Breaking News
Home / featured / ದೇಶಕ್ಕೆ ರಾಯಣ್ಣ, ಶಿವಾಜಿಯ ಕೊಡುಗೆ ಅಪಾರ: ಕೂಡಲಸಂಗಮ ಶ್ರೀಗಳು

ದೇಶಕ್ಕೆ ರಾಯಣ್ಣ, ಶಿವಾಜಿಯ ಕೊಡುಗೆ ಅಪಾರ: ಕೂಡಲಸಂಗಮ ಶ್ರೀಗಳು

ಬೆಳಗಾವಿ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಬೆಳಗಾವಿಯ ಪಿರನವಾಡಿಯಲ್ಲಿ ನಿರ್ಮಾಣಗೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹರಾಜರ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದ ಅವರು ಈ ನಾಡಿಗೆ ಚನ್ನಮ್ಮ, ರಾಯಣ್ಣ, ಶಿವಾಜಿ ಮಹಾರಾಜರು ಹಾಗೂ ನೂರಾರು ಮಹನೀಯರ ಕೊಡುಗೆ ಅಪಾರವಾದದ್ದು ಅದನ್ನು ಯಾವುದೇ ಒಂದು ಜಾತಿ ಧರ್ಮಕ್ಕೆ ಅಂಟಿಸುವುದು ಸರಿಯಲ್ಲ. ಬೆಳಗಾವಿಗರು ಸರ್ವಧರ್ಮೀಯರನ್ನು ಪ್ರೀತಿಯಿಂದ ಕಾಣುತ್ತಾರೆ ಅದನ್ನು ಯಾರು ದುರುಪಯೋಗ ಪಡಿಸಿಕೊಳ್ಳಬಾರದು ಸರ್ವರು ಭಾವೈಕ್ಯತೆಯಿಂದ ಬದುಕಬೇಕು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭೆಯ ಮುಖಂಡರಾದ ನ್ಯಾಯವಾದಿ ಬಸವರಾಜ ರೊಟ್ಟಿ, ಲಿಂಗಾಯತ ಪಂಚಮಸಾಲಿ ಮುಖಂಡ ರಾಜು ಮಗದುಮ್ಮ, ಕರವೇ ಅದ್ಯಕ್ಷ ದೀಪಕ ಗುಡಗನಟ್ಟಿ, ನಾವಲಗಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಈರನಗೌಡ ಪಾಟೀಲ ಮತ್ತಿತ್ತರರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!