Breaking News
Home / featured / ಯಾರಿಗೆ ಸಿಗುತ್ತೆ ಬೆಳಗಾವಿ ಟಿಕೇಟ್..!

ಯಾರಿಗೆ ಸಿಗುತ್ತೆ ಬೆಳಗಾವಿ ಟಿಕೇಟ್..!

ಕರ್ನಾಟಕ ರಾಜ್ಯದ ಎರಡನೆ ರಾಜಧಾನಿಯಾಗಿರೊ ಸರ್ಕಾರದ ಶಕ್ತಿಕೇಂದ್ರ ಸುವರ್ಣಸೌಧ ಹೊಂದಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ, ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಚುರುಕು ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆಗೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯ ಬಲವಾಗಿದೆ. ಒಂದು ವೇಳೆ ತಪ್ಪಿದರೆ ಬೆಳಗಾವಿಗೆ ಶಕ್ತಿತುಂಬುವ ರಾಣಿ ಚೆನ್ನಮ್ಮನ ನಾಡು ಬೈಲಹೊಂಗಲ ಭಾಗದ ನಾಯಕರಿಗೆ ಆದ್ಯತೆ ನೀಡುವಂತೆ ಬೆಂಬಲಿಗರು ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಒತ್ತಾಯ ಕೇಳಿಬಂದಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ ಕ್ಷೇತ್ರಕ್ಕೆ ಬಿಜೆಪಿಯ ಖಾತೆಯನ್ನ ರೈತ ನಾಯಕ ಬಾಬಾಗೌಡ ಪಾಟೀಲ ತೆರೆದು ಮಂತ್ರಿಗಳು ಆಗಿದ್ದರು. ನಂತರ ರಾಜಕೀಯ ಬದಲಾವಣೆಯಿಂದ 2004ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದ ಸುರೇಶ ಅಂಗಡಿ ಅವರು, ಸತತವಾಗಿ ನಾಲ್ಕು ಬಾರಿ ಗೆಲವು ಸಾಧಿಸುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿ ಬದಲಾಯಿಸಿದ್ದರು.

ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆಕಾಂಕ್ಷಿಗಳು ದಂಡು ಹೆಚ್ಚಾಗಿದೆ.
ಒಂದು ಕಡೆ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಕೆಲವರು ನಾಯಕರನ್ನು ಆಗ್ರಹಿಸಿದ್ದಾರೆ. ಕ್ಷೇತ್ರದಲ್ಲಿ ಕೆಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರ ನಡುವೆ ಬೈಲಹೊಂಗಲ ನಾಡಿನಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಜತೆಗೆ ಅಭಿಮಾನಿಗಳೂ ನಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹರಿಬಿಡುವ ಮೂಲಕ ಬಿಜೆಪಿ ಹೈಕಮಾಂಡ್ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದಾರೆ. ಡಾ.ವಿಶ್ವನಾಥ ಪಾಟೀಲ ಹೆಸರು ಕೇಳಿ ಬರುತ್ತಿದೆ. ಇವರ ನಡುವೆ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೆಸರು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಅಲ್ಲದೇ ಈ ಬಾರಿ ಬೈಲಹೊಂಗಲ ಭಾಗದವರಿಗೇ ಟಿಕೆಟ್ ನೀಡುವ ಮೂಲಕ ಬೆಳಗಾವಿಗೆ ಸೀಮಿತವಾಗಿರೊ ಸಂಸದ ಸ್ಥಾನ ಬೈಲಹೊಂಗಲ ಉಪವಿಭಾಗಕ್ಕೆ ನೀಡಿ ಪ್ರಾದೇಶಿಕ ಅಸಮತೋಲನವನ್ನ ಸರಿಪಡಿಸುವಂತೆಯೂ ಆಗ್ರಹಿಸಲಾಗುತ್ತಿದೆ.
ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಎಫ್.ಎಸ್.ಸಿದ್ದನಗೌಡರ ಅವರು, 1997ರಲ್ಲಿ ಎಬಿವಿಪಿ ಮುಖಾಂತರ ವಿದ್ಯಾರ್ಥಿ ನಾಯಕರಾಗಿ 2 ಬಾರಿ ರಾಜ್ಯ ಪರಿಷತ್ ಕಾರ್ಯಕಾರಿಣಿ ಸದಸ್ಯರಾಗಿ ನೂರಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಸಮಾಜದಲ್ಲಿ ರೈತಪರ ಮತ್ತು ಕಳಸಾ ಬಂಡೂರಿ ಹೋರಾಟದಲ್ಲಿ ಮುಂಚೂಣಿಯಾಗಿದ್ದಾರೆ.

ನ್ಯಾಯವಾದಿಗಳಾಗಿ ಸಾಮಾಜಿಕ ಚಿಂತಕರಾಗಿದ್ದಾರೆ. ಅಪ್ಪಟ ಬಸವಾಭಿಮಾನಿಗಳಾಗಿ ನಾಡಿನ ಅನೇಕ ಪೂಜ್ಯರೊಂದಿಗೆ ಒಳ್ಳೆ ಧಾರ್ಮಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಹಿಂದೆ ಜಿಲ್ಲೆಯಾದ್ಯಂತ ಅನೇಕ ವೇದಿಕೆ ಮೂಲಕ ಧಾರ್ಮಿಕ, ರಾಜಕೀಯ ಸಾಮಾಜಿಕ ಚಿಂತನೆಗಳ ಜಾಗೃತಿಯ ಭಾಷಣ ಕೌಶಲ್ಯ ತೋರಿದ್ದಾರೆ. ಪ್ರಸ್ತುತ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇನ್ನು ಮಾಜಿ ಶಾಸಕರಾದ ಡಾ.ವಿ.ಆಯ್ ಪಾಟೀಲ ಹಾಗೂ

ಜಗದೀಶ ಮೆಟಗುಡ್ ರ ಕೂಡ ಪಕ್ಷ ಸಂಘಟನೆ ಜತೆಗೆ ಜನರೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿದ್ದು, ಇವರು ಕೂಡ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

 

ಮಾಹಿತಿ: ಸಾಮಾಜಿಕ ಜಾಲತಾಣ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!