Breaking News
Home / featured / ಶಾಸಕ ಬಿ.ನಾರಾಯಣ ಅವರಿಗೆ ಶ್ರದ್ಧಾಂಜಲಿ

ಶಾಸಕ ಬಿ.ನಾರಾಯಣ ಅವರಿಗೆ ಶ್ರದ್ಧಾಂಜಲಿ

 

ಬೀದರ: ಬಸವಕಲ್ಯಾಣ ಶಾಸಕರಾದ ಬಿ.ನಾರಾಯಣ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯಸನ್ನಿಧಾನದಲ್ಲಿ ನಡೆಯಿತು.

ಮೊದಲಿಗೆ ಪೂಜ್ಯರು ಹಾಗೂ ಶ್ರೀಮಠದ ಹಿತೈಷಿಗಳು ಬಿ.ನಾರಾಯಣರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಿ.ನಾರಾಯಣ ಅವರು ನಮ್ಮ ಭಾಗದ ವಿಶೇಷವಾಗಿ ಬಸವಭಕ್ತರ ದೊಡ್ಡ ಸಂಪತ್ತಾಗಿದ್ದರು. ಅವರು ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಸಭೆ ಸಮಾರಂಭಗಳಲ್ಲಿ ಬಸವಾದಿ ಶರಣರ ಚಿಂತನೆಗಳು ಹಾಗೂ ಅನುಭವಮಂಟಪದ ನವನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು. ನನ್ನ ಅವಧಿಯಲ್ಲಿಯೇ ಅನುಭವಮಂಟಪ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು.

ಅವರ ಕನಸನ್ನು ಕರ್ನಾಟಕ ಸರಕಾರ ಮುಂದಿನ ದಿನಮಾನಗಳಲ್ಲಿ ನನಸು ಮಾಡಬೇಕು. ವಿಧಾನ ಸಭೆಯಲ್ಲಿ ಅನುಭವಮಂಟಪದ ಕುರಿತು ಘಂಟಾಘೋಷವಾಗಿ ಮಾತನಾಡುವ ಅವರ ಧೈರ್ಯ ಬಸವನಿಷ್ಠೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ.

ದೀನದಲಿತರ, ಬಡವರ, ಶೋಷಿತರ ಏಳಿಗೆಗಾಗಿ ಅವರು ಅವಿಶ್ರಾಂತವಾಗಿ ಶ್ರಮಿಸಿದರು ಕೋವಿಡ್-19 ಮಹಾಮಾರಿಯ ಹಾವಳಿಯಲ್ಲಿಯೂ ಅವರು ಮನೆಯಲ್ಲಿ ಕೂಡದೆ ಸರ್ವಸಾಮಾನ್ಯರ ಮನೆ ಮನೆ ತಲುಪಿ ಮಾಸ್ಕ ವಿತರಣೆ, ಆಹಾರ ಧ್ಯಾನ ಕೀಟ್ ವಿತರಣೆ ಮಾಡುವ ಮೂಲಕ ಜನರಲ್ಲಿ ಸ್ವಚ್ಛತೆಯ ಆರೋಗ್ಯದ ಜಾಗೃತಿಯನ್ನು ಮೂಡಿಸಿದರು.

ಅವರ ನಿಧನದಿಂದ ನಮ್ಮ ನಾಡು ಒಬ್ಬ ಸರಳ ಸಜ್ಜನಿಕೆಯ ಸಾತ್ವಿಕ ರಾಜಕಾರಣಿಯನ್ನು ಪ್ರಜಾಹಿತದಕ್ಷ ನಾಯಕನನ್ನು ಕಳೆದುಕೊಂಡ ಬಡವಾಗಿದೆ.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!