Breaking News
Home / featured / 19 ನೇ ಕಲ್ಯಾಣ ಪರ್ವ ಜರಗುವುದೇ ? ನಾವೂ ಪಾಲ್ಗೊಳ್ಳಬಹುದೆ?

19 ನೇ ಕಲ್ಯಾಣ ಪರ್ವ ಜರಗುವುದೇ ? ನಾವೂ ಪಾಲ್ಗೊಳ್ಳಬಹುದೆ?

ಸನ್ನಿವೇಶ, ಹಾಸ್ಪಿಟಲ್. ವೈದ್ಯರೆಲ್ಲ ಗುರು ಮಾತಾಜಿಯವರನ್ನು ಸುತ್ತುವರೆದಿದ್ದಾರೆ. ವಿನಂತಿಸಿಕೊಳ್ಳುತ್ತಿದ್ದಾರೆ.

“ಮಾತಾಜಿಯವರೆ, ತಾವೀಗ ಕನಿಷ್ಟ ಒಂದು ತಿಂಗಳಾದರೂ ಎಲ್ಲೂ ಪ್ರಯಾಣ ಪ್ರವಾಸ ಕೈಗೊಳ್ಳಬಾರದು. ಕಾರ್ಯಕ್ರಮಗಳಿಗೆ ಅಪಾಯಿಂಟ್ಮೆಂಟ್ ಕೊಡಬಾರದು. ತಮ್ಮ ಆರೋಗ್ಯ ತುಂಬಾ ಸೂಕ್ಷ್ಮವಾಗಿದೆ. ಕಿಡ್ನಿಯ ಜೊತೆಗೆ ಶ್ವಾಸಕೋಶದ ತೊಂದರೆಯೂ ಉಲ್ಭಣಿಸುತ್ತಿದೆ” please ಮಾತಾಜಿ ಎಂದು””

ಸತತ 55 ವರ್ಷ  ಹಗಲಿರುಳೆನ್ನದೆ, ಗುರು ಬಸವಣ್ಣನವರ ತತ್ವ ಪ್ರಚಾರಕ್ಕೆ, ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಾತಾಜಿ,  ಲಿಂಗಾಯತ ಧರ್ಮದೆಡೆಗೆ ಜಗತ್ತೆ ಬೆರಗಾಗಿ ನೋಡುವಂತೆ, ಸ್ವತಃ ಬಸವಣ್ಣನವರ ಅನುಯಾಯಿಗಳೆ
“ನಮ್ಮ ಧರ್ಮ ಇಷ್ಟೊಂದು ಶ್ರೇಷ್ಠವಾದ, ಘನವಾದ,ವಿಶ್ವ ಸಂದೇಶಗಳನ್ನು ಒಳಗೊಂಡಿದೆಯೇ ???!!! ” ಎಂದಾಶ್ಚರ್ಯಪಡುವಂತೆ,
ಜಗಕೆ ಬಿಂಬಿಸಿ,ಪ್ರತಿಪಾದಿಸಿ ತೋರಿದ ಮಾತಾಜಿ. ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ,ಸೂರ್ಯನಷ್ಟೇ ತೀಕ್ಷ್ಣವಾದ,ಪ್ರಖರವಾದ ಜ್ಞಾನ ಪ್ರಕಾಶ ಬೀರಿ, ಬೃಹತ್ತಾದ ಆಂದೋಲನಗಳನ್ನು ಮಹಾ ದಾಸೋಹ ಗಣಪರ್ವಗಳನ್ನು ನಡೆಸಿದ ಮಾತಾಜಿ.

ವೈದ್ಯರ ತಂಡಕ್ಕೆ ಹಸನ್ಮುಖಿಯಾಗಿ “ಹೌದೆ ??!!
ಹಾಗೆಯೆ ಆಗಲಿ” ಎಂದು ಉತ್ತರಿಸಿ ಸಂತಸಪಡಿಸುತ್ತಿದ್ದರು.

ವೈದ್ಯರ ತಂಡ ಅತ್ತ ಸರಿಯುತ್ತಿದ್ದಂತೆ, ಸಹಾಯಕರಾದ ದಿಲೀಪ್, ಪ್ರವೀಣ್ ಅವರು, “ಮಾತಾಜಿ
ಕಲಬುರಗಿಯಿಂದ ಶರಣರು ಫೋನ್ ಮಾಡಿದ್ದಾರೆ, ತಮ್ಮ ಬಳಿಯೇ ಮಾತನಾಡಬೇಕಂತೆ””
ಮಾತಾಜಿಯವರು 25ರಿಂದ30 ನಿಮಿಷ, ಅವರ ವಿಚಾರಗಳನ್ನೆಲ್ಲಾ
ಆಲಿಸಿ, ಸೂಕ್ತ ಸ್ಪಷ್ಟ ಮಾರ್ಗದರ್ಶನ ನೀಡಿದರು.
ಏನು ಮಾಡುವುದು?! ವೈದ್ಯರು ಒಂದು ತಿಂಗಳು
ಪ್ರವಾಸ ಬೇಡ ಎನ್ನುತ್ತಿದ್ದಾರೆ
ಆದರೆ ನನ್ನ ಪ್ರಾಣ, ಮನಸ್ಸು,ಬುದ್ದಿಗಳೆಲ್ಲ, ಲಿಂಗಾಯತ ರ‌್ಯಾಲಿಯಲ್ಲೆ ಇದೆ. ಇತ್ತ ಇಲ್ಲಿ ಇರಲೂ ಆಗುತ್ತಿಲ್ಲ- ಅತ್ತ ಹೋಗಲೂ ಆಗುತ್ತಿಲ್ಲ. ಎಂದು ಚಟಪಡಿಸುತ್ತಿದ್ದರು.

ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿಯವರಿಗೆ “ದೆಹಲಿ ರ‌್ಯಾಲಿ ಆಯೋಜನೆಗಾಗಿ, ಸ್ಥಳ ಸಮಯದ ಬಗ್ಗೆ ವಿಚಾರ  ಮಾಡುತ್ತಿದ್ದರು.
“ಆರೋಗ್ಯ ಸುಧಾರಣೆ ಆಗುವ ತನಕ ಎಲ್ಲೂ ಹೊರ ಹೋಗುವುದು ಬೇಡ” ಎಂದಾಗ ನನಗೆ ಆಸ್ಪತ್ರೆಯಲ್ಲಿ ಕಾಲ ಹಾಕುವುದು ತುಂಬಾ ಕಷ್ಟ
ನಾನು ಸದಾ ಶರಣರ ನಡುವೆ ಇರಬೇಕು. ಗುರು ಲಿಂಗಾನಂದ ಅಪ್ಪಾಜಿಯವರಂತೆ ಶರಣರೊಡನೆ, ಹಾಡುತ್ತಾ, ಪಾಡುತ್ತಾ, ಅನುಭವ ಗೋಷ್ಠಿ ಮಾಡುತ್ತ, ಗುರು ಬಸವಣ್ಣನವರ ತತ್ವ ಸಂದೇಶಗಳನ್ನು ಜಗತ್ತಿಗೆ ಸಾರುತ್ತಾ, ಪ್ರಾಣ ತೊರೆಯಬೇಕು. ಲಿಂಗೈಕ್ಯವಾಗಬೇಕು. ನನ್ನನ್ನು ಕಟ್ಟಿ ಹಾಕಬೇಡಿ, ಎಂದು ಕೇಳಿಕೊಳ್ಳುತ್ತಿದ್ದರು.

ಇಂತಹ ಮಹಾನ್ ವ್ಯಕ್ತಿತ್ವದ ಗುರು ಮಾತಾಜಿಯವರಿಗೆ ಶರಣ ಮೇಳ ಮತ್ತು ಕಲ್ಯಾಣ ಪರ್ವ ಉತ್ಸವಗಳು ಪ್ರಾಣಜೀವಾಳವಾಗಿದ್ದವು.
ಕೂಡಲಸಂಗಮ ಮತ್ತು ಬಸವಕಲ್ಯಾಣ ಲಿಂಗಾಯತ ಧರ್ಮೀಯರಿಗೆ, ಅತ್ಯಂತ ಮಹತ್ವದ ಪವಿತ್ರ ಕ್ಷೇತ್ರಗಳು.
ಮಹಾಗುರು ಬಸವಣ್ಣನವರು ಜಗತ್ತಿಗೇ ಮಾದರಿಯಾದ, ವಿಶ್ವದ ಮೊಟ್ಟಮೊದಲ ಪಾರ್ಲಿಮೆಂಟ್ ಎಂದು ಕರೆಸಿಕೊಳ್ಳುವ ಅನುಭವ ಮಂಟಪ ಕಟ್ಟಿ
ವಚನ ಸಂದೇಶಗಳನ್ನು ವಿಶ್ವಕ್ಕೆ ನೀಡಿದ, ಶರಣರಾಡಿದ ಶರಣಭೂಮಿ ಬಸವಕಲ್ಯಾಣ.

ಓರ್ವ ವ್ಯಕ್ತಿಗೆ ಹೃದಯ ಎಷ್ಟು ಮುಖ್ಯವೋ, ಮೆದುಳೂ ಅಷ್ಟೇ ಮುಖ್ಯ. ಲಿಂಗಾಯತ ಧರ್ಮದ ಹೃದಯ ಕೂಡಲಸಂಗಮ ವಾದರೆ ಮೆದುಳು ಬಸವಕಲ್ಯಾಣ ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳ, ಬಸವಕಲ್ಯಾಣದಲ್ಲಿ ನಡೆಯುವ ಕಲ್ಯಾಣ ಪರ್ವ ಯಾವ ಕಾರಣಕ್ಕೂ ನಿಲ್ಲಬಾರದು.
ಬಲಗುಂದಬಾರದು, ನಿಷ್ಕ್ರಿಯ ವಾಗಬಾರದು. ಹೃದಯ ಬಡಿತ ನಿಂತವರನ್ನು ಮೃತ ಎಂದು ವೈದ್ಯರು ಘೋಷಿಸುವುದಿಲ್ಲ. ಮೆದುಳು ನಿಷ್ಕ್ರಿಯಗೊಂಡ ನಂತರವೇ ವ್ಯಕ್ತಿ ಮೃತ ಎಂದು ಘೋಷಿಸುವರು.

ಕಲ್ಯಾಣ ಪರ್ವ ಬಲಗುಂದಿದರೆ, ನಿಷ್ಕ್ರಿಯ ಗೊಂಡರೆ ಲಿಂಗಾಯತ ಧರ್ಮಕ್ಕೆ ಭರಿಸಲಾಗದ ನಷ್ಟವಾದಂತೆ.
ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಸ್ವಾಮೀಜಿ ಎಂಬ ತಾಯಿಯ ವಚನಾಮೃತದ ಹಾಲನ್ನು ಕುಡಿದು, ಗುರುಮಾತೆ ಸ್ತ್ರೀ ಕುಲಕಣ್ಮಣಿ ಡಾ.ಮಾತೆಮಹಾದೇವಿ ಮಾತಾಜಿಯೆಂಬ ತಂದೆಯಿಂದ
ಜ್ಞಾನ ಸಂಸ್ಕಾರ ಪಡೆದು ಬಲಿಷ್ಠವಾಗಿ ಬೆಳೆದ,(ಸಂಖ್ಯೆಯಿಂದಲ್ಲ ತತ್ವನಿಷ್ಠೆ ಯಿಂದ) ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ವೀರ ಮಾತೆ ಅಕ್ಕನಾಗಲಾಂಬಿಕ ಮಹಿಳಾಗಣ ಎಂಬ, ಸದಾಕ್ರಿಯಾತ್ಮಕ ಚೈತನ್ಯ ದಾಯಿ ಸಂಘಟನೆಗಳನ್ನು ಹೊಂದಿರುವ, ಜಂಗಮ ಮೂರ್ತಿಗಳ, ಮಾತಾಜಿಗಳ ಸಮೋಹ ಹೊಂದಿರುವ, ಬಸವ ಧರ್ಮ ಪೀಠದ ಬಹು ಮುಖ್ಯ ಕಾರ್ಯ, ಶರಣಮೇಳ ಕಲ್ಯಾಣ ಪರ್ವಗಳನ್ನ ನಡೆಸುವುದು. ಆದಿಶರಣರ ಸಂಕಲ್ಪ ಪೂರೈಸುವುದು. ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಲಿಂಗಾಯತ ಸಮಾಜ ಅತ್ಯಂತ ಶ್ರೀ ಮಂತ ಮಠಾದೀಶರು, ಬಲಿಷ್ಠ ರಾಜಕೀಯ ಮುಂದಾಳುಗಳು, ದೊಡ್ಡ ದೊಡ್ಡ ದೊಡ್ಡ ದೊಡ್ಡ ಧನಿಕರು, ಉದ್ಯಮಿಗಳು,
ಶರಣ ಮೇಳ, ಕಲ್ಯಾಣ ಪರ್ವ ದಂತ ಬೃಹತ್ ಕಾರ್ಯಗಳ ಖರ್ಚು ವೆಚ್ಚ ಗಳನ್ನೆಲ್ಲಾ ಒಬ್ಬರೇ ಅನಾಯಾಸವಾಗಿ ಭರಿಸುವ ಶಕ್ತಿಯುಳ್ಳ, ಶ್ರೀಮಂತರಿಂದ ತುಂಬಿದೆ. ಆದರೆ ಅವರಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ. ಇದರ ಪರಿಹಾರವೇ, ಮೂರು ಕೋಟಿ ಲಿಂಗಾಯತರನ್ನು
ಹೊಂದಿರುವ ಲಿಂಗಾಯತ ಸಮಾಜದ ಹಿತಕ್ಕಾಗಿ, ಲಿಂಗಾಯತ ಧರ್ಮೀಯರೆಲ್ಲ ಒಂದೆಡೆ ಸೇರಿ, ಸಮಾಜ-ಧರ್ಮದ ಕುರಿತು ಚಿಂತನ-ಮಂಥನ ಮಾಡಲು ದೃಷ್ಟಿ ನೀಡುವ, ಲಿಂಗಾಯತ ಸಮಾಜದ ಎರಡು ಕಣ್ಣುಗಳಾದ, ಶರಣ ಮೇಳ, ಕಲ್ಯಾಣ  ಪರ್ವ

*ಕರೋನ ಕೋವಿಡ್೧೯ರ ಭಯ*

ಕರೋನ ಎಂಬ ಮಹಾರೋಗದ ಬಗ್ಗೆ ನಾವು ಜಾಗೃತರಾಗಿರಬೇಕೆಂದರೆ,ಎಲ್ಲಾ ಬಾಗಿಲುಗಳನ್ನು ಮುಚ್ಚಿ ಬೂಗತರಾಗಬೇಕೆಂದಲ್ಲ.ತಲೆ ಗಟ್ಟಿಯಿದೆಯೆಂದು ಗೋಡೆಗೆ ಗಟ್ಟಿಸಿ ಹುಂಬತನದ ಚಾಲೆಂಜ್ ಮಾಡುವುದೂ ಅಲ್ಲ. ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ನಾಣ್ಣುಡಿಯಲ್ಲಿರುವ ಸತ್ಯವನ್ನು ಗ್ರಹಿಸಿ, ಸರ್ಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ, ರೂಪಿಸಿಕೊಟ್ಟಿರುವ, ಸುರಕ್ಷಿತ ಅಂತರ-ಸ್ಯಾನಿಟೈಸೇಷನ್-
ಖಡ್ಡಾಯ
ಮಾಸ್ಕ ಧಾರಣೆ, ಕೋವಿಡ್ ರೋಗ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು.
ಈ ನಿಯಮಗಳನ್ನು ಪಾಲಿಸಿ ಕಲ್ಯಾಣ ಪರ್ವ ಉತ್ಸವವನ್ನು ಶಿಸ್ತು ಬದ್ದವಾಗಿ, ಯಶಸ್ವಿಯಾಗಿ ಸಂಪನ್ನಗೊಳಿಸಬೇಕಾಗಿದೆ.

ಮಹಾಗುರು ಬಸವಣ್ಣನವರ, ಆದಿಶರಣರ, ಪೂಜ್ಯ ಲಿಂ.ಡಾ ಮಾತಾಜಿಯವರ, ಸಂಕಲ್ಪಕ್ಕೆ ಚ್ಯುತಿಬಾರದಂತೆ, ರಾಷ್ಟ್ರೀಯ ಬಸವ ದಳದ ಪ್ರತಿಯೋರ್ವ ಕಟ್ಟಾಳುವು ಕಾರ್ಯಗೈಯ್ಯಬೇಕಾಗಿದೆ. ವ್ಯಕ್ತಿ ಕಲ್ಯಾಣ, ಸಮಾಜ ಕಲ್ಯಾಣ, ರಾಷ್ಟ್ರಕಲ್ಯಾಣ, ವಿಶ್ವ ಕಲ್ಯಾಣ ದ ಗುರಿಯೆಡೆಗೆ ದೃಡವಾದ ಹೆಜ್ಜೆಯಿಟ್ಟು ನಡೆಯಬೇಕಾಗಿದೆ.

ಮಹಾಗುರು ಬಸವಣ್ಣನವರ ತತ್ವ ಧಾರೆ, ಸಕಲಜೀವಾತ್ಮರ ಲೇಸಬಯಸಿ ನಡೆಸುವ, ಲಿಂಗಾಯತ ಧರ್ಮದ ಶ್ರೇಯ ಬಯಸಿ ನಡೆಸುವ ಕಾರ್ಯಕ್ರಮ ಕಲ್ಯಾಣ ಪರ್ವ
ಇಂತಹ ಮಹತ್ವಪೂರ್ಣ ಬೃಹತ್ ಕಾರ್ಯಕ್ರಮ ಇದೇ ಅಕ್ಟೋಬರ್ 30&31 ರಂದು ನಡೆಯುವುದು.

ಅಂಜಿದಡಾಗದು,
ಅಳುಕಿದಡಾಗದು, ಕಕ್ಕುಲತೆಗೆ ಬಂದಡೂ ಆಗದು, ಭಯದಿಂದ ದೃತಿಗೆಟ್ಟು ಧಾತುಗೆಟ್ಟಡಾಗದು
ಗುರು-ಲಿಂಗ-ಜಂಗಮದ ಭಾಷೆ ತಪ್ಪಿದಡಾಗದು. ಲೋಕ ವಿಗರ್ಭಣೆಗೆ ಅಂಜಿದಡಾಗದು, ಅಂಜಲದೇಕೋ ಗುರುದೇವಾ ನಿಮ್ಮಾಳಾಗಿ, ಶರಣನಾಗಿ ಮರಣಕಂಜಿದಡೆ ಅದೇ ನಾಯಕ ನರಕ, ಲೋಕವಿರೋಧಿ ಶರಣನಾರಿಗೂ ಅಂಜುವನಲ್ಲ.

ಛಲಬೇಕು ಶರಣಂಗೆ ಶರಣರ ಸಂಕಲ್ಪವ ಪೂರೈಸುವೆನೆಂಬ.

ಶರಣ ಬಂದುಗಳೆ ಕೋವಿಡ್ ಕಾರಣ, ಮೂರು ದಿನ ನಡೆಯಬೇಕಿದ್ದ ಐತಿಹಾಸಿಕ ಕಲ್ಯಾಣ ಪರ್ವ ಉತ್ಸವವನ್ನು, ಎರಡು ದಿನ ನಡೆಸುತ್ತಿದ್ದು, ಕೋವಿಡ್ ೧೯ ರ ಎಲ್ಲಾ ನಿಯಮಗಳನ್ನು ಶಿಸ್ತು ಬದ್ದವಾಗಿ ಪಾಲಿಸಲಾಗುವುದು.
ಬಸವ ಧರ್ಮದ ತತ್ವದ ಚಿಂತನೆಗಳೊಂದಿಗೆ, ವ್ಯಕ್ತಿ, ಸಮಾಜ, ರಾಷ್ಟ್ರ,ಮತ್ತು ವಿಶ್ವವನ್ನು ಕೋವಿಡ್ನಿಂದ ಹೇಗೆ ಸೆಲ್ಪ್- ಸೇಫ್-ಸೇವ್ ಮಾಡಬಹುದು, ಸರ್ವೀಸ್ ನೀಡಬಹುದು ಎಂಬುದರ ಬಗ್ಗೆ ಮಹತ್ವದ ಚಿಂತನೆಯನ್ನು ಮಾಡಲಾಗುವುದು.

ಮಹಾಗುರು ಬಸವಣ್ಣನವರ
ಶರಣರ ಬರುವೆಮಗೆ ಪ್ರಾಣ ಜೀವಾಳ.

ಶರಣರೆ ತತ್ವ ನಿಷ್ಟರಾಗಿ,
ಸಂಕಲ್ಪ ಸಹಿತರಾಗಿ,
ಸಂಕಲ್ಪ ಬದ್ದರಾಗಿ,
ಸಂಕಲ್ಪ ಪೂರೈಸುವರಾಗಿ,
ಬಸವತಂದೆಗೆ ಪ್ರಿಯರಾಗಿ ಬನ್ನಿರಿ ಶರಣರೆ, ಬಸವಕಲ್ಯಾಣಕೆ,
ಬಸವಮಹಾಮನೆ ಕಟ್ಟುವ ಬನ್ನಿ
ಶರಣರ ಋಣವನು ತೀರಸ ಬನ್ನಿ
ಬಸವಾತ್ಮಜೆಯ ಬಿನ್ನಹವಿದುವು….

👏ಶರಣು 👏ಶರಣಾರ್ಥಿಗಳು.
ಬಸವ ಧರ್ಮ ಪೀಠ ಬಸವಕಲ್ಯಾಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!