Breaking News
Home / featured / ಬಸವತತ್ವ ನಿಷ್ಠುರ, ಕೇಂದ್ರ ಸಚಿವ ಸುರೇಶ ಅಂಗಡಿ ಲಿಂಗೈಕ್ಯ

ಬಸವತತ್ವ ನಿಷ್ಠುರ, ಕೇಂದ್ರ ಸಚಿವ ಸುರೇಶ ಅಂಗಡಿ ಲಿಂಗೈಕ್ಯ

 

ಬೆಳಗಾವಿ : ನಗರದ ಲಿಂಗಾಯತ ಸಂಘಟನೆಯೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಸುರೇಶ ಅಂಗಡಿ ಅವರು ನೂರಾರು ಬಸವತತ್ವ ಪ್ರಸಾರದ ಕಾರ್ಯವನ್ನು ಕೈಗೊಂಡಿದ್ದರು. ಇವರು ಇಂದು ಕೊರೊನಾ ಸೋಂಕಿಗೆ ತುತ್ತಾಗಿ ಲಿಂಗೈಕ್ಯರಾಗಿದ್ದು ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

2014ರಲ್ಲಿ ದೆಹಲಿಯಲ್ಲಿ ಜರುಗಿದ ‌ಲಿಂಗಾಯತ ಧರ್ಮದ ಸಮಾವೇಶ ಬೆಳಗಾವಿ ಸಂಸದ ಸುರೇಶ ಅಂಗಡಿಯವರು

ಇವರಲ್ಲಿರುವ ಲಿಂಗಾಯತ ಸಮಾಜದ ಮೇಲಿನ ಕಾಳಜಿ ಹಾಗೂ ಸಹಕಾರದಿಂದ ಇಂದು ನಡೆಯುತ್ತಿರುವ ಲಿಂಗಾಯತ ಕ್ರಾಂತಿ ಪತ್ರಿಕೆ ಆರಂಭವಾಗುವಲ್ಲಿ ತಮ್ಮದೇ ಆದ ಸೇವೆಯನ್ನು ಮಾಡಿದ್ದರು. ಹತ್ತಾರು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯಾದ್ಯಂತ ಬಸವ ಜಯಂತಿ ಆಚರಿಸಿ ಸರಕಾರಿ ಕಛೇರಿಗಳಿಗೆ, ಶಾಲಾ-ಕಾಲೇಜುಗಳಿಗೆ ಧರ್ಮಗುರು ಬಸವಣ್ಣನವರ ಭಾವಚಿತ್ರವನ್ನು ಉಚಿತವಾಗಿ ನೀಡಿದ್ದರು ಹಾಗೂ ಬೆಳಗಾವಿಯಲ್ಲಿ ಬಸವತತ್ವ ಪ್ರಸಾರಕರಿಂದ, ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡಿನಾದ್ಯಂತ ಬಸವತತ್ವ ಪ್ರಸಾರ ಕಾರ್ಯ ಮಾಡಿದ್ದರು.

ಬೆಳಗಾವಿ ಲಿಂಗಾಯತ ಸಂಘಟನೆ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನಿಡಿದ್ದರು. ಇತಂಹ ದಿಮಂತ ವ್ಯಕ್ತಿ ಇಂದು ನಮ್ಮನೆಲ್ಲ ಅಗಲಿದ್ದು ನೋವು ತರಿಸಿದೆ. ಸೃಷ್ಟಿಕರ್ತ ಪರಮಾತ್ಮನ ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ.

ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ಹಾಗೂ ಲಿಂಗಾಯತ ಸಂಘಟನೆ ಬೆಳಗಾವಿ, ಲಿಂಗಾಯತ ಕ್ರಾಂತಿ ಮಾಸಪತ್ರಿಕೆಯ ಸರ್ವ ಸದಸ್ಯರು ಶ್ರೀಯುತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.

 

ಅವರ ಮಾಡಿದ ಸತ್ಕಾರ್ಯಗಳು

* 2014 ರ ದೆಹಲಿ ಲಿಂಗಾಯತ ಧರ್ಮದ ಸಮಾವೇಶದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು.

*ಶಾಲಾ-ಕಾಲೇಜುಗಳಲ್ಲಿ ಸುಮಾರು 15ವರ್ಷಗಳ ಹಿಂದೆಯೇ ಗುರು ಬಸವಣ್ಣನವರು ಪೋಟೋ ಉಚಿತವಾಗಿ ನೀಡಿದ್ದರು.

*ಬೆಳಗಾವಿ ಲಿಂಗಾಯತ ಸಂಘಟನೆ ಹಾಗೂ ಬೆಳಗಾವಿ ರಾಷ್ಟ್ರೀಯ ಬಸವದಳದ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದರು.

* ಲಿಂಗಾಯತ ಕ್ರಾಂತಿ ಪತ್ರಿಕೆ ಆರಂಭಿಸಲು ಹೊರಟಾಗ ಧರ್ಮದ ಹೋರಾಟ ಇರುವುದರಿಂದ ಸರಕಾರ ನೂತನ ಟೈಟಲ್ ಅನುಮತಿ ನೀಡಲು ತಿರಸ್ಕರಿಸಿದರು ಆದರೆ ಅವರ ಗಮನಕ್ಕೆ ಬಂದಾಗ ಶೀಘ್ರವೇ ಅಧಿಕಾರಿಗಳಿಗೆ ಕರೆ ಮೂಲಕ ನಮ್ಮ ಕಾರ್ಯಕ್ಕೆ ಸಹಕರಿಸಿದ್ದರು.

*2018ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಲಿಂಗಾಯತ ಧರ್ಮದ ಸಮಾವೇಶದ ಸಂದರ್ಭದಲ್ಲಿ ನಮ್ಮೂರಿನ ಸುಮಾರು 81 ಜನರಿಗೆ ದೆಹಲಿ ಸಂಸತ್ ಭವನ ವೀಕ್ಷಿಸಲು ಅನುಮತಿ ನೀಡುವಂತೆ ಪತ್ರ ಕೊಟ್ಟು ಕಳುಹಿಸಿದ್ದರು.

*ಜನವರಿ 26 ರ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಕರ್ನಾಟಕದಿಂದ ಗುರು ಬಸವಣ್ಣನವರ ಕಾಯಕ ಜೀವಿಗಳ ರೂಪಕವನ್ನು ಆಯ್ಕೆ ಮಾಡಿದ್ದರಲ್ಲಿ ಸನ್ಮಾನ್ಯರ ಶ್ರಮ ದೊಡ್ಡದು.

* ಸಂಸತ್ತು ಭವನದಲ್ಲಿ ಗುರು ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ಮನವಿ ಮಾಡಿದ್ದರು.

* ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರಮಾತೆ ರಾಣಿ ಕಿತ್ತೂರು ಚೆನ್ನಮ್ಮ ಹೆಸರಿಡಲು ಮನವಿ ನೀಡಿದ್ದರು.

*ಬೆಳಗಾವಿ-ಹಿರೇಬಾಗೆವಾಡಿ-ಚನ್ನಮ್ಮನ ಕಿತ್ತೂರು ಮೂಲಕ ನೂತನ ರೈಲ್ವೆ ಮಾರ್ಗಕ್ಕೆ ಅನುಮತಿ ನೀಡಿದರು.

* ಬೆಳಗಾವಿ ತಲುಪುವ 12 ಗಂಟೆಗಳ ಮಾರ್ಗವನ್ನು 2 ಗಂಟೆ ಅವಧಿ ಬೇಗನೆ ಮುಟ್ಟಬಹುದಾದ ಮಹತ್ತರ ಯೋಜನೆ ಜಾರಿಗೆ ತಂದಿದ್ದರು..

* ಬೆಳಗಾವಿ-ಬೆಂಗಳೂರು ಸೂಪರ್ ಪಾಸ್ಟ್ ರೈಲು ಆರಂಭಿಸಿದರು.

*ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸದ್ಗರು ಸಿದ್ದಾರೂಢರ ಹೆಸರು ಇಡುವ ಮೂಲಕ ಮಹಾತ್ಮರಿಗೆ ಗೌರವ ಸಲ್ಲಿಸಿದ್ದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!