Breaking News
Home / featured / ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

 

ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ ಹೋಗಿದ್ದಾರೆ. ಶರಣರ ಆ ಆಚಾರ, ವಿಚಾರಗಳನ್ನು ಸಮಾಜ ಸಂಪೂರ್ಣ ಅಳವಡಿಸಿಕೊಳ್ಳದೇ ಉಳಿದಿರುವುದರಿಂದ ನಾವಿನ್ನೂ ಬಡತನ ಅನುಭವಿಸಬೇಕಾಗಿ ಬಂದಿದೆ. ಸುಮಾರು 850 ವರ್ಷಗಳ ಹಿಂದೆ ಸಮಾನತೆಯ ನವಸಮಾಜ ನಿರ್ಮಾಣಕ್ಕಾಗಿ ಶರಣರು ದೊಡ್ಡ ಕ್ರಾಂತಿ ನಡೆಸಿದರು. ವಿಶ್ವಮಾನ್ಯ ಕಾಯಕ, ದಾಸೋಹ ತತ್ವದ ಮೂಲಕ ಕೆಳಗೆ ಬಿದ್ದವರನ್ನು ಮೇಲೆತ್ತಿ ಅವರಲ್ಲಿ ಹೊಸ ಚೇತನ ಕೊಟ್ಟು, ಅಂತವರೂ ವಚನಗಳನ್ನು ರಚಿಸುವಂತಹ ಶಕ್ತಿ ಕೊಟ್ಟಿದ್ದು ಸಣ್ಣ ಸಾಧನೆಯಲ್ಲ.

ಬಸವಣ್ಣನವರೊಂದಿಗಿದ್ದ ಪ್ರಚಾರಕ್ಕೆ ಬಾರದ ಅನೇಕ ಶರಣರನ್ನು ಇಂದಿನ ಸಮಾಜಕ್ಕೆ ಪರಿಚಯಿಸುವುದರೊಂದಿಗೆ, ಅವರ ವಚನಗಳನ್ನು ಪ್ರಕಟಿಸಿದ್ದು ಸ್ತುತ್ಯ ಕಾರ್ಯವಾಗಿದೆ’ ಎಂದು ಶಿರೂರ ಮಹಾಂತತೀರ್ಥದ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.

ರವಿವಾರ ಗಜೇಂದ್ರಗಡ ಪಟ್ಟಣದ ಬಸವೇಶ್ವರ ನಗರದಲ್ಲಿನ ಸಾಲಿಮಠ ಕುಟುಂಬದ ನೂತನ ಮನೆ ‘ಶರಣಾರ್ಥಿ’ಯ ಗುರುಪ್ರವೇಶ ಪ್ರಯುಕ್ತ ಜಾಗತಿಕ ಲಿಂಗಾಯತ ಮಹಾಸಭೆ ಆಶ್ರಯದಲ್ಲಿ ಡಾ. ಮಲ್ಲಿಕಾರ್ಜುನ ಕುಂಬಾರ ಅವರು ಸಂಪಾದಿಸಿದ ‘ಅಲಕ್ಷಿತ ವಚನಕಾರರ ವಚನಗಳು’ ಎಂಬ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅನುಭವ, ಆಚಾರಗಳನ್ನು ಕಲಿಸಲು ಅನುಭವ ಮಂಟಪದಲ್ಲಿ ಅನೇಕ ಶರಣರು ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅದಕ್ಕೊಂದು ಅರಿವಿನ ಅಕ್ಷರ ರೂಪ ಕೊಡುತ್ತಿದ್ದರು. ಅಂತಹ ಅನೇಕ ಶರಣರ ವಚನಗಳು ಜನಮಾನಸದಲ್ಲಿ ನೆಲೆಗೊಂಡಿಲ್ಲ ಅವುಗಳು ಈ ವರೆಗೂ ಚರ್ಚೆಗೆ ಬಂದಿಲ್ಲ. ಅಂತಹ ವಚನಕಾರರ ಕುರಿತು ಕಳಕಯ್ಯ ಸಾಲಿಮಠ ಕುಟುಂಬ ಶರಣ ಸಂಗಮ ಪ್ರಕಾಶನದ ಮೂಲಕ ಮೊದಲ ಕೃತಿಯನ್ನು ಹೊರತಂದು ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಸ್ವಾಮೀಜಿ ಹೇಳಿದರು.

ಲೇಖಕ ಡಾ.ಮಲ್ಲಿಕಾರ್ಜುನ ಕುಂಬಾರ ಮಾತನಾಡಿ, ’12ನೇ ಶತಮಾನದ ಹಲವು ವಚನಕಾರರು ಹಾಗೂ ಅವರ ವಚನಗಳು ಪ್ರಚಾರದ ಕೊರತೆಯಿಂದ ಸಮಾಜಕ್ಕೆ ಅಪರಿಚಿತವಾಗಿವೆ ಹೀಗಾಗಿ ಅಂತಹ ವಚನಕಾರರು ಹಾಗೂ ಅವರ ವಚನಗಳ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ’ ಎಂದರು.

ಕೃತಿಯ ಕುರಿತು ಬಸವರಾಜ ಹೊಳಿ, ರವಿಂದ್ರ ಹೊನವಾಡ ಮಾತನಾಡಿದರು. ಪ್ರಾಸ್ತಾವಿಕವಾಗಿ ಬಸವರಾಜ ಶೀಲವಂತರ, ವಚನ ಪ್ರಾರ್ಥನೆಯನ್ನು ಭೀಮಾಂಬಿಕಾ ನೂಲ್ವಿ ಗೈದರು.

ವೇದಿಕೆ ಮೇಲೆ ಶಾಸಕ ಕಳಕಪ್ಪ ಬಂಡಿ, ಕಳಕಯ್ಯ ಸಾಲಿಮಠ, ವಿಜಯಲಕ್ಷ್ಮೀ ಸಾಲಿಮಠ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಸಂಚಾಲಕ ಗುರುಲಿಂಗಯ್ಯ ಓದುಸುಮಠ, ಗುರುಸಂಗಯ್ಯ ಹಲಸಿನಮರ ಆಸೀನರಾಗಿದ್ದರು.

ಮುಂಜಾನೆ ಬಸವಲಿಂಗ ಸ್ವಾಮೀಜಿ ಸಾನಿಧ್ಯದೊಂದಿಗೆ ಸಾಲಿಮಠ ದಂಪತಿಗಳು ವಚನ ಸಾಹಿತ್ಯ ಗಂಟನ್ನು ತಲೆಮೇಲೆ ಹೊತ್ತುಕೊಂಡು ವಚನಗಳನ್ನು ಹೇಳುತ್ತಾ ಹೊಸಮನೆಯ ಗುರುಪ್ರವೇಶ ಮಾಡಿದರು.

ನಂತರ ಶ್ರೀಗಳು ಮನೆಯಲ್ಲಿ ಲಿಂಗಪೂಜೆ ಹಾಗೂ ಲಿಂಗದೀಕ್ಷಾ ಕಾರ್ಯ ನಡೆಸಿ ಸೇರಿದ್ದ ಎಲ್ಲರಿಗೂ ಅನುಭಾವಗೈದರು.

ಈ ಸಂದರ್ಭದಲ್ಲಿ ಬಿ.ಎ.ಕೆಂಚರಡ್ಡಿ, ಕಾಶಯ್ಯ ಹಿರೇಮಠ, ಬಸವರಾಜ ಕೊಟಗಿ, ರತ್ನಮ್ಮ ಹಿರೇಮಠ, ಸಾಗರ ವಾಲಿ, ಮಂಜುನಾಥ ಹೂಗಾರ, ಬಸವರಾಜ ಅಂಗಡಿ, ಸುರೇಶ ಚೋಳಿನ, ಸಂತೋಷ ಕತ್ತಿಶೆಟ್ಟರ, ಮಹಾಂತೇಶ ಕಡಗದ,ಶಿವು ಅರಳಿ, ವೀರೇಶ ರಾಜೂರ, ಶಿವಯ್ಯ ಸಾಲಿಮಠ, ಮುದಕಯ್ಯ ಸಾಲಿಮಠ, ಮಂಜುನಾಥ ರೊಟ್ಟಿ, ಮಂಜುನಾಥ ಹರಿಹರ, ಎಸ್.ಬಿ.ಮಹಾಮನಿ, ಎಸ್.ಐ.ಪತ್ತಾರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ, ಯುವ ಬಸವ ಕೇಂದ್ರ, ಬಸವ ಕೇಂದ್ರದ ಸದಸ್ಯರು, ಸಾಲಿಮಠ ಪರಿವಾರದವರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!