Breaking News
Home / featured / ಹಾಲು ಹಾವಿನ ಆಹಾರವಲ್ಲ!

ಹಾಲು ಹಾವಿನ ಆಹಾರವಲ್ಲ!

ಬೈಲಹೊಂಗಲ: ನಾಗರ ಪಂಚಮಿ ನಾಡಿಗೆ ಬಹುದೊಡ್ಡ ಹಬ್ಬವಾಗಿದ್ದು, ಹೆಣ್ಣು ಮಗಳನ್ನು ತವರು ಮನೆಗೆ ಬರಮಾಡಿಕೊಂಡು ಮನೆಯಲ್ಲಿ ನಾನಾತರಹದ ಸಿಹಿತಿಂಡಿಗಳನ್ನು ತಯಾರಿಸಿ, ಹೊಸ ಬಟ್ಟೆಗಳನ್ನು ಧರಿಸಿ ನಾಗರ ಹುತ್ತಿಗೆ ಹಾಲನ್ನ ಎರೆಯುವುದು ಮುಖಾಂತರ ಪಂಚಮಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೆವೆ.

21 ನೇ ಶತಮಾನದಲ್ಲಿ ನಾವೆಲ್ಲರೂ ಕೂಡಾ ಸಂಪ್ರದಾಯಕ್ಕಿಂತ ಸತ್ಯ, ಶ್ರೇಷ್ಠ ಅನ್ನುವ ನಿಲುವುಗೆ ಬದ್ದರಾಗಿದ್ದೇವೆ. ಈ ನಿಟ್ಟಿನಲ್ಲಿ ವಿಚಾರಿಸಿದಾಗ ಹಾಲು ಹಾವಿನ ಆಹಾರವಲ್ಲ, ಅದರ ಆಹಾರ ಕಪ್ಪೆ, ಇಲಿ, ಹೆಗ್ಗಣ, ಎರೆಹುಳು, ಹೀಗೆ ಹಲವಾರು ಕ್ರೀಮಿಕೀಟಗಳನ್ನ ತಿಂದು ಬದುಕುವ ಮಾಂಸಾಹಾರಿ ಸರಿಸೃಪವಾಗಿದೆ. ಉರಗ ತಜ್ಞರ ಪ್ರಕಾರ ಹಾವು ದಿನಾಲು ಆಹಾರವನ್ನ ಸೇವಿಸುವುದಿಲ್ಲ, ಐದು ದಿನ ಅಥವಾ ವಾರಕ್ಕೊಮ್ಮೆ ಸೇವಿಸುವಂತದ್ದು ಎಂದು ಹೇಳಿದ್ದಾರೆ.

ಇಷ್ಟೆಲ್ಲ ಸತ್ಯೆತೆಯನ್ನ ತಿಳಿದಿದ್ದರು ಕೂಡಾ ಹಾಲು ಕಲ್ಲಿಗೆ, ಮಣ್ಣಿಗೆ ಎರೆದು ಹಾಳು ಮಾಡುವುದಕ್ಕಿಂತ ಬಡಮಕ್ಕಳಿಗೆ, ನಿರ್ಗತಿಕರಿಗೆ, ಅನಾಥರಿಗೆ ನೀಡಿ ಸಂಭ್ರಮ ಪಡುವ ಹಬ್ಬವಾದರೆ ಪಂಚಮಿ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿದುಕೊಳ್ಳಬೇಕಾಗಿದೆ.

ಅದೇ ರೀತಿ ಮಹಾಮಾರಿ ಕೊರೊನದಿಂದ ಬಳಲುತ್ತಿರುವ ರೋಗಿಗಳಿಗೆ ಪೌಷ್ಟಿಕಾಹಾರದ ಅವಶ್ಯಕತೆಯಿದ್ದು, ಎಲ್ಲರೂ ಕೂಡಾ ಕೈಲಾದಷ್ಟು ಹಾಲು ಕೊಟ್ಟು/ಕುಡಿಸಿ ರೋಗಿಗಳನ್ನ ತೃಪ್ತಿಪಡಿಸಿದರೆ ಈ ಹಬ್ಬಕ್ಕೆ ನಿಜವಾದ ಅರ್ಥಬರುತ್ತದೆ ಎಂದು ಶರಣೆ ಪ್ರೇಮಕ್ಕ ಅಂಗಡಿ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!