Breaking News
Home / featured / ಕನ್ನಡದ ಮದನ ಮೋಹನ ಮಾಳವಿಯ: ಅರಟಾಳ ರುದ್ರಗೌಡ್ರ ಸ್ಮರಣೆ ಅಕ್ಟೋಬರ್ 4

ಕನ್ನಡದ ಮದನ ಮೋಹನ ಮಾಳವಿಯ: ಅರಟಾಳ ರುದ್ರಗೌಡ್ರ ಸ್ಮರಣೆ ಅಕ್ಟೋಬರ್ 4

 

ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಯಾರ ಕೂಡುಗೆ ಏಷ್ಟು? 

1866ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡ ದಲ್ಲಿ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜ್ ಪ್ರಾರಂಬಿಸಿದರು.1872ರಲ್ಲಿ ಧಾರವಾಡ ದ ಕಲೆಕ್ಟರ್ ಧಾರವಾಡ ದಲ್ಲಿ ಕಲಾ ಮಹಾವಿದ್ಯಾಲಯದ ಅವಶ್ಯಕತೆ ಇದೆ ಎಂದರು.

1902ರಲ್ಲಿ ಧಾರವಾಡ ಕ್ಕೆ ಬಂದಿದ್ದ ಮುಂಬಯಿ ಶಿಕ್ಷಣ ಇಲಾಖೆಯ ನಿರ್ದೇಶಕ ಈ ಜಾಯ್ಸ್ ಕಲಾಮಹಾವಿದ್ಯಾಲಯದ ಅವಶ್ಯಕತೆ ಒತ್ತಿ ಒತ್ತಿ ಹೇಳಿದರು..

ನಂತರ 1909 ರಲ್ಲಿ ರೂದ್ದ ಶ್ರೀನಿವಾಸರು ಅರಟಾಳ ರುದ್ರಗೌಡ್ರ ಹತ್ತಿರ ಬಂದು ಕರ್ನಾಟಕ ಕಾಲೇಜು ಸ್ಥಾಪನೆಗೆ ಶಿರಸಂಗಿ ಲಿಂಗರಾಜ ಟ್ರಸ್ಟನಿಂದ ಒಂದು ಲಕ್ಷ ನೇರವು ಕೇಳಿದರು..ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ.

1909 ಅ. 20 ರಂದು ಮುಂಬೈ ರಾಜ್ಯದ ದಕ್ಷಿಣ ಭಾಗದ ಕಮೀಷನರ್ ಎಮ್ ಸಿ ಗಿಬ್ಬ ಮುಂತಾದವರು ಬೆಳಗಾವಿಯಲ್ಲಿ ಸಭೆ ಮಾಡಿ 2.64 ಲಕ್ಷ ಠೇವಣಿ ಕೂಡಿಸಿ ಕೂಟ್ಟರೆ ಸೆಕೆಂಡ ಗ್ರೇಡ ಕಾಲೇಜ ಸ್ಥಾಪನೆಗೆ ಅನುಮತಿ ನೀಡುವುದಾಗಿ ಹೇಳಿದರು.

ಇ ಸಭೆಯಲ್ಲಿ ಅರಟಾಳ ರುದ್ರಗೌಡ್ರ ಮತ್ತು ರೂದ್ದ ಶ್ರೀನಿವಾಸ ಇಬ್ಬರು ಉಪಸ್ಥಿತರಿದ್ದರು.ರೋದ್ದ ಶ್ರೀನಿವಾಸರು ಎಲ್ಲ ಹಣವನ್ನು ನಾನೆ ಕೂಡಿಸಿ ಕೂಡುವೆ ಎಂದು ಆವೇಶದಿಂದ ಸಭೆಗೆ ಹೇಳಿದರು. ಕಾರಣ1912ರಲ್ಲಿ ಮುಂಬೈ ವಿಧಾನ ಪರಿಷತ್ ಚುನಾವಣೆಗೆ ಸ್ಥಳಿಯಸಂಘಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದರು…

ಆಗ ಅವರಿಗೆ ಚುನಾವಣಾ ವಿಷಯವಾಗಿ ಇದನ್ನು ಪರಿವರ್ತಿಸಿಕೂಂಡರು ರೂದ್ದಶ್ರೀನಿವಾಸರು ಮತ್ತು ದತ್ತೂಪಂತ ಬೆಳವಿಯವರು.

ತಾವೇ ಕರ್ನಾಟಕ ಕಾಲೇಜಿನ ಮುಖಂಡರು‌ಎಂದು ಜನ ಮಾನಸದ ಮುಂದೆ ಒತ್ತಿ ಒತ್ತಿ ಹೇಳಿದರು. ಇವೆಲ್ಲವು ಅರಟಾಳ ರುದ್ರಗೌಡ್ರರಿಗೆ ತಿಳಿದಿತ್ತು.

1912ರಲ್ಲಿ ಧಾರವಾಡದ ಮುನ್ಸಿಪಲ್ ಕಛೇರಿಯಲ್ಲಿ ಕರ್ನಾಟಕ ಕಾಲೇಜ್ ಸ್ಥಾಪನೆ ಕುರಿತು ಮುಂಬೈ ದಕ್ಷಿಣ ಬಾಗದ ಕಮೀಷನರ್ ಶೇಪರ್ಡ , ರೂದ್ದ ಶ್ರೀನಿವಾಸ , ಶಾಂತವೀರಪ್ಪ ಮೇಣಸಿನಕಾಯಿ ಅವರುಅವರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡುವಾಗ ರೂದ್ದ ಶ್ರೀನಿವಾಸ ಅವರು ಅರಟಾಳ ರುದ್ರಗೌಡ್ರ ಮತ್ತು ಅವರ ಬೆಂಬಲಿಗರ ಸಹಾಯ ಕೋರಿದರು.ಮತ್ತು ಪತ್ರಿಕಾ ಜಾಹಿರಾತಿನಲ್ಲಿ ಒಪ್ಪಿಗೆ ಇಲ್ಲದೇ ಅರಟಾಳ ರುದ್ರಗೌಡ್ರ ಮತ್ತು ಮುಂತಾದವರ ಹೆಸರು ಬಳಸಿಕೂಂಡರು. ಹೆಸರು ಬಳಸಿಕೊಳ್ಳುವ ಉದ್ದೇಶವೆನೆಂದರೆ 2.6 ಲಕ್ಷ ರೂಪಾಯಿ ಕೂಡಿಸುವಲ್ಲಿ ಇವರನ್ನು ಕೆಲಸಕ್ಕೆ ಹಚ್ಚುವುದಾಗಿತ್ತು. ಅದರ ಜವಾಬ್ದಾರಿಯಲ್ಲಿ ಅರಟಾಳ ರುದ್ರಗೌಡ್ರ ಸಮ ಜವಾಬ್ದಾರಿ ಹೂಂದಿದ್ದಾರೆ ಎಂದು ಸಂದೇಶ ರವಾನಿಸುವುದಾಗಿತ್ತು.

ತಾವು ಈ ಹಿಂದೆ ಎಲ್ಲ ಹಣವನ್ನು ತಾವೂಬ್ಬರೇ ಕೂಡಿಸಿಕೂಡುವುದಾಗಿ ಹೇಳಿದ್ದರು ಕಾರಣ ತಾವು ವಿಧಾನ ಪರಿಷತ್ ಸದಸ್ಯರಾಗಬೇಕಿತ್ತು. ಜಾಹಿರಾತಿನಲ್ಲಿ ಹೆಸರು ಬಳಸಿಕೂಂಡಿದ್ದಕ್ಕೆ ಸಾಕಷ್ಟು ಗಲಾಟೆಯಾಗಿ ರೋದ್ದ ಶ್ರೀನಿವಾಸರಾಯರು ಕರ್ನಾಟಕವೃತ್ತ ಪತ್ರಿಕೆ ಮೂಲಕ ಕ್ಷಮೆ ಕೇಳಿದರು.

1913ರಲ್ಲಿ ಮುಂಬೈ ನ ಮಹಾಬಲೇಶ್ವರ ದಲ್ಲಿ ಮುಂಬೈ ಶಿಕಷಣ ಕಾಯ್ದೆ ಯ ಕೌನ್ಸಿಲ್ ಮೀಟಿಂಗ್ ಇತ್ತು. ಇದರಲ್ಲಿ ಧಾರವಾಡದ ಕಲೆಕ್ಟರ್ ಮೇಕನಾಕಿ, ರೋದ್ದ ಶ್ರೀನಿವಾಸ, ದತ್ತೂಪಂತ ಬೆಳವಿ ಹಾಜರಿದ್ದರು.

ಇಲ್ಲಿ ರೂದ್ದ ಶ್ರೀನಿವಾಸ ಮತ್ತು ದತ್ತೂಪಂತ ಬೆಳವಿ ಕರ್ನಾಟಕ ಕಾಲೇಜ್ ಸ್ಥಾಪನೆಗೆ ಅರಟಾಳ ರುದ್ರಗೌಡ್ರ ಸಹಕಾರ ನೀಡುತ್ತಿಲ್ಲ ಎಂದು ಎತ್ತಿ ತೂರುವುದೇ ಆಗಿತ್ತು. ಇದೇ ರೀತಿಯಾಗಿ ಸಭೆ ಯಲ್ಲಿ ನಡೆದು ಹೋಯಿತು. ಸಭೆಯಲ್ಲಿ ಇದ್ದ ಹೆಚ್ ಸಿ ಹಿಲ್ ಸದಸ್ಯರು ಮುಂಬೈ ಎಕ್ಸಿಕ್ಯುಟಿವ್ ಕೌನ್ಸಿಲ್ ಇವರು ನಂಬಿಯೇ ಬಿಟ್ಟರು.

1913 ಜೂ. 8 ರಂದು ಧಾರವಾಡ ದಲ್ಲಿ ಜರುಗಿದ ಸಭೆಯಲ್ಲಿ ಅರಟಾಳ ರುದ್ರಗೌಡ್ರ ಹೆಚ್ ಸಿ ಹಿಲ್ರ ಮನಸ್ಸಿನಲ್ಲಿ ಇನ್ನೂಬ್ಬರಿಂದ ಪೂರ್ವಾಗ್ರಹ ಫೀಡಿತರಾದ ವಿಷಯವನ್ನು ತೆಗೆದು ಹಾಕಿದರು.

ಕಾಲೇಜು ಸ್ಥಾಪನೆಯ ಕುರಿತು ರೊದ್ದ ಶ್ರೀನಿವಾಸರ ಅಂತರಾಳದ ವಿಚಾರಗಳನ್ನು ಅರಟಾಳ ರುದ್ರಗೌಡ್ರ ಹೆಚ್ ಸಿ ಹಿಲ್ ರ ಮುಂದೆ ತೆರದಿಟ್ಡರು. ಆಗ ಕಾಲೇಜು ಸ್ಥಾಪನೆಗೆ ರೋದ್ದ ಶ್ರೀನಿವಾಸ ಅವರು ತಮ್ಮ ಸಮುದಾಯದಿಂದ ಒಂದುಲಕ್ಷ ಅರಟಾಳ ರುದ್ರಗೌಡ್ರ ತಾವು ಪ್ರತಿನಿದಿಸುವ ಸಮುದಾಯದಿಂದ ಒಂದು ಲಕ್ಷ ರೂಪಾಯಿ ಕೂಡಿಸುವ ಠರಾವನ್ನು ಅರಟಾಳ ರುದ್ರಗೌಡ್ರ ಸೂಚನೆ ಮೆರೆಗೆ ಹೆಚ್ ಸಿ ಹಿಲ್ ಒಪ್ಪಿ ನಿಯಮ ಮಾಡಿದರು.

 

ಮತ್ತು ಅರಟಾಳರು ಒಂದು ಲಕ್ಷ ರೂಪಾಯಿಗಳನ್ನು ನಿಯಮಾನುಸಾರ ಕೂಡಿಸಿ ಕೂಡುವುದಾಗಿ ಹೆಚ್ ಸಿ ಹಿಲ್ ಅವರಿಗೆ ವಾಗ್ದಾನ ಮಾಡಿದರು..

ಅದೇ ದಿನ ಧಾರವಾಡ ತಾಲೂಕ ಪಂಚಾಯತ ನ ಹಳೆಯ ಕಟ್ಟಡ ದಲ್ಲಿ ಸಭೆಯನ್ನು ಹೆಚ್ ಸಿ ಹಿಲ್ ಅವರು ಕರೆದರು. ಅಲ್ಲಿ ರೊದ್ದರು ತಮ್ಮ ಸಮುದಾಯದಿಂದ ಒಂದು ಲಕ್ಷ, ಅರಟಾಳ ರುದ್ರಗೌಡ್ರ ತಮ್ಮ ಸಮುದಾಯದಿಂದ ಒಂದು ಲಕ್ಷ ಕೂಡಿಸಿ ಕೂಡಬೇಕು ಎಂದು ಹೇಳಿದರಲ್ಲದೆ ಅರಟಾಳರ ಬಗೆಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ನಂತರ ಅರಟಾಳ ರುದ್ರಗೌಡ್ರ ಬೆಳಗಾವಿ ಜಿಲ್ಲೆಯಿಂದ 1913 ಜೂನ್ 16 ರಂದು ಉಪಜಿಲ್ಲಾದಿಕಾರಿ ಹುದ್ದೆಯಿಂದ ನಿವೃತ್ತರಾದರು. ನಂತರ 1913 ನ. 21ರಂದು ಮೊದಲ ಕಂತಿನಲ್ಲಿ, ನಂತರ 1916 ಜೂನ್ 13ರಂದು ಎರಡನೇಯ ಕಂತಿನಲ್ಲಿ ಒಟ್ಟು ಒಂದು ಲಕ್ಷ ರೂಪಾಯಿಗಳನ್ನು ಸೇರಿಸಿ ಮಂಬೈ ಸರಕಾರದಲ್ಲಿ ಗೌರ್ನಮೆಂಟ ಪ್ರಾಮೀಸರಿ ನೋಟ್ಸ ರೂಪದಲ್ಲಿ ಹಣವನ್ನು ಸರಕಾರಕ್ಕೆ ಸಂದಾಯ ಮಾಡಿದರು.

ಇದರಿಂದ ಆ ಹಣಕ್ಕೆ ಸಾಕಷ್ಟು ಬಡ್ಡಿಹಣ ಬಂದಿತು. ಆ ಬಡ್ಡಿ ಹಣವನ್ನು ಅರಟಾಳ ರುದ್ರಗೌಡ್ರ ಮತ್ತೂಂದು ಶಿಕ್ಷಣ ಸಂಸ್ಥೆ ಸ್ಥಾಪಿಸುವುದಕ್ಕೆ ವೀನಿಯೂಗಿಸಿದರು..ಆಕುರಿತು ಮತ್ತೂಂದು ವೀಶೆಷ ಅಂಕಣವನ್ನು ಮುಖಪುಟದಲ್ಲಿ ಪ್ರಕಟಿಸುವೆ.

ಆದರೆ ರೋದ್ದ ಶ್ರೀನಿವಾಸರು ಕೇವಲ ಇಪ್ಪತ್ತೆಳು ಸಾವಿರ ರೂಪಾಯಿ ಮಾತ್ರ ಕೂಡಿಸಿದ್ದರು ಅದರಲ್ಲಿಯೂ ನಿಯಮಾವಳಿಗಳನ್ನು ಮೀರಿದ್ದರು..

1913 ಜುಲೈ 29 ರಂದು ಮುಂಬೈ ವಿಧಾನ ಪರಿಷತ ಸದಸ್ಯರಾದ ನಂತರ ರೊದ್ದರು ಮತ್ತು ದತ್ತೂಪಂತ ಬೆಳವಿಯವರು, ಹೆಚ್ ಸಿ ಹಿಲ್ ರವರು ಕರ್ನಾಟಕ ಕಾಲೇಜು ಸ್ಥಾಪನೆಗೆ ಹಾಕಿದ ನಿಯಮಾವಳಿಗಳನ್ನು ಖಂಡಿಸಿ ಮಾತನಾಡಿದರು.ರೊದ್ದ ಶ್ರೀನಿವಾಸ ಅವರು ಒಂದು ಲಕ್ಷ ಕೂಡಿಸಿ ಕೂಡುವುದಾಗಿ ಆಶ್ವಾಸನೆ ನಿಡಿ ಕೇವಲ ಇಪ್ಪತೇಳು ಸಾವಿರ ಕೂಡಿಸಿದಾಗ ಕೂರತೆಯಾದ ಹಣವನ್ನೆಲ್ಲ ಅರಟಾಳ ರುದ್ರಗೌಡ್ರ ಸಂಗ್ರಹಿಸಿಕೂಟ್ಟರು.

ಹಾಗಾಗಿ ನಿಜವಾದ ಅರ್ಥದಲ್ಲಿ ಕರ್ನಾಟಕ ಕಾಲೇಜ ಸ್ಥಾಪಕರೆಂದರೆ ಅರಟಾಳ ರುದ್ರಗೌಡ್ರು…
1916ರಲ್ಲಿ ಉತ್ತರ ಕರ್ನಾಟಕ ಮೊದಲ ಉನ್ನತ ಶಿಕ್ಣ ಸಂಸ್ಥೆ ಯಾಗಿ ಅರಟಾಳ ರುದ್ರಗೌಡ್ರ ಅವಿರತ ಯತ್ನದಿಂದ ಲೋಕಾರ್ಪಣೆಗೂಳ್ಳುವುದು.

ಆದರೆ ಆ ಮಹಾವಿದ್ಯಾಲಯದಲ್ಲಿ ಕಲಿಯುವ ಮತ್ತು ಪಾಠ ಮಾಡುವ ಅದೇಷ್ಟೂ ಸಿಬ್ಬಂದಿಗೆ ಇ ಮಾಹಿತಿ ಇಲ್ಲದೇ ಇರುವುದು ಖೇದಕರ.

ಇದೆಲ್ಲವನ್ನು ಬರೆಯಲು ಕಾರಣ ವೆನೆಂದರೆ ಉತ್ತರ ಕರ್ನಾಟಕದಲ್ಲಿ ಮೊದಕ ಉನ್ನತ ಶಿಕ್ಷಣ ಸಂಸ್ಥೆ ಕಟ್ಟಿದ ಕನ್ನಡದ ಮದನ ಮೋಹನ ಮಾಳವಿಯ ಎಂದೆ ಚಿರಪರಿಚಿತ ರಾದ ಅರಟಾಳ ರುದ್ರಗೌಡ್ರು ಲಿಂಗೈಕ್ಯೆರಾದ ದಿನ ಅಕ್ಟೋಬರ್ ನಾಲ್ಕು.

ಕಾರಣ ಅವರ ಸ್ಮರಣೆಯ ನೆಪದಲ್ಲಿ ಅವರನ್ನು ಸ್ಮರಿಸುವ ನೈತಿಕ ಹೋಣೆಗಾರಿಕೆ ನಮ್ಮದಾಗಿರಲಿ…

ಲೇಖನ: ಮಹೇಶ ನೀಲಕಂಠ ಚನ್ನಂಗಿ.
ಪ್ರೌಡಶಾಲಾ ಮುಖ್ಯಶಿಕ್ಷಕರು.
ಚನ್ನಮ್ಮನ ಕಿತ್ತೂರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

ರೈತರ ಬಾಳು ‘ಹಾಂ’ ಅನ್ನುವದರೊಳಗೆ ತಿಂಗಳಾಗಿ ಪಗಾರ ಬಂದಂತಲ್ಲ!

ಸಿಂದಗಿ: ಅವರು ಆರು ತಿಂಗಳು, ಒಂದು ವರ್ಷ ಅವರೇ ದುಡಿದ ಅನ್ನಕ್ಕಾಗಿ ಕಾಯಬೇಕು. ಅದೂ ಯಾವ ಬೆಳೆಗೆ ಎಷ್ಟು ಬರುತ್ತೆ …

ವಿನಯ ಕುಲಕರ್ಣಿ ಎಂಬ ಹೋರಾಟಗಾರನ ಜೀವನ

ಧಾರವಾಡ ಜಿಲ್ಲೆ ಕರುನಾಡಿಗೆ ಅನೇಕ ರಾಜಕೀಯ ನಾಯಕರನ್ನು ನೀಡಿದೆ. ಬಂಡಾಯದ ನಾಡೇ ಎಂದು ಹೆಸರಾಗಿರುವ ಧಾರವಾಡ ಜಿಲ್ಲೆಯ ನವಲಗುಂದ ಮೂಲದ …

ಬೈಲೂರ ನಿಜಗುಣಾನಂದ ಶ್ರೀಗಳ ಸಾಮಾಜಿಕ ಕ್ರಾಂತಿ

  ಬೆಂಗಳೂರು/ಬೈಲೂರು: ತೋಂಟದಾರ್ಯ ಶಾಖಾಮಠ ಮುಂಡರಗಿ ಮತ್ತು ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣಪ್ರಭು ತೋಂಟದಾರ್ಯ (ನಿಜಗುಣಾನಂದ) ಸ್ವಾಮಿಗಳು ಅಂದ್ರೆ …

ವಿನಯ್ ಕುಲಕರ್ಣಿ ಜೊತೆಗೆ ಲಿಂಗಾಯತ ಸಮಾಜವಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಬೆಂಗಳೂರು : ಲಿಂಗಾಯತ ಸಮಾಜದ ಹಿರಿಯ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರ …

Leave a Reply

Your email address will not be published. Required fields are marked *

error: Content is protected !!