Breaking News
Home / featured / “ಯುಗಪುರುಷ : ಅರಟಾಳ ರುದ್ರಗೌಡ್ರು”

“ಯುಗಪುರುಷ : ಅರಟಾಳ ರುದ್ರಗೌಡ್ರು”

ಲೇಖನ: ಮಹೇಶ ನೀಲಕಂಠ ಚನ್ನಂಗಿ. KES ಚನ್ನಮ್ಮನ ಕಿತ್ತೂರು.

1910ರವರೆಗೆ ಉತ್ತರ ಕರ್ನಾಟಕ ದಲ್ಲಿ ಒಂದೂ ಕಾಲೇಜು ಇರಲಿಲ್ಲಾ.ಅರಟಾಳ ರುದ್ರಗೌಡ್ರು ಅಂದಿನ ಆಂಗ್ಲ ಕಲೆಕ್ಟರ್ ಗಳಿಗೆ ಮನವರಿಕೆ ಮಾಡಿದರು.

 

ಅಂದಿನ ಶಿಕ್ಷಣ ಕಾರ್ಯದರ್ಶಿ “ಮಿಸ್ಟರ್ ಹಿಲ್” ಅವರಿಗೆ ಕಾಲೇಜು ಸ್ತಾಪನೆಯ ಮಹತ್ವ ಮತ್ತು ಅವಶ್ಯಕತೆ ತಿಳಿಸಿದರು…ಮತ್ತು ಅದಕ್ಕಿರುವ ಅಡ್ಡಿ ಆತಂಕಗಳನ್ನು ತಿಳಿಸಿದರು..ಇದು ನಡೆದುದು 1913ರಲ್ಲಿ..ಅದಕ್ಕೆ ಮೂರು ಲಕ್ಷ ರೂಪಾಯಿ ಗಳನ್ನು ಠೇವಣಿ ಇಡುವ ಷರತ್ತು ಹಾಕಿದರು ಮಿಸ್ಟರ್ ಹಿಲ್.

“”ಅರಟಾಳ ರುದ್ರಗೌಡ್ರ ಒಂದು ಲಕ್ಷ ಮತ್ತು ರೂದ್ದಶ್ರೀನಿವಾಸರಾಯರು ಇಂದು ಲಕ್ಷ “”ವಂತಿಗೆ ಸಂಗ್ರಹಿಸುವುದು ಮತ್ತು ಬ್ರಿಟಿಷ್ ಸರಕಾರ ಒಂದು ಲಕ್ಷ ಸೇರಿಸಿ ಕಾಲೇಜು ಸ್ತಾಪಿಸುವ ನಿರ್ಧಾರವಾಯಿತು…..

ಅರಟಾಳ ರುದ್ರಗೌಡ್ರ ಕೇಲವೆ ದಿನಗಳಲ್ಲಿ ಹಣಕೂಡಿಸಿ ಬೆಳಗಾವಿಯ ಅಂದಿನ ಕಮೀಷನರ್ “”ಮಿ.ಶಪರ್ಡ “”ಅವರಿಗೆ ತಂತಿ ಕಳುಹಿಸಿದರು.ಸಂತುಷ್ಟರಾದ ಶೆಪರ್ಡ ತಾವೇ ಸ್ವತಃ ಕಾಲೇಜು ಸ್ಥಾಪನೆ ಕುರಿತು ಬಾಂಬೆ ಗೆಜೆಟಿಯರ್ ನಲ್ಲಿ ಪ್ರಕಟಿಸಿದರು.. ಅರಟಾಳರನ್ನು “ಸರ್ವೂತ್ತಮ ಶ್ರೇಷ್ಠ ಆಡಳಿತಗಾರ” ಎಂದು ಹೂಗಳಿದರು.

ಆದರೆ ರೂದ್ದ ಶ್ರೀನಿವಾಸ ರಾಯ ಅವರು ಸಂಗ್ರಹಿಸಿದ ಮೂತ್ತ ಕೇವಲ ಮೂವತ್ತು ಸಾವಿರ ಮಾತ್ರ..ಅರಟಾಳ ರುದ್ರಗೌಡ್ರ ರು ಮಾಡಿದ ಕಾರ್ಯ ಕೀರ್ತಿಯನ್ನು ರೂದ್ದ ಶ್ರೀನಿವಾಸ ರು ಬಾಚಲು ಪ್ರಯತ್ನಿಸಿದರು.

ಉಳಿದ ಹಣವನ್ನು ಸಂಗ್ರಹಿಸಲು ಸರಕಾರ ಅರಟಾಳ ರುದ್ರಗೌಡ್ರ ಸಹಾಯ ಕೇಳಿತು…ಉಳಿದ ಹಣವನ್ನು ಕೇಲವೆ ದಿನಗಳಲ್ಲಿ ಕೂಡಿಸಿ ಸರಕಾರ ದಲ್ಲಿ ಠೇವಣಿ ಮಾಡಿದಾಗ ದಿನಾಂಕ 20/6/1917ರಲ್ಲಿ ಕಾಲೇಜು ವಿದ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು.

ನಂತರ ಸರ ಸಿದ್ದಪ್ಪ ಕಂಬಳಿಯವರು ಮುಂಬೈ ಸರಕಾರದಲ್ಲಿ ಶಿಕ್ಷಣ ಮಂತ್ರಿಗಳಿದ್ದಾಗ ಗ್ರೆಡ ೨ ಕಾಲೇಜ್ ನ್ನು ಗ್ರೇಡ ೧ ಕಾಲೇಜ ಆಗಿ ಪರಿವರ್ತಿಸಿದರು..

ಮುಂದೆ ಅರಟಾಳ ರುದ್ರಗೌಡ್ರ “”1916-17ರಲ್ಲಿ ಧಾರವಾಡ ದಲ್ಲಿ ದಿವಾನ ಬಹದ್ದೂರ್ ಮೆಣಸಿನಕಾಯಿ” ಮತ್ತು ಇನ್ನಿತರ ಮುಖಂಡರನ್ನು ಸಂಪರ್ಕಿಸಿ “‘ ಕರ್ನಾಟಕ ಸೆಂಟ್ರಲ್ ಕೋ ಬ್ಯಾಂಕ್ ಸ್ಥಾಪಿಸಿದರು…ಇದರ ಪ್ರೇರಕ ಶಕ್ತಿ ಯೇ ಅರಟಾಳ ರುದ್ರಗೌಡ್ರ..

ನಂತರ ಬೆಳಗಾವಿಯಲ್ಲಿ ಕೆ.ಎಲ್.ಇ. ಸ್ಥಾಪಿಸಲು ಅಣಿಯಾದರು.. ಧಾರವಾಡದಲ್ಲಿ ಕೆ.ಸಿ.ಡಿ ಮಹಾವಿದ್ಯಾಲಯವು ಸ್ಥಾಪಿಸಲು ಸಂಗ್ರಹಿಸಿದ ಹಣ ಬಹಳ ದಿನಗಳ ಕಾಲ ಬ್ಯಾಂಕನಲ್ಲಿ ಠೇವಣಿ ಇಟ್ಟಾಗ ಅದರಿಂದ ಬಂದ ಬಡ್ಡಿ ಹಣ ಮತ್ತು ತಮ್ಮ ಕೈಯಲ್ಲಿನ ಸ್ವಂತದ ಹಣ ಹಾಕಿ ಮುಂಬಯಿ ಸರಕಾರದಲ್ಲಿ ಕೆ.ಎಲ್.ಇ.ಸಂಸ್ಥೆ ನೋಂದಣಿ ಮಾಡಿಸಿ ಸಂಸ್ಥಾಪಕ ಅದ್ಯಕ್ಷರಾಗಿ ದಕ್ಷತೆಯಿಂದ ಬೆಳಸಲು ಬೆನ್ನೆಲುಬಾಗಿ ನಿಂತರು.ದೈತ್ಯ ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಂಸ್ಥೆಗೆ ಉತ್ತಮ ಮುನ್ನುಡಿ ಬರೆದರು..

ಅರಟಾಳ ರುದ್ರಗೌಡ್ರ ಜೀವಸ್ಯ ಗೆಳೆಯ ಶಿರಸಂಗಿ ಲಿಂಗರಾಜ ರ ಮೃತ್ಯು ಪತ್ರದ ಅನುಷ್ಠಾನಕ್ಕೆ ಅವರ ತಾಯಿ ನಿರಾಕರಿಸಿದಾಗ ಸುಮಾರು ಹದಿನೈದು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ “”” ನವಲಗುಂದ ಶಿರಸಂಗಿ ಟ್ರಸ್ಟ್ “” ಕಾರ್ಯ ಪ್ರಾರಂಬಿಸಲು ಕಾರಣಿಭೂತರಾದರು..

1851 ಮಾರ್ಚ 22ರಂದು ಕುಂದಗೋಳ ತಾಲೂಕಿನ ಹಿರೆ ಹರಕುಣಿ ಗ್ರಾಮದಲ್ಲಿ ಜನಿಸಿದ ಇವರು ಧಾರವಾಡದ ಕಲೆಕ್ಟರ್ ಕಚೇರಿಯಲ್ಲಿ ಕಾರಕೂನರಾಗಿ ವೃತ್ತಿ ಆರಂಬಿಸಿ deputy district collector ವರೆಗೆ ಕೆಲಸ ನಿರ್ವಹಿಸಿದರು..

1901ರಲ್ಲಿ collector ಹುದ್ದೆ ಹೂಂದುವ ಅವಕಾಶ ಬಂದಿತ್ತು ಆದರೆ”” ಇಂಗ್ಲೆಂಡಿನ ಸೆಕ್ರೆಟರಿ ಆಪ್ ಸ್ಟೇಟ್ ಇಂಡಿಯಾ ” ವಿಭಾಗದಲ್ಲಿ ಶಿಪಾರಸ್ಸಿನ ವಿಳಂಬವಾದ ಆ ಹುದ್ದೆಯಿಂದ ವಂಚಿತರಾದರು…

ಇಷ್ಟೆಲ್ಲಾ ಮಾಡಿದ್ದು ಓರ್ವ ಸರಕಾರಿ ಅದಿಕಾರಿಯಾಗಿ ಅಂದರೆ ಆಶ್ಚರ್ಯ ವಾದರೂ ವಾಸ್ತವ…. ಇಂದು ಧಾರವಾಡ ವಿದ್ಯಾಕಾಶಿ ಎನ್ನಿಸಿಕೂಳ್ಳಬೇಕಾದರೆ ಅರಟಾಳ ರುದ್ರಗೌಡ್ರ ಸ್ಥಾಪಿಸಿದ” KCD”ಪಾತ್ರ ಬಹಳ ಹಿರಿದಾಗಿದೆ.. ಅಕ್ಟೂಬರ ೪ ಅರಟಾಳ ರುದ್ರಗೌಡ್ರ ಲಿಂಗೈಕ್ಯರಾದ ಸಂದರ್ಭದಲ್ಲಿ ಅವರನ್ನು ಸ್ಮರಿಸಲು ಅವರ ಸಾಧನ ಪಥವನ್ನು ಸಮಾಜಕ್ಕೆ ತಿಳಿಸುವ ಹಂಬಲವಷ್ಟೆ..

ಇದಷ್ಟೇ ಅಲ್ಲದೆ 1883 ರಲ್ಲಿ ಗಿಲಗಂಚಿ ಗುರುಸಿದ್ದಪ್ಪನವರ ಜೊತೆಗುಡಿ ಧಾರವಾಡದಲ್ಲಿ ಲಿಂಗಾಯತ ಶಿಕ್ಷಣ ನಿದಿ ಸ್ಥಾಪನೆ ಮಾಡಿದರು ಇದಕ್ಕೆ ಸೇರಿಸಿದ ನಿದಿ ಮೊತ್ತ ಎರಡು ಕಕ್ಷ ಹತ್ತು ಸಾವಿರದ ಮುನ್ನೂರಾ ತ್ತೂಂಬತ್ತ ಒಂದು ರಾಪಾಯಿ ಸಂಗ್ರಹಿಸಿದರು.

ಇದೆ ನಿದಿಯ ಲಾಭ ಪಡೆದು ಸಪ್ತರ್ಷಿಗಳು ತಮ್ಮ ಶಿಕ್ಷಣ ಪೂರ್ಣ ಗೂಳಿಸಿದರು.ಇದೇ ನಿದಿಯಿಂದ ಶಿಷ್ಯವೇತನ ಪಡೆದು ಸರ ಸಿದ್ದಪ ಕಂಬಳಿಯವರ ಉನ್ನತ ಶಿಕ್ಷಣ ಪಡೆದರು..ಮುಂದೆ ಇ ನಿದಿ ಲಿಂಗಾಯತ ಶಿಕ್ಷಣ ಸಂಸ್ಥೆಯಾಗಿ ಬೆಳವಣಿಗೆ ಹೊಂದಿತು..ಇವತ್ತಿಗೂ ಇ ಸಂಸ್ಥ ದಾರವಾಡದಲಿ ಕ್ರಿಯಾಶಿಲವಾಗಿ ಕಾರ್ಯನಿರ್ವಹಿಸುತ್ತಿದೆ.

ನಂತರ ಕೋಲ್ಹಾಪುರದಲ್ಲಿ ಮೂವತ್ತುಸಾವಿರ ರೊಪಾಯಿ ಸೇರಿಸಿ ಲಿಂಗಾಯತ ಹಾಸ್ಟೇಲ್ ಪ್ರಾರಂಬಿಸಿದರು.ನಂತರ ಸೊಲ್ಲಾಪುರದಲ್ಲಿ ನಾಲ್ವತ್ತೇಳು ಸಾವಿರ ರೂಪಾಯಿಗಳ ನ್ನು ಸಂಗ್ರಹಿಸಿ ಸೊಲ್ಲಾಪುರದ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ತಾಪಿಸಿದರು.ಮುಂಬೈಯಲ್ಲಿ ಲಿಂಗಾಯತ ಮಠಕ್ಕಾಗಿ ನಾಲ್ಕು ಸಾವಿರ ರೂಪಾಯಿ ಸಂಗ್ರಹಿಸಿದರು.

ಹಿರೆಕೇರೂರಿನಲ್ಲಿ ಇಂಗ್ಲಿಷ್ ಶಾಲೆ ಸ್ಥಾಪನೆಗೆ ಹನ್ನೂಂದು ಸಾವಿರ ಸಂಗ್ರಹಿಸಿ ಇಂಗ್ಲಿಷ್ ಶಾಲೆ ಪ್ರಾರಂಬಿಸಿದರು. ಬೆಳಗಾವಿ ಸರಕಾರಿ ಆಸ್ಪತ್ರೆಯಲ್ಲಿ ಸರಕಾರಿ ನರ್ಸಿಂಗ ಸ್ಕೂಲ್ ಸ್ಥಾಪಿಸಲು ಇಪ್ಪತ್ತೈದು ಸಾವಿರ ಸೇರಿಸಿ ನರ್ಸಿಂಗ ಸ್ಕೂಲ್ ಸ್ಥಾಪಿಸಿದರು.ಇಷ್ಟೆಲ್ಲಾ ಸಂಸ್ಥೆಗಳನ್ನು ಕಟ್ಟಿದರೂ ಜಗತ್ತಿಗೆ ಅಪರಿಚಿವಾಗಿ ಇಟ್ಟಿರುವ ಅರಟಾಳ ರುದ್ರಗೌಡ್ರು ಸಾಧನೆಯನ್ನು ಜಗತ್ತಿಗೆ ತಿಳಿಸಬೇಕು ಇಲ್ಲದಿದ್ದರೆ ಇದು ನಾಚಿಗೇಡಿನ ವಿಷಯ.

ಇಷ್ಟೂಂದು ಸಂಸ್ಥೆ ಗಳನ್ನು ಸ್ಥಾಪಿಸದೇ ಇದ್ದರು ಭಾರತ ರತ್ನ ಪಡೆದ ಮದನ ಮೋಹನ ಮಾಳವಿಯರಿಗಿಂತ ಅರಟಾಳ ರುದ್ರಗೌಡ್ರು ಸಾಧನೆ ಯಾವುದರಲೂ ಕಡಿಮೆ ಇಲ್ಲ.ಆದರೆ ಮದನ ಮೋಹನ ಮಾಳವಿಯ ಜಗತ್ತಿಗೆ ಪರಿಚಯ..ಆದರೆ ಅರಟಾಳ ರುದ್ರಗೌಡ್ರು ನಮ್ಮವರಿಗೆ ಪರಿಚಯ ಇಲ್ಲದೇ ಇರುವುದು ನಾಚಿಕೆ ತರುವ ವಿಷಯ….

ಇದೆಲ್ಲವನ್ನು ಹೇಳಲು ಕಾರಣ ಅಕ್ಟೋಬರ್ ನಾಲ್ಕು ಕನ್ನಡದ ಮದನ ಮೋಹನ ಮಾಳವಿಯ ಎಂದೇ ಪರಿಚಿತರಾದ ಅರಟಾಳ ರುದ್ರಗೌಡ್ರು ಸ್ಮೃತಿ ದಿವಸ ಕಾರಣ ಇಷ್ಟೆಲ್ಲವನ್ನು ತಿಳಿಸುವ ಹಂಬಲ ಅಷ್ಟೇ..

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

ರೈತರ ಬಾಳು ‘ಹಾಂ’ ಅನ್ನುವದರೊಳಗೆ ತಿಂಗಳಾಗಿ ಪಗಾರ ಬಂದಂತಲ್ಲ!

ಸಿಂದಗಿ: ಅವರು ಆರು ತಿಂಗಳು, ಒಂದು ವರ್ಷ ಅವರೇ ದುಡಿದ ಅನ್ನಕ್ಕಾಗಿ ಕಾಯಬೇಕು. ಅದೂ ಯಾವ ಬೆಳೆಗೆ ಎಷ್ಟು ಬರುತ್ತೆ …

ವಿನಯ ಕುಲಕರ್ಣಿ ಎಂಬ ಹೋರಾಟಗಾರನ ಜೀವನ

ಧಾರವಾಡ ಜಿಲ್ಲೆ ಕರುನಾಡಿಗೆ ಅನೇಕ ರಾಜಕೀಯ ನಾಯಕರನ್ನು ನೀಡಿದೆ. ಬಂಡಾಯದ ನಾಡೇ ಎಂದು ಹೆಸರಾಗಿರುವ ಧಾರವಾಡ ಜಿಲ್ಲೆಯ ನವಲಗುಂದ ಮೂಲದ …

ಬೈಲೂರ ನಿಜಗುಣಾನಂದ ಶ್ರೀಗಳ ಸಾಮಾಜಿಕ ಕ್ರಾಂತಿ

  ಬೆಂಗಳೂರು/ಬೈಲೂರು: ತೋಂಟದಾರ್ಯ ಶಾಖಾಮಠ ಮುಂಡರಗಿ ಮತ್ತು ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣಪ್ರಭು ತೋಂಟದಾರ್ಯ (ನಿಜಗುಣಾನಂದ) ಸ್ವಾಮಿಗಳು ಅಂದ್ರೆ …

ವಿನಯ್ ಕುಲಕರ್ಣಿ ಜೊತೆಗೆ ಲಿಂಗಾಯತ ಸಮಾಜವಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಬೆಂಗಳೂರು : ಲಿಂಗಾಯತ ಸಮಾಜದ ಹಿರಿಯ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರ …

Leave a Reply

Your email address will not be published. Required fields are marked *

error: Content is protected !!