Breaking News
Home / featured / ಕಿತ್ತೂರು ಸಂಸ್ಥಾನದ ಇತಿಹಾಸದ ಪುಟಗಳು-2 ರುದ್ರಗೌಡನ ಮರಣ

ಕಿತ್ತೂರು ಸಂಸ್ಥಾನದ ಇತಿಹಾಸದ ಪುಟಗಳು-2 ರುದ್ರಗೌಡನ ಮರಣ

ಚನ್ನಮ್ಮನ ಕಿತ್ತೂರು: ರುದ್ರಗೌಡರ ಆಳ್ವಿಕೆಯ ಕಾಲದಲ್ಲಿ 1746 ರಲ್ಲಿ ಸವಣೂರಿನ ನವಾಬ ಉಳಿದ ಭಾಗಗಳಿಗೆ ಕಿತ್ತೂರು ರಾಜ್ಯವನ್ನು ಮರಾಠರಿಗೆ ಬಿಟ್ಟುಕೊಡಬೇಕಾಯಿತು.ಆದಕಾರಣ ಅಂದಿನಿಂದ ಕಿತ್ತೂರಿನ ರಾಜರು ವಿಜಯಪುರದ ರಾಜ್ಯದಿಂದ ಮುಕ್ತರಾಗಿ ಪುಣೆಯ ಪೇಶ್ವೆಯರ ದಿನಕ್ಕೆ ಬಂದು ಅವರೊಂದಿಗೆ ರಾಜಕೀಯ ಸಂಬಂಧ ಬೆಳೆಸಿ ಕೊಳ್ಳಬೇಕಾಯಿತು.

ರುದ್ರ ಗೌಡನಿಗೆ ಗಂಡು ಸಂತಾನವಿರಲಿಲ್ಲ ಆದರೆ ಆತನ ತಮ್ಮ ಮಲ್ಲಪ್ಪ ನಿಗೆ ವೀರಪ್ಪಗೌಡ ಎಂಬ ಮಗನಿದ್ದ.ರುದ್ರಗೌಡ ನೂತನ ವೃದ್ಧಾಪ್ಯದ ನಂತರ ಯಾರು ಪಟ್ಟಕ್ಕೆ ಬರಬೇಕು ಎಂಬುದರ ಬಗ್ಗೆ ಚಿಂತಿಸತೊಡಗಿದನು.ಅವನು ತನ್ನ ತಮ್ಮನ ಮಗನಾದ ವೀರಪ್ಪಗೌಡ ನನ್ನು ಪಟ್ಟಕ್ಕೆ ತರಬೇಕೆಂದು ನಿರ್ಧರಿಸಿದನು.ಮಲ್ಲಪ್ಪನ ಹೆಂಡತಿ ತನ್ನ ಗಂಡನನ್ನೂ ರುದ್ರೇಗೌಡ ನೇಮಿಸಿದ್ದರಿಂದ ಆತ ತನ್ನ ಮಗನನ್ನು ದತ್ತು ತೆಗೆದುಕೊಳ್ಳುವ ಅಭಿಲಾಷೆ ಹೊಂದಿದ್ದಾನೆ ಎಂಬ ಸಂಗತಿಯನ್ನು ನಂಬಲಿಲ್ಲ. ತನ್ನ ಮಗನನ್ನು ಆತ ಮೋಸ ಮಾಡಿ ಕೊಲ್ಲಿಸುವ ಅಂಚಿನಲ್ಲಿ ಇರಬಹುದೆಂದು ಶಂಕಿಸಿ ಇವಳು ತನ್ನ ಮಗನೊಂದಿಗೆ ತಲೆತಪ್ಪಿಸಿಕೊಂಡು ಊರೂರು ಅಲೆದಳು. ಉಪ್ಪಿನಬೆಟಗೇರಿ ಯಲ್ಲಿರುವ ವ್ಯವಹಾರಸ್ಥರ ಮನೆಯಲ್ಲಿ ಕೆಲವು ಕಾಲ ಹಾಗೂ ಕಿತ್ತೂರಿನ ಕಲ್ ಮಠದಲ್ಲಿ ಕೆಲವು ದಿನ ಅವಳಿಗಳೆಂದು ತಿಳಿದುಬರುತ್ತದೆ.

ಕಲ್ಲು ಮಠದ ಸ್ವಾಮಿಗಳು ಕಿತ್ತೂರಿನ ರಾಜಗುರುಗಳು.ವೀರಪ್ಪಗೌಡ ಹಾಗೂ ಅವನ ತಾಯಿಯನ್ನು ಪತ್ತೆ ಹಚ್ಚಿ ಅವರಿರುವ ಕಡೆಗೆ ಸ್ವಂತ ರುದ್ರಗೌಡ ನೆ ಹೋಗಿ ತನ್ನ ತಮ್ಮನ ಹೆಂಡತಿಯ ಮನವೊಲಿಸಿ ಅವಳನ್ನು ಅವಳ ಮಗನೊಂದಿಗೆ ಕಿತ್ತೂರಿಗೆ ಕರೆತಂದು ಆತನನ್ನು ತನ್ನ ಉತ್ತರಾಧಿಕಾರಿಯೆಂದು ಕಿತ್ತೂರಿನ ಸಿಂಹಾಸನದ ಮೇಲೆ ಕುಡಿಸಿದನು ಆಮೇಲೆ ರುದ್ರಗೌಡ ನಿಶ್ಚಿಂತೆಯಿಂದ ಪ್ರಾಣ ಬಿಟ್ಟನು. ಅವನ ಎರಡನೇ ಹೆಂಡತಿ ನಿರಂಜನಿ ಯೂ ಸ್ವಲ್ಪಕಾಲದ ನಂತರ ಮರಣ ಹೊಂದಿದಳು. ರುದ್ರಗೌಡ ಮತ್ತು ನಿರಂಜನಿ ಯ ಸಮಾಧಿಗಳು ಈಗ ಕಿತ್ತೂರಿನ ಕಲ್ಲು ಪುರದಲ್ಲಿ ಅವುಗಳು ಇನ್ನೂ ಸುಸ್ಥಿತಿಯಲ್ಲಿವೆ.

ವೀರಪ್ಪಗೌಡನ ಆಡಳಿತ:
ಅದಾದನಂತರ ವೀರಪ್ಪಗೌಡ 1749 ರಿಂದ 1782ರವರೆಗೆ ರಾಜ್ಯವಾಳಿದನು. ಅದು ದೀರ್ಘವಾದ ಹಾಗೂ ಅನೇಕ ಮಹತ್ವದ ಘಟನೆಗಳು ಉಳ್ಳ ಆಳ್ವಿಕೆಯಾಗಿತ್ತು. ಮೈಸೂರಿನ ಹೈದರಾಲಿ ಪೇಶ್ವೆಯರ ತೋರಿಸಿ ಭಾಗದ ಒಡೆಯನಾದ.1778 ರಲ್ಲಿ ಹೈದರಾಲಿಯು ಬೆಳಗಾವಿ ಜಿಲ್ಲೆಯಿಂದ ಮಲಪ್ರಭಾ ನದಿಯ ದಕ್ಷಿಣ ಹಾಗೂ ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯ ದಕ್ಷಿಣಕ್ಕಿರುವ ಎಲ್ಲಾ ಪ್ರದೇಶವನ್ನು ಪೇಶ್ವೆಯರಿಂದ ವಶಪಡಿಸಿಕೊಂಡು ಈ ಭಾಗದ ಅಧಿಪತಿಯಾಗಿದ್ದನು.ವೀರಪ್ಪಗೌಡ ಹೈದರಾಲಿಯ ಜೊತೆ ಸಂಧಾನ ನಡೆಸಿ ಈ ಹಿಂದಿನಂತೆ ನಜರಾನಾ ಕೊಟ್ಟು ಕಿತ್ತೂರು ದೇಶ ಕತೆಯನ್ನು ಸ್ವತಂತ್ರವಾಗಿ ಇಟ್ಟುಕೊಂಡನು.1756 ರಿಂದ ಕಿತ್ತೂರಿನ ಅಧೀನದಲ್ಲಿ ಪರಸಗಡ, ಸಂಪಗಾವ ಮತ್ತು ಬಿಡಿ ಪರಗ ಣಗಳು ಸೇರಿದ್ದವು.1778 ರಲ್ಲಿ ಆತ ತಾಸಗಾವ ದ ಪಟವರ್ಧನ್ ಅನ್ನು ಸೋಲಿಸಿ, ಗೋಕಾಕ್ ಮತ್ತು ಸವದತ್ತಿ ಗಳನ್ನು ತನ್ನ ರಾಜ್ಯದಲ್ಲಿ ಸೇರಿಸಿಕೊಂಡನು.ಈ ಕಾಲದಲ್ಲಿ ಒಂದು ಕಡೆ ಪೇಶ್ವೆ ಹಾಗೂ ಇನ್ನೊಂದು ಕಡೆ ಹೈದರಾಲಿ ಇವರ ನಡುವೆ ಸತತವಾಗಿ ಯುದ್ಧಗಳು ನಡೆದೇ ಇದ್ದವು.ಕಿತ್ತೂರಿನ ಅಂತಹ ಸಣ್ಣ ಸಂಸ್ಥಾನಗಳು ಈ ದೊಡ್ಡ ರಾಜರುಗಳ ಆಗುಹೋಗುಗಳನ್ನು ಅವಲಂಬಿಸಿ ಅವರೊಡನೆ ವರ್ತಿಸಬೇಕಾದ ಕಠಿಣ ಪ್ರಸಂಗಗಳು ಬರುತ್ತಿದ್ದವು.1779ರಲ್ಲಿ ಪೇಶ್ವೆಯ ಸೈನ್ಯದ ನಾಯಕ ಪರಶುರಾಮ ಹಾವು ಗೋಕಾಕದ ಮೇಲೆ ದಾಳಿ ಮಾಡಿ ಯುದ್ಧದಲ್ಲಿ ವೀರಪ್ಪಗೌಡ ಸರದೇಸಾಯಿಯನ್ನು ಬಂಧಿಯನ್ನಾಗಿ ತೆಗೆದುಕೊಂಡು ಹೋದನು. ವೀರಪ್ಪಗೌಡ ಎಂಥಾ ಶೂರ ಸೇನಾನಿ ಎಂಬುದನ್ನರಿತ ಪರಶುರಾಮ ಭಾವು,ಆತನು ಒಂದಿಲ್ಲೊಂದು ದಿನ ಆತ ನನಗೆ ಮುಳುವಾಗಬಹುದು ಎಂಬ ಹೆದರಿಕೆಯಿಂದ ಆತನನ್ನು ಮಿರಜದಲ್ಲಿ ಬಂಧನದಲ್ಲಿರಿಸಿದನು. ವೀರಪ್ಪಗೌಡ ಅಲ್ಲಿಯೇ 1782 ರಲ್ಲಿ ಮರಣ ಹೊಂದಿದನು. ಅವನ ಮೃತದೇಹವನ್ನ ಮಿರಜ ದಿಂದ ಕಿತ್ತೂರಿಗೆ ತಂದು ಕಲ್ಲು ಮಠದಲ್ಲಿ ಸಮಾಧಿ ಮಾಡಲಾಯಿತು. ಅವನ ಸಮಾಧಿಯನ್ನು ಇಂದಿಗೂ ಅಲ್ಲಿ ಕಾಣಬಹುದು.

ಕಿತ್ತೂರಿನ ಪ್ರಸಿದ್ದ ಅರಸ ಮಲ್ಲಸರ್ಜ:
ವೀರಪ್ಪಗೌಡ ಸತ್ತ ಸ್ವಲ್ಪದಿನಗಳಲ್ಲಿ ಅವನ ಮನೆತನದವರು ಮಲ್ಲಸರ್ಜನನ್ನು ದತ್ತಕ ತೆಗೆದುಕೊಂಡರು.1782ರಲ್ಲಿ ಮಲ್ಲಸರ್ಜಾ ಕಿತ್ತೂರಿನ ಪಟ್ಟಕ್ಕೆ ಬಂದನು. ಕಿತ್ತೂರನ್ನು ಆಳಿದ 12ಜನ ಅರಸರಲ್ಲಿ ಈತನೇ ಅತ್ಯಂತ ಪ್ರಭಾವಶಾಲಿಯಾದ ದೊರೆ. ಈ ಚರಿತ್ರೆಯ ನಾಯಕಿಯಾದ ರಾಣಿ ಚೆನ್ನಮ್ಮ ಈತನ ಎರಡನೇ ಹೆಂಡತಿ.ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ರಾಣಿ ಚೆನ್ನಮ್ಮ ನಿರ್ವಹಿಸಿದ ಪಾತ್ರದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾದರೆ, ಮಲ್ಲಸರ್ಜನು ಮರಣ ಹೊಂದುವವರೆಗೂ ಆತನ ಆಳಿಕೆ ಆತನ ಪ್ರಭಾವ ಶೌರ್ಯಗಳ ಸಮಗ್ರ ಇತಿಹಾಸದ ಕಲ್ಪನೆ ಇರಬೇಕಾಗುತ್ತದೆ. ಮುಂದೆ 1816 ರಲ್ಲಿ ಆತನು ತೀರಿಕೊಂಡನಂತರ ರಾಣಿ ಚೆನ್ನಮ್ಮ ಕಿತ್ತೂರಿನ ಆಡಳಿತದ ಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಳು.

ಮಲ್ಲಸರ್ಜ:
ಮಲ್ಲಸರ್ಜನು ಕಿತ್ತೂರು ರಾಜ್ಯವನ್ನ 1782 ರಿಂದ 18 16ರವರೆಗೆ ಆಳಿದನು. ಆತನ ಬಗ್ಗೆ ದೊರಕಿರುವ ಐತಿಹಾಸಿಕ ಆಧಾರಗಳಿಂದ, ಹಾಡು ,ಕಾವ್ಯ, ಕಥೆ ,ನಾಟಕ ಹಾಗೂ ಇತರ ಜಾನಪದ ಸಾಹಿತ್ಯದಲ್ಲಿ ಒಡಮೂಡಿದ ಆತನ ವ್ಯಕ್ತಿತ್ವ ಚಿತ್ರಣಗಳಿಂದ ತಿಳಿದು ಬರುವಂತೆ ಆತನ ಆಳಿಕೆ ಕಿತ್ತೂರಿನ ಇತಿಹಾಸದಲ್ಲಿ ಅತ್ಯಂತ ವೈಭವಪೂರ್ಣವಾದ ಆಳ್ವಿಕೆಯಾಗಿ ಇತ್ತೇಂಬುದರಲ್ಲಿ ಸಂದೇಹವಿಲ್ಲ. ಬ್ರಿಟಿಷರು ,ಫ್ರೆಂಚರು, ಪೋರ್ಚುಗೀಸರು ಪೈಪೋಟಿಯಿಂದ ಭಾರತ ದೇಶದ ಯಾವದೊಂದು ದೊರೆತರು ಅದನ್ನು ಕಬಳಿಸಲು ಕಾದಾಡುತ್ತಿದ್ದ ಕಾಲವದು.ಭಾರತೀಯ ಸಣ್ಣಪುಟ್ಟ ಸಂಸ್ಥಾನಿಕರು ತಮ್ಮ ತಮ್ಮಲ್ಲಿಯೇ ಕಾದಾಡುತ್ತಾ ಪ್ರದೇಶದವರ ಬಾಲ ಬರೆಯುತ್ತಾ ಒಬ್ಬರಮೇಲೊಬ್ಬರು ಸೇಡು ತಿರಿಸಿಕೊಳ್ಳಲು ಹಾತೊರೆಯುತ್ತಿದ್ದರು ಇದೆ ಕಾಲದಲ್ಲಿ.ದಕ್ಷಿಣ ಭಾರತದಲ್ಲಿ ರಾಜಕೀಯ ಪೈಪೋಟಿಯಲ್ಲಿ ತೊಡಗಿದ ಅಧಿಕಾರಶಾಹಿಗಳ ಅವರಲ್ಲಿ ಮೈಸೂರಿನ ಹೈದರಾಲಿ ಟಿಪ್ಪು ಸುಲ್ತಾನ್ ವಿಜಯಪುರ ಆದಿಲ್ ಶಾಹಿಗಳು ಹೈದರಾಬಾದ್ ನಿಜಾಮರು ಪ್ರಮುಖರು. ಇಂತಹ ಸೆಣಸಾಟಗಳಲ್ಲಿ ತೊಡಗಿದ ಸಣ್ಣ ಸಣ್ಣ ರಾಜ್ಯಗಳು ಅಸಂಖ್ಯಾತ.ಇವರೆಲ್ಲರೂ ತಮ್ಮ ತಮ್ಮ ತೊಂತದ ಅಲ್ಪ ಲಾಭಕ್ಕಾಗಿ ಆಸೆಪಟ್ಟು ಒಬ್ಬರನ್ನೊಬ್ಬರು ದ್ರೋಹ ಮಾಡುವುದರಲ್ಲಿ ತೊಡಗಿದ್ದರೆ ವಿನಾ ಅದರಿಂದ ಇಡೀ ದೇಶಕ್ಕೆ ಒದಗುವ ಮಹಾ ವಿಪತ್ತಿನ ಬಗೆಗೆ ಅವರಿಗೆ ಯಾವ ಯೋಚನೆಯೂ ಇರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಲ್ಲಸರ್ಜಾ ಕಿತ್ತೂರಿನ ಸಿಂಹಾಸನವೇರಿದನು.1785ರಲ್ಲಿ ಟಿಪ್ಪುಸುಲ್ತಾನನ ಧಾರವಾಡದಲ್ಲಿನ ನರಗುಂದ, ರಾಮದುರ್ಗ ಹಾಗೂ ಕಿತ್ತೂರಿನ ಮೇಲೆ ದಾಳಿಮಾಡಿ ,ಅವುಗಳನ್ನು ಆಕ್ರಮಿಸಿಕೊಂಡನು. ಕಿತ್ತೂರಿನಲ್ಲಿ ಮೈಸೂರು ಸೈನ್ಯದ ಒಂದು ಪ್ರಬಲ ದಳವನ್ನು ಇಟ್ಟನು. ಮರಾಠರು ಹೈದರಾಬಾದಿನ ನಿಜಾಮ ನೊಂದಿಗೆ ಕೂಡಿಕೊಂಡು ಬಿಟಿಷರ ಅಭಿವೃದ್ಧಿ ಒಂದು ದೊಡ್ಡ ದಾಳಿಯನ್ನೇ ಆರಂಭಿಸಿದರು. ಈ ದಿನದ ಮುಖ್ಯ ವಿಭಾಗಗಳು ಬಿಜಾಪುರದ ಬಾದಾಮಿ ಹಾಗೂ ಧಾರವಾಡದ ಕಡೆಗೆ ಮುಂದುವರಿದವು.ತುಕೋಜಿ ಹೋಳಕರ ಹಾಗೂ ಗಣೇಶ ಪ್ರತಾಪ್ ಬೆಹರೆ ಅವರು,2500ಅಶ್ವ ಸೇನೆಯೊಡನೆ ಕಿತ್ತೂರಿನಲ್ಲಿ ಬೀಡುಬಿಟ್ಟ ಪುರಾಣ ಬುರಾಣುದ್ದಿನ ಮುಖಂಡತ್ವದಲ್ಲಿ ಇದ್ದ ಟಿಪ್ಪುವಿನ ಸೈನ್ಯವನ್ನು ಎದುರಿಸಲು ಬಂದರು. ಹೋಳ್ಕರ್ ಅವ್ಯಾಹತವಾಗಿ ಒಂದು ತಿಂಗಳ ಕಾಲ ಈ ಸೈನ್ಯವನ್ನು ಹೊರಗಟ್ಟಲು ಯತ್ನಿಸಿದನು. ಉಳಿದ ಎಲ್ಲಾ ಕಡೆಗಳ ಸೈನ್ಯವನ್ನು ಆತ ಹೊರಗಟ್ಟಲು ಸಾಧ್ಯವಾಯಿತು. ಆದರೆ ಕಿತ್ತೂರಿನ ಕೋಟೆಯಲ್ಲಿದ್ದ ತನವನ್ನು ಹೊರಗಟ್ಟಲು ಅವನಿಗೆ ಸಾಧ್ಯವಾಗಲಿಲ್ಲ. ಯುದ್ಧದಲ್ಲಿ ಟಿಪ್ಪುವಿನ ಯಶಸ್ಸು ಸಿಗುವ ಸಂಭವ ಹೆಚ್ಚಾಗಿದ್ದರೂ, ಇಂಗ್ಲಿಷರ ದಾಳಿಯ ದಾಳಿಯ ಹೆದರಿಕೆಯಿಂದಾಗಿ, 1787ರ ಏಪ್ರಿಲ್ನಲ್ಲಿ ಕಿತ್ತೂರನ್ನು ಮತ್ತೆ ಮರಾಠರಿಗೆ ಬಿಟ್ಟುಕೊಡಲು ನಿರ್ಧರಿಸಿದನು.

ಅಷ್ಟರಲ್ಲಿ ಆಗಲೇ ಕಿತ್ತೂರು ಮೂರು ವರ್ಷಗಳ ಕಾಲ ಟಿಪ್ಪುವಿನ ಅಧೀನದಲ್ಲಿತ್ತು ಸೇನಾಧಿಕಾರಿಯಾದ ಬದ್ರುಲ್ ಜಮಾಲಖಾನ್ ಕಿತ್ತೂರಿನ ಆಸ್ತಿಯ ವಹಿವಾಟಿವನ್ನು ತನ್ನ ಕೈಯಲ್ಲಿ ತೆಗೆದುಕೊಂಡು,ಕಿತ್ತೂರು ದೇಸಾಯರ ಅಧಿಕಾರಗಳನ್ನು ಮೊಟಕುಗೊಳಿಸಿದನು. ಅವರಿಗೆ ವರ್ಷ ಹಣವನ್ನು ನಿಗದಿ ಮಾಡಿದ.ನಂತರ,1792ರ ಫೆಬ್ರವರಿಯಲ್ಲಿ, ಶ್ರೀರಂಗಪಟ್ಟಣದ ಸಂಧಾನದ ಪ್ರಕಾರ ಮರಾಠರ ರಾಜ್ಯದ ವ್ಯಾಪ್ತಿ ತುಂಗಭದ್ರಾ ತೀರದವರೆಗೆ ಹಾಗೂ ಪರಸಗಡ ದವರೆಗೆ ವಿಸ್ತಾರಗೊಂಡ ಕಾರಣ ಟಿಪ್ಪುವಿನ ಅಧೀನವಾಗಿದ್ದ ಕಿತ್ತೂರಿನ ಭೂಮಿ ಮತ್ತೆ ಮರಳಿ ಮರಾಠ ರಾಜ್ಯದ ಭಾಗವಾಯಿತು. ಕಿತ್ತೂರಿನ ಮಾರ್ಗವನ್ನು ಪೇಶ್ವೆ, ಪರಶುರಾಮ್ ಭಾವುಗೆ ಒಪ್ಪಿಸಿದನು. ಪರಶುರಾಮ್ ಭಾವು ಪೇಶ್ವೆಯರಿಗೆ ಹೆಚ್ಚಿನ ಸೈನ್ಯ ಇಟ್ಟುಕೊಂಡು ಸಹಾಯ ಮಾಡಿದನು. ಅದರ ಪ್ರತಿಫಲವಾಗಿ ನಾಡನ್ನು ಅವನ ಅಧೀನಕ್ಕೆ ಕೊಡಲಾಯಿತು. ಅವನು ಕಿತ್ತೂರಿನಲ್ಲಿ ಒಬ್ಬ ಮಾಮಲೇದಾರನನ್ನು ನೇಮಿಸಿ, ಅದನ್ನು ಧಾರವಾಡದ ಅಧೀನ ಪ್ರಾಂತವನ್ನಾಗಿ ಮಾಡಿದನು. ಕಿತ್ತೂರ ದೇಸಾಯಿಗೆ ವರ್ಷಾಸನವನ್ನು ನಿಗದಿ ಮಾಡಲಾಯಿತು.

1800ರ ಜೂನ್ ಕೊನೆಯಲ್ಲಿ ಮಹಾರಾಷ್ಟ್ರದ ಪ್ರಖ್ಯಾತ ದರೋಡೆಕೋರ ಧೊಂಢು ವಾಘಾ ಕಿತ್ತೂರ ನಾಡಿಗೆ ಬಂದನು.1800 ರಿ ಜೂನ್ 30ರಂದು ಕಿತ್ತೂರ ಬಳಿಯ ಆತನು ಮರಾಠ ಜನರಲ್ ಧೊಂಡೋಪಂಥ ಗೋಖಲೆಯ ಸೈನ್ಯದ ಹಿಂಭಾಗದ ಮೇಲೆ ಹಠಾತ್ತನೆ ದಾಳಿ ಮಾಡಿ, ಅವನ ಇಡೀ ಸೈನ್ಯವನ್ನು ಕಿತ್ತೂರಿನಿಂದ ಓಡಿಸಿದನು. ಈ ದಾಳಿಯಲ್ಲಿ ಗೋಖಲೆ ಕೊಲ್ಲಲ್ಪಟ್ಟನು.1791ರಲ್ಲಿ ಗೋಖಲೆ ವಾಘನನ್ನು ಸೋಲಿಸಿದಾಗ,ವಾಘ್ ಗೋಖಲೆನ ಎದೆಯ ರಕ್ತದಲ್ಲಿ ತನ್ನ ಮೀಸೆಯನ್ನು ಅದ್ದಿ ಹುರಿ ಮಾಡಿಕೊಂಡನು.ಕಿತ್ತೂರಿನ ರಾಜ್ಯದಲ್ಲಿ ಇದೊಂದು ಕೆಲವು ದಿವಸ ವಿಹರಿಸುತ್ತಿದ್ದನು.ಆಗ ಜನರಲ್ ವೆಲ್ಲೆಸ್ಲಿ ಧಾರವಾಡಕ್ಕೆ ಬಂದನು. ಆತನು ಧೊಂಢುನನ್ನು ಬೆನ್ನಟ್ಟಿ 1880ರ ಜುಲೈ 30ರಂದು ಕಿತ್ತೂರಿನಿಂದ 25 ಮೈಲು ಉತ್ತರಕ್ಕೆ ಮುನ್ನುಡಿಯ ಬಳಿ ಧೊಂಢುನ ಸೈನ್ಯದ ಭಾಗವನ್ನು ನಾಶಪಡಿಸಿದನು. ಆಗ ಧೊಂಡು ಕಿತ್ತೂರಿನ ಕಡೆಗೆ ಧಾವಿಸಿದನು.

ಅಲ್ಲಿಂದ ಮಲಪ್ರಭಾ ನದಿಯ ದಂಡೆಗುಂಟ ಓಡಿ ಪಶ್ಚಿಮ ಭಾಗದ ಅಡವಿಯನ್ನು ಹೊಕ್ಕು ಪಾರಾದನು.ಜನರಲ್ ವೆಲ್ಲೆಸ್ಲಿ ಆತನನ್ನು ಬೆನ್ನಟ್ಟಿ ಆಗಸ್ಟ್ 5ರಂದು ಕಿತ್ತೂರಿಗೆ ಬಂದನು.ಆಗ ಮಲಪ್ರಭಾ ತುಂಬಿ ಹರಿಯುತ್ತಿದ್ದ ಕಾರಣ ಅದನ್ನು ದಾಟಲು ಸಾಧ್ಯವಾಗದೇ, ಆರು ದಿವಸ ಕಿತ್ತೂರಿನ ಬಳಿ ಬೋಟುಗಳನ್ನು ಸಿದ್ಧಪಡಿಸಲು ಕಳೆಯಬೇಕಾಯಿತು.
ಪೇಶ್ವೆಯರು 1792ರಲ್ಲಿ ಬ್ರಿಟಿಷರೊಡನೆ ಶ್ರೀರಂಗಪಟ್ಟಣದ ತಂದಾನ ಪತ್ರಕ್ಕೆ ಸಹಿ ಹಾಕಿದ ನಂತರ ಸುಮಾರು 25 ವರ್ಷಗಳ ಕಾಲ ಬ್ರಿಟಿಷರ ಹಾಗೂ ಪೇಶ್ವೆಯರ ಸಂಬಂಧಗಳು ಸ್ನೇಹ ಪರವಾಗಿದ್ದವು.ವೇಶ್ಯೆಯರು ಬ್ರಿಟಿಷರ ಅಧಿನತ್ವವನ್ನು ಒಪ್ಪಿಕೊಂಡು ಅವರ ಆಧಾರ ಕೈಗೊಂಬೆಗಳಂತೆ ವರ್ತಿಸಲು ತೊಡಗಿದರು. ಪೇಶ್ವೆಯರ ಅಧೀನ ರಾಜ್ಯವಾದ ಕಿತ್ತೂರು ಕೂಡಾ, ಇದರಿಂದಾಗಿ ಬ್ರಿಟಿಷರ ಅಧೀನತ್ವಕ್ಕೆ ಗೌರವ ಕೊಟ್ಟು ವರ್ತಿಸ ಬೇಕಾಯಿತ್ತು.1802 ರಲ್ಲಿ ಜನರಲ್ ಬೆಳೆಸಿ ಬಾಜಿರಾವ್ ಪೇಶ್ವೆಯ ತಿರುಗಿ ಪಟ್ಟಕ್ಕೆ ಕೊಡಿಸಲು ಶ್ರೀರಂಗಪಟ್ಟಣದಿಂದ ಪುಣೆಗೆ ಹೊರಟಿದ್ಜನು. ಆಗ ಬ್ರಿಟಿಷರಿಗೆ ಅನೇಕ ಮಾಂಡಲೀಕರು ಸೈನ್ಯ ಹಾಗೂ ಹಣದ ಸಹಾಯ ಮಾಡಬೇಕಾಯಿತು. ಆಗ ಉಳಿದಂತೆ ಕಿತ್ತೂರು ದೇಸಾಯಿಯವರು 100ಕುದುರೆ ಹಾಗೂ 100 ಸೈನಿಕರನ್ನು ಬ್ರಿಟಿಷರ ಪರವಾಗಿ ಹೋರಾಡಲು ಕಳುಹಿಸಿಕೊಟ್ಟರು.

ಮಲ್ಲಸರ್ಜನು ಸಂಗೊಳ್ಳಿಯಲ್ಲಿ ಬ್ರಿಟಿಷರಿಗೆ ಸೈನ್ಯ ಬಿಡಲು ಒಂದು ಕೋಟಿಯನ್ನು ಕೊಟ್ಟನು. ಅದರಿಂದ ಅವರಿಗೆ ಒಂದು ಆಯಕಟ್ಟಿನ ಸ್ಥಳ, ದವಾಖಾನೆ ಹಾಗೂ ತಮ್ಮ ಸಣ್ಣ ನಾವೆಗಳನ್ನು ಇಟ್ಟುಕೊಳ್ಳಲು ಅವಕಾಶ ದೊರೆಯಿತು. ಆದರೆ ಇದರಿಂದ ಬ್ರಿಟಿಷರಿಗೆ ವಿಶೇಷ ಉಪಯೋಗವೇನು ಆಗಲಿಲ್ಲ. ಅವರಿಗೆ ದೂರದಿಂದ ಹಣ ಸಹಾಯ ಮತ್ತು ಆಹಾರ ಬರಬೇಕಾಗಿತ್ತು.ಆದರೆ ಅವರು ಮಾಡಿದ ಈ ಸಹಾಯ ಹಾಗೂ ಸದ್ವರ್ತನೆಯ ಫಲವಾಗಿ ಕಿತ್ತೂರ ದೇಶ ಗತಿಯನ್ನು ಮುಂದುವರಿಸಲಾಯಿತು.ಆಗ ಮಲ್ಲಸರ್ಜನ ರಾಜ್ಯದ ವಾರ್ಷಿಕ ಉತ್ಪನ್ನ ಸುಮಾರು ಐದು ಲಕ್ಷ ರೂಪಾಯಿಗಳಾಗಿತ್ತು. ಅವನು 1000 ಕುದುರೆ, 4000 ಕಾಲಾಳುಗಳ ಸೈನ್ಯವನ್ನು ಇಟ್ಟುಕೊಂಡಿದ್ದನು.ಅವನು ಪೇಶ್ವೆಯರಿಗೆ ವರ್ಷಕ್ಕೆ 70,000 ನಝರಾನಾ ಕೊಡುತ್ತಿದ್ದನು. ಎಲ್ಲವೂ ಸರಳವಾಗಿ ಸಾಗಿತ್ತು.ಕಿತ್ತೂರು ಆಂತರಿಕ ವ್ಯವಹಾರದಲ್ಲಿ ಹಾಗೂ ಆಡಳಿತ ಪೂರ್ಣ ಸ್ವತಂತ್ರವಾಗಿತ್ತು.

ಮುಂದುವರೆಯುವುದು…..

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!