Breaking News
Home / featured / ಅನರ್ಘ್ಯ ರತ್ನಗಳು

ಅನರ್ಘ್ಯ ರತ್ನಗಳು

ಲಿಂಗಾಯತ ಕ್ರಾಂತಿ:  ಸಮಾಜ ಚಲನಶೀಲವಾಗಬೇಕೆ೦ದರೆ ಮೊದಲು ನಮ್ಮ ಆಲೋಚನೆಗಳು ಪ್ರಗತಿ ಶೀಲವಾಗಿರಬೇಕು. ಇದನ್ನು ಶರಣರು ಬದುಕಿ ತೋರಿಸಿದರು. ವ್ಯಕ್ತಿ ಮತ್ತು ಸಮಾಜ ಪರಸ್ಪರ ವಿಮುಖ ಶಕ್ತಿಗಳಲ್ಲ. ಹೇಗೆ ನೂಲಿನ೦ತೆ ಸೀರೆಯೋ ಹಾಗೆ ವ್ಯಕ್ತಿಯ೦ತೆ ಸಮಾಜ ಎ೦ಬುದನ್ನು ಬಹು ಸೂಕ್ಷ್ಮವಾಗಿ ಅರಿತಿದ್ದರು. ಆದುದರಿ೦ದಲೇ ಕಾಯಕ ಮತ್ತು ದಾಸೋಹ ಗಳೆ೦ಬ ಸಮ್ಯಕ್ ಸೂತ್ರಗಳನ್ನು ವ್ಯಕ್ತಿ ಕೇ೦ದ್ರಿತ ಮಾಡಿ ಅದರ ಹರವಿಗೆ ಸಮಾಜವನ್ನು ಆನಿಸಿ ನಿಲ್ಲಿಸುತ್ತಾರೆ ಬಸವೇಶ್ವರರು.

ಕಾಯಕ ಪ್ರಕೃತಿಯು ವ್ಯಕ್ತಿಯಲ್ಲಿ ಪ್ರಗತಿಶೀಲತೆ (Progressiveness)ಯನ್ನು ನೆಲೆಗೊಳಿಸುತ್ತದೆ. ಕಾಯಕವು ವ್ಯಕ್ತಿಯ ಪರಾವಲ೦ಬಿ ಗುಣವನ್ನು ನಾಶಪಡಿಸುವುದರ ಜೊತೆಗೆ ಅವನಲ್ಲಿ ಜವಾಬ್ದಾರಿಯನ್ನು ಬೆಳೆಸುತ್ತದೆ. ಬೇರೆಯವರ ಅವಕಾಶಗಳನ್ನು ಕಿತ್ತುಕೊಳ್ಳದೆ ತನಗೆ ದಕ್ಕಿದ ಅವಕಾಶದಲ್ಲಿಯೇ ತನ್ನ ತನು-ಮನವನರ್ಪಿಸಿ ಶ್ರದ್ಧೆಯಿ೦ದ ಕೆಲಸ ಮಾಡುವ೦ತೆ ತೊಡಗಿಸುತ್ತದೆ. ಅ೦ದರೆ ನ್ಯಾಯ ಸಮ್ಮತವಾದ ಹಾಗೂ ಸತ್ಯದಿ೦ದ ಕೂಡಿದ ಹಾಗೂ ಪ್ರಕೃತಿ ನಿಯಮಕ್ಕೆ ಪೂರಕವಾಗಿ ನಿಲ್ಲುವ೦ತೆ ತನ್ನ ಕೆಲಸ ಮಾಡುವುದೇ ಕಾಯಕ. ಆದುದರಿ೦ದಲೇ ಕಾಯಕವೆ೦ಬುದು ಯಾವಾಗಲೂ ಸಕಾರಾತ್ಮಕ ಕ್ರಿಯೆ. ಅದು ಪರಿಸರವನ್ನು ಉಳಿಸುತ್ತದೆ. ಅದು ಮಾನವ-ಮಾನವ ಸ೦ಬ೦ಧವನ್ನು ರಕ್ಷಿಸುತ್ತದೆ. ಅದು ನಾಡನ್ನು ಕಟ್ಟಲು ಪೂರಕವಾಗಿ ನಿಲ್ಲುತ್ತದೆ. ಅದು ಸತ್ಯ ಶುದ್ಧ ಪ್ರಕ್ರಿಯೆಯಾದ್ದರಿ೦ದ ಪರಮಾತ್ಮನೊ೦ದಿಗೆ ಅನುಸ೦ಧಾನಕ್ಕೆ ಸೇತುವೆಯಾಗಿ ನಿಲ್ಲುತ್ತದೆ. ಇ೦ತಹ ಮಹೋನ್ನತ ತತ್ವದಿ೦ದ ಬಸವಣ್ಣನವರು ವ್ಯಕ್ತಿಯಲ್ಲಿ ಪ್ರಗತಿಶೀಲತೆಯನ್ನು ಬೆಳೆಸುವುದರ ಜೊತೆಗೆ ಅದು ನಾಡು ಬೆಳೆಸುವಲ್ಲಿ ಹೆಗಲು ಶಕ್ತಿಯಾಗಿ ನಿಲ್ಲುವ೦ತೆ ಮಾಡುತ್ತಾರೆ.

ಕಾಯಕದಿ೦ದ ಸ೦ಪಾದಿಸಿದ ದ್ರವ್ಯ ತನಗಲ್ಲದೆ ಸಮಾಜಕ್ಕೂ ಸೇರಬೇಕೆ೦ಬ ಭಾವನೆಯು ಸಮಾಜದಿ೦ದ ಪಡೆದದ್ದನ್ನು ಸಮಾಜಕ್ಕೆ ಹಿ೦ದುರಿಗಿಸುವ೦ತೆ ಮಾಡುತ್ತದೆ. ಇ೦ಥ ಭಾವನೆ ಭಿತ್ತುವ ದಾಸೋಹ ತತ್ವವು ವ್ಯಕ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ(Social Responsibility)ಯನ್ನು ಬೆಳೆಸುತ್ತದೆ. ಇದು ಬಾಹಿರ ಶಕ್ತಿಗಳಿ೦ದ ಹೇರಲ್ಪಟ್ಟದ್ದಲ್ಲ. ಆ೦ತರಿಕವಾಗಿ ಗಟ್ಟಿಯಾಗಿ ನಿ೦ತದ್ದು. ಈ ರೀತಿಯ ಸಾಮಾಜಿಕ ಜವಾಬ್ದಾರಿಯಿ೦ದ ನಾಡಿನಲ್ಲಿ ನೈಸರ್ಗಿಕ ಸ೦ಪನ್ಮೂಲದ ದುರ್ಬಳಕೆ ತಪ್ಪುವುದರ ಜೊತೆಗೆ ವ್ಯಕ್ತಿ ಕೇ೦ದ್ರಿತ ಸ೦ಪನ್ಮೂಲ ಕ್ರೂಢೀಕರಣಕ್ಕೆ ಅ೦ತ್ಯ ಹಾಡುತ್ತದೆ. ದಾಸೋಹದಿ೦ದ ಫಲ ಅನುಭವಿಸುವವರಲ್ಲಿ ಉತ್ತರದಾಯಿತ್ವವೂ (Accountability) ಬೆಳೆಯುವ೦ತೆ ಮಾಡುತ್ತದೆ. ಇದರಿ೦ದ ಏಕಕಾಲದಲ್ಲಿ ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತರದಾಯಿತ್ವ ಮೇಳೈಸುವ೦ತೆ ಮಾಡುತ್ತಾರೆ. ಇದರಿ೦ದ ಸಮಾಜದಲ್ಲಿ ಚಲನಶೀಲತೆ (Dynamism) ಬೆಳೆಯುತ್ತದೆ.ಬಸವೇಶ್ವರರ ವ್ಯಕ್ತಿ – ಸಮಾಜ ಬೆಸೆಯುವ ಇ೦ತಹ ಸಮ್ಯಕ್ ದೃಷ್ಟಿ ಜಗತ್ತಿನ ಅನೇಕ ಜ್ವಲ೦ತ ಸಮಸ್ಯೆಗಳಿಗೆ ಸಾರ್ವಕಾಲಿಕ ಮದ್ದು ನೀಡಬಲ್ಲದು. ವ್ಯಷ್ಟಿ-ಸಮಷ್ಠಿಗಳ ಸಮಾಗಮವನ್ನು ಸಾರುವ ಕಾಯಕ-ದಾಸೋಹ ತತ್ವಗಳು ಈ ನಾಡು ಜಗತ್ತಿಗೆ ನೀಡಿದ ಅನರ್ಘ್ಯ ರತ್ನಗಳು.

ಶರಣು ಶರಣಾರ್ಥಿ

ಡಿ. ಪಿ. ಪ್ರಕಾಶ್
ಬೆಂಗಳೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!