Breaking News
Home / featured / ಜಗತ್ ಪ್ರಸಿದ್ಧ ಕಾಲುವೆ ನಿರ್ಮಾತೃ : ಎಂ.ಬಿ ಪಾಟೀಲ

ಜಗತ್ ಪ್ರಸಿದ್ಧ ಕಾಲುವೆ ನಿರ್ಮಾತೃ : ಎಂ.ಬಿ ಪಾಟೀಲ

ಅಕ್ಟೋಬರ್-7 ಮಾನ್ಯ ಎಂ.ಬಿ.ಪಾಟೀಲರ ಜನ್ಮದಿನ.

ತುಬಚಿ-ಬಬಲೇಶ್ವರ ಕಾಲುವೆ ಕುರಿತು ಒಂದಿಷ್ಟು ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶ ತುಬಚಿ ಬಬಲೇಶ್ವರ. ಲಕ್ಷಾಂತರ ಎಕರೆ ಒಣಭೂಮಿ,ಮಳೆ ಬಂದರೆ ವ್ಯವಸಾಯ, ಇಲ್ಲವಾದರೆ ಕೂಲಿಗಾಗಿ ಗೋವಾಕ್ಕೆ ಗೂಳೆ ಹೋಗಬೇಕು ರೈತ. ಕೃಷ್ಣಾನದಿಯ ಮುರನೆಯ ಹಂತದ ನೀರು ಬಳಕೆಯಾಗಬೇಕು. ಮುಳವಾಡ ಯಾತ ನೀರಾವರಿ ಇಂದ ಮಾತ್ರ ವಿಜಾಪುರ ಜಿಲ್ಲೆಗೆ ನೀರು.ಅವರೆ ಅಲ್ಲವೆ ತಮ್ಮ ಭೂಮಿಯನ್ನು ಕಳೆದುಕೊಂಡು ಕೂಲಿಯಾಳಾಗಿ ದುಡಿದು ಅಣೆಕಟ್ಟು ಕಟ್ಟಿದವರು?. ಅದರೆ ಪಲಾನುಭಾವಿಗಳು ಮತ್ತೆಲ್ಲೋ. ನಮ್ಮವರಿಗ್ಯಾಕಿಲ್ಲ ನೀರು?. ಸಹನೆಗೂ ಮಿತಿ ಇದೆ.ನಾನಲ್ಲದೆ ಮತ್ತಾರು ಮಾಡುವರು ಈ ಕಾರ್ಯ ಎಂದರು ಅಂದಿನ ನೀರಾವರಿ ಸಚಿವ ಮಲ್ಲನಗೌಡರು.

ತಿಡಗುಂದಿ ಬ್ರ್ಯಾಂಚ ಕಾಲುವೆಯ ನೀರು ಹರಿಸಲು ಸಿದ್ದವಾಗಿತ್ತು ಸರಕಾರಿ ಅಭಿಯಂತರರ ನಕ್ಷೆ. ಆದರೆ ಅದಾಗಿತ್ತು ಬಾಯಾರಿದವನಿಗೆ ನೀರು ನೀಡದ ನಕ್ಷೆ. ಸಚಿವರೆದರು ಅನುಮತಿಗಾಗಿ ಬಂತು ಅದು, ಸ್ಥೂಲವಾಗಿ ಪರೀಕ್ಷಿಸಿದರು ಅದನ್ನು ಸಚಿವರು.
“ಸ್ಥಳಿಯರಿಗೆ ನೀರು ಕೊಡದೆ ಅಷ್ಟೂ ದೂರ ಯಾಕೆ ಎಳೆಯುತ್ತೀರಿ ಕಾಲುವೆಯನ್ನು”
ಎಂದರು ಅವರು.

“ಸರ್ ಇಲ್ಲಿ ನೀರು ಹರಿಸಲು ಬರುವದಿಲ್ಲ, ಈ ಪ್ರದೇಶ ಅತ್ಯಂತ ಎತ್ತರದ ಪ್ರದೇಶ. ಮದ್ಯದಲ್ಲಿರುವ ಹದಿನೈದು ಕಿ.ಮಿ. ಭೂಮಿಯು ಭೂಮಿಯ ಮಟ್ಟಕ್ಕಿಂತ ಮೂವತ್ತು ಮೀಟರ ಕೆಳಮಟ್ಟದಲ್ಲಿದೆ. ಅಲ್ಲಿ ನೀರು ಹರಿಸಲು ಅಸಾಧ್ಯ “.
ಅಸಾದ್ಯವನ್ನು ಸಾಧ್ಯ ಮಾಡುವ ಸಚಿವರಾದರು ಚಿಂತಿತ.
“ಸಭೆ ಮುಂದಕ್ಕೆ ಹಾಕಿ,ಇನ್ನೊಂದು ದಿನ ಚರ್ಚಿಸೋಣ”
ಎದ್ದರು ಸಚಿವರು. ಬಂದರು ತಮ್ಮ ಗ್ರಹ ಕಚೆರಿಗೆ, ಕರೆದರು ಸ್ನೇಹಿತರನ್ನು.
“ವಾಹನ ಹೋಗಲು ಸೇತುವೆ ಮಾಡಬೇಕಾದರೆ, ದಾಹದ ಹೊಟ್ಟೆಗೆ ನೀರು ಕೊಡಲು ನೀರಿನ ಸೇತುವೆ ಯಾಕೆ ಮಾಡ ಬಾರದು. ಈ ಕಾರ್ಯ ಮಾಡಿ”
ಎಂದರು ತಮ್ಮ ಸ್ನೇಹಿತರರನ್ನು ಉದ್ದೇಶಿಸಿ,

ನೆಲದಿಂದ ಮೂವತ್ತು ಮೀಟರ ಮೇಲೆಳಬೇಕು ಕಂಬ ಅದರ ಮೇಲೆ ನೀರು, ನೀರಿನ ಮೇಲೆ ವಾಹನ, ಸುಂದರವಾದ ಕಲ್ಪನೆ. ಈ ಕಲ್ಪನೆ ಸಾಕಾರಗೊಳಿಸಲು ಬೇಡಿಕೆ ಸಚಿವರಿಂದ, ಸಾಕಾರಗೊಳಿಸುವ ಕಲೆ ಸ್ನೇಹಿತರಿಗಿದೆ. ಅದರಂತೆ ಹೊಸ ತಂತ್ರಜ್ಞಾನ ಬಳಸಿ. ಏಸಿಯಾ ಖಂಡದ ಅತಿ ಉದ್ದವಾದ ಆಕ್ವಾಡಕ್ಟ ನೀಲ ನಕ್ಷೆ ಸಿದ್ದಮಾಡಿದರು. ಅದೆ pre stressed, pre-tension ತಂತ್ರಜ್ಞಾನ, ಇದರಿಂದ ಕೆಲಸ ಸುಲಭ ಹಾಗು ವೇಗವಾಗಿ ಮುಗಿಯುವಂತದು. ಒಟ್ಟು ಖರ್ಚು ೨೮೧ ಕೋಟಿ ರೂಪಾಯಿ.

ದೊರಕಿತು ಹಸಿರು ನಿಶಾನೆ ಸರಕಾರದಿಂದ. ಹದಿನೆಂಟು ತಿಂಗಳಲ್ಲಿ ೨೯ಹಳ್ಳಿಗಳಿಗೆ ನಿರಾವರಿ !!!. ಇಂದು ಹರಿಯುತ್ತಿದೆ ಅದರಲ್ಲಿ ನೀರು, ಭಾರತದಲ್ಲಿ ಅತಿ ಉದ್ದದ ನೀರಾವರಿ ಸೇತುವೆಯಲ್ಲಿ.

ಶರಣ : ಜಿ.ಬಿ.ಪಾಟೀಲ.
ಮಹಾಪ್ರಧಾನ ಕಾರ್ಯದರ್ಶಿಗಳು
ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!