Breaking News
Home / featured / ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

 

ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ ಅವರ ಆಸ್ತಿ ಅವರ ಲೆಕ್ಕಕ್ಕೇ ಸಿಗದಷ್ಟಿದೆ.

ತಮ್ಮ ಪತ್ನಿ ಅಪಹರಣವಾಗಿದೆ ಎಂದು ಕೆ.ಕಲ್ಯಾಣ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವಾಗಿ ಅವರು ಅಂದಾಜಿಸಿದ್ದು 40 -50 ಲಕ್ಷ ರೂ.ಗಳನ್ನು ತಮ್ಮ ಪತ್ನಿ ಮೂಲಕ ಶಿವಾನಂದ ವಾಲಿ ಎನ್ನುವವ ಲಪಟಾಯಿಸಿದ್ದಾನೆ ಎಂದು. ಆದರೆ ಶಿವಾನಂದ ವಾಲಿ ಲಪಟಾಯಿಸಿದ್ದು 5 ರಿಂದ 6 ಕೋಟಿ ರೂ. ಆಸ್ತಿ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

ಶಿವಾನಂದ ವಾಲಿ ಎನ್ನುವ ಬಾಗಲಕೋಟೆಯ ಮಂತ್ರವಾದಿ ಗಂಗಾ ಕುಲಕರ್ಣಿ ಎನ್ನುವ ಮಹಿಳೆಯನ್ನು ಕಲ್ಯಾಣ ಅವರ ಮನೆಗೆಲಸಕ್ಕೆ ಕಳಿಸುತ್ತಾನೆ. ಆಕೆಯ ಮೂಲಕ ಕಲ್ಯಾಣ ಅವರ ಪತ್ನಿ ಅಶ್ವಿನಿಗೆ ಗ್ರಹಚಾರವಿದೆ. ಅದನ್ನು ಬಿಡಿಸಲು ಮಂತ್ರ, ತಂತ್ರ, ಪೂಜೆ ಮಾಡಿಸಬೇಕು ಎಂದು ಹೇಳುತ್ತ ಹಂತಹಂತವಾಗಿ ಹಣ ಲಪಟಾಯಿಸಲು ಆರಂಭಿಸುತ್ತಾನೆ.

ಕೊನೆಗೆ ಅಶ್ವಿನಿ ಮತ್ತು ಆಕೆಯ ತಂದೆ, ತಾಯಿಗೆ ಸೇರಿದ ಆಸ್ತಿಗಳನ್ನೂ ಲಪಟಾಯಿಸುತ್ತಾನೆ. ಅಂತಿಮವಾಗಿ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಅಶ್ವಿನಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾಳೆ. ಆ ವೇಳೆಯಲ್ಲಿ ಕಲ್ಯಾಣ್ ಪೊಲೀಸ್ ದೂರು ನೀಡುವ ಅನಿವಾರ್ಯತೆಗೆ ಸಿಲುಕುತ್ತಾರೆ.

ತಮ್ಮ ಪತ್ನಿ ಮತ್ತು ಆಕೆಯ ತಂದೆ, ತಾಯಿಯ ಅಪಹರಣವಾಗಿದೆ ಎಂದು ದೂರು ನೀಡುತ್ತಾರೆ. ಆರಂಭದಲ್ಲಿ ತಮ್ಮ ಅಪಹರಣವನ್ನು ನಿರಾಕರಿಸುವ ಅಶ್ವಿನಿ, ಪತಿ ಕಲ್ಯಾಣ್ ವಿರುದ್ಧವೇ ಆರೋಪಗಳನ್ನು ಮಾಡುತ್ತಾಳೆ. ವಿವಾಹ ವಿಚ್ಛೇದನ ಪಡೆಯುವ ಇಂಗಿತವನ್ನೂ ವ್ಯಕ್ತಪಡಿಸುತ್ತಾಳೆ.

ಆದರೆ ಕಲ್ಯಾಣ್ ಅತ್ಯಂತ ತಾಳ್ಮೆಯಿಂದ ವ್ಯವಹರಿಸಿ, ತಮ್ಮ ಪತ್ನಿಯ ಕೌನ್ಸಿಲಿಂಗ್ ಮಾಡಿದರೆ ಅವಳು ಸರಿಹೋಗುತ್ತಾಳೆ ಎಂದು ಹೇಳುತ್ತಾರೆ. ಪೊಲೀಸರು ಅಶ್ವಿನಿಯನ್ನು ಕೌನ್ಸಿಲಿಂಗ್ ಮಾಡಿ ಈಗ ೊಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಈ ಮಧ್ಯೆ ಶಿವಾನಂದ ವಾಲಿಯನ್ನು ಬಂಧಿಸಿರುವ ಪೊಲೀಸರು ಆತನ 9 ಮ್ಯಾಕ್ಸಿಕ್ಯಾಬ್, ಬಂಗಾರದ ಆಭರಣ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆತನ ಆಸ್ತಿ ಪತ್ತೆ ಹಚ್ಚುವ ಕಾರ್ಯ, ಆತ ಇನ್ನೂ ಯಾರ್ಯಾರಿಗೆ ವಂಚಿಸಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚುವ ಕಾರ್ಯ ಮತ್ತು ಗಂಗಾ ಕುಲಕರ್ಣಿಯ ಪತ್ತೆ ಕಾರ್ಯ ಮುಂದುವರಿದಿದೆ.

ಇದೊಂದು ಅಪ್ಪಟ ಸಿನೇಮಾ ಕಥೆಯಂತೆ ಇದೆ. ಸಿನೇಮಾ ಕ್ಷೇತ್ರದಲ್ಲಿ ಕೆಲಸ ಮಾಡು ಕಲ್ಯಾಣ್ ಕುಟುಂಬದಲ್ಲಿ ಇಂತಹ ಘಟನೆ ನಡೆದಿರುವುದು ವಿಪರ್ಯಾಸವೇ ಸರಿ. ಪೊಲೀಸ್ ತನಿಖೆಯ ವಿವರಗಳನ್ನು ಡಿಸಿಪಿ ವಿಕ್ರಂ ಅಮಟೆ ಪತ್ರಕರ್ತರಿಗೆ ತಿಳಿಸಿದ್ದಾರೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!