Breaking News
Home / featured / ಬಸವಣ್ಣನಿಂದ ಬದುಕಿತ್ತು ಲೋಕವೆಲ್ಲಾ

ಬಸವಣ್ಣನಿಂದ ಬದುಕಿತ್ತು ಲೋಕವೆಲ್ಲಾ

 

ಬೀದರ: ಧರ್ಮ ಎಂದ ಕೂಡಲೇ ನಮ್ಮ ಕಣ್ಣೆದುರಿಗೆ ದಕ್ಷಿಣೆ, ಅಭಿಷೇಕ, ಯಜ್ಞ, ಹೋಮ ಹವನ, ತಲೆ ಬೋಳಿಸಿಕೊಳ್ಳುವುದು ಇವಲ್ಲ ಬಂದು ನಿಲ್ಲುತವೇ
ಆದರೆ ಇದು ಧರ್ಮವಲ್ಲ. ಸಮಾಜವನ್ನು ಸುಂದರವಾಗಿ ಸುವ್ಯವಸ್ತಿತವಾಗಿ ಎತ್ತಿ ಹಿಡುಯುವುದೇ ನಿಯಾಜವಾದ ಧರ್ಮ. ಕೆಳಗೆ ಬಿದ್ದವರನ್ನು ಮೇಲೆತ್ತುವುದು, ದಿನರನ್ನು ದುಃಖಿತರನ್ನು ಮೇಲೆತ್ತುವುದೇ ಧರ್ಮ.
ಪತಿತರನ್ನು ಪಾವನರಾಗಿಸುವುದೇ ಧರ್ಮ.
“ಅಪ್ಪನು ನಮ್ಮ ಮಾದರ ಚೆನ್ನಯ ಬೊಪ್ಪನು ನಮ್ಮ್ ಡೋಹರ ಕಕ್ಕಯ” ಎಂದು ಅಪ್ಪ ಬೊಪ್ಪ ಎಂದು ಎಲ್ಲರನ್ನು ತನ್ನಂತೆ ಕಂಡು ತಮ್ಮ ಹೃದಯದಲ್ಲಿ ಇಂಬಿಟ್ಟಿಕೊಡವರು ಮಹಾಗುರು ಬಸವಣ್ಣವರು.
ಅನುಭವ ಮಂಟಪ ಸ್ಥಾಪಿಸಿ ಎಲ್ಲರನ್ನು ಸಮನತೆಯಿಂದ ಕಂಡು, ೧೨ನೇ ಶತಮಾನದಲ್ಲಿ ಮಾನವೀಯ ಧರ್ಮ ಪ್ರಜಾಧರ್ಮ ಕೊಟ್ಟವರು ವಿಶ್ವ ಗುರು ಬಸವಣ್ಣನವರು.

ಮಾನವ ಧರ್ಮಕ್ಕೆ ದಯೇ ಮುಖ್ಯ ಅಂತಃಕರಣ ಮುಖ್ಯ. ದಯೇ ಇಲ್ಲದ ಧರ್ಮ ಧರ್ಮವೇ ಅಲ್ಲ ಧರ್ಮದ ಮುಖ್ಯ ದ್ಯಯೇ ದಯವಿರವೇಕು.
ದಯವೇ ಧರ್ಮದ ಮೂಲ ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಬಸವಣ್ಣನವರ ಮನೆಗೆ ಬಂದ ಕಳ್ಳನನ್ನು ಕೂಡಲ ಸಂಗಮನಾಗಿ ಕಂಡರು. ಆಕಳನ್ನು ಕಳ್ಳರು ತೆಗೆದು ಕೊಂಡು ಹೋದರು ಎಂದು ಬಂದು ಹೇಳಿದಾಗ

ಆಕಳ, ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ ! ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ ! ಅರರಸಾಡದಿರಿಂ ಭೋ, ನಿಮ್ಮ ಧರ್ಮ ! ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ, ಕೂಡಲಸಂಗಮದೇವ ಏಕೋಭಾವ.

ಅಲ್ಲಿಯೂ ದೇವರಿದ್ದಾನೆ, ಇಲ್ಲಿಯೂ ದೇವರಿದ್ದಾನೆ. ಅಲ್ಲಿ ಉಂಬುವನು ಸಂಗ ಇಲ್ಲಿ ಉಂಬುವನು ಸಂಗ. ಕರುಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ತಿಳಿದಾಗ ಮೊದಲು ಕರುಗಳನ್ನು ಬಿಟ್ಟುಬಿಡಿರಿ. ಆಕಳು ಇದ್ದಲಿಗೆ ಕರುಗಳನ್ನು ಕಳುಹಿಸಿರಿ ಎಂದು ಬಸವಣ್ಣನವರು ನುಡಿದರು.
ಬಸವಣ್ಣವರ ಅಂತಃಕರಣ ಕರುವಿನಲ್ಲಿ ಪ್ರವೇಶವಾಯಿತು. ಹೃದಯದಲ್ಲಿ ಆಕಳ ಕರುವಿನ ಬಗ್ಗೆ ತಾಯಿಯನ್ನು ಅಗಲಿದ ಕರುವಿನ ಬಗ್ಗೆ ತಳಮಳವಾಯಿತು.

ಅಲ್ಲಿಯೂ ದೇವರೇ ಉಣ್ಣುತ್ತಾನೆ ಇಲ್ಲಿಯೂ ದೇವರೇ ಉಣ್ಣುತ್ತಾನೆ ಎಂದು ಸರ್ವರಲ್ಲಿಯು ದೈವಿಶ್ವರೂಪಿ ಕಂಡರು. ಇದುವೇ ಮಾನವಧರ್ಮ.
ಸಕಲ ಜೀವಾತ್ಮರಿಗೆ ಲೆಸನ್ನೇ ಬಯಸುವ ಕೂಡಲ ಸಂಗನ ಶರಣರೆ ಕುಲಜರು ಎಂದು ಸಾರಿ ಮಾನವ ಧರ್ಮದ ಸಂದೇಶ ಕೊಟ್ಟರು.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ಎಂದು ಎಲ್ಲರನ್ನು ನಮ್ಮವರೆಂದು ಅಪ್ಪಿಕೊಳ್ಳಬೇಕು ಒಪ್ಪಿಕೊಳ್ಳಬೇಕು. ಅದುವೇ ಮಾನವ ಧರ್ಮ. ಇಂದು ತುಟಿ ಸೇವೆಯೆಲ್ಲಿ ವೇದಿಕೆಯಲ್ಲಿ ದೊಡ್ಡ ದೊಡ್ಡ ಮಾತನಾಡುತ್ತಾರೆ. ಅಂತರಂಗದಲ್ಲಿ ದ್ವೇಷ ತುಂಬಿರುತ್ತದೆ ಅಂತರಂಗದಲ್ಲಿ ನಮ್ಮವರೆಂದು ಅಪ್ಪಿಕೊಂಡಾಗ ಅದುವೇ ಮಾನವಿಯೆತೆ ಅದುವೇ ನಿಜವಾದ ಮಾನವ ಧರ್ಮ.

ಪೂಜ್ಯ ಡಾ|| ಬಸವಲಿಂಗ ಪಟ್ಟದೇವರು ಹಿರೇಮಠ ಸಂಸ್ಥಾನ, ಭಾಲ್ಕಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!