Breaking News
Home / featured / ಬಸವಣ್ಣನವರ ಕುರಿತು ಆದ ಚಲನಚಿತ್ರಗಳೆಷ್ಟು..?

ಬಸವಣ್ಣನವರ ಕುರಿತು ಆದ ಚಲನಚಿತ್ರಗಳೆಷ್ಟು..?

ವಿಜಯಪುರ : ಇಲ್ಲಿಯವರೆಗೆ ಬಸವಣ್ಣನವರ ಕುರಿತು (ಹೆಚ್ಚಿದ್ದರೆ ಹೇಳಿ) ಬಂದಿದ್ದು ಬರೀ ಎರಡೇ ಸಿನಿಮಾ. ಡಾ.ರಾಜಕುಮಾರ್ ರಿಂದ ‘ವಾರ ಬಂತಮ್ಮ.. ಗುರುವಾರ ಬಂತಮ್ಮ..’ ಅಂತ ಹಾಡಿಸಲಾಯಿತೇ ಹೊರತು ಅವರಿಂದ ಬಸವಣ್ಣನವರ ಪಾತ್ರ ಮಾಡಿಸಲಿಲ್ಲ. ಬಸವಾದಿ ಶರಣರ ಕುರಿತು ಹಾಗೂ ಕಲ್ಯಾಣದ ಕ್ರಾಂತಿಯ ಕುರಿತು ಚಲನಚಿತ್ರಗಳೇ ಮೂಡಿಬರಲಿಲ್ಲ ಹೀಗಾಗಿ ಬಸವಣ್ಣನವರ ಕುರಿತು ಪರಿಚಯ, ವಚನಗಳ ಅರಿವು, ಇಷ್ಟಲಿಂಗದ ಪರಿಕಲ್ಪನೆ, ಭಕ್ತಿ, ಗೌರವಗಳು ಜನರಲ್ಲಿ ಬೆಳೆಯಲಿಲ್ಲ ಎಂಬ ನೋವು ನನಗಿದೆ. ರಾಮ, ಕೃಷ್ಣರ ಸೀನುಗಳಿಗೆ ಈಗಲೂ ಲೆಕ್ಕವಿಲ್ಲ. ಒಂದೇ ಒಂದು ಸಿನಿಮಾದಲ್ಲಿ ಇಷ್ಟಲಿಂಗ ಪೂಜೆಯಾಗಲಿ, ಬುದ್ಧನ ಧ್ಯಾನದ ಪರಿಯಾಗಲೀ ಇಲ್ಲ. ಯಾಕೆ ನಮ್ಮ ಜೀವನ ಕ್ರಮ ದಾಖಲಾಗಬಾರದೇ. ಹೀಗಾಗಿ ನಮ್ಮ ಮಕ್ಕಳಿಗೆ ನಕುಲ, ಸಹದೇವರು ಗೊತ್ತೇ ಹೊರತು ನಿಜವಾದ ಬುದ್ಧ, ಬಸವ, ಮಹಾವೀರರು ಗೊತ್ತಿಲ್ಲ. ದಿನಾ ಟೀವಿಲಿ ವಾರದ ಲೆಕ್ಕದಲ್ಲಿ ದಿನಾ ಒಬ್ಬೊಬ್ಬ ದೇವರ ಸ್ತುತಿ ಬಿತ್ತರಿಸಲಾಗುತ್ತದೆ. ಅದೇ ದೇವರ ಅನ್ವೇಷಣೆ ಕುರಿತು ಚಿಂತನೆ ಇಲ್ಲ.
ಇದೆಲ್ಲ ಯಾಕಾಯ್ತು ಎಂದು ಬೇರೆ ಹೇಳಬೇಕಿಲ್ಲ. ಪುಣ್ಯಾತ್ಮ ಹೊನ್ನಪ್ಪ ಭಾಗವತರು ಬಸಬಣ್ಣನಾಗಿ ನಟಿಸಿದ ಬಸವಣ್ಣರ ಒಂದು ಸಿನಿಮಾ, ಇನ್ನೊಂದು ಮಾತೆ ಮಹಾದೇವಿಯವರು ಮಾಡಿದ ಚಿತ್ರ ಅಷ್ಟೇ. ಅಣ್ಣಾವ್ರು ಹಾಡಿದ್ದರಿಂದ, ಭಕ್ತರಾಗಿದ್ದರಿಂದ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಯಿತು. ನಾನೂ ಕೂಡ ಸಣ್ಣವನಿದ್ದಾಗ ಪ್ರಭಾವಿತನಾಗಿದ್ದೆ. ರಾಘವೇಂದ್ರರು ಕೇಳಿದ್ದೆಲ್ಲ ಕೊಡ್ತಾರೆ ಎಂದು ನಂಬಿದ್ದೆ! ಇದೇ ಕೆಲಸ ವಿಚಾರ ಬಿತ್ತನೆಯಲ್ಲಾಗಿದ್ದರೆ, ಮಹಾತ್ಮರ ಜೀವನ ಗಾಥೆ ತಿಳಿಸಿದ್ದರೆ, ಅದೆಷ್ಟೋ ಜನ ಮನುಷ್ಯರಾಗುತ್ತಿದ್ದರು. ಆದರದು ಯಾರಿಗೂ ಬೇಕಿರಲಿಲ್ಲ. ಯಾರು ಈ ಮಾಧ್ಯಮಗಳನ್ನು ಆಳುತ್ತಿದ್ದಾರೋ ಅವರಿಗೆಲ್ಲ ಗೊತ್ತಿತ್ತು; ಇದೆಲ್ಲ ತೋರುಸಬಾರದು ಎಂದು. ಈಗ ಮಹಾ ನಾಯಕನ ಪ್ರಹಸನವೂ ಇದಕ್ಕೆಲ್ಲ ಉದಾಹರಣೆಯಷ್ಟೇ.
ನಿಮಗೆ ಗೊತ್ತಿದ್ದರೆ, ಬುದ್ಧನ ಕುರಿತು ಒಂದೇ ಸಿನಿಮಾ ಕನ್ನಡದಲ್ಲಿ ಬಂದಿದ್ದರೆ ಹೇಳಿ. ಬಸವಣ್ಣರ ಕುರಿತು ಇಲ್ಲೀ ತನಕ ಒಂದೇ ಧಾರಾವಾಹಿಗಳಿಲ್ಲ, ಹಾಡಿಲ್ಲ, ಎಲ್ಲೂ ವಚನಗಳಿಲ್ಲ. ಶರಣರನ್ನು ಹೊರ ತರಲು ಇಂತಹವರ ಗುಡಾ ಗುದಮುರಗಿ ಮಾಡಲು ಒಂಬೈನೂರು ವರ್ಷ ಬೇಕಾಯಿತು! ಅಂಬೇಡ್ಕರ್ ಅವರ ಕುರಿತು ಇನ್ನೂ ಸದಭಿಪ್ರಾಯ ಮೂಡುತ್ತಿಲ್ಲ.
ಯಾಕಿದೆಲ್ಲ? ಇಷ್ಟೊಂದು ಕಪಟತನವೇ?
ನೀವು ನಮ್ಮನ್ನೆಲ್ಲ ಕತ್ತಲೆ ಕೋಣೆಯಲ್ಲಿಟ್ಟು ಎಷ್ಟು ದಿನ ಅಂತ ಸೂರ್ಯನನ್ನು ಮುಚ್ಚಿಡುತ್ತೀರಿ.. ಮುಚ್ಚಿ. ನಿಮ್ಮದಾದರೂ ಆಗಲಿ; ಒಂದಿನ ಬೆಳಕು ಬರುತ್ತೆ.

ಶಿವಕುಮಾರ್ ಉಪ್ಪಿನ
ಸಿಂದಗಿ


About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!