Breaking News
Home / featured / ಬಸವ ಪರಂಪರೆಯ ಮಠಗಳಿಂದಾಗಿ ಧರ್ಮ-ಧರ್ಮದ ಸಾಹಿತ್ಯ ಉಳಿದಿದೆ

ಬಸವ ಪರಂಪರೆಯ ಮಠಗಳಿಂದಾಗಿ ಧರ್ಮ-ಧರ್ಮದ ಸಾಹಿತ್ಯ ಉಳಿದಿದೆ

ಬೆಳಗಾವಿ: ನಾಡಿನ ಬಸವ ಪರಂಪರೆಯ ಮಠಗಳಿಂದಾಗಿ ಧರ್ಮ ಉಳಿದಿದೆ. ಧರ್ಮದ ಸಾಹಿತ್ಯ ಉಳಿದಿದೆ. ಧರ್ಮ ಮತ್ತು ಧರ್ಮದ ಸಾಹಿತ್ಯದೊಂದಿಗೆ ಕನ್ನಡ ನಾಡು ನುಡಿ ಭಾಷೆ ಗಡಿ ಉಳಿದಿದೆ. ಬೆಳೆದಿದೆ.
ಬಸವ ಪರಂಪರೆಯ ಮಠಾಧೀಶರುಗಳು ಗುಡಿ ಗುಂಡಾರಗಳು ಕಟ್ಟಲಿಲ್ಲ. ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸಲಿಲ್ಲ. ಹೋಮ ಹವನ ಮಾಡಲಿಲ್ಲ. ಬದಲಿಗೆ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯಗಳು ಆರಂಭಿಸಿದರು. ಪ್ರಸಾದ ನಿಲಯಗಳ ಮೂಲಕ ಪ್ರಸಾದ ಮತ್ತು ಗುರುಕುಲಗಳ ಮೂಲಕ ಶಿಕ್ಷಣ ನೀಡಿದರು. ಪಠ್ಯ ಶಿಕ್ಷಣದ ಜೊತೆಗೆ ವಚನ ಕಲಿಸಿದರು. ಸಾತ್ವಿಕ ಬದುಕು ಕಲಿಸಿದರು. ಈ ಮಠಗಳ ಸೇವೆಯಿಂದಾಗಿ ಕನ್ನಡ ನಾಡು ಅನೇಕ ಸಾಹಿತಿಗಳನ್ನು ಪಡೆಯಿತು. ಬಹುದೊಡ್ಡ ಸಾಹಿತ್ಯ ಮೂಡಿ ಬಂತು.

ಬಸವ ಪರಂಪರೆಯ ಮಠಗಳು ಮೊದಲಿನಿಂದಲೇ ದಾಸೋಹದ ಪರಂಪರೆಯನ್ನು ರೂಢಿಸಿಕೊಂಡು ಬಂದಿವೆ. ದಾಸೋಹದ ಜೊತೆಗೆ ಶಿಕ್ಷಣಕ್ಕಾಗಿ ದಾಸೋಹ ಪರಂಪರೆಗೆ ನಾಂದಿ ಹಾಡಿದವರು ನಾಗÀನೂರು ರುದ್ರಾಕ್ಷಿಮಠದ ಪೂಜ್ಯ ಶಿವಬಸವ ಶ್ರೀಗಳು. ಅಕ್ಷರ ಕಲಿಯುವ ಮಕ್ಕಳಿಗಾಗಿ ಪ್ರಸಾದ ನಿಲಯ ಆರಂಭವಾಗಿದ್ದು ನಾಗನೂರು ಮಠದಲ್ಲಿ. ಮಠದ ಮಕ್ಕಳ ಹಸಿವು ತಣಿಸಲು ಕಂತಿ ಭಿಕ್ಷೆ ನಡೆಸಿದರು. ನಾಡಿಗೆ ಬಹುದೊಡ್ಡ ಸಾಕ್ಷರರನ್ನು ನೀಡಿದರು.
ನಿಜಾಮರ ಆಡಳಿತದಿಂದ ಕನ್ನಡ ಕಮರಿ ಹೋಗುತ್ತಿದ್ದ ಆ ಕಾಲ ಘಟ್ಟದಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಉಚಿತ ಪ್ರಸಾದ ನಿಲಯ ಹಾಗೂ ಗುರುಕುಲ ಆರಂಭಿಸಿದವರು ಪೂಜ್ಯ ಚನ್ನಬಸವ ಪಟ್ಟದ್ದೇವರು. ಚನ್ನಬಸವ ಪಟ್ಟದ್ದೇವರು ಉಚಿತ ಪ್ರಸಾದ ನಿಲಯ ಹಾಗೂ ಗುರುಕುಲ ನಡೆಸಿದ್ದು ಒಂದು ದಂತ ಕಥೆ.
ಗುರುಕುಲದ ಮಕ್ಕಳಿಗಾಗಿ ಹಳ್ಳಿ ಹಳ್ಳಿ ತಿರುಗಿ ದವಸ ಧಾನ್ಯ ಸಂಗ್ರಹಿಸಿದರು. ಪ್ರತಿ ನಿತ್ಯ ಕಂತಿ ಭಿಕ್ಷೆ ಮೂಲಕ ಪ್ರಸಾದ ತಂದು ಮಕ್ಕಳಿಗೆ ಸಾಕಿದರು. ಪ್ರಸಾದ ಸವಿದು ಬೆಳೆದ ಅನೇಕ ಮಕ್ಕಳು ಕನ್ನಡ ನಾಡಿನ ಆಸ್ತಿಗಳಾದರು.
ಇಳಕಲ್ಲಿನ ಮಹಾಂತ ಅಪ್ಪಗಳು, ಗದುಗಿನ ತೋಂಟದಾರ್ಯ ಶ್ರೀಗಳು ಹೀಗೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಅನೇಕ ಮಠಾಧೀಶರುಗಳು ಧರ್ಮ ಶಿಕ್ಷಣದೊಂದಿಗೆ ಈ ಪೂಜ್ಯರುಗಳು ವ್ಯಸನ ಮುಕ್ತ ಸಮಾಜದ ಅಗತ್ಯೆತೆಯ ಬಗ್ಗೆ ಜಾಗೃತಿ ಮೂಡಿಸಿದರು. ಕರ್ನಾಟಕ ಏಕೀಕರಣ ಹೋರಾಟಕ್ಕೆ ಬೆನ್ನೆಲುಬಾಗುವ ಮೂಲಕ ಬಾಳೆ ಹಣ್ಣಿನಂತ ಕನ್ನಡ ನಾಡು ಉದಯವಾಗಲು ಮೈಲಿಗಲ್ಲಾದರು.

ಈ ನಡುವೆ ಬಿರುಗಾಳಿಯೆಂತೆ ಎದ್ದು ಬಂದ ಲಿಂಗಾನಂದ ಶ್ರೀಗಳು ಹಾಗೂ ಪೂಜ್ಯ ಮಾತಾಜಿಯವರ ಸೇವೆ ಅನುಪಮವಾದದ್ದು. ನಂದಿಯಾಗಿ ಮರೆಯಾಗಿ ಹೋಗುತ್ತಿದ್ದ ಬಸವಣ್ಣನವರನ್ನು ಮತ್ತೆ ಬಸವಣ್ಣನವರಾಗಿ ಸಮಾಜದ ಮುಂದೆ ತಂದು ಪ್ರತಿಷ್ಠಾಪಿಸಿದ್ದ ಶ್ರೇಯಸ್ಸು ಲಿಂಗಾನಂದ ಶ್ರೀಗಳು ಹಾಗೂ ಪೂಜ್ಯ ಮಾತಾಜಿಯವರಿಗೆ ಸಲ್ಲುತ್ತದೆ.
ವರ್ತಮಾನದಲ್ಲೂ ಶ್ರೀಮಠಗಳ ಸೇವೆ ಅನುಪಮವಾಗಿದೆ. ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಬಸವ ಧರ್ಮವನ್ನು ನಿರ್ಭಯ ಧರ್ಮ ಎಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಧರ್ಮ ಸಾಹಿತ್ಯ ಕನ್ನಡ ನಾಡು ನುಡಿಗೆ ಆಶ್ರಯರಾದ ಎಲ್ಲ ಪೂಜ್ಯರಿಗೆ ಅನಂತ ಕೋಟಿ ಶರಣು ಶರಣಾರ್ಥಿಗಳು.
ನಾಡಿನ ಪೂಜ್ಯರೊಂದಿಗೆ, ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಸಂವಿಧಾನದಲ್ಲೆ ಉಲ್ಲೇಖಿಸಿರುವ ದೇಶದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರಿಗೂ ಅನಂತ ಕೋಟಿ ನಮನಗಳು.

ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಕೊನೆಯ ದಿನವಾದ ಶುಕ್ರವಾರದಂದು ನಾಗನೂರು ರುದ್ರಾಕ್ಷಿಮಠದ ವಚನ ಅಧ್ಯಯನ ಕೇಂದ್ರದಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳಿಂದ ಆಶೀರ್ವಾದ ಪಡೆಯುವ ಮೂಲಕ ಎಲ್ಲ ಪೂಜ್ಯರಿಗೆ ಗೌರವ ಸಲ್ಲಿಸಿದ್ದೇನೆ ಎಂಬ ಧನ್ಯತಾ ಭಾವನೆ ಹೊಂದಿದ್ದೇನೆ. ಶ್ರೀ ಮಠದ ಅಲ್ಲಮಪ್ರಭು ಶ್ರೀಗಳು ಉಪಸ್ಥಿತರಿದ್ದರು.

ಧರ್ಮ ಗುರುವಿಗೆ ಗೌರವ ಸಲ್ಲಿಸಲು ಜುಲೈ 25 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿ ನಗರದ ಶ್ರೀ ಬಸವೇಶ್ವರ ಉದ್ಯಾನದಲ್ಲಿ ಶ್ರೀ ಬಸವೇಶ್ವರರ ಪ್ರತಿಮೆಯ ಬಳಿ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 26 ರಂದು ಲಾಕ್‍ಡೌನ್ ಇರುವ ಕಾರಣ ಜುಲೈ 27 ರಂದು ಬೈಲಹೊಂದಲ ತಾಲೂಕಿನ ತಿಗಡಿ ಗ್ರಾಮದಲ್ಲಿರುವ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಸಮಾಧಿಯ ಬಳಿ ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆ ತಾಯಿಯವರ ಸಂಸ್ಮರಣೆಯ ಹಾಗೂ ಸರ್ವ ಶರಣರಿಗೆ ಗೌರವ ಸಮರ್ಪಿಸುವ ಮೂಲಕ ಬಸವ ಪಂಚಮಿ ಕಾರ್ಯಕ್ರಮಗಳು ಸಮಾಪನಗೊಳ್ಳಲಿವೆ.
ಎಲ್ಲರಿಗೂ ಶರಣು ಶರಣಾರ್ಥಿಗಳು

ಆರ್.ಎಸ್.ದರ್ಗೆ
ಅಧ್ಯಕ್ಷ: ಬಸವ ಭೀಮ ಸೇನೆ.
ಮೋ.ನಂ.9986710560

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

Leave a Reply

Your email address will not be published. Required fields are marked *

error: Content is protected !!