Breaking News
Home / featured / ಲಿಂಗಾಯತರಿಗೆ ಮಾದರಿ ಶಾಸಕ ಬಿ. ನಾರಾಯಣರಾವ್

ಲಿಂಗಾಯತರಿಗೆ ಮಾದರಿ ಶಾಸಕ ಬಿ. ನಾರಾಯಣರಾವ್

 

ಎಮ್ಮವರಿಗೆ ಸಾವಿಲ್ಲ.
ಎಮ್ಮವರು ಸಾವನರಿಯರು.
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು, ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ
ಉಪಮಿಸಬಲ್ಲವರ ಕಾಣೆನು.

ನಮ್ಮವರಾದ ಬಿ.ನಾರಾಯಣರಾವ ರವರಿಗೆ ಸಾವಿಲ್ಲ.ಬಸವ ಭಕ್ತರಾದ ಅವರು ಲಿಂಗಾಯತ ನಾಯಕರಾದವರು ಹೀಗಿರಬೇಕು ಎಂಬ ಲಿಂಗಾಯತ ನಾಯಕರಿಗೆ ISI ಮಾರ್ಕ ಆಗಿದ್ದರು. ನಾನು ಮೊದಲು ಬಾರಿ ಅವರನ್ನು ಕಂಡಿದ್ದು ೧೯೯೪-೯೫ ರಲ್ಲಿ,ಸಚಿವ ಶ್ರೀ ಬಸವರಾಜ ಪಾಟೀಲ ಅಟ್ಟೂರ ರವರ ಮನೆಯಲ್ಲಿ. ತೀರ ಇತ್ತೀಚೆಗೆ ಕೆಲವು ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದೆ. ಬಸವಕಲ್ಯಾಣದ ಒಂದು ಸಮಾರಂಭ ದಲ್ಲಿ ಅವರು ಬಸವಣ್ಣನವರ ಬಗ್ಗೆ ಆಡಿದ ಮಾತುಗಳು ನನ್ನನ್ನು ಆಶ್ಚರ್ಯ ಚಕಿತನನ್ನಾಗಿಸಿತ್ತು. ಲಿಂಗಾಯತ ಸಮಾಜದ ನಾಯಕರಾರು ಆಡದ ಮಾತುಗಳನ್ನು ಅವರು ಅಂದು ಆಡಿದ್ದರು. ಜೀವನ ಪರ್ಯಂತ ಬಸವಣ್ಣನ ಸೇವೆ ತಮ್ಮ ಪರಮ ಗುರಿ ಎಂದಿದ್ದರು ಅವರು.

ಮುಂದೊಂದು ದಿನ ವಿಧಾನ ಸಭೆಯಲ್ಲಿ ಅವರು ತಮ್ಮ ತೆರೆದ ಹೃದಯವನ್ನು ಬಿಚ್ಚಿಟ್ಟರು ಶಾಸನ ಸಭೆಯಲ್ಲಿ. ಅಂದು ಅವರಾಡಿದ ಹೃದಯಾಳದ ಮಾತುಗಳು ಕೊಟ್ಯಾಂತರ ಲಿಂಗಾಯತರ ಗಮನ ಸೆಳೆಯಿತು.

ಇಂದು ನಿಜ ಜಂಗಮ ಕಣ್ಮರೆಯಾಗಿದ್ದಾರೆ, ಅವರ ಜಂಗಮ ಸೇವೆ ಮೊದಲಿಗಿಂತಲು ಅವಶ್ಯಕತೆ ಈಗ ಹೆಚ್ಚಿತ್ತು,ನಾವು ಅವರನ್ನು ಕಳೆದುಕೊಂಡಿದ್ದು ಲಿಂಗಾಯತ ಧರ್ಮಕ್ಕೆ ತುಂಬಲಾರದ ನಷ್ಟ. ಅವರ ಪ್ರಿಯಪಾತ್ರರಿಗೆ ಅವರ ಕಣ್ಮರೆಯ ದುಃಖ ಬರಿಸುವ ಶಕ್ತಿ ಆ ಬಸವಾದಿ ಶರಣರುನೀಡಲಿ.

ಶರಣಾಂಜಲಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!