Breaking News
Home / featured / ದಯವಿಟ್ಟು, ಬೇವಿನ ಬೀಜ ಬಿತ್ಲಕ್ ಹೋಗಬ್ಯಾಡ್ರೀ ….

ದಯವಿಟ್ಟು, ಬೇವಿನ ಬೀಜ ಬಿತ್ಲಕ್ ಹೋಗಬ್ಯಾಡ್ರೀ ….

 

“ಬೇವಿನ ಬೀಜ ಬಿತ್ತಿ ಮಾವಿನ ಹಣ್ಣ ತಿನ್ನುವ ಅಸಾಧ್ಯವಾದ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ.
ನಮ್ಮನ್ನು ಗೆಲ್ಲಿಸಿದ ಮತದಾರರಿಗೆ ಗೌರವ ನೀಡಬೇಕಾದರೆ ನಾವೂ ಗೌರವ ಉಳಿಸಿಕೊಳ್ಳಬೇಕು. ನಮ್ಮ ಮಾನ ಹರಾಜು ಹಾಕಿಕೊಳ್ಳುವುದು ಬೇಡ

ನಮಗೆ ಮತದಾರರೇ ಸಾಮ್ರಾಟರು, ಅವರೇ ನಮ್ಮ ಮಾಲಿಕರು ಹೊರತು ಮುಖ್ಯಮಂತ್ರಿಗಳು, ಸಭಾಪತಿಗಳಲ್ಲ.

ನೀವು 40 ಕೋಟಿ ಹಣ ಕೊಟ್ಟಿದರೂ ಕೂಡ ಎಲ್ಲಿಡಬೇಕೆಂಬುದು ಗೊತ್ತಿಲ್ಲ ನಂಗೆ, ಹಣ ಇಡಲು ಜಾಗವಿಲ್ಲ. ನಾ ಬಡವ ಇದ್ದೀನಿ. ನನಗೆ ಇರೋದೇ ಒಂದು ಗುಂಟೆ ಜಾಗ, ನನಗೆ ಮತದಾರರೇ ಮಾಲಿಕರು, ನಮಗೆ ಗೆಲ್ಲಿಸುವುದು ಸೋಲಿಸುವುದು ಅವರ ಕೈಯಲ್ಲಿದೆ.

ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಪ್ರಜಾಪ್ರಭುತ್ವ ಹುಟ್ಟಿದ್ದು ಬಸವಕಲ್ಯಾಣದ ಅನುಭವ ಮಂಟಪದಲ್ಲಿ . ಪ್ರಥಮ ಸಂಸತ್ತು ಕೂಡ ಅನುಭವ ಮಂಟಪವೇ ಆಗಿದೆ. ಸಕಲ ಜೀವಾತ್ಮರಿಗೂ ಲೇಸು ಬಯಸಿದ ಶರಣರು ಜೀವಪರ ಚಿಂತನೆ ನಮ್ಮೆಲ್ಲರಿಗೂ ಬರಲೆಂದು ವಿನಂತಿಸಿಕೊಳ್ಳುತ್ತೇನೆ .

ತಳವರ್ಗ ಸಮುದಾಯದ 77೦ ಶರಣರಿಗೆ ಕಾಯಕ ಹಾಗೂ ದಾಸೋಹ ಪರಿಕಲ್ಪನೆ ಮೂಡಿಸಿದ ಬಸವಣ್ಣ ನಮ್ಮ ಹೆಮ್ಮೆಯ ಕರ್ನಾಟದವರು. ಹಸಿದವರಿಗೆ ಅನ್ನ ನೀಡಿದ ಬಸವಾದಿ ಶರಣರು ನಮಗೆ ಆದರ್ಶರು .

ಪ್ರತಿಯೊಬ್ಬ ಜನಪ್ರತಿನಿಧಿಗಳು ನಿಮ್ಮ ಕ್ಷೇತ್ರದ ಮತದಾರರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳಿಗೆ ಸ್ಪಂದನೆ ಮಾಡಿ, ನಿಮಗೆ ಆಯ್ಕೆ ಮಾಡಿದ ಮತದಾರರ ವಿಶ್ವಾಸ ಉಳಿಸಿಕೊಳ್ಳಿ. ಸ್ವಾರ್ಥ ಜೀವನಕ್ಕಾಗಿ, ದುಡ್ಡಿನ ಆಮಿಷಗಳಿಗೆ ಒಳಗಾಗಿ ತಮ್ಮ ಮರ್ಯಾದೆ ಕಳೆದುಕೊಳ್ಳಬೇಡಿ.”

ಈ ಮೇಲಿನ ಹೃದಯ ತಟ್ಟುವ ಮಾತುಗಳು ನಿನ್ನೆ ವಿಧಾನಸೌಧದಲ್ಲಿ ನಮ್ಮ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶಾಸಕರಾದ ಬಿ. ನಾರಾಯಣ ಅವರು ನುಡಿದದ್ದು, ಇಂತಹ ಬದ್ಧತೆಯ ಮಾತುಗಳು ನುಡಿಯುವ ಅಪರೂಪದ ರಾಜಕಾರಣಿಯ ಮಾತುಗಳು ನಿಜಕ್ಕೂ ತುಂಬಾ ಅದ್ಭುತ ಎನ್ನಿಸಿವೆ.

ನಿಜಕ್ಕೂ ಕಲ್ಯಾಣ ನಾಡಿನಲ್ಲಿ ಬಸವಾದಿ ಶರಣರ ನೆಲದಲ್ಲಿ ಹುಟ್ಟಿ ಬೆಳೆದ ತಾವು ಶರಣರ ತತ್ವ ಸಿದ್ದಾಂತ ಕುರಿತು ಮಾತನಾಡಿರುವುದು , ಜೊತೆಗೆ ಜೀವಪರ ಜನಪರ ಚಿಂತನೆಯ ನಿಮ್ಮ ಮಾತುಗಳು ಮೆಚ್ಚುಲೇಬೇಕು .

ಜನಸಾಮಾನ್ಯರ ಮನದಾಳದಲ್ಲಿರುವ ಕೂಗು ನೀವು ವಿಧಾನಸೌಧದಲ್ಲಿ ಧ್ವನಿಗೂಡಿಸಿರುವುದು ಅಪರೂಪ . ನಿಮ್ಮ ಹಾಗೇ ಜನಪರ ಚಿಂತನೆ ಮಾಡುವ ಮನಸ್ಸು ಉಳಿದ ಶಾಸಕರಿದ್ದರೆ ನಮ್ಮ ರಾಜ್ಯ ಕಲ್ಯಾಣ ರಾಜ್ಯವಾಗಿ ನಿರ್ಮಾಣಗೊಂಡು ನೆಮ್ಮದಿಯಾಗಿ ಇರಬಹುದಿತ್ತು .

ಸಾಮನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು, ಹೋರಾಟಧ ಮೂಲಕವೇ ಸಾಮಾಜಿಕ ಜೀವನ ಆರಂಬಿಸಿ ಮುಂದೆ ಶಾಸಕರಾಗಿರುವ ತಮಗೆ ನಿರ್ಗತಿಕ ಕುಟುಂಬಗಳ ಬಡತನ, ಹಸಿವು, ತಳಮಳ ತುಂಬಾ ಹತ್ತಿರದಿಂದ ಬಲ್ಲವರು . ಬಡತನದಲ್ಲಿ ಹುಟ್ಟಿದವರಿಗೆ ಮಾತ್ರ ಬಡವರ ನೋವು ಸಂಕಷ್ಟಗಳು ಅರಿವಾಗಲು ಸಾಧ್ಯ . ಸಾಮಾಜಿಕ ಚಿಂತನೆಯ ದೂರದೃಷ್ಟಿಯ ತಮ್ಮ ಮಾತುಗಳು ವಿಧಾನಸೌಧದ ಗೌರವ ಹಾಗೂ ಶರಣರ ನಾಡು ಬಸವಕಲ್ಯಾಣದ ಕೀರ್ತಿ ಹೆಚ್ಚಿಸಿದವು .

ಈ ಎಲ್ಲಾ ರಾಜಕೀಯ ನಾಯಕರ ನಡುವೆ ನಮ್ಮ ಬೀದರ ಭಾಷೆಯಲ್ಲಿ ಮಾತಾಡಿ ಎಲ್ಲರಿಗೂ ಮಾತಿನಲ್ಲಿಯೇ ಬುದ್ಧಿವಾದ ಹೇಳಿದ ನೀವು ಗ್ರೇಟ್ ಸರ್,

ಮನದುಂಬಿ ಶರಣು ಶರಣಾರ್ಥಿಗಳು..
ಶುಭವಾಗಲಿ…

– ಬಾಲಾಜಿ ಕುಂಬಾರ, ಚಟ್ನಾಳ

(ಇಂದು ನಮ್ಮನ್ನು ಅಗಲಿರುವ ಬಸವಕಲ್ಯಾಣ ಶಾಸಕರಾದ ಬಿ.ನಾರಾಯಣರಾವ ಅವರು ಈ ಹಿಂದೆ ವಿಧಾನಸಭೆಯಲ್ಲಿ ಆಡಿರುವ ಮಾತುಗಳು)….💐💐😥😥

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!