Breaking News
Home / featured / ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಸ್ವಾಮೀಜಿಯವರ ಸಂದರ್ಶನ

ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಸ್ವಾಮೀಜಿಯವರ ಸಂದರ್ಶನ

12ನೆಯ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ನೀಡಿದಂತ ಲಿಂಗಾಯತ ಧರ್ಮದ ತಳಹದಿಯ ಮೇಲೆ ಕರ್ನಾಟಕದಲ್ಲಿ ಸಾಕಷ್ಟು ಮಠಗಳು ಹುಟ್ಟಿಕೊಂಡವು. ಅವುಗಳು ವಚನ ಸಾಹಿತ್ಯ ಪ್ರಸಾರ, ಬಸವತತ್ವದ ಸಂಸ್ಕಾರದ ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹ ನಡೆಸುತ್ತಾ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬರುತ್ತಿವೆ. ಅಂತಹಹ ಮಠಗಳಲ್ಲಿ ಹುಕ್ಕೇರಿಯ ವಿರಕ್ತಮಠವು ಒಂದಾಗಿದೆ.

ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಲಿಂಗಾಯತ ಧರ್ಮ ಮತ್ತು ವಿರಕ್ತಮಠಗಳ ಕುರಿತು ಸಂಕ್ಷಿಪ್ತ ವಿವರಣೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ.

ಸಂದರ್ಶನದ ಲೈವ್ ವಿಡಿಯೋ ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ…👇

ಪ್ರಶ್ನೆ-1) ಪೂಜ್ಯರೆ ಶರಣು-ಶರಣಾರ್ಥಿಗಳು
ಪೂಜ್ಯರೇ ತಾವು ಈ ಭಾಗದ ಯುವ ಮಠಾಧೀಶರಾಗಿದ್ದು ಲಿಂಗಾಯತ ಧಾರ್ಮೀಕ ಆಚಾರ-ವಿಚಾರಗಳ ಕುರಿತು ತಮ್ಮ ಅನಿಸಿಕೆ ಏನು..?

ಪೂಜ್ಯರು – 12ನೇ ಶತಮಾನದಲ್ಲಿ ಸ್ಥಾಪನೆಯಾದ ಲಿಂಗಾಯತ ಧರ್ಮ ಪರಿಪೂರ್ಣವಾದದ್ದು. ಬಸವಾದಿ ಶರಣರು ಹತ್ತಾರು ದೇವಸ್ಥಾನಗಳನ್ನು ಸುತ್ತುವ ಬದಲಾಗಿ ನಿಮ್ಮ ಕೈಯೊಳಗಿನ ಇಷ್ಟಲಿಂಗವನ್ನು ಪೂಜಿಸುವ ಮೂಲಕ ನಿನ್ನ ಅರಿವು ನಿನಗೆ ತಿಳಿಯುವುದು. ಆ ಅರಿವೇ ನಿನ್ನ ಗುರು ಎಂಬ ಸತ್ಯ ಸಂದೇಶವನ್ನು ಧರ್ಮಗುರು ಬಸವಣ್ಣನವರು ತಿಳಿಸಿದ್ದಾರೆ. ಅಷ್ಠಾವರಣ, ಪಂಚಾಚಾರ, ಷಟಸ್ಥಲ ತತ್ವಗಳು ಲಿಂಗಾಯತರಿಗೆ ಬಹಳ ಪ್ರಮುಖವಾಗಿವೆ. ಇಂತಹ ಸಂದೇಶವನ್ನು ಯುವಕರಿಗೆ ತಿಳಿಸಲು ಪ್ರಯತ್ನಿಸುವೆ. ಅನೇಕ ಪುರೋಹಿತಶಾಹಿ ಮನಸ್ಥಿತಿಯ ಮಠಾಧೀಶರು ಹತ್ತು ಹಲವಾರು ಪೂಜೆಗಳನ್ನು ಮಾಡಿ ಎಂದು ಹೇಳುವುದರ ಜೊತೆಗೆ ಹೋಮ-ಹವನಗಳಿಂದ ಮಾಡಲು ತಿಳಸುತ್ತಾರೆ. ಆದರೆ ಲಿಂಗಾಯತರ ಧಾರ್ಮಿಕ ಚಟುವಟಿಕೆ ಎಂಬುವುದು ಹೋಮ-ಹವನಗಳಿಂದ ಕೂಡಿರದೇ, ಬಸವಣ್ಣನವರು ಎನ್ನ ಕಾಲೇ ಕಂಬ ದೇಹವೇ ದೇಗುಲ, ಶಿರವೇ ಹೊನ್ನಕಳಸವಯ್ಯಾ ಎಂದು ಹೇಳಿರುವುದು ತನ್ನಲ್ಲಿಯೇ ಆ ದೇವರ ಚೈತನ್ಯವಿದೆ ಅದು ಲಿಂಗಪೂಜೆಯಿಂದ ಸಾಧ್ಯವಿದೆ ಎಂದು ತಿಳಿಸಿದ್ದಾರೆ.  ಲಿಂಗಾಯತ ಧರ್ಮವು ಮೊಟ್ಟ ಮೊದಲಿಗೆ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದೆ. ಬಹಳಷ್ಟು ಸರಳತೆಯಿಂದ ಕೂಡಿದೆ.

ಪ್ರಶ್ನೆ-2) 12ನೆಯ ಶತಮಾನದಲ್ಲಿ ಆರಂಭಿಸಿರುವ ಶರಣರ ಚಿಂತನೆ ಪ್ರಸ್ತುತ 21ನೇ ಶತಮಾನಕ್ಕೆ ಎಷ್ಟು ಅವಶ್ಯಕವಿದೆ.

ಪೂಜ್ಯರು – ಇಂದಿನ ದಿನಮಾನದಲ್ಲಿ ತುಂಬಾ ಅವಶ್ಯಕತೆ ಇದೆ. ನಾವು-ನೀವೆಲ್ಲರೂ 21ನೆಯ ಶತಮಾನದಲ್ಲಿ ಇದ್ದಿವಿ ಈಗ ಆಧುನಿಕತೆ, ತಂತ್ರಜ್ಞಾನ ಮುಂದೆವರೆದರು ಶರಣರು ನೀಡಿದ ಭಕ್ತಿ ಕಾಯಕ-ದಾಸೋಹ, ಸಮಾನತೆಯ ತತ್ವಗಳ ಪ್ರಜ್ಞೆ ಮೂಡಿಸಲು ಇಂದಿನ ದಿನಮಾನಗಳಲ್ಲಿ ಬಹಳಷ್ಟು ಅವಶ್ಯಕತೆ ಇದೆ.

 

ಪ್ರಶ್ನೆ-3) ಪೂಜ್ಯರೇ ತಾವು ಆದ್ಯಾತ್ಮದ ಬಗ್ಗೆ ಒಲವು ಹೊಂದಲು ಕಾರಣವೇನು?

– ಪೂರ್ವಾಶ್ರಮದಲ್ಲಿ ತಂದೆ-ತಾಯಿ ಸಂಸ್ಕಾರ ಕಲಿಸಬೇಕೆಂಬ ಅಸೆಯಿತ್ತು, ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರ ಮೇಲೆತ್ತಿರುವಂತಹ ಬಸವಾದಿ ಶರಣರ ಕುರಿತು ಅಧ್ಯಯನ ಮಾಡಲು ಒಲವು ಹೆಚ್ಚಾಯಿತು. ಅದೇ ರೀತಿ ಶಿವಯೋಗ ಮಂದಿರ, ತೋಂಟದಾರ್ಯ ಮಠದಲ್ಲಿ ಅಧ್ಯಯನ ಮಾಡಿದೆ, ತೋಂಟದ ಸಿದ್ದರಾಮ ಮಹಾಸ್ವಾಮೀಜಿಗಳು ಚನ್ಮಯ ದೀಕ್ಷೆ ನೀಡಿ ಹುಕ್ಕೇರಿಯ ವಿರಕ್ತ ಮಠಕ್ಕೆ ನೇಮಕ ಮಾಡಿ ಹೆಚ್ಚಿನ ಜವಾಬ್ದಾರಿ ನೀಡಿದರು.

ಪ್ರಶ್ನೆ-4) ಲಿಂಗಾಯತ ಧರ್ಮದ ಕುರಿತು ನಿಮ್ಮ ವ್ಯಾಖ್ಯಾನವೇನು?

-ಲಿಂಗಾಯತ ದರ್ಮವು ಜಗತ್ತಿನ ಶ್ರೇಷ್ಠ ಧರ್ಮವಾಗಿದೆ, ಸ್ತ್ರೀ-ಸಮಾನತೆ, ಸಹೋದರತೆಯನ್ನು ಕಾಣಬಹುದು ಮತ್ತು ಕಾಯಕ, ದಾಸೋಹ ತತ್ವ ಸಿದ್ದಾಂತವನ್ನು ಪರಿಚಯಿಸಿದ ಮೊದಲ ಧರ್ಮವಾಗಿದೆ‌.

ಪ್ರಶ್ನೆ-5) ಯುವ ಮಠಾದೀಶರಿಗೆ ನಿಮ್ಮ ಸಂದೇಶವೇನು?

-ಪ್ರಮುಖವಾಗಿ ಯುವ ಮಠಾದೀಶರು ನಾಡಿನಾದ್ಯಂತ ಸಂಚರಿಸಿ ಬಸವ ತತ್ವ, ಸಂಸ್ಕಾರವನ್ನು ನೀಡಬೇಕು, ಲಿಂಗಾಯತ ಧರ್ಮಿಯರನ್ನ ಜಾಗೃತಗೊಳಿಸಬೇಕು. ಈ ನಿಟ್ಟಿನಲ್ಲಿ ನಾವು ಸಂಚಾರಿ ಕಲ್ಯಾಣ ದರ್ಶನ ಎಂಬ ಶಿರ್ಷಿಕೆಯಡಿ ನಾಡಿನಾದ್ಯಂತ ಬಸವ ತತ್ವ ಪ್ರಚಾರ ಮಾಡುವ ಉದ್ದೇಶವನ್ನು ಹೊಂದಿದ್ದೇನೆ.

ಪ್ರಶ್ನೆ-6) ಹುಕ್ಕೇರಿಯ ವಿರಕ್ತಮಠಕ್ಕೆ ತನ್ನದೇಯಾದ ವಿಶೇಷ ಸ್ಥಾನಮಾನವಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ.

ಹುಕ್ಕೇರಿಯ ವಿರಕ್ತ ಮಠ

-12 ನೇ ಶತಮಾನದಲ್ಲಿ ಬಸವಾದಿ ಶರಣರು ಹಾದುಹೋದ ಪುಣ್ಯಭೂಮಿಯಾಗಿದೆ. 18 ಮತ್ತು 19 ಶತಮಾನದಲ್ಲಿ ಹೆಚ್ಚಿನ ಅದ್ಯಯನ ಮಾಡಲು ಕಾಶಿಗೆ ಹೋಗಬೇಕು ಎಂಬ ಕಾಲಗಟ್ಟದಲ್ಲಿ ಸಂಸ್ಕೃತ ಪಾಠಶಾಲೆ ಆರಂಭಿಸಿ, ಅನೇಕ ಜನರಿಗೆ ವಿದ್ಯೆ, ಸಂಸ್ಕಾರ ನೀಡಿ ಇವತ್ತು ನಾಡಿಗೆ ಸ್ವಾಮೀಜಿಗಳನ್ನ ನೀಡಿದೆ. ಮಠವು ಭಕ್ತರಿಗೆ ಸದಾಕಾಲ ಬಾಗಿಲು ತೆರೆದಿರುತ್ತದೆ.

ಪ್ರಶ್ನೆ-7) ಸಮಾಜದಲ್ಲಿ ಮೂಡನಂಬಿಕೆ, ಕಂದಾಚಾರಗಳಲ್ಲಿ ಭಾಗಿಯಾಗುವಂತವರು ಲಿಂಗಾಯತ ಧರ್ಮದ ಕುರಿತು ವಿರೋಧ ವ್ಯಕ್ತಪಡಿಸುತ್ತಾರೆ, ಅಂತವರಿಗೆ ಏನು ಹೇಳಲು ಇಚ್ಚಿಸುತ್ತೀರಿ.

– ವೈಚಾರಿಕ ನೆಲೆಯ ಮೇಲೆ ನಿಂತಿರುವ ಲಿಂಗಾಯತ ಧರ್ಮವನ್ನು ಶತಮಾನಗಳಿಂದಲೂ ಕೂಡಾ ಇಂತಹ ಮನೋಭವದವರು ವಿರೋಧಿಸಿಕೊಂಡು ಬಂದಿದ್ದಾರೆ. ಅಂತವರಿಗೆ ಅಜ್ಞಾನ ಸುತ್ತುವರೆದುಕೊಂಡಿದೆ ಎಂದು ಹೇಳಬಹುದು.

ಪ್ರಶ್ನೆ-8) ಇತ್ತಿಚೇಗೆ ರಾಜಕಾರಣದಲ್ಲಿ ಪ್ರತ್ಯೇಕ ಧರ್ಮದ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ರಾಜಕೀಯ ಏರು-ಪೇರುಗಳಾಗಿವೆ ಇದಕ್ಕೆ ತಮ್ಮ ಅಭಿಪ್ರಾಯವೇನು?

– ಒಳ್ಳೆಯ ಪ್ರಶ್ನೆ ಕೇಳಿದ್ದಿರಿ, ಲಿಂಗಾಯತ ಧರ್ಮ 12 ಶತಮಾನದಲ್ಲಿ ಸ್ಥಾಪನೆಯಾದರೂ ಕೂಡಾ ಸಮಾಜದ ಪ್ರತಿಯೊಬ್ಬರಿಗೂ ಅರಿವು ಮೂಡಲು ಪ್ರತ್ಯೇಕ ಧರ್ಮದ ಹೋರಾಟ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ, ಮಹಾನಗರಗಳಲ್ಲಿ ಲಿಂಗಾಯತ ಧರ್ಮ ಸಮಾವೇಶವಾಗಿರುವುದರಿಂದ ಪ್ರತಿಯೊಬ್ಬರಿಗೂ ಲಿಂಗಾಯತ ಧರ್ಮದ ಅರಿವು ಮೂಡಿದೆ ಮತ್ತು ಲಿಂಗಾಯತರು ಜಾಗೃತರಾಗಿದ್ದಾರೆ.

ಪ್ರಶ್ನೆ-9) ಪ್ರತ್ಯೇಕ ಧರ್ಮದ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿರುವ ಮಠಾದೀಶರಿಗೆ ಏನು ಹೇಳಲಿಕ್ಕೆ ಇಷ್ಟಪಡುತ್ತಿರಿ.

– ಕೆಲವು ಮಠಾದೀಶರಲ್ಲಿ ಲಿಂಗಾಯತ ಧರ್ಮದ ಕುರಿತು ಸಂಪೂರ್ಣವಾದ ಅರಿವು ಇಲ್ಲ, ಮತ್ತು ಕೆಲವರಿಗೆ ಅಸ್ತಿತ್ವದ ಭಯವು ಕೂಡಾ ಇದೆ‌. ಲಿಂಗಾಯತ ಧರ್ಮದ ಕುರಿತು ಮೂಡಿದೆ ಮೇಲೆ ಅವರು ಕೂಡಾ ಲಿಂಗಾಯತ ಧರ್ಮವನ್ನು ಒಪ್ಪಿ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಕೈ ಜೋಡಿಸುತ್ತಾರೆ ಎಂಬ ವಿಶ್ವಾಸವಿದೆ.

ಪ್ರಶ್ನೆ-10) ಶೈಕ್ಷಣಿಕವಾಗಿ ಲಿಂಗಾಯತ ಧರ್ಮಿಯರು ಮಾಡಬೇಕಾದದ್ದು ?

– ಪ್ರತಿಯೊಬ್ಬ ಲಿಂಗಾಯತರ ಮನೆಗಳಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲೆ ಲಿಂಗಾಯತ ಧರ್ಮದ ಸಂಸ್ಕಾರಗಳನ್ನು ತಿಳಿಸುವಂತಹ ಕಾರ್ಯವಾಗಬೇಕಾಗಿದೆ. ಕಾಲಕ್ರಮೇಣ ಇದರ ಫಲ ದೊರೆಯುತ್ತದೆ.

ಪ್ರಶ್ನೆ-11) ಲಿಂಗಾಯತ ಯುವ ಸಮುದಾಯಕ್ಕೆ ನಿಮ್ಮ ಸಂದೇಶವೇನು?

– ಲಿಂಗಾಯತ ಯುವ ಸಮುದಾಯವು ಬದಲಾಗುತ್ತಿದೆ. ಧರ್ಮದ ಕುರಿತು ಜಾಗೃತಿ ಬರುತ್ತಿದೆ. ಕಾಯಕ, ದಾಸೋಹ ಸಿದ್ದಾಂತಗಳು ಯುವಕರನ್ನು ಆಕರ್ಷಿಸಿ ಧರ್ಮದ ಕುರಿತು ಒಲವು ಹೆಚ್ಚುತ್ತಿದೆ. ಮಠಾದೀಶರು ಕೂಡಾ ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕಿದೆ.

 

ಶರಣು-ಶರಣಾರ್ಥಿಗಳು 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!