Breaking News
Home / featured / ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ

ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ

 

 

ಲಿಂಗಾಯತ ಕ್ರಾಂತಿ ವರದಿ:  12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಜನರ ಸಾಮಾಜಿಕ ಬದುಕು ಕಲ್ಯಾಣವಾಗುವಂತೆ ಒಂದು ಕ್ರಾಂತಿಯನ್ನೇ ನಡೆಸಿ ಇಂದಿಗೂ, ಮುಂದಿಗೂ ಅಜರಾಮರರಾದರು.  ಆಗಿನ ಕಾಲದಲ್ಲಿಯೇ ಸಾಮಾಜಿಕವಾಗಿ ಎಲ್ಲರೂ ಒಂದೇ ಎನ್ನುವ ತತ್ವವನ್ನೂ, ಆರ್ಥಿಕ ಸಬಲತೆಗೆ ದಾಸೋಹದ ಪರಿಕಲ್ಪನೆಯನ್ನೂ, ಆಧ್ಯಾತ್ಮಿಕ ಬಲಕ್ಕಾಗಿ ಅರಿವಿನ ಮಹಾ ಮಂತ್ರವನ್ನೂ ಅವರು ಜಾರಿಗೊಳಿಸಿ,  ಜನ ಸಾಮಾನ್ಯರಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರೂ ಅಲ್ಲ, ಕೀಳು ಅಲ್ಲ ಎಂದು ಸಮಾನತೆಯನ್ನು  ಸಾರುವ ದಿಕ್ಕಿನಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು.   ಆ ಕಾಲಘಟ್ಟದಲ್ಲಿ ಹೆಣ್ಣಿಗೆ ಒಂದು ಸ್ಥಾನವೇ ಇಲ್ಲದೆ ಆಕೆಯು ಕೇವಲ ಅಡುಗೆ ಮಾಡುವ ಹಾಗೂ ಮಕ್ಕಳನ್ನು ಹೆರುವ ಯಂತ್ರದಂತೆ ಇದ್ದ ಕಾಲಘಟ್ಟದಲ್ಲಿ ಹೆಣ್ಣಿಗೂ ಒಂದು ಸ್ಥಾನವನ್ನು ಕೊಟ್ಟರು.

ಗುರು ಸಿದ್ದರಾಮೇಶ್ವರರು ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸ್ವತಃ ಕಪಿಲ ಸಿದ್ದನಾಥ ಎಂದು ಹೇಳಿರುವುದೇ ಇದಕ್ಕೆ ಸತ್ಯವಾಗಿದೆ.   ಆ ಕಾಲದಲ್ಲಿ ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ 12000 ಪಲ್ಲಂಗಿಯರನ್ನು ( ವೇಶ್ಯೆ ) ಲಿಂಗದೀಕ್ಷೇ ನೀಡಿ ಅವರನ್ನು ಶುಭ್ರ ಪನ್ನಾಂಗಿಯವರನ್ನಾಗಿ ಮಾಡಿದ ಕಾರ್ಯವಂತೂ ಅತ್ಯದ್ಬುತವೇ ಹೌದು.   ಇಂದಿಗೂ ಹೆಣ್ಣು ಎಂದರೆ ಮೂಗು ಮುರಿಯುವ ಮೂರ್ಖರ ಮುಂದೆ ಆ ಕಾಲಘಟ್ಟದಲ್ಲಿ ರೇಚವ್ವೇ, ಸಂಕವ್ವೇ, ಕಾಳವ್ವೇ, ಕೇತಲಾದೇವಿ, ರೇಕಮ್ಮ, ಗುಡ್ಡವ್ವೇ ಹೀಗೆ  12000 ವೇಶ್ಯೆಯರನ್ನು ಪನ್ನಾಂಗಿಯರನ್ನಾಗಿ ಮಾಡಿ, ಅವರಿಗೆ ಲಗ್ನವನ್ನೂ ಮಾಡಿ ಅವರನ್ನು *ಪುಣ್ಯಸ್ತ್ರೀ* ಎಂದು ಕರೆದು ಅವರಿಗೆ ಬದುಕಲಿಕ್ಕೆ ಅವರ ಬಾಳಿನಲ್ಲಿ ಒಂದು ಅವಕಾಶ ಕೊಟ್ಟಿದ್ದು ಎಂದಿಗೂ ಸಹ ಸುಲಭದ ಮಾತಲ್ಲ.   ಆ ಕಲ್ಯಾಣದಲ್ಲಿ ಮೊದಲಿಗೆ ವೇಶ್ಯಾ ವೃತ್ತಿಯಲ್ಲಿ ತೊಡಗಿ ನಂತರ ಬಸವಾದಿ ಪ್ರಮಥರ ಸಂಪರ್ಕಕ್ಕೆ ಬಂದು ಪುಣ್ಯಸ್ತ್ರೀ ಆದಂತಹವಳು

ಪುಣ್ಯಸ್ತ್ರೀ ಗಂಗಮ್ಮ:-

ಪುಣ್ಯಸ್ತ್ರೀ ಗಂಗಮ್ಮಳು ಮಾರಯ್ಯನವರ ಹೆಂಡತಿ. ಕಲ್ಯಾಣದಲ್ಲಿ ಈಕೆಯು ಮೊದಲಿಗೆ ವೇಶ್ಯಾವೃತ್ತಿಯಲ್ಲಿ ತೊಡಗಿ ನಂತರ ಬಸವಣ್ಣನವರ ಕೃಪೆಯಿಂದ ಪುಣ್ಯಸ್ತ್ರೀ ಆದವಳು,  ಇವಳ ಹಾಗೆಯೇ ಸೂಳೆ ಸಂಕವ್ವೆಯೂ ಸಹ ವೇಶ್ಯಾ ವೃತ್ತಿಯಿಂದ ಪುಣ್ಯಸ್ತ್ರೀ ಆದವಳು.  ಕರ್ನಾಟಕದ ಕವಿ ಚರಿತೆಗಾರರು ಈಕೆಯ ಬಗ್ಗೆ ಸಂಶೋಧನೆ ನಡೆಸಿದಾಗ ಈಕೆಯು ಬಸವಣ್ಣನವರ ಕಾಲಘಟ್ಟದಲ್ಲಿಯೇ ಕಲ್ಯಾಣದಲ್ಲಿಯೇ ಬದುಕಿದ್ದಳು ಎಂಬುದನ್ನು ಸಂಶೋಧಿಸಿದ್ದಾರೆ.    ಈಕೆಯ ಸ್ವಂತ ಊರು ಯಾವುದೆಂದು ತಿಳಿದು ಬಂದಿರುವುದಿಲ್ಲ.  ಈ ವಚನಕಾರ್ತಿಯ ಒಂದು ವಚನ ಮಾತ್ರವೇ ದೊರಕಿದ್ದಾಗಿದ್ದು, ಆಕೆಯು ತನ್ನ ವಚನದಲ್ಲಿ ಗಂಗೇಶ್ವರ ಲಿಂಗ ಎಂಬ ಅಂಕಿತ ನಾಮವನ್ನು ಉಪಯೋಗಿಸಿದ್ದಾಗಿದೆ.

ಪುಣ್ಯಸ್ತ್ರೀ ಗಂಗಮ್ಮನ ವಚನ:

ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.  ಆವ ವ್ರತವಾದಡೂ ಒಂದೆ ವ್ರತವಯ್ಯಾ.  ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ. ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.

ಈ ವಚನದಲ್ಲಿ ಪುಣ್ಯಸ್ತ್ರೀ ಗಂಗಮ್ಮಳು ಸತ್ಯ ಶುದ್ದ ಕಾಯಕ ಶ್ರಧ್ದೆಯನ್ನೂ, ಆಚಾರ ಶ್ರಧ್ದೆಯನ್ನು ಎತ್ತಿ ಹಿಡಿದಿದ್ದಾಳೆ.  ಭಾವ ಶುದ್ದಿಯಿಂದ ಮಾಡುವ ಎಲ್ಲ ವೃತ್ತಿಗಳೂ ಪವಿತ್ರವಾದ ಕಾಯಕಗಳೇ ಆಗಿವೆ ಎಂತಲೂ, ಯಾವ ಕಾಯಕದಲ್ಲೂ ಸಹ ಮೇಲೂ ಇಲ್ಲ ಹಾಗೂ ಕೀಳೂ ಸಹ ಇಲ್ಲ ಎಂಬುದು ಈಕೆಯ ಅಭಿಪ್ರಾಯವಾಗಿದೆ.  ವ್ರತಹೀನರ ಸ್ನೇಹವು ಕಾಗೇ ಗೂಗೆಳ ( ಕಾಕಪೀಕ ) ಮೈತ್ರಿಯಂತೆ ಅಪವಿತ್ರವೂ ಆಗಿರುತ್ತದೆ.  ಅಂತಹ ವ್ರತಹೀನ ದುರಾಚಾರಿಗೆ ನಾಯಕ ನರಕ ಎಂದು ಎಚ್ಚರಿಸಿದ್ದಾಳೆ.  ಈ ವಚನದಲ್ಲಿ ಗಂಗಮ್ಮಳು ಒಬ್ಬ ವೇಶ್ಯೇ ಆಗಿ ನಂತರ ಪುಣ್ಯಸ್ತ್ರೀ ಆಗಿರುವವಳಾದ ಇವಳ ವಚನದಲ್ಲಿ  ಶುದ್ದಾಚಾರದ ಬಗ್ಗೆ ಬಹಳವಾದ ಕಾಳಜಿಯು ಎದ್ದು ಕಾಣುತ್ತದೆ.

 

✍️ ರವೀ ಚಿಕ್ಕನಾಯಕನ ಹಳ್ಳಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!