೊಘಲರ ಸಾವು ರಂಗೆ ಬನು ವಾದಿರಾಜರ ತೋರಿಸಿ ಬಿಜಾಪುರ ರಾಜ್ಯವನ್ನು ವಶಪಡಿಸಿಕೊಂಡನು. ಆತನು ಕಿತ್ತೂರನ್ನು ಒಳಗೊಂಡ ಸವಣೂರು ವಿಭಾಗಕ್ಕೆ ರೌಫ ಖಾನ್ ಎಂಬುವನ ನವಾಬನ್ನನಾಗಿ ನೇಮಿಸಿದನು.ಅವನ ಜೊತೆಗೆ ಮುದಿಮಲ್ಲಪ್ಪ ಸೇರಿ ದೇಸಾಯಿ ಅವರು ಸಂಸ್ಕೃತ ಸಂಸ್ಥಾನದ ಮುಂದುವರಿಕೆಯ ಬಗ್ಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಂಡರು. ಆತನ ನಂತರ ಬಂದ ಪ್ರಮುಖ ಅರಸುರುಗಳಲ್ಲಿ ಮಹತ್ವದ ವ್ಯಕ್ತಿ ಶಿವನಗೌಡ ಸರ್ ದೇಸಾಯಿ. ಅವನು 1717 ರಿಂದ 1734 ವರೆಗೆ ಆಳಿದನು. ಔರಂಗಜೇಬನಿಂದ ಈತ ಅನೇಕ ಬಿರುದುಗಳನ್ನು , ಸನದುಗಳನ್ನು ಪಡೆದುಕೊಂಡನು. ಅವನ ತರುವಾಯ ಮಾಳವ ರುದ್ರಗೌಡ ಅಲಿಯಾಸ್ ಪಕೀರ ರುದ್ರ ಸರ್ಜಾ ಪಟ್ಟಕ್ಕೆ ಬಂದನು. ಆತನು 1734 ರಿಂದ 1749 ರವರೆಗೆ ರಾಜ್ಯ ಆಳಿದನು. ಆತನ ಹೆಂಡತಿ ಮಲ್ಲಮ್ಮ ಬಹಳ ಪ್ರಭಾವ ಮತ್ತು ಧೈರ್ಯಶಾಲಿ ಮಹಿಳೆ. ಆಕೆ ರಾಜ್ಯದ ಎಲ್ಲಾ ವಿಷಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಳು. ರಾಣಿ ಮಲ್ಲಮ್ಮ ಎಲ್ಲಾ ರೀತಿಯಿಂದ ಯೋಗ್ಯ ಸಹಧರ್ಮಿಣಿ ಯಾಗಿದ್ದಳು. ರುದ್ರಗೌಡರು ನಿರಂಜನಿ ಯಂಬ ಓರ್ವ ಮುಸಲ್ಮಾನ ಹೆಣ್ಣಿನಲ್ಲಿ ಅನುರಕ್ತನಾಗಿ, ಅವಳನ್ನು ತನ್ನ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿಕೊಂಡು ಅವಳನ್ನು ಲಗ್ನವಾದ. ಅವರ ಪ್ರೇಮದ ಕಥೆ ಅನೇಕ ಕವಿಗಳ ಕಾವ್ಯ ವಸ್ತುವಾಯಿತು. ಜನ ಅದರ ಬಗ್ಗೆ ಹಾಡುಗಳನ್ನು ಕಟ್ಟಿ ಹಾಡಿದರು.ರುದ್ರಗೌಡ ನಿರಂಜನನ್ನು ಮದುವೆಯಾಗುವುದನ್ನು ಅವನ ತಮ್ಮ ಮಲ್ಲಪ್ಪ ಬಹಳ ವಿರೋಧಿಸಿದ. ಅವಿರೋಧ ನಿರರ್ಥಕ ವಾಯಿತು. ನಿರಂಜನ ಮಾದಕ ಸೌಂದರ್ಯಕ್ಕೆ ಮನಸೋತ ರುದ್ರಗೌಡ ಕಿತ್ತೂರಿನ ಉತ್ತರಭಾಗದಲ್ಲಿರುವ ದೇಶಂ ಊರಿನಲ್ಲಿ ಅವಳ ವಾಸಕ್ಕಾಗಿ ಒಂದು ಸುಂದರವಾದ ಮಹಲ ಒಂದನ್ನು ಕಟ್ಟಿಸಿದನು. ಅದು ನಿರಂಜನ್ ಮಹಲ್ ಎಂದು ಹೆಸರಾಗಿದೆ. ರುದ್ರಗೌಡ ತನ್ನ ಬಹಳ ಸಮಯವನ್ನು ಅವಳೊಂದಿಗೆ ಅಲ್ಲಿಯೇ ಕಳೆಯತೊಡಗಿದನು. ಇದರಿಂದ ರಾಜ್ಯದ ಎಲ್ಲಾ ಭಾರದ ಹೊಣೆಯನ್ನು ರಾಣಿ ಮಲ್ಲಮ್ಮ ಬೇಕಾಗಿತ್ತು.ಅವಳು ಅದಕ್ಕೆ ತಕ್ಕ ಯೋಗ್ಯತೆಯನ್ನು ಸಂಪಾದಿಸಿದಳು ಮತ್ತು ರಾಜ್ಯಭಾರವನ್ನ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದಳು. ರುದ್ರಗೌಡ ದೇಶಂ ಊರಿನಲ್ಲಿ ಭದ್ರವಾದ ಕೋಟೆಯನ್ನು ಕಟ್ಟಿಸಿದನು. ಅದು ಅವನ ನೆನಪಿಗಾಗಿ “ರುದ್ರಗಢ” ಎಂದು ಕರೆಯಲ್ಪಟ್ಟಿತು.

ಮುಂದುವರೆಯುವುದು….

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

Leave a Reply

Your email address will not be published. Required fields are marked *

error: Content is protected !!