Breaking News
Home / featured / ದೇಶದ ಅತ್ಯುತ್ತಮ ವಿವಿಗಳ ಪಟ್ಟಿ ಬಿಡುಗಡೆ: ವಿಜಯಪುರದ ಬಿಎಲ್​ಡಿಇಗೆ 8ನೇ ಸ್ಥಾನ

ದೇಶದ ಅತ್ಯುತ್ತಮ ವಿವಿಗಳ ಪಟ್ಟಿ ಬಿಡುಗಡೆ: ವಿಜಯಪುರದ ಬಿಎಲ್​ಡಿಇಗೆ 8ನೇ ಸ್ಥಾನ

ಆ.10ರಂದು ಇಂಡಿಯಾ ಟುಡೆ ಸಂಚಿಕೆಯಲ್ಲಿ ದೇಶದ ಅತ್ಯುತ್ತಮ ವಿವಿಗಳ ಪಟ್ಟಿ ಪ್ರಕಟಿಸಲಾಗಿದ್ದು, ವೈದ್ಯಕೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ದೆಹಲಿಯ ಏಮ್ಸ್ ಪ್ರಥಮ ಸ್ಥಾನ ಪಡೆದಿದ್ದರೆ, ಕರ್ನಾಟಕದ ವಿಜಯಪುರ ಬಿ.ಎಲ್.ಡಿ.ಇ ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾಲಯ 8 ನೇ ಸ್ಥಾನ ಪಡೆದಿದೆ.

ವಿಜಯಪುರ: ಪ್ರಖ್ಯಾತ ಆಂಗ್ಲ ಮಾಧ್ಯಮ “ಇಂಡಿಯಾ ಟುಡೆ” ನಡೆಸಿದ ದೇಶದ ಅತ್ಯುತ್ತಮ ವೈದ್ಯಕೀಯ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ಬಿಎಲ್​​​​ಡಿಇ ಡೀಮ್ಡ್ ವೈದ್ಯಕೀಯ ವಿಶ್ವ ವಿದ್ಯಾಲಯ ಸ್ಥಾನ ಪಡೆದುಕೊಂಡಿದೆ ಎಂದು ಉಪಕುಲಪತಿ ಡಾ. ಎಂ. ಎಸ್. ಬಿರಾದಾರ ತಿಳಿಸಿದ್ದಾರೆ

ದೇಶದ ಅತ್ಯುತ್ತಮ ವಿವಿಗಳ ಪಟ್ಟಿ ಬಿಡುಗಡೆ: ವಿಜಯಪುರದ ಬಿಎಲ್​ಡಿಇಗೆ 8ನೇ ಸ್ಥಾನಆ.10ರಂದು ಇಂಡಿಯಾ ಟುಡೆ ಸಂಚಿಕೆಯಲ್ಲಿ ದೇಶದ ಅತ್ಯುತ್ತಮ ವಿವಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ವೈದ್ಯಕೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ದೆಹಲಿಯ ಏಮ್ಸ್ ಪ್ರಥಮ ಸ್ಥಾನ ಪಡೆದಿದ್ದರೆ, ಕರ್ನಾಟಕದ ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾಲಯ 8 ನೇ ಸ್ಥಾನ ಪಡೆದಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗಳು, ವಿಶ್ವವಿದ್ಯಾಲಯ ಅಗತ್ಯ ಮೂಲ ಸೌಕರ್ಯಗಳು, ಸುಸಜ್ಜಿತ ಆಸ್ಪತ್ರೆ, ವಿದ್ಯಾರ್ಥಿಗಳ ಕಲಿಕೆ ಕ್ರಮ, ನುರಿತ ಬೋಧಕರು, ರಾಷ್ಟ್ರೀಯ, ಅಂತರ್ ‍ರಾಷ್ಟ್ರೀಯ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡಿರುವುದು ಈ ಸಾಧನೆಗೆ ಕಾರಣವಾಗಿದೆ.

ದೇಶದ ಪ್ರಮುಖ 10 ವೈದ್ಯಕೀಯ ವಿವಿಗಳಲ್ಲಿ ಸತತ 3ನೇ ವರ್ಷವೂ ಬಿ.ಎಲ್.ಡಿ.ಇ ವೈದ್ಯಕೀಯ ವಿವಿ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ. ಅದರಲ್ಲಿಯೂ ಉಳಿದ ವಿಶ್ವವಿದ್ಯಾಲಯಗಳು ಬಹುಮುಖ ವಿಷಯಗಳನ್ನು ಬೋಧಿಸುತ್ತವೆ. ಆದರೆ ಕೇವಲ ವೈದ್ಯಕೀಯ ವಿಷಯ ಮಾತ್ರ ಒಳಗೊಂಡ ( ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ) ಒಂದೇ ವಿಷಯ ಬೋಧಿಸುವ ನಮ್ಮ ವಿವಿ ಈ ಸಾಧನೆ ಮಾಡಿರುವುದು ವಿಶಿಷ್ಟ ಎಂದು ಉಪಕುಲಪತಿ ಡಾ. ಎಂ. ಎಸ್. ಬಿರಾದಾರ ತಿಳಿಸಿದ್ದಾರೆ.ಹಿರಿಯ ನಾಗರಿಕರಿಗಾಗಿ ಇಲ್ಲಿನ ಪ್ರತ್ಯೇಕ ಚಿಕಿತ್ಸಾ ವಿಭಾಗ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ವಿಕಲಚೇತನರಿಗೆ ಪ್ರತ್ಯೇಕ ಕೃತಕ ಅಂಗಾಂಗ ಜೋಡಣೆ ಕೇಂದ್ರ ತನ್ನ ಕ್ರೀಯಾಶೀಲ ಚಟುವಟಿಕೆಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಶಸ್ತಿಗೆ ಭಾಜನವಾಗಿದೆ.

ಮುಂದಿನ ವರ್ಷಗಳಿಂದ ಇನ್ನು ಹೆಚ್ಚಿನ ವೈದ್ಯಕೀಯ ಸಂಶೋಧನೆ, ಕಲಿಕಾ ಕ್ರಮಗಳು ಹಾಗೂ ನಿರಂತರ ಚಿಕಿತ್ಸಾ ಸೌಲಭ್ಯಗಳಿಂದ ಇನ್ನು ಹೆಚ್ಚಿನ ಸ್ಥಾನಗಳನ್ನು ಪಡೆಯಲು ಯತ್ನಿಸುವುದಾಗಿ ಡಾ. ಎಂ. ಎಸ್. ಬಿರಾದಾರ ತಿಳಿಸಿದ್ದಾರೆ.ಬಿ.ಎಲ್.ಡಿ.ಇ ವೈದ್ಯಕೀಯ ವಿವಿ ಕುಲಪತಿ ಎಂ.ಬಿ.ಪಾಟೀಲ, ಆಡಳಿತ ಮಂಡಳಿ ಸದಸ್ಯರು ವಿಶ್ವವಿದ್ಯಾಲಯದ ಈ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿ, ಉತ್ತರ ಕರ್ನಾಟದ ಹಿಂದುಳಿದ ಸುಗಮ ಸಂಪರ್ಕ ಸಂಚಾರ ವ್ಯವಸ್ಥೆ ಇಲ್ಲದ ವಿಜಯಪುರದಲ್ಲಿದ್ದು, ಈ ಭಾಗದಲ್ಲಿ 12 ವರ್ಷದ ಹಿಂದೆ ಸ್ಥಾಪನೆಗೊಂಡ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ, ಇಲ್ಲಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಕಾರ್ಯವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿರುವದಕ್ಕೆ ಇಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಶ್ರಮ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!