Breaking News
Home / featured / ಬೈಲೂರ ನಿಜಗುಣಾನಂದ ಶ್ರೀಗಳ ಸಾಮಾಜಿಕ ಕ್ರಾಂತಿ

ಬೈಲೂರ ನಿಜಗುಣಾನಂದ ಶ್ರೀಗಳ ಸಾಮಾಜಿಕ ಕ್ರಾಂತಿ

 

ಬೆಂಗಳೂರು/ಬೈಲೂರು: ತೋಂಟದಾರ್ಯ ಶಾಖಾಮಠ ಮುಂಡರಗಿ ಮತ್ತು ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣಪ್ರಭು ತೋಂಟದಾರ್ಯ (ನಿಜಗುಣಾನಂದ) ಸ್ವಾಮಿಗಳು ಅಂದ್ರೆ ನನಗೆ ಮೊದಲಿಂದಲೂ ಅಭಿಮಾನ ಗೌರವ.

ನನ್ನಲ್ಲಿ ಬಸವ ತತ್ವದ ಅರಿವು ಮೂಡಲು ಅವರ ಪ್ರವಚನವೇ ಕಾರಣ. ಆದ್ದರಿಂದ ಅವರ ಬಗ್ಗೆ ತಿಳಿಯಲು ನಾನಾ ಜನಗಳ ಹತ್ತಿರ ಕೇಳಿದೆ ಜೊತೆಗೆ ಅವರ ಮತ್ತಷ್ಟು ವೈಚಾರಿಕತೆಯ ವೀಡಿಯೋಗಳನ್ನು ನೋಡಿದೆ. ಒಂದು ದಿನ ನಾನು ಬೆಳಗಾವಿಗೆ ಬಸ್ಸಿನಲ್ಲಿ ಪಯಣಿಸುವಾಗ ಒಬ್ಬರು ಅಪರಿಚಿತರು ಸಿಕ್ಕರು. ಆಗ ಹಾಗೆ ಮಾತನಾಡುತ್ತ ನಾನು ಅವರಿಗೆ “ನಿಮ್ಮದು ಯಾವೂರು” ಅಂತ ಕೇಳಿದೆ. ಅವರು “ನನ್ನದು ಬೈಲೂರು” ಅಂದ್ರು. ಅದಕ್ಕೆ ನಾನು – “ನಿಮಗೆ ನಿಜಗುಣಾನಂದ ಸ್ವಾಮಿಗಳು ಗೊತ್ತಾ” ಅಂತಾ ಕೇಳಿದ್ದಕ್ಕೆ ಅವರು “ಆ ಸ್ವಾಮಿಗಳಿಂದಲೇ ನಮ್ಮೂರಲ್ಲಿ ತುಂಬಾ ಬದಲಾವಣೆ ಆಗಿವೆ. ಸುಮಾರು ಬಡ ಮಕ್ಕಳಿಗೆ ಅವರಿಂದ ಶಿಕ್ಷಣಕ್ಕೆ ಅನುಕೂಲವಾಗಿದೆ” ಅಂತ ಹೇಳಿದ್ರು. ಈ ಮಾತುಗಳು ನನ್ನಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿತು. ಒಮ್ಮೆಯಾದರೂ ಆ ಊರಿಗೆ ಹೋಗಿ ಬರಬೇಕು ಅಂತ ತೀರ್ಮಾನ ಮಾಡಿದೆ.

ಮೊನ್ನೆ ಒಂದು ವಿಚಾರದ ಮೇಲೆ ಬೆಳಗಾವಿಗೆ ಹೋಗಬೇಕಾಯಿತು. ಅಲ್ಲಿ ಹೋದಾಗ ನನಗೆ ನಮ್ಮ ಲಿಂಗಾಯತ ಕ್ರಾಂತಿ ಪತ್ರಿಕೆಯ ಸಂಪಾದಕರಾದ ಶಿವಾನಂದ ಮೆಟ್ಯಾಲ ನೇಗಿನಹಾಳ ಅವರು ಸಿಕ್ರು ಅವರಿಗೆ ಈ ಮೊದಲೇ ಒಮ್ಮೆ ಹೇಳಿದ್ದೆ ಬೈಲೂರಿನ ಮಠಕ್ಕೆ ಒಮ್ಮೆ ಹೋಗಬೇಕು ಅಂತ. ಅದಕ್ಕೆ ಅವರು ಹೇಳಿದ್ರು – “ಬೆಳಗಾವಿ ಬಂದಿದ್ದೀರಿ, ಈಗ ಬೈಲೂರಿಗೆ ಹೋಗಿ ಬರೋಣ ನಡೀರಿ” ಅಂತ ಹೇಳಿ ಸ್ವಾಮಿಗಳಿಗೆ ಕಾಲ್ ಮಾಡಿ ನಾನು ಬರೋದನ್ನ ಅವರಿಗೆ ಹೇಳಿದರು. ಮಠಕ್ಕೆ ಭಕ್ತರು ಬರುತ್ತಿದ್ದಾರೆ ಅಂತ ತಿಳಿದು ನಮಗೆಲ್ಲ ಶ್ರೀಗಳು ಪ್ರಸಾದ ಮತ್ತು ಉಳಿದುಕೊಳ್ಳವುದಕ್ಕೆ ವ್ಯವಸ್ಥೆ ಎಲ್ಲ ಮಾಡಿಸಿದರು.

ಊರಿಗೆ ಹೋದಮೇಲೆ ಮೊದಲು ನನಗೆ ಬಹಳ ಸಂತೋಷವಾದದ್ದು ಊರಲ್ಲಿ ಮನೆಗೊಂದು ಶೌಚಾಲಯ ನೋಡಿ. ಆಮೇಲೆ ಪ್ರತಿಯೊಂದು ಓಣಿಗೆ ಶರಣರ, ಕವಿಗಳ/ಸಾಹಿತಿಗಳ ಹಾಗೂ ದಾರ್ಶಿನಿಕರ ಹೆಸರಗಳನ್ನು ಇಟ್ಟಿದ್ದಾರೆ, ಊರನ್ನು ಸ್ವಚ್ಛವಾಗಿ ಇಟ್ಟಕೊಂಡಿರುವ ಜಾತಿ ರಹಿತ ತಾರತಮ್ಯವಿಲ್ಲದ ಜನರ ಮನಸ್ಸುಗಳನ್ನು ನೋಡಿ ಮನಸ್ಸು ನಿರಮ್ಮಳವಾಯಿತು ಊರ ಪಕ್ಕದಲ್ಲೇ ಸ್ವಚ್ಛಂದವಾಗಿ ಕಾಣುವ ಕೆರೆ, ಅಲ್ಲಿ ಎಲ್ಲರು ಒಂದೇ ಎಂದು ಭಾವಿಸಿ ಜೀವನ ಮಾಡುತ್ತಿರುವ ಜನರು, ಹೀಗೆ ಸುಮಾರು ಅನೇಕ ವಿಚಾರಗಳನ್ನು ಕಂಡು ಶ್ರೀಗಳ ಮೇಲಿನ ಗೌರವ ಮತ್ತು ಅಭಿಮಾನ ಮತ್ತೂ ಹೆಚ್ಚಾಯಿತು.

ಆ ಊರಲ್ಲಿ ಒಂದು ಚನ್ನಬಸವಣ್ಣ ದೇವಸ್ಥಾನ ಇದೆ. ಅದರ ಜಾತ್ರೆಯ ದಿನ ತೇರು ಎಳೆಯುತ್ತಾರೆ. ಆದರೆ ಯಾರು ತೇರಿಗೆ ಬಾಳೆಹಣ್ಣು, ಖಜ್ಜುರಿ, ಉತ್ತತ್ತಿ ತುರುವ ಆಗಿಲ್ಲ. ಆ ಊರಲ್ಲಿ ಪ್ರತಿ ಹೋಟೆಲ್, ಅಂಗಡಿ, ಸರಕಾರಿ ಕಚೇರಿ , ಮನೆಗಳಲ್ಲಿ ನಿಜಗುಣಾನಂದ ಸ್ವಾಮಿಗಳ ಫೋಟೋ ನೋಡಬಹುದು. ಇದನ್ನೆಲ್ಲ ನೋಡಿದ್ರೆ ಸಾಕು ಅವರ ಆ ಊರಿಗೆ ಎಂತಹ ಕೊಡುಗೆ ಕೊಟ್ಟಿದ್ದಾರೆ ಮತ್ತು ಕೊಡುತ್ತಿದ್ದಾರೆ ಅಂತಾ ತಿಳಿಯುತ್ತದೆ.

ಮಠಕ್ಕೆ ಹೋದವರಿಗೆ ಅವರು ಕೊಡುವ ಗೌರವ, ತೋರುವ ಪ್ರೀತಿ, ಮತ್ತು ಅವೆಲ್ಲಕ್ಕಿಂತ ಅವರು ನೀಡುವ ವೈಚಾರಿಕತೆಯ ಮಾರ್ಗದರ್ಶನ ಬಹಳ ದೊಡ್ಡದು.

ಬಹುತೇಕ ಜನರು ಇವರಿಗೆ ಕಳ್ಳ ಸ್ವಾಮಿ ಆ ಸ್ವಾಮಿ ಈ ಸ್ವಾಮಿ ಅನ್ನುತ್ತಾರೆ. ಅಂತವರು ಒಮ್ಮೆ ಬೈಲೂರಿಗೆ ಹೋಗಿ ಬನ್ನಿ. ಆಗ ಗೊತ್ತಾಗುತ್ತದೆ ಸ್ವಾಮಿಗಳ ಕೊಡುಗೆ ಈ ಸಮಾಜಕ್ಕೆ ಏನು ಅಂತ.

~ ಗುರುರಾಜ ಮನಹಳ್ಳಿ
ಸಾಫ್ಟವೇರ್ ಉದ್ಯೋಗಿ ಬೆಂಗಳೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!