Breaking News
Home / featured / ‘ಶರಣಾರ್ಥಿ’ ಗುರು ಪ್ರವೇಶ..!

‘ಶರಣಾರ್ಥಿ’ ಗುರು ಪ್ರವೇಶ..!

 

ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ ‘ಅಲಕ್ಷಿತ ವಚನಕಾರರ ವಚನಗಳು’ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿರುವುದು ನಾಡಿನ ಬಸವಧರ್ಮಿಯರಲ್ಲಿ ಸಂತಸ ತಂದಿದೆ.

ಗಜೇಂದ್ರಗಡ: ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ, ಬಸವ ತತ್ವನಿಷ್ಠರು, ವಿದ್ಯುತ್ ಗುತ್ತಿಗೆದಾರ ಶರಣೆ ವಿಜಯಲಕ್ಷ್ಮಿ ಮತ್ತು ಶರಣ ಕಳಕಯ್ಯ ಸಾಲಿಮಠ ಕುಟುಂಬದವರು ಗಜೇಂದ್ರಗಡದ ಬಸವೇಶ್ವರ ನಗರದಲ್ಲಿ ನಿರ್ಮಿಸಿದ ನೂತನ ಮನೆ “ಶರಣಾರ್ಥಿ” ಗುರುಪ್ರವೇಶವು ಅಕ್ಟೋಬರ್ 18 ರಂದು ಪೂಜ್ಯ ಡಾ.ಬಸವಲಿಂಗ ಮಹಾಸ್ವಾಮಿಗಳು, ವಿಜಯ ಮಹಾಂತತೀರ್ಥ, ಶಿರೂರ ಇವರುಗಳ ಸಾನಿಧ್ಯದಲ್ಲಿ ಮುಂಜಾನೆ ಜರುಗುವುದು.

ಬೆಳಿಗ್ಗೆ 10.30ಕ್ಕೆ ಅನುಭಾವ ಕಾರ್ಯಕ್ರಮದಲ್ಲಿ, ಶರಣ ಸಂಗಮ ಪ್ರಕಾಶನದಿಂದ ಪ್ರಕಟಿತ, ಶರಣ ಸಾಹಿತಿ ಡಾ.ಮಲ್ಲಿಕಾರ್ಜುನ ಕುಂಬಾರ ಅವರ ಸಂಪಾದಕತ್ವದ ‘ಅಲಕ್ಷಿತವಚನಕಾರರವಚನಗಳು’ ಎಂಬ ಪುಸ್ತಕ ಬಿಡುಗಡೆಗೊಳ್ಳುವುದು.

ಈ ಕಾರ್ಯಕ್ರಮದಲ್ಲಿ ಶರಣ ಬಂಧುಗಳು ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ, ಯುವ ಬಸವ ಕೇಂದ್ರ, ಬಸವ ಕೇಂದ್ರ ಹಾಗೂ ಸಾಲಿಮಠ ಕುಟುಂಬ ಪರಿವಾರದವರು ಶರಣ ಬಂಧುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!