Breaking News
Home / featured / ಅಕ್ಟೋಬರ್ 26 ರಂದು ಉಪವಾಸ ಸತ್ಯಾಗ್ರಹ: ಕೂಡಲಸಂಗಮ ಶ್ರೀಗಳು

ಅಕ್ಟೋಬರ್ 26 ರಂದು ಉಪವಾಸ ಸತ್ಯಾಗ್ರಹ: ಕೂಡಲಸಂಗಮ ಶ್ರೀಗಳು

 

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಕ್ಟೋಬರ್ ೨೬ ರಂದು ಬೆಳಗಾವಿಯ ವಿಧಾನ ಸೌಧದ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬೆಳಗಾವಿ ಮಿಲನ ಹೋಟೆಲ್‌ನಲ್ಲಿ ಲಿಂಗಾಯತ ಪಂಚಮಸಾಲಿ ಸಮಜದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಮಾಹಿತಿ ನೀಡಿದರು.

ಈ ವೇಳೆ ಸಭೆ ಉದ್ದೇಶಿಸಿ ಮಾತನಾಡಿದ ಕೂಡಲಸಂಗಮ ಶ್ರೀಗಳು ಲಿಂಗಾಯತ ಪಂಚಮಸಾಲಿ ಸಮುದಾಯ ಮೂಲ ಕೃಷಿ ಕಾಯಕವನ್ನು ನೆಚ್ಚಿಕೊಂಡಿದ್ದು ಅತೀವೃಷ್ಠಿ ಮತ್ತು ಅನಾವೃಷ್ಟಿಯಿಂದ ನಮ್ಮ ಸಮಾಜ ಬಹಳ ಹಿಂದುಳಿದಿದೆ, ಅದ್ದರಿಂದ ಮಹಾರಾಷ್ಟ್ರದಲ್ಲಿ ಮರಾಠರಿಗೆ ಮಿಸಲಾತಿ ನೀಡಿದ ರೀತಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನೀಡಬೇಕು. ಬೆಳಗಾವಿಯಲ್ಲಿ ಇರುವ ಸುವರ್ಣಸೌಧ ಎದುರಿಗೆ ರಾಣಿ ಚನ್ನಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು, ಸ್ವಾಗತ ಕಮಾನಿಗೆ ಕಾಯಕವೇ ಕೈಲಾಸ ಎಂದು ಬರೆಯಿಸಬೇಕು, ನಮ್ಮ ಸಮಾಜದ ಸಾಧಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡ, ಅದರಗುಂಜಿ ಶಂಕರಗೌಡರು, ಡೆಪ್ಯೂಟಿ ಚನ್ನಬಸಪ್ಪನವರು, ಗಿಲಗಂಚಿ ಗುರುಸಿದ್ದಪ್ಪನವರ, ಚಚಡಿ ದೇಶಾಯಿ ಸೇರಿದಂತೆ ಇನ್ನೂ ಅನೇಕ ಸಾಧಕರ ಕುರಿತು ಸಮಾಜಕ್ಕೆ ತಿಳಿಸಿವ ಕೆಸವಾಗಬೇಕು ಎಂದು ಸರಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಅಕ್ಟೋಬರ್ 26 ರಂದು ಮುಂಜಾನೆ 09 ಗಂಟೆಗೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಹೋರಾಟದ ರೂಪುರೇಷೆ ಕುರಿತು ಪತ್ರ ಚಳುವಳಿ, ಪಾದಯಾತ್ರೆ, ದಾಖಲೆಗಳನ್ನು ಒದಗಿಸುವುದು ಮತ್ತು ಆಮರಣ ಉಪಾವಾಸ ಸತ್ಯಾಗ್ರಹ ಮಾಡಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪಡೆಯುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದರು.

ಈ ವೇಳೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಹೋರಾಟಕ್ಕೆ ಬೇಕಾಗುವ ಸಕಲ ಸಿದ್ದತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಗುರುಪೀಠದ ಧರ್ಮದರ್ಶಿಗಳಾದ ಬಸವರಾಜ ರೊಟ್ಟಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಯುವ ಘಟಕದ ರಾಷ್ಟ್ರೀಯ ರಾಜಶೇಖರ ಮೆಣಸಿನಕಾಯಿ, ರಾಜ್ಯಾದ್ಯಕ್ಷ ಸೋಮಶೇಖರ್ ಹಲ್ಯಾಳ, ಪಂಚಸೇನೆ ರಾಷ್ಟ್ರೀಯ ಅದ್ಯಕ್ಷ ಮಹಾಂತೇಶ ಬಿಳ್ಳೂರ, ಜಿಲ್ಲಾ ಅದ್ಯಕ್ಷ ಡಾ. ರವಿ ಪಾಟೀಲ, ಯುವ ಘಟಕದ ಜಿಲ್ಲಾದ್ಯಕ್ಷ ರುದ್ರಣ್ಣ ಚಂದರಗಿ, ಎಪ್ ಎಸ್ ಸಿದ್ದನಗೌಡರ, ಕಿತ್ತೂರು ತಾಲೂಕಿನ ಅದ್ಯಕ್ಷ ಡಿ ಆರ್ ಪಾಟೀಲ, ಬಿ ಎಸ್ ಚಿಕ್ಕನಗೌಡರ, ಸಮೂಹ ಮಾದ್ಯಮದ ಬಸವರಾಜ ಚಿನಗುಡಿ, ಸಂಜೀವಕುಮಾರ ತಿಲಗರ, ಬಸವರಾಜ್ ಕುದರಿಮನಿ, ವಿಶ್ವನಾಥ ಕಿವುಂಡಾ, ಮಹಿಳಾ ಘಟಕದ ಶಿಲ್ಪಾ ಗೊಡಿಗೌಡರ ಸೇರಿದಂತೆ ಪಂಚಮಸಾಲಿ ಸಮಾಜದ ಮುಖಂಡರು ಭಾಗಿಯಾಗಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!