Breaking News
Home / featured / ವಿಶ್ವರಾಧ್ಯ ಸತ್ಯಂಪೇಟೆಯವರ ವಿರುಧ್ದದ ಕೇಸ್ ಹಿಂಪಡೆಯಲು ಮನವಿ

ವಿಶ್ವರಾಧ್ಯ ಸತ್ಯಂಪೇಟೆಯವರ ವಿರುಧ್ದದ ಕೇಸ್ ಹಿಂಪಡೆಯಲು ಮನವಿ

ಶಹಾಪುರ : ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿ, ಪತ್ರಕರ್ತ, ಸಾಹಿತಿ, ಚಿಂತಕ ಶರಣ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆಯ ಹೊನ್ನಾಳಿಯಲ್ಲಿ ಹಾಕಿರುವ ಖೊಟ್ಟಿ ಕೇಸ್ ವಾಪಸ್ಸು ಪಡೆಯಬೇಕೆಂದು ವಿವಿಧೆಡೆ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಅಫಜಲಪುರ ಜಾಗತಿಕ ಲಿಂಗಾಯತ ಮಹಾಸಭೆಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸುತ್ತಿರುವುದು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶ್ರೀ ವಿಶ್ವೇಶ್ವರಯ್ಯ ಶಿವಾಚಾರ್ಯ ಸ್ವಾಮಿಗಳ ಮೇಲೆ ಫೇಸ್ ಬುಕ್ ನಲ್ಲಿ ಬರೆದರೆನ್ನಲಾದ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಪ್ರತಿಯಾಗಿ ಸೆಕ್ಷನ್ 505 ಐ.ಪಿ.ಸಿ. ಪ್ರಕಾರ ಕೇಸು ದಾಖಲಿಸಿದ್ದು ಕುತಂತ್ರಗಳಿಂದ ಕೂಡಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಆರೋಪಿಸಿದೆ.

ಕರ್ನಾಟಕದ ಜನತೆ ಬಲ್ಲಂತೆ ವಿಶ್ವಾರಾಧ್ಯ ಸತ್ಯಂಪೇಟೆ ದಿಟ್ಟ ಪತ್ರಕರ್ತರು , ಶರಣ ಸಾಹಿತ್ಯದ ಬಗೆಗೆ ಆಳವಾದ ಅಧ್ಯಯನ ಮಾಡಿದವರು. ಈಗಾಗಲೇ ಶರಣ ಸಾಹಿತ್ಯದ ಕುರಿತು ಮಹತ್ವದ ಪುಸ್ತಕಗಳೂ ಅವರಿಂದ ಪ್ರಕಟವಾಗಿವೆ.

ಸುರಪುರದಲ್ಲಿ ಸಾಮಾಜಿಕ ಸಂಘಟನೆಗಳ ಒಕ್ಕೂಟ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿರುವುದು.

ಪ್ರಸ್ತುತ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿಯೂ ಆಗಿರುವ ಅವರ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ಗಳನ್ನು ದಾಖಲಿಸುವ ಮೂಲಕ ಅವರ ಮಾನಸಿಕ ಶಕ್ತಿಯನ್ನು ಕುಗ್ಗಿಸಲು ಯತ್ನಿಸುತ್ತಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ. ಬುದ್ಧ ಬಸವ ಅಂಬೇಡ್ಕರ್‌ ಅವರ ತತ್ವಗಳ ಮೇಲೆ ಸಮ ಸಮಾಜ ಕಟ್ಟಬೇಕೆನ್ನುವ ಅವರ ವಿಚಾರಕ್ಕೆ ಧಕ್ಕೆ ಉಂಟು ಮಾಡಬೇಕೆಂಬ ಮೂಲಭೂತವಾದಿಗಳ ತಂತ್ರವನ್ನು ಸಂಘಟನೆಗಳು ಬಲವಾಗಿ ಖಂಡಿಸಿವೆ.

ಸೈದ್ದಾಂತಿಕ ತಳಹದಿಯ ಮೇಲೆ ಚರ್ಚೆ ಮಾಡಲು ಬಯಸದೆ ಬೆದರಿಸುವ ತಂತ್ರಗಳನ್ನು ಅನುಸರಿಸಿ ಪೊಲೀಸ್ ಕೇಸ್ ದಾಖಲು ಮಾಡಿದರೆ ಸಂಘಟನೆಯೂ ರಾಜ್ಯಾದಾದ್ಯಂತ ಹೋರಾಟ ವನ್ನು ರೂಪಿಸುತ್ತದೆ ಎಂದು ಅದು ಎಚ್ಚರಿಸಿವೆ .

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ದಾವಲಸಾಬ ನದಾಫ , ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಕರ್ನಾಟಕ ಪ್ರಾಂತ ರೈತ ಸಂಘದ ಚೆನ್ನಪ್ಪ ಆನೆಗುಂದಿ , ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಶಿವಣ್ಣ ಇಜೇರಿ , ಕಾರ್ಯದರ್ಶಿ ಷಣ್ಮುಖಪ್ಪ ಅಣಬಿ, ವಿವಿಧ ಸಂಘಟನೆಯ ಸದಸ್ಯರಾದ ಬಸವರಾಜ, ಶಿವಕುಮಾರ, ರಫೀಕ, ಸಂತೋಷ ಶಹಾಪುರ, ಚಂದ್ರಕಾಂತ, ದೇವು, ಲಾಲಸಾಬ ಕಾಡಮಗೇರಾ, ಬಾಬು ಗುಂಡಳ್ಳಿ, ಮಹಿಬೂಬ ಸಾಬ ಗುಂಡಳ್ಳಿ, ಸಿದ್ಧಯ್ಯ ಗುಂಡಳ್ಳಿ , ನಿಂಗಣ್ಣ ನಾಟೇಕಾರ, ಮೈಲಾರೆಪ್ಪ ತಿಪ್ಪನಳ್ಳಿ, ಗಂಗಮ್ಮ ಕಟ್ಟಿಮನಿ, ಭೀಮಮ್ಮ ನಾಯ್ಕಡಿ, ಜೈಲಾಲ ತೋಟದ ಮನಿ, ಎಸ್.ಎಂ.ಸಾಗರ, ಶಿವರುದ್ರ ಉಳ್ಳಿ, ಶರಣಗೌಡ ಮದ್ರಕಿ, ಬಸವರಾಜ ನರಬೋಳಿ, ಸೈಯದ್ ಇಬ್ರಾಹಿಂಸಾಬ ವಕೀಲರು, ಎಂ.ಕೆ. ಕರಿಗುಡ್ಡ ವಕೀಲರು, ಬಸವರಾಜ ಕುಂಬಾರಳ್ಳಿ, ಶರಣು ಬೊಮ್ಮನಳ್ಳಿ ಮೊದಲಾದವರು ಉಪಸ್ಥಿತರಿದ್ದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!