Breaking News
Home / featured / ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಲಿಂಗೈಕ್ಯ

ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಲಿಂಗೈಕ್ಯ

 

ಸವದತ್ತಿ: ರಾಷ್ಟ್ರೀಯ ಬಸವದಳದ ಗೌರವಾದ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ, ಸಮಾಜ ಸೇವಕ ಆನಂದ ಚೋಪ್ರಾ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಸವದತ್ತಿ ಕ್ಷೇತ್ರದಿಂದ 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಅವರು, ಶನಿವಾರ ಬೆಳಗಿನಜಾವ ಹೃದಯಾಘಾತದಿಂದ ನಿಧನರಾದರು.

ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಹೋಗಿ ಬಂದು ಮಲಗಿದ್ದ ಅವರು, ಶನಿವಾರ ಮುಂಜಾನೆ 5 ಗಂಟೆಗೆ ವಾಕಿಂಗ್ ಹೋಗಲು ಎದ್ದರಾದರೂ ಸಾಧ್ಯವಾಗದೆ ಮತ್ತೆ ಕುಸಿದು ಕುಳಿತು ಹೃದಯಾಘಾತಕ್ಕೊಳಗಾದರು.

ಅವರು ಬೆಳಗಾವಿ ಲಿಂಗಾಯತ ಧರ್ಮದ ಸಮಾವೇಶದಲ್ಲಿ ಬಹಳಷ್ಟು ಪ್ರಮುಖ ಪಾತ್ರವಹಿಸಿದ್ದರು. ಲಿಂಗಾಯತ ಧರ್ಮದ, ಬಸವಾದಿ ಶರಣರ ಪ್ರವಚನಗಳ ಆಯೋಜಿಸುವುದು, ಬಸವ ಜಯಂತಿಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಮಾಡಿದ ಸವದತ್ತಿ ತಾಲೂಕಿನ ಜನಪ್ರಿಯ ನಾಯಕರು, ಸಮಾಜ ಸೇವಕರು. ರಾಷ್ಟ್ರಿಯ ಬಸವ ದಳದ ಗೌರವಾಧ್ಯಕ್ಷರು, ಬಸವ ಭಕ್ತರು, ಮಹಾದಾನಿಗಳು, ಸವದತ್ತಿಯ ನಿಸ್ವಾರ್ಥ ರಾಜಕಾರಣಿಗಳು, ಬಡವರ ಆಪ್ತ ಬಂಧುಗಳು ಎಷ್ಟು ಹೊಗಳಿದರು ಸಾಲದು ಅಂತಹ ದಿಮಂತ ವ್ಯಕ್ತಿತ್ವ ಶರಣಜೀವಿ ಆನಂದ ಚೋಪ್ರಾ ಅವರದ್ದು.

ಇಂದು ಬೆಳಗ್ಗೆ ಸುಮಾರು 2 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಹೇಳಲು ಖೇದವೆನಿಸುತ್ತಿದೆ. ಸೃಷ್ಟಿಕರ್ತ ಪರಮಾತ್ಮನ ಹಾಗೂ ಧರ್ಮ ಗುರು ಬಸವಣ್ಣನವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಸವದತ್ತಿ ನಾಡಿನ ಜನತೆಯ ಶ್ರೇಯಸ್ಸಿಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಶರಣ ಆನಂದ ಎಸ್ ಚೋಪ್ರಾರವರು ಇಂದು ನಮ್ಮನ್ನೆಲ್ಲ ಅಗಲಿರುವುದು ಬಸವ ದಳಕ್ಕೆ ತುಂಬಲಾರದ ಬಹಳಷ್ಟು ನೋವು ತರಿಸಿದೆ ಇನ್ನು ನಮ್ಮ ನಡುವೆ ಕೇವಲ ಅವರ ನೆನಪುಗಳು ಮಾತ್ರ.

ಅವರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕೆಲವು ತಿಂಗಳ ಹಿಂದೆ ಅವರ ಮೇಲೆ ಅಪರಿಚಿತರಿಂದ ಹಲ್ಲೆ ಕೂಡ ನಡೆದಿತ್ತು.

  • ಸವದತ್ತಿ ಮತಕ್ಷೇತ್ರ ಯುವ ಮುಖಂಡರು ಸಮಾಜ ಸೇವಕರು ಕೊಡುಗೈ ದಾನಿ ಬಸವಭಕ್ತ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರು ಆಗಿದ್ದ ಆನಂದ ಚೋಪ್ರಾ ಅವರ ಆಕಾಲಿಕ ನಿಧನ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.. ಸೃಷ್ಟಿಕರ್ತ ಲಿಂಗದೇವ ಹಾಗೂ ಧರ್ಮ ಗುರು ಬಸವಣ್ಣನವರು ಆನಂದ್ ಚೋಪ್ರಾ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ..                                           – ಬಾಬಾಸಾಹೇಬ ಪಾಟೀಲ
About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!