Breaking News
Home / featured / ಕಿತ್ತೂರಿನಲ್ಲಿ ಆರ್‌ಸಿಯು ಸ್ಥಾಪಿಸಬೇಕೆಂದು ನಾಳೆ “ಪಕ್ಷಾತೀತ ಪ್ರತಿಭಟನೆ”

ಕಿತ್ತೂರಿನಲ್ಲಿ ಆರ್‌ಸಿಯು ಸ್ಥಾಪಿಸಬೇಕೆಂದು ನಾಳೆ “ಪಕ್ಷಾತೀತ ಪ್ರತಿಭಟನೆ”

 

ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ವಿ.ವಿ ಯನ್ನು ಕಿತ್ತೂರಿನಲ್ಲಿಯೆ ಸ್ಥಾಪಿಸಬೇಕು ಎಂದು “ಪಕ್ಷಾತೀತ ಪ್ರತಿಭಟನೆ” ಮಾಡುವ ಕುರಿತು ಕಿತ್ತೂರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಜರುಗಿತು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿ.ಪಂ ಸದಸ್ಯ ಬಾಬಾಸಾಹೇಬ್ ಪಾಟೀಲ ಹಾಗೂ ರಾಜಾಸಲೀಮ್ ಕಾಶೀಮನವರ ಜಂಟಿಯಾಗಿ ಮಾತನಾಡಿ ಸೆಪ್ಟೆಂಬರ್ 22 ರಂದು ಮುಂಜಾನೆ 11 ಘಂಟೆಗೆ ರಾಷ್ಟ್ರಮಾತೆ ಕಿತ್ತೂರು ಚನ್ನಮ್ಮನ ಕರ್ಮಭೂಮಿ ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು ಎಂದು ಪಟ್ಟಣದ ಅರಳಿಕಟ್ಟಿಯಿಂದ ತಹಶಿಲ್ದಾರ ಕಛೇರಿವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಕಿತ್ತೂರು ನಾಡಿನ ಸಮಸ್ಥ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ಸ್ಮರಣೋತ್ಸವ ಸಮೀತಿ ಅಧ್ಯಕ್ಷ ಬಸವರಾಜ ಚಿನಗುಡಿ, ನಿಂಗಪ್ಪ ಹಣಜಿ, ಎಪಿಎಂಸಿ ಸದಸ್ಯ ಸಂಗನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಂಘದ ಕಾರ್ಯಾಧ್ಯಕ್ಷ ರಮೇಶ ಮೋಖಾಶಿ, ಕೆಪಿಸಿಸಿ ಹಿಂದುಳಿದ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣಪ್ಪ ರಾಮರಾವ್, ಪ.ಪಂ ಸದಸ್ಯರಾದ ಕೃಷ್ಣಾ ಬಾಳೇಕುಂದ್ರಿ, ಕಿರಣ ವಾಳದ, ಅಸ್ಪಾಕ್ ಹವಾಲ್ದಾರ್, ತಾ.ಪಂ ಸದಸ್ಯ ಮುದಕಪ್ಪ ಮರಡಿ, ಸಾವಂತ ಕಿರಬನ್ನವರ, ಮಂಜು ದೊಡ್ಡಣ್ಣವರ ಮಾರುತಿ ನಾಯ್ಕರ, ಬಸವರಾಜ ಸಂಗೊಳ್ಳಿ, ಅಡಿವೆಪ್ಪ ಗೋಣಿ, ಬಸವರಾಜ ಕುದರಿಮನಿ, ಸದಸ್ಯರು, ರಾಷ್ಟ್ರೀಯ ಬಸವ ದಳ ಮತ್ತು ಬಸವ ಸೇನೆಯ ಸದಸ್ಯರು ಉಪಸ್ಥಿತರಿದ್ದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!